ಬಾಲ ಕಾರ್ಮಿಕನ ಸ್ವಗತ....
ಈ ನೋವುಗಳೆಂದೂ ನಿನ್ನೆಗಳನ್ಯಾಕೆ ಮರೆಯೋದಿಲ್ಲ
ನಾ ಹೊರಗೆ ಬಂದಾಗ ಆ ನಕ್ಷತ್ರಗಳ್ಯಾಕೆ ಮಿನುಗೋದಿಲ್ಲ
ಕಲ್ಲೆಸೆದು ಕತ್ತರಿಸಿದರೂ ಮರದಂತೆ ನಾನೇಕೆ ನಿಶ್ಚಲ ?
ಬುಡಕಳಚಿಕೊಂಡು ಅವರ ಕಾಲಡಿ ಬಿದ್ದರೂ ನಿಮಿಷವಷ್ಟೇ ವಿಲವಿಲ!
ಎಲ್ಲೆಯಿಲ್ಲದ ಬಾನ ಕಾಮನಬಿಲ್ಲೇ,ಕೆಳಗಿಳಿಯಬೇಡ ಅಲ್ಲೇ ಇರು
ಬಂದರೆ ನನ್ನಪ್ಪನಂತೆ ನಿನ್ನನ್ನೂ ಜನ ಕತ್ತರಿಸಿ ಮಾರಿಬಿಟ್ಟಾರು
ಇಡೀ ಸ್ಥಬ್ಧ ಜಗದಲ್ಲಿ ಅಮ್ಮ , ನೀ ನೆನಪಾಗಿಯೇ ಇದ್ದುಬಿಡು
ಹೃದಯ ಪುಷ್ಪವಾಗಿಸಿ,ನದಿ ತೀರದಲ್ಲಿ ನಿನ್ಯಾರೂ ಇಲ್ಲಿ ಪೂಜಿಸರು .
ಕೊಟ್ಟ ಹಿಂಸೆಗಳು ಗೋಡೆಯಾಚೆ ಹೋಗಿ ಸುದ್ದಿಯಾಗಬಹುದು
ಅದಕ್ಕೆ ಕಣ್ರೆಪ್ಪೆಯ ಕಾವಲಿರಿಸಿ ಒಳಗೆ ಜೋಪಾನವಾಗಿರಿಸಿದ್ದು
- Read more about ಬಾಲ ಕಾರ್ಮಿಕನ ಸ್ವಗತ....
- 16 comments
- Log in or register to post comments