ಸಂತೋಷಪಡಿಸಲು ಕಣ್ಣುಗಳು ಬೇಕೇ?

ಸಂತೋಷಪಡಿಸಲು ಕಣ್ಣುಗಳು ಬೇಕೇ?

ಮಿಂಚಂಚೆಯಲ್ಲಿ ಬಂದದ್ದು..

ಸಾವಿನಂಚಿನಲ್ಲಿದ್ದ ಇಬ್ಬರು ಯೋಧರು ಮಿಲಿಟರಿ  ಆಸ್ಪತ್ರೆಯ ಒಂದೇ ಕೊಠಡಿಯಲ್ಲಿದ್ದರು.ಅವರಿಬ್ಬರ ಮಧ್ಯೆ ಕೇವಲ ಒಂದು ಪರದೆ ಇಟ್ಟಿದ್ದರು. ಅದರಲ್ಲಿ ಒಬ್ಬನನ್ನು ಪ್ರತಿದಿನ ಮಧ್ಯಾಹ್ನ ಒಂದು ಗಂಟೆಯ ಹೊತ್ತು ಕೂಡಿಸುತ್ತಿದ್ದರು. ಏಕೆಂದರೆ ಆತನ ಶ್ವಾಸಕೋಶದಲ್ಲಿ ತುಂಬಿದ್ದ ನೀರನ್ನು ತೆಗೆಯಲು. ಆತನ ಕೊಠಡಿ ಇದ್ದದ್ದು ಕೋಣೆಯ ಒಂದೇ ಕಿಟಕಿಯ ಪಕ್ಕದಲ್ಲಿ.

ಇನ್ನೊಬ್ಬ ರೋಗಿ ಯಾವಾಗಲೂ ಮಲಗೇ ಇರಬೇಕಿತ್ತು. ಅವರಿಬ್ಬರೂ ದಿನವೆಲ್ಲ ಮಾತಾಡುತ್ತಿದ್ದರು. ತಮ್ಮ ಹೆಂಡತಿಯರ ಬಗ್ಗೆ ತಮ್ಮ ಮಕ್ಕಳ ಬಗ್ಗೆ ತಮ್ಮ ಕೆಲಸದ ಬಗ್ಗೆ, ತಮ್ಮ ರಜಾದಿನಗಳ ಬಗ್ಗೆ ಹೀಗೆ ಹಲವಾರು ವಿಷಯಗಳ ಬಗ್ಗೆ ಮಾತಾಡುತ್ತಿದ್ದರು. ಪ್ರತಿದಿನ ಕಿಟಕಿಯ ಪಕ್ಕ ಇದ್ದ ರೋಗಿ ಎದ್ದು ಕೂತಾಗ ಕಿಟಕಿಯ ಆಚೆ ಕಾಣುತ್ತಿದ್ದ ಸಂಗತಿಗಳನ್ನು ಇನ್ನೊಬ್ಬ ರೋಗಿಯೊಂದಿಗೆ ಹಂಚಿಕೊಂಡು ಸಮಯ ಕಳೆಯುತ್ತಿದ್ದನು. ಆ ಇನ್ನೊಬ್ಬ ರೋಗಿ ಆ ಒಂದು ಗಂಟೆಯ ಅವಧಿಯಲ್ಲಿ ತನ್ನ ನೋವುಗಳನ್ನು ಮರೆತು ಆಚೆಯ ಸೌಂದರ್ಯದ ಸವಿಯನ್ನು ತನ್ನ ಊಹೆಯಲ್ಲಿ ಆನಂದಿಸುತ್ತಿದ್ದನು.

ಕಿಟಕಿಯ ಆಚೆ ಒಂದು ಸುಂದರ ಕೊಳ ಇರುವ ಉದ್ಯಾನವನ ಇದೆ. ಬಾತುಕೋಳಿಗಳು ಅದರಲ್ಲಿ ಆಟವಾಡುತ್ತಿದೆ. ಸಣ್ಣ ಮಕ್ಕಳು ತಮ್ಮ ಪೇಪರ್ ದೋಣಿಗಳನ್ನು ಅದರಲ್ಲಿ ಬಿಟ್ಟು ಸಂಭ್ರಮಿಸುತ್ತಿದ್ದಾರೆ. ಯುವ ಪ್ರೇಮಿಗಳು ಕೈ ಕೈ ಹಿಡಿದು ವಿಹರಿಸುತ್ತಿದ್ದಾರೆ. ವಾಯು ವಿಹಾರಕ್ಕೆಂದು ಬಂದ ಜನ ಮಾತಾಡಿಕೊಂಡು ನಡೆದಾಡುತ್ತಿದ್ದಾರೆ. ಕಿಟಕಿಯ ಪಕ್ಕ ಕುಳಿತ ವ್ಯಕ್ತಿ ಇದೆಲ್ಲವನ್ನು ವಿವರಿಸುತ್ತಿದ್ದರೆ ಆ ಇನ್ನೊಬ್ಬ ರೋಗಿ ತನ್ನ ಕಲ್ಪನೆಯಲ್ಲೇ ಇದೆಲ್ಲವನ್ನು ಕಲ್ಪಿಸಿಕೊಂಡು ಆನಂದ ಪಡುತ್ತಿದ್ದನು. ಒಂದು ದಿನ ಮಧ್ಯಾಹ್ನ ಆಚೆ ಯೋಧರ ಕವಾಯತು ನಡೆಯುತ್ತಿದೆ ಎಂದು ಕಿಟಕಿ ಪಕ್ಕ ಇದ್ದ ವ್ಯಕ್ತಿ ಹೇಳಿದಾಗ ಆ ಇನ್ನೊಬ್ಬ ವ್ಯಕ್ತಿ ಯಾವುದೇ ಶಬ್ದ ಕೇಳದಿದ್ದರೂ ಆತನ ಮಾತುಗಳಲ್ಲಿ ಅಲ್ಲಿನ ದೃಶ್ಯವನ್ನು ಕಲ್ಪಿಸಿಕೊಂಡನು.

ಹೀಗೆ ದಿನಗಳು, ವಾರಗಳು, ತಿಂಗಳುಗಳು ಕಳೆದವು.

ಒಂದು ದಿನ ನರ್ಸ್ ಬೆಳಿಗ್ಗೆ ಕಿಟಕಿ ಪಕ್ಕ ಇದ್ದ ವ್ಯಕ್ತಿಗೆ ಔಷಧಿ ಕೊಡಲು ಬಂದಾಗ ಆತ ಚಿರನಿದ್ರೆಗೆ ಜಾರಿರುವುದನ್ನು ಗಮನಿಸಿ ಬೇಸರಗೊಂಡು ಸಿಬ್ಬಂದಿಯನ್ನು ಕರೆದು ಆತನ ದೇಹವನ್ನು ಅಲ್ಲಿಂದ ತೆರವುಗೊಳಿಸಿದಳು. ಈ ಸಂಗತಿ ತಿಳಿದು ಬಹಳ ನೊಂದ ಇನ್ನೊಬ್ಬ ರೋಗಿ ಆ ನರ್ಸ್ ಹತ್ತಿರ ಸಾಧ್ಯವಾದರೆ ನನ್ನನ್ನು ಆ ಕಿಟಕಿಯ ಪಕ್ಕಕ್ಕೆ ಸ್ಥಳಾಂತರಿಸಿ ಎಂದು ಕೇಳಿಕೊಂಡನು ಹಾಗೆಯೇ ಆತನನ್ನು ಅಲ್ಲಿಗೆ ಹಾಕಲಾಯಿತು. ನಿಧಾನವಾಗಿ ತನ್ನ ಕೈಗಳ ಸಹಾಯದಿಂದ ಮೇಲಕ್ಕೆ ಎದ್ದು ಕಿಟಕಿಯ ಆಚೆಯ ಸೌಂದರ್ಯ ನೋಡಲು ಎದ್ದು ಕುಳಿತನು. ಆದರೆ ಅಲ್ಲಿ ಕಂಡ ದೃಶ್ಯದಿಂದ ಆತ ಕೆಲವು ಕ್ಷಣಗಳು ಏನೊಂದು ಅರಿಯದಾದನು. ಕಿಟಕಿಯ ಪಕ್ಕದಲ್ಲಿ ಖಾಲಿ ಗೋಡೆ ಮಾತ್ರ ಇತ್ತು. ಕೂಡಲೇ ನರ್ಸನ್ನು ಕರೆದು ತನಗೆ ನಡೆದದ್ದೆಲ್ಲವನ್ನು ವಿವರಿಸಿದಾಗ ನರ್ಸ್ ಕೊಟ್ಟ ಉತ್ತರಕ್ಕೆ ಆತ ಮತ್ತೊಮ್ಮೆ ದಿಗ್ಭ್ರಮೆಗೊಳಗಾದನು.

ನರ್ಸ್ ಹೇಳಿದಳು ಮುಂಚೆ ಇಲ್ಲಿ ಇದ್ದ ರೋಗಿ ಒಬ್ಬ ಕುರುಡನಾಗಿದ್ದು ಆತ ಈ ಗೋಡೆ ಸಹ ನೋಡಲು ಸಾಧ್ಯವಿರಲಿಲ್ಲ. ಆತ ಕೇವಲ ನಿಮ್ಮ ಮನಸ್ಸಂತೋಷ ಪಡಿಸುವುದಕ್ಕಾಗಿ ಹಾಗೆ ಹೇಳಿರಬಹುದು.
ಆತನಿಗೆ ಏನು ಹೇಳಬೇಕೆಂಬುದೇ ತೋಚದಾದನು

 

Comments