ಕಾಮನ್‌ವೆಲ್ತ್ ಗೇಮ್ಸ್-ಉದ್ಘಾಟನಾ ಸಮಾರಂಭದ ಹೈಲೈಟ್ಸ್
ರವಿವಾರ(೩-೧೦-೧೦) ಸಂಜೆ ಲುಂಬಿನಿ ಗಾರ್ಡನ್‌ಗೆ ಹೋಗಿದ್ದೆ. ಹೆಬ್ಬಾಳ ಓವರ್‌ಬ್ರಿಡ್ಜ್ ದಾಟಿದ ಮೇಲೆ, ಕೃಷ್ಣರಾಜಪುರ ಕಡೆ ಹೋಗುವ ರಿಂಗ್‌ರೋಡ್‌ನಲ್ಲಿ ಸುಮಾರು ಒಂದು ಕಿ.ಮೀ. ಮುಂದಕ್ಕೆ ರಸ್ತೆಯ ಎಡಪಕ್ಕದಲ್ಲಿ ಇದೆ. ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳವಿದೆ.
ಒಳಗೆ ಹೋಗುವಾಗಲೇ "ರೂಬಿಕ್‌ಕ್ಯೂಬ್" ತರಹದ ಫುಟ್‌ಪಾತ್ ಚೆನ್ನಾಗಿದೆ. ಒಂದು ಬದಿಯಲ್ಲಿ ಉದ್ದಕ್ಕೂ ಕೆರೆ( ಬೋಟಿಂಗ್ ವ್ಯವಸ್ಥೆ ಇದೆ), ಇನ್ನೊಂದು ಬದಿಯಲ್ಲಿ ಮಕ್ಕಳಿಗೆ ವಿವಿಧ ತರಹದ ಆಟಗಳು ಹಾಗೂ ವಿವಿಧ ತಿನಿಸುಗಳ ಮಳಿಗೆಗಳಿವೆ.
ಎಂಟ್ರೆನ್ಸ್ ಫೀ ೩೦ ರೂ ಸ್ವಲ್ಪ ಜಾಸ್ತಿ ಅಂತ ನನಗನಿಸಿತು. ೫೦ರೂ ಅಲ್ಲ,೧೦೦ ರೂ ಮಾಡಿದರೂ ಅಲ್ಲಿನ ರಶ್ ಕಮ್ಮಿಯಾಗಲಿಕ್ಕಿಲ್ಲ.