|| ದರ್ಪ||

|| ದರ್ಪ||

ಕವನ

ಬದಲಾಗುತ್ತಿರುವ ಸಮಾಜದಲ್ಲಿ ಅನೇಕ ಮನೋಭಾವಗಳು ಬದಲಾಗಿವೆ ಆದರೆ ಮದುವೆ ವಿಷಯದಲ್ಲಿ ಮಾತ್ರ ನಾವು ಗಂಡಿನವರು,ನೀವು ಹೆಣ್ಣಿನವರು ಎಂಬ ತಾರತಮ್ಯ ಇಂದಿಗೂ ಪ್ರಚಲಿತದಲ್ಲಿದೆ. ಇತ್ತೀಚೆಗೆ ನನ್ನ ಸಹೋದ್ಯೋಗಿಯ ಮದುವೆಯ ಬಗ್ಗೆ ಕೇಳಿದಾಗ, ಅವನ demand ಗಳನ್ನು ಕೇಳಿ ಈ ಕವನ ಬರೆದೆ.


 


ನಾವು ಗಂಡಿನವರು
ನೀವು ಹೆಣ್ಣಿನವರು
ಇರಲಿ ನಡುವೆ ಅಂತರ\\

ನಾವು ಗಂಡಿನವರು
ನಮ್ಮನ್ನು ಯಾರೂ ಖುಷಿಪಡಿಸಲಾರರು
ನೀವು ಹೆಣ್ಣಿನವರು
ಕಾದಿದೆ ಸದಾ ಪರೀಕ್ಷೆಗಳು ಸಾವಿರಾರು\\

ನಮ್ಮನು ಸದಾ ಸಂತೋಷಪಡಿಸುವುದೇ ನಿಮ್ಮ ಗುರಿ
ಇರಬೇಕು ನೀವು ನಮಗಾಗಿ ಸದಾ ಹರಿಬರಿ
ನಾವು ಹೇಳುವೆವು ನೀವು ಸರಿ ಇಲ್ಲಾ
ಒಪ್ಪಬೇಕು ನಮ್ಮ ಮಾತು ಎಲ್ಲಾ\\

ಎಲ್ಲಾ ಆಗಬೇಕು ನಮ್ಮ ಅಣತಿಯಂತೆ
ಕಾಯಬೇಕು ನೀವು ಶಬರಿಯಂತೆ
ಏನು? ಏಕೆ? ಎತ್ತ? ಎಂಬ ಗುಟುರು ನಮ್ಮದು
ಊಂ,ಉಹುಂ, ಮೌನ ಕಣ್ಣೀರಿನ ಕರ್ಮ ನಿಮ್ಮದು\\