ಯಾವ ನಾಟಕ
ಅಲ್ಲಾ ಕಲಾ ಸುರೇಶ್ ಹೆಗ್ಡೆ, ಗೋಪಿನಾಥ ರಾವ್, ಗಣೇಶ್ ಅಂಗೇ ದುಬೈ ಮಂಜಣ್ಣ ನಮ್ಮ ಹಳ್ಳಿಗೆ ಬಂದಿರೋದು ಯಕಾಲಾ ಅಂದ ಗೌಡಪ್ಪ. ಏ ನಾಟಕ ಹೇಳ್ಕೊಡಕ್ಕಂತೆ ಅಂದ ಸುಬ್ಬ. ಯಾವ ನಾಟಕಲಾ ಅಂದ ನಿಂಗ. "ಸರ್ಕಾರಿ ಭೂಮಿ ಹೊಡೆಯೋದು ಹೆಂಗೆ" ಅಂದ ಸುಬ್ಬ. ಇದಕ್ಕೆ ಇವರೇ ಬೇಕೇನಲಾ. ಇದನ್ನ ಕಟ್ಟಾ ಮಗ ಜಗ್ಗ, ಯಡೂರಪ್ಪನ ಮಗ ರಾಘವೇಂದ್ರನ ಕರೆಸಿದರೆ ಇನ್ನೂ ಚೆನ್ನಾಗಿ ಹೇಳಿಕೊಡ್ತಾರೆ. ಸುಮ್ಕೆ ತಮಾಷೆ ಮಾಡ್್ಬೇಡ್ರಲಾ ಯಾವ ನಾಟಕ ಹೇಳ್ರಲಾ ಅಂದ ಗೌಡಪ್ಪ. "ಕಂಸ ವಧೆ", ಕಂಸ ಯಾರಲಾ. ನೀವೆಯಾ. ಮತ್ತೆ ಕಿಸ್ನ. ನಾನು ಅಂದ ಸುಬ್ಬ. ಮಗ ಸುಬ್ಬನ ಕೈಯಲ್ಲಿ ಸಿಕ್ಕರೆ ಸಾನೇ ಒದೆ ತಿನ್ ಬೇಕಾಯ್ತದೆ ಅಂದು. ನೋಡ್ರಲಾ ಕಿಸ್ನನ ಪಾತ್ರ ನಮ್ಮ ಕಟ್ಟಿಗೆ ಒಡೆಯೋ ಕಿಸ್ನ ಮಾಡಲಿ ಅಂದ. ಸರಿ ಪಾತ್ರಕ್ಕೆ ಸುಬ್ಬಿ, ನಿಂಗ, ಗೌಡಪ್ಪನ ಮೂರನೇ ಹೆಂಡರು ಎಲ್ಲರಿಗೂ ಹೇಳಿದ್ದಾತು.
- Read more about ಯಾವ ನಾಟಕ
- 10 comments
- Log in or register to post comments