ಲಂಚಾವತಾರ ಮತ್ತು ಭಾರತ ದೇಶದ ಮುಂದಿನ ಭವಿಷ್ಯ ಇದಕ್ಕೆ ಪರಿಹಾರ ಹೇಗೆ ?
ನಾನು ತುಂಬಾ ದಿನಗಳ ನಂತರ ಒಂದು ಬರಹವನ್ನು ಬರೆಯುತ್ತಿದ್ದೇನೆ,
ಇದಕ್ಕೆ ಕಾರಣ ಒಂದು ನನ್ನ ಓದು ಮತ್ತೊಂದು ಸಮಯದ ಅಭಾವ.
ಈಗ ಈ ಬರಹದ ಬಗ್ಗೆ ಹೇಳಬೇಕೆಂದರೆ
,ದಿನ ನಿತ್ಯ ನಾವು ಈಗಾಗಲೇ ತುಂಬಾನೆ 'ಲಂಚದ' ಬಗ್ಗೆ ಓದುತ್ತಿದ್ದೇವೆ ಮತ್ತು ಕೇಳುತ್ತಿದ್ದೇವೆ. ನಮಗೆಲ್ಲ ಗೊತ್ತು ಲಂಚ ಕೊಡದಿದ್ದರೆ ಸ್ಮಶಾನದಲ್ಲೂ ಜಾಗ ಸಿಗುವುದಿಲ್ಲ, ಬದುಕಿದಾಗಲು ಅಸ್ಟೆ ಸತ್ತ ಮೇಲೂ ಅಸ್ಟೆ!
ನಾವೇ ಆರಿಸಿ ಕಳಿಸುವ 'ಜನ ಪ್ರತಿನಿಧಿಗಳು, ಹಾಗೂ ಸರಕಾರಿ ಅಧಿಕಾರಿಗಳೂ ಲಂಚ ಇಲ್ಲದೇ ಫೈಲ್ ನ ಮೂವ್ ಮಾಡುವುದೇ ಇಲ್ಲ, ಇದೆಲ್ಲ ಗೊತ್ತಿದ್ದೂ ಅದನ್ನು ಓದಿ, ನೋಡಿ, ಕೇಳಿ ಅವರಿಗೆ ಹಿಡಿ ಶಾಪ ಹಾಕಿ 'ಇನ್ನ್ಯಾರೋ ಇದೆಲ್ಲದರ ಬಗ್ಗೆ ಕಾಳಜಿ ವಹಿಸುತ್ತಾರೆ ಅಂತ್ ನಾವೆಲ್ಲಾ ಸುಮ್ಮನಾದರೆ', ಇದರ ವಿರುದ್ಧ ಹೋರಾಡುವವರು ಯಾರು?
ಸ್ವಾತಂತ್ರ ಬಂದ ಬರೀ ೬೩ ವರ್ಷಗಳಲ್ಲೇ ಈಸ್ಟೆಲ್ಲಾ ಅನಾಹುತಗಳಾದರೆ ಇನ್ನೂ ಮುನೆ ನಮ್ಮ ಮಕ್ಕಳು ಮೊಮ್ಮಕ್ಕಳ ಕಾಲದಲ್ಲಿ ಈ ದೇಶದ ಪರಿಸ್ತಿತಿ ಇನ್ನೆಸ್ತು ಹದಗೆಡಬೇಡ?.
ಇದಕ್ಕೆ ಏನೆಲ್ಲಾ ಪರಿಹಾರಗಳಿವೆ ಅಂತ ನಿಮಗನ್ನಿಸುತ್ತೆ ?
ದಯಮಾಡಿ ನಿಮ್ಮ ಎಲ್ಲ ಸಲಹೆ ಸೂಚನೆಗಳನ್ನು ಇಲ್ಲಿ ಹಂಚಿಕೊಳ್ಳಿ
Comments
ಉ: ಲಂಚಾವತಾರ ಮತ್ತು ಭಾರತ ದೇಶದ ಮುಂದಿನ ಭವಿಷ್ಯ ಇದಕ್ಕೆ ಪರಿಹಾರ ಹೇಗೆ ?