ನೀ ನಿಂತಾಗೆನಗೆ ದೇವ ದರ್ಶನವಾಯ್ತು
ನೀ ನಿಂತಾಗೆನಗೆ ದೇವ ದರ್ಶನವಾಯ್ತು
ಸಖೀ,
ನಿನ್ನ ನಗುವಲ್ಲೇ ನಾ ಚಂದಿರನ ಚೆಲುವ ಕಂಡೆ,
ಚಂದಿರನ ಚೆಲುವಲ್ಲಿ ನಾ ನಿನ್ನ ಮೊಗವ ಕಂಡೆ;
ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು,
ನಾ ಬಿಡಿಸಿದ ಚಿತ್ರದಲಿ ನಿನ್ನನ್ನೇ ಕಂಡಂತಾಯ್ತು;
ನಡೆಯಲ್ಲಿ ನೀ ಆ ಹಂಸವನೇ ನಾಚಿಸಿದುದ ಕಂಡೆ,
ಹಂಸದ ಆ ನಡೆಯಲ್ಲಿ ನಿನ್ನ ನಾ ನೆನಪಿಸಿಕೊಂಡೆ;
ನನ್ನ ನೀ ಕೂಗೆ ಕೋಗಿಲೆಯೇ ಕೂಗಿದಂತಾಯ್ತು,
ಕೋಗಿಲೆ ಕುಹೂ ಎನಲು ನೀನೇ ಕರೆದಂತಾಯ್ತು;
ದೇವನಿಗಾಗಿ ಧ್ಯಾನಿಸಲಲ್ಲಿ ನಿನ್ನನ್ನು ಕಂಡಂತಾಯ್ತು,
ನೀ ಕಣ್ಮುಂದೆ ನಿಂತಾಗೆನಗೆ ದೇವ ದರ್ಶನವಾಯ್ತು;
ನನ್ನ ಮನದೊಳಗಿಲ್ಲಿ ನಾನಿಲ್ಲ, ಬರೇ ನೀನೇ ನೀನು,
ನಿನ್ನ ಕಣ್ಣೊಳಗಣ ಬಿಂಬದಲಿ ಬರೇ ನಾನೇ ನಾನು!
*-*-*-*-*-*-*-*-*-*-*-*-*-*-*-*
Rating
Comments
ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು
ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು
In reply to ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು by Jayanth Ramachar
ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು
ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು
In reply to ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು by Chikku123
ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು
ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು
In reply to ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು by ksraghavendranavada
ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು
ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು
In reply to ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು by sm.sathyacharana
ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು
In reply to ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು by asuhegde
ಉ: ನೀ ನಿಂತಾಗೆನಗೆ ದೇವ ದರ್ಶನವಾಯ್ತು