ಯಾವ ನಾಟಕ
ಅಲ್ಲಾ ಕಲಾ ಸುರೇಶ್ ಹೆಗ್ಡೆ, ಗೋಪಿನಾಥ ರಾವ್, ಗಣೇಶ್ ಅಂಗೇ ದುಬೈ ಮಂಜಣ್ಣ ನಮ್ಮ ಹಳ್ಳಿಗೆ ಬಂದಿರೋದು ಯಕಾಲಾ ಅಂದ ಗೌಡಪ್ಪ. ಏ ನಾಟಕ ಹೇಳ್ಕೊಡಕ್ಕಂತೆ ಅಂದ ಸುಬ್ಬ. ಯಾವ ನಾಟಕಲಾ ಅಂದ ನಿಂಗ. "ಸರ್ಕಾರಿ ಭೂಮಿ ಹೊಡೆಯೋದು ಹೆಂಗೆ" ಅಂದ ಸುಬ್ಬ. ಇದಕ್ಕೆ ಇವರೇ ಬೇಕೇನಲಾ. ಇದನ್ನ ಕಟ್ಟಾ ಮಗ ಜಗ್ಗ, ಯಡೂರಪ್ಪನ ಮಗ ರಾಘವೇಂದ್ರನ ಕರೆಸಿದರೆ ಇನ್ನೂ ಚೆನ್ನಾಗಿ ಹೇಳಿಕೊಡ್ತಾರೆ. ಸುಮ್ಕೆ ತಮಾಷೆ ಮಾಡ್್ಬೇಡ್ರಲಾ ಯಾವ ನಾಟಕ ಹೇಳ್ರಲಾ ಅಂದ ಗೌಡಪ್ಪ. "ಕಂಸ ವಧೆ", ಕಂಸ ಯಾರಲಾ. ನೀವೆಯಾ. ಮತ್ತೆ ಕಿಸ್ನ. ನಾನು ಅಂದ ಸುಬ್ಬ. ಮಗ ಸುಬ್ಬನ ಕೈಯಲ್ಲಿ ಸಿಕ್ಕರೆ ಸಾನೇ ಒದೆ ತಿನ್ ಬೇಕಾಯ್ತದೆ ಅಂದು. ನೋಡ್ರಲಾ ಕಿಸ್ನನ ಪಾತ್ರ ನಮ್ಮ ಕಟ್ಟಿಗೆ ಒಡೆಯೋ ಕಿಸ್ನ ಮಾಡಲಿ ಅಂದ. ಸರಿ ಪಾತ್ರಕ್ಕೆ ಸುಬ್ಬಿ, ನಿಂಗ, ಗೌಡಪ್ಪನ ಮೂರನೇ ಹೆಂಡರು ಎಲ್ಲರಿಗೂ ಹೇಳಿದ್ದಾತು. ಸರಿ ಇವರು ಎಲ್ರಲಾ ಅಂದ ಗೌಡಪ್ಪ.
ಸುರೇಶ್ ಹೆಗ್ಡೆಯವರು ಯಾವುದೋ ಮರದ ಕೆಳಗೆ ಕೂತುಕೊಂಡು ಪೆನ್ನ ಪೇಪರ್ನಾಗೆ ಏನೋ ಗೀಚುತಾ ಇದ್ರು. ಏನಲಾ ಈ ವಯ್ಯ ಮಾಡ್ತಿರೋದು. ಏ ಕವನ ಬರೀತಾವ್ರೆ. ಅಂಗಾದ್ರೆ ನಾಟಕದ ಸಂಗೀತ ಮೇಟರು ಅನ್ನು. ಹೂಂ ಒಂತರಾ ಅಂಗೇಯಾ. ಮತ್ತೆ ಗೋಪಿನಾಥರಾವ್ ಎಲ್ಲಲಾ. ಹೋಯ್ ನಾನು ಇಲ್ಲೇ ಇದ್ದೀನಿ ಮಾರಾಯ್ರೆ. ಎಂತ ಮಂಡೆ ಬಿಸಿ ಮಾಡೋದು. ಹೇ ಕೋಮಲ್ ಇವನು ಯಾರು ಮಾರಯಾ. ಮಾರೀ ಜಾತ್ರೆಯಲ್ಲಿ ಕೋಣ ಕಡಿಯುವನಂತೆ ಇರುವನಲ್ಲಾ ಅಂದ್ರು. ರಾಯರೆ ಅಂಗೆ ಅನ್ಬೇಡ್ರಿ ಇವನೇ ಗೌಡಪ್ಪ ಅಂದೆ. ಯಾರು ವಾಸನೆ ಗೌಡಪ್ಪನಾ. ಜೋರಾಗಿ ಹೇಳ್ ಬೇಡ್ರೀ ಬಡ್ಡೆ ಐದ ಬಂದು ತಬ್ಬಿಕೊಂಡು ಬಿಡ್ತಾನೆ. ಆಮ್ಯಾಕೆ ನೀವು ಊರಿಗೋದ್ರು ವಾಸನೆ ಹೋಗಕ್ಕಿಲ್ಲ ಅಂದ್ ಮ್ಯಾಕೆ ರಾಯರು ಹೊಯ್ ನಮಗೆ ಯಾಕೆ ಬೇಕು ಮಾರಯಾ. ನಮ್ಮ ಮನೇಲಿ ಬಹಳಷ್ಟು ಸೆಂಟು ಉಂಟು ಅಂದ್ರು.
ಮನೆಗೆ ಹೋದ್ರೆ ಗೌಡಪ್ಪನ ಮನೆ ಅನ್ನೋದು ರಣ ರಂಗ ಆಗಿತ್ತು. ಗೌಡಪ್ಪನ ಹೆಂಡರು ಮನೆಯಲ್ಲಿ ಇರೋ ಹಸು ಒಂದನ್ನು ಬಿಟ್ಟು ಮಿಕ್ಕಿದ್ದೆಲ್ಲಾ ಇಸ್ಮಾಯಿಲ್ ಕರೆಸಿ ಬಿಸ್ಮಿಲ್ಲಾ ಮಾಡಿಸಿದ್ಲು. ಕೊಟ್ಟಿಗ್ಯಾಗೆ ಕುರಿ ಕಟ್ಟಿದು ಹಗ್ಗ ಮಾತ್ರ ಇತ್ತು. ಹುಂಜದ ಕಾಲಿಗೆ ಕಟ್ಟಿದ್ದು ದಾರ ಮಾತ್ರ ಇತ್ತು. ಯಾಕಮ್ಮೀ ಅಂದ ಗೌಡಪ್ಪ. ದುಬೈ ಮಂಜಣ್ಣಂಗೆ ಅಂತಾ ಖೀಮಾ, ಬೋಟಿ, ಕಲ್ಮಿ ಕಬಾಬ್ ಅಂಗೇ ಸಾನೇ ಅಡುಗೆ ಮಾಡಿದೀನಿ ಅಂದ್ಲು. ಲೇ ಮಿಕ್ಕವರು ಬ್ರಾಹ್ಮಣರು ಕಣೇ. ಅವರಿಗೆ ಅಂತಾ ತಂತಿ ಪಕಡು ಸೀತು ಮನ್ಯಾಗೆ ತಿಳಿ ಸಾರು ಸೊಸೈಟಿ ಅಕ್ಕಿ ಅನ್ನ ಅಂಗೆ ಒಂದಿಷ್ಟು ನೀರು ಮಜ್ಜಿಗೆ ಉಪ್ಪಿನ ಕಾಯಿ ಮಾಡಿಸೀವ್ನಿ ಅಂದ್ಲು.
ಎಲ್ಲಲಾ ಮಂಜಣ್ಣ ಅಂದ್ರೆ ಗೌಡಪ್ಪನ ಕೊಟ್ಟಿಗೆ ಮೂಲ್ಯಾಗೆ ಸಾವಿತ್ರಿ ಧಾರವಾಹಿ ನೋಡಿ ನಮ್ಮನ್ನು ಉಳಿಸಿ ಅಂತಿತ್ತು. ಏನಲಾ ಹಿಂಗಂದ್ರೆ. ಮಂಜಣ್ಣನ ಮಗಳು ಗೌತಮಿ ಧಾರವಾಹಿ ಪಾಲ್ಟು ಮಾಡ್ತದ್ದಲ್ಲಾ ಅದನ್ನು ನೋಡಿ ಅಂತಾವ್ರೆ. ಲೇ ಆ ಟೇಮಿಗೆ ಕರೆಂಟ್ ಇರಲ್ವಲ್ಲೋ ಇನ್ನೇನ್ಲಾ ಧಾರವಾಹಿ ನೋಡೋದು ಅಂದ ಗೌಡಪ್ಪ. ಅಯ್ಯೋ ಕೂಗಬೇಡ್ರಿ. ಆಗಲೇ ಮಂಜಣ್ಣ ಫುಲ್ ಬಾಟಲ್ ಪೋಚ್ಕಂಡವ್ರೆ. ಇವಾಗ ಏನಾದ್ರೂ ನಿಮ್ಮ ಮಾತು ಕೇಳಿದ್ರೆ. ಆಟೆಯಾ ಒಂದು ಗುನ್ನ, ಹೊಟ್ಟೆಗೆ ಒಂದು ಪಂಚ್, ಮುಖಕ್ಕೆ ಒಂದು ಡಿಚ್ಚಿ ಅಂದೆ. ಬೇಡ ಬುಡಲಾ ಊಟಕ್ಕೆ ಕರೆಯಲಾ ಅಂದೆ. ಕುಡಿದಿರೋದು ಸಾನೇ ಆಗೈತೆ. ನಿಮ್ಮ ಹೆಂಡರಿಗೆ ಮಾಡಿದ್ದನ್ನು ಫ್ರಜ್್ನಾಗೆ ಮಡಗಕ್ಕೆ ಹೇಳಿ. ಬೆಳಗ್ಗೆ ಎದ್ದು ಹಾಳು ಬಾಯ್ನಾಗೆ ತಿಂತದೆ ಅಂದೆ. ಹಲ್ಲು ಉಜ್ಜಕ್ಕೆ ಇಲ್ವೇನಲಾ. ಏ ಹಲ್ಲು ಉಜ್ಜಿ ತಿಂದ್ರೆ ಮಟನ್ ಟೇಸ್ಟ್ ಹೋಯ್ತದೆ. ಏನೋಪ್ಪಾ ಇದ್ರೂ ಇರಬೈದು ಅಂದ ಗೌಡಪ್ಪ.
ಲೇ ಗಣೇಶ ಎಲ್ಲಲಾ, ಹೆಣ್ಣು ಐಕ್ಳು ಜೊತೆ ಹಲ್ಟೆ ಹೊಡಿತಾ ಇದ್ರು. ಏನ್ರೀ ಗೌಡ್ರೆ ಅಂದೋರೆ ಜೇಬಿಂದ ೊಂದು ನಾಕು ಚೇಳು ತೆಗೆದ್ರು. ಅಂಗೇ ಈ ಕಡೆ ಜೇಬಿಂದ ೊಂದು 4 ಬಳ್ಳಿ ತೆಗೆದ್ರು. ಗೌಡಪ್ಪ ಅದ್ರಾಗೆ ಅಮೃತ ಬಳ್ಳಿನಾ ಮನೆ ಹಿಂದೆ ಹಾಕಿದಾನೆ. ಮಗಂಗೆ ಸುಗರ್ ಇರೋದು ಇಡೀ ರಾಜ್ಯಕ್ಕೆ ಗೊತ್ತಾಗೈತೆ ಅಂದಾ ಸುಬ್ಬ. ಸರೀ ಪಿಯುಸಿ ಐಕ್ಳು ಬಂದು ಗಣೇಶಣ್ಣನ್ನ ಸಾಲೆಗೆ ಕರೆದುಕೊಂಡು ಹೋದ್ವು. ಯಾಕ್ರವ್ವಾ. ಬಯಾಲಜಿ ಪಾಠ ಹೇಳಿಸ್ಕೊಳ್ಳೋಕೆ. ಹುಸಾರಪ್ಪ ಹಳ್ಳಿ ಹೆಣ್ಣು ಐಕ್ಳು. ಬರೀ ಥಿಯರಿ ಮಾತ್ರ ಹೇಳಿಕೊಡು ಅಂದಾ ಗೌಡಪ್ಪ.
ಸರಿ ಸುಸ್ತಾಗಿತ್ತು, ಮಂಜಣ್ಣಂಗೆ ಡಿಸ್ಟರ್ಬ್ ಮಾಡೋದು ಬೇಡ ಅಂತಾ ಬಿಟ್ವಿ. ಕೊಟ್ಟಿಗ್ಯಾಗೆ ಮಲಗಿದ್ರು. ಬೆಳಗ್ಗೆ ಎದ್ರೆ ಮುಖದಾಗೆ ರಕ್ತ ಬರ್ತಾ ಇತ್ತು. ಯಾಕೆ ಮಂಜಣ್ಣ ರಕ್ತ. ಅಯ್ಯೋ ನಿನ್ ಮುಖಕ್ಕೆ ಚಾ ಚಲ್ಟಾ ಹುಯ್ಯಾ. ಪಕ್ಕದಾಗೆ ಹಸಾ ಯರಲಾ ತಂದು ಕಟ್ಟಿದ್ದು ಅಂತು. ಕಿಸ್ನ ಅಂಗೇ ಹಿಂದಿಂದ ಓಡಿ ಹೋಗಿದ್ದ. ಇನ್ನು ಮೂರು ಜನಕ್ಕೆ ಸೀತು ಮನ್ಯಾಗೆ ಊಟ. ಊಟಕ್ಕಿಂತ ಮುಂಚೆ ತಟ್ಟೆ ಸುತ್ತಲೂ ನೀರು ಹಾಕಿ ಊಟ ಮಾಡಿ ಎದ್ದು ಕೈಯನ್ನ ನೆಲಕ್ಕೆ ಒತ್ತಿ ಅನ್ನದಾತ ಸುಖೀಭವ ಅಂದ್ರು. ನೋಡಲಾ ಇವರಿಗೆ ಖರ್ಚು ಮಾಡಿರೋದು ಕೇವಲ ನೂರು ರೂಪಾಯಿ ಸೀತುಗೆ ಸುಖೀಭವ ಅಂದ್ರು. ಅದೇ ಮಂಜಣ್ಣಂಗೆ ಇಡೀ ಕೊಟ್ಟಿಗೇನೆ ಕಡಿದು ಹಾಕಿದ್ರು. ಬಡ್ಡೆ ಐದ ಅಂಗೇ ತಿಂದು ಮಲಗ್ವರೆ ನೋಡಲಾ ಅಂತಿದ್ದಾಗೆನೇ ದಬು ದಬು ಅಂತಾ ಹಿಂದಿಂದ ಬಿತ್ತು. ನೋಡ್ತೀವಿ ಮಂಜಣ್ಣ. ಮತ್ತೊಂದು ಫುಲ್ ಬಾಟಲ್ ಬ್ಲಾಕ್ ಲೇಬಲ್. ಲೇ ಇದು ನಮ್ಮ ಹಳ್ಯಾಗೆ ಎಲ್ಲಲಾ ಸಿಕ್ತು ಅಂದಾ ಗೌಡಪ್ಪ. ಸುಬ್ಬ ನಾ ತಂದುಕೊಟ್ಟಿದ್ದು ಅಂದ.
ಬಂದ ನಾಕು ಜನಾ ಒಂದು ಮೂರು ದಿನಾ ಇದ್ದು ಮಜಾ ಮಾಡಿಕೊಂಡು ಹೋದ್ರು ಬಿಟ್ರೆ. ಯಾವುದೇ ನಾಟಕನೂ ಸರಿ ಹೇಳಿ ಕೊಡಲಿಲ್ಲ. ಅದಕ್ಕೆ ಈಗ ನಾವೇ ಒಂದು ನಾಟಕ ಮಾಡ್ತಾ ಇದೀವಿ. " ಅಪ್ಪ ಕಳ್ಳ ಮಗ ಮಳ್ಳ" ಇಲ್ಲಾಂದ್ರೆ "ಯಾರದೋ ದುಡ್ಡು ಗೌಡಪ್ಪನ ಜಾತ್ರೆ" ಅದೂ ಇಲ್ಲಾಂದ್ರೆ " ಡಿ ನೋಟಿಫಿಕೇಸನ್ ಮಾಡೋದು ಹೆಂಗೆ" ಅಂತಾ
Comments
ಉ: ಯಾವ ನಾಟಕ
In reply to ಉ: ಯಾವ ನಾಟಕ by kamath_kumble
ಉ: ಯಾವ ನಾಟಕ
ಉ: ಯಾವ ನಾಟಕ
In reply to ಉ: ಯಾವ ನಾಟಕ by asuhegde
ಉ: ಯಾವ ನಾಟಕ
ಉ: ಯಾವ ನಾಟಕ
In reply to ಉ: ಯಾವ ನಾಟಕ by Jayanth Ramachar
ಉ: ಯಾವ ನಾಟಕ
ಉ: ಯಾವ ನಾಟಕ
ಉ: ಯಾವ ನಾಟಕ
In reply to ಉ: ಯಾವ ನಾಟಕ by kavinagaraj
ಉ: ಯಾವ ನಾಟಕ
In reply to ಉ: ಯಾವ ನಾಟಕ by manju787
ಉ: ಯಾವ ನಾಟಕ