ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಹಾ - ಕಾಫಿಯ ಪುರಾಣ

ಮೂಲ ಲೇಖಕರು : ಸುಮಂತ್ ಶಾನುಭಾಗ್

 


ಬೆಳಿಗ್ಗೆ ಎದ್ದ ತಕ್ಷಣ ೮೦% ಜನರು ಕುಡಿಯುವ ಚಹಾ - ಕಾಫಿಯ ಪುರಾಣ ಯಾರಿಗಾದರೂ ಗೊತ್ತ? ಅಷ್ಟಾದಶ ಪುರಾಣಗಳಲ್ಲಿ ೧೯ನೆ ಪುರಾಣದಲ್ಲಿ ಪೇಯಪರ್ವದ ೪೨೦ ನೆ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ.


"ನಭಯಂ ಚಾಸ್ತಿ ಜಾಗೃತ:". ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ. ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ. ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ.


 


ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಬೇರಿನ ಆರ್ತನಾದ ಕೇಳಿಸಿತು.

ಈ ಜೀವ ನಿನಾಗಾಗಿ

ನಾನು ಕನ್ನಡದ ಹುಡುಗ, ಕನ್ನಡ ನನ್ನ ಉಸಿರು, ಕರುನಾಡಿನಲ್ಲೆ ನನ್ನ ಜೀವನ ಮತ್ತು ಮರಣ, ನಾನು ತುಂಬಾ ಸಿಂಪಲ್ ಹಾಗೇನೇ ಸೆನ್ಸಿಟಿವ್ ಕೂಡ, ನನ್ನಗೆ ನನ್ನದೇ ಅದ ಆದರ್ಶಗಳಿವೆ, ನನಗೆ ನನ್ನದೇ ಅದ ಸ್ಟೈಲ್ ಇದೆ, ನನಗೆ ಬೇರೆಯವರ ತರ ನಾನು ಇರಬೇಕು ಅಂತ ಅಸೆ ಪಡಲ್ಲ, ಬೇರೆಯವರು ಬೇಕಾದರೆ ನನ್ನ ತರ ಇರಬವುದು, ನಾನು ಯಾವಾಗಲು ನಂದೆ ಅದ ಸ್ಟೈಲ್ ಇರಬೇಕು ಅಂತ ಬಯಸುತಿನಿ. ನನಗೆ ಫ್ರೆಂಡ್ಸ್ ಅಂದ್ರೆ ತುಂಬಾ ಇಷ್ಟ, ಸ್ನೇಹ ಅಂದ್ರೆ ಏನು?ಸ್ನೇಹಿತ ಅಂದ್ರೆ ಯಾರು?ಸ್ನೇಹದಲ್ಲಿ ಸ್ವಾರ್ಥ ತುಂಬಿರುತ್ತ? ಹುಟ್ಟುತ ಬರೋದು ರಕ್ತ ಸಂಬಂಧ,ಅದು ಅದ ಮೇಲೆ ಬರೋದು ಸ್ನೇಹ ಅಗಿರಬವುದು ಅಥವಾ ಪ್ರೀತಿ ಅಗಿರಬವುದು!ಸ್ನೇಹದಲ್ಲಿ ಪರಸ್ಪರ ವಿಶ್ವಾಸ, ನಂಬಿಕೆ, ಆತ್ಮೀಯತೆ ಇರುತ್ತೆ.

ರಾಮಾನುಗ್ರಹವಾಗಲಿ!

ಹೈಕೋರ್ಟ್ ಪೀಠದ ಅಯೋಧ್ಯೆ ತೀರ‍್ಪಿನ ಮೂಲಕ, ನ್ಯಾಯಾಂಗವೇ ತನ್ನ ನಂಬಿಕೆ ಉಳಿಸಿಕೊಂಡಂತಾಗಿದೆ. ಒಣ ತರ್ಕ, ಸೃಷ್ಟ್ಯ ಸಾಕ್ಷ್ಯಾಧಾರದ ಮೇಲೆ ಮಾತ್ರಾ ಕೆಲಸ ಮಾಡುತ್ತದೆಂಬ ಪೂರ್ವಗ್ರಹವನ್ನು ನೀಗಿ, ತನ್ನ ಹೃದಯವಂತಿಕೆನ್ನೂ ಅದು ಕಾಣಿಸಿಕೊಟ್ಟಿದೆ! ಕಾತರ, ಆತಂಕಗಳಿಂದ ಕಂಗಾಲಾಗಿದ್ದ ಜನ ಬಹುಶಃ ಇಂಥಾ ಚೇತೋಹಾರೀ ಫಲಿತಾಂಶವನ್ನು ನಿರೀಕ್ಷಿಸಿಯೇ ಇರಲಿಲ್ಲವೇನೋ?!


ಸುನ್ನಿ ವಕ್ಫ್ ಮಂಡಲಿ ಮತ್ತು ಹಿಂದೂ ಮಹಾಸಭಾ ಸುಪ್ರೀಂ ಕೋರ್ಟಿಗೆ ಹೋದರೆ ಹೋಗಲಿ. ನ್ಯಾಯಾಂಗದಿಂದಲೂ ನೆಮ್ಮದಿ ನಿರೀಕ್ಷಿಸಬುದೆಂಬ ಅನುಭವ ಪಡೆದಿರುವ ಮಹಾಜನತೆ ವಿಚಲಿತರಾಗಬೇಕಾದ್ದಿಲ್ಲ. ಈ ನಾವೀನ್ಯಪೂರ್ಣ ತೀರ‍್ಪಿನಿಂದ, ಬಹುಸಂಖ್ಯಾತ ಜನಾಂಗಕ್ಕೆ ಸಾಮಾಜಿಕ ನ್ಯಾಯ, ಆ ಮೂಲಕ ರಾಷ್ಟ್ರ ಸಮುದಾಯಕ್ಕೆ ರಾಜಕೀಯ, ಸಾಮಾಜಿಕ, ಆರ್ಥಿಕ ಸಮತೋಲನ ಒದಗಿಸುವಲ್ಲಿ, ಇತರ ಪಾಲುದಾರರಾದ ಬಾಬರ್ ಪ್ರತಿನಿಧಿ ಸಮಾಜ ಮತ್ತು ಬೈರಾಗಿಗಳ ಅಖಾಡಾಕ್ಕಿಂತಾ, ರಾಮಲಾಲಾ ವಿರಾಜಮಾನ್ ಸಂಘಟನೆಗೆ - ಅಂದರೆ ಹಿಂದೂ ಸಂಘಟನೆಗೆ - ಈ ತೀರ‍್ಪು, ಅನೇರವಾಗಿ, ವಿಶೇಷ ಜವಾಬ್ದಾರಿ ಒಪ್ಪಿಸಿದಂತಾಗಿದೆ.

ಶೀರ್ಷಿಕೋಪಾಖ್ಯಾನ! ಒಂದು ತಲೆಹರಟೆ


  ರಾಮ(ಜನ್ಮಭೂಮಿ)ಕಥೆ ಒಂದು ಘಟ್ಟವನ್ನು ತಲುಪಿದೆ. ನ್ಯಾಯಾಲಯದ ತೀರ್ಪಿನ ಸುದ್ದಿಗೆ ನಮ್ಮ ದಿನಪತ್ರಿಕೆಗಳು ಹೇಗೆಲ್ಲ ಶೀರ್ಷಿಕೆಗಳನ್ನು ಕೊಡುವವೆಂದು ನೋಡುವ ಕುತೂಹಲ ನನಗಿತ್ತು. ಕನ್ನಡದ ಎಲ್ಲ ಮುಖ್ಯ ದಿನಪತ್ರಿಕೆಗಳನ್ನೂ ಗಮನಿಸಿ ಈ ಶೀರ್ಷಿಕೋಪಾಖ್ಯಾನ ಬರೆಯುತ್ತಿದ್ದೇನೆ, ಓದಿ ಆನಂದಿಸಿ.
  ಪದ್ಧತಿ ಪಾಲಿಸುವ ಪತ್ರಿಕೆಯಾದ ಪ್ರಜಾವಾಣಿಯು, 'ಅಯೋಧ್ಯೆ : ಮೂರು ಪಾಲು' ಎಂಬ ಶೀರ್ಷಿಕೆ ನೀಡುವ ಮೂಲಕ ನೇರವಾಗಿ ವಿಷಯ ತಿಳಿಸುವ ತನ್ನ ಪದ್ಧತಿಯನ್ನು ಪಾಲಿಸಿದೆ. ಆದರೆ, ಇಡೀ ಅಯೋಧ್ಯೆ ಪಟ್ಟಣವೇ ಮೂರು ಪಾಲಾಗಬೇಕೆಂಬ ಅಪಾರ್ಥಕ್ಕೂ ಈ ಶೀರ್ಷಿಕೆ ಎಡೆಮಾಡಿಕೊಡುತ್ತದೆ!
  ಕನ್ನಡ ಪ್ರಭವು, '೩ ಭಾಗ; ಭಾವೈಕ್ಯತೆಗೆ ಪಂಚಾಂಗ' ಎಂದು ತಲೆಬರಹ ನೀಡುವ ಮೂಲಕ ತನ್ನ ಭಾವೈಕ್ಯೋದ್ದೇಶವನ್ನು ಪ್ರಚುರಪಡಿಸಿದೆ.

ಒಂದು ಲಾರಿ ಲೋಡ್ ಸುಳ್ಳು

ನಾನು, ಸುಬ್ಬ, ನಿಂಗ, ಅಂಗೇ ಇಸ್ಮಾಯಿಲ್ ಎಲ್ಲಾ ರಾಮ ಜನ್ಮಭೂಮಿ ವಿವಾದದ ಬಗ್ಗೆ ಮಾತಾಡ್ತಾ ಹೊಂಟಿದ್ವಿ. ಅಟ್ಟೊತ್ತಿಗೆ ಗೌಡಪ್ಪ ಬಂದೋನು ಬರ್ರಲಾ ನಮ್ಮ ತೋಟಕ್ಕೆ ಹೋಗಿ ಬರುವಾ ಅಂದ. ಲೇ ಇವನು ತೋಟಕ್ಕೆ ಹೋದರೆ ನಮ್ಮ ಕೈಲೇ ಎಲ್ಲಾ ಕ್ಯಾಮೆ ಮಾಡಿಸ್ತಾನೆ ಬೇಡ ಕನ್ರಲಾ ಅಂದ ಸುಬ್ಬ. ಇಲ್ಲ ಬರ್ರಲಾ, ಸುಮ್ಕೆ ಮಾತಾಡ್ತಾ ಕೂರುವಾ ಅಂದೋನು ಕರ್ಕಂಡು ಹೋದ. ಆದ್ರೂ ಅಲ್ಲಿ ಬಿದ್ದಿರೋ ತೆಂಗಿನಕಾಯಿ ಹಂಗೇ ಹ್ಯಾಡೆನ ನಮ್ಮ ಕೈಲೇ ತೆಗೆಸಿ ತೋಟದ ಮನೆಗೆ ಹಾಕ್ಸಿದ.

ಡಾ// ರಾಜ್ ಹಾಗು ಅಮಿತಾಭ್

ಈ ಹಾಸ್ಯ ಬರಹವನ್ನು ಮುಂಚೆ ಓದಿರಬಹುದು...ಓದಿದ್ದರೆ ಇನ್ನೊಮ್ಮೆ ಓದಿ ನಕ್ಕು ಹಗುರಾಗಿ....ಇಲ್ಲದಿದ್ದರೆ ತಿರಸ್ಕರಿಸಿ...


 


ಡಾ// ರಾಜ್ ಹಾಗು ಅಮಿತಾಭ್ ರ ನಡುವೆ ವಾಗ್ವಾದ ನಡೆಯುತ್ತಿತ್ತು...ರಾಜ್ ಹೇಳುತ್ತಿದ್ದರು ನನಗೆ ಪ್ರಪಂಚದ ಎಲ್ಲ ಪ್ರಖ್ಯಾತ ವ್ಯಕ್ತಿಗಳಪರಿಚಯವೂ ಇದೆ ಬೇಕಾದರೆ ಆಧಾರ ಸಮೇತವಾಗಿ ನಿರೂಪಿಸಬಲ್ಲೆ  ಎಂದು...


ಆದರೆ ಅಮಿತಾಭ್ ಅಷ್ಟು ಸುಲಭವಾಗಿ ಒಪ್ಪಲು ತಯಾರಿರಲಿಲ್ಲ...


 


ಸರಿ ರಾಜ್ ಅಮಿತಾಭ್ ಗೆ ಹೇಳಿದರು...ನೀವು ಯಾವುದಾದರು ಖ್ಯಾತ ವ್ಯಕ್ತಿಯ ಹೆಸರು ಹೇಳಿರಿ ನಾನು ಅವರೊಡನೆ ಮಾತಾಡಿ ನಿಮ್ಮ ಸಂಶಯವನ್ನು ಪರಿಹರಿಸಬಲ್ಲೆ ಎಂದರು...ಅಮಿತಾಭ್ ಕ್ಷಣ ಕಾಲ ಯೋಚಿಸಿ "ಟಾಮ್ ಕ್ರೂಸ್" ಎಂದಾಕ್ಷಣ...ರಾಜ್ ಅವರು ಹೋ ಗೊತ್ತು ನಡೀರಿ ಹೋಗೋಣ ಎಂದು ಇಬ್ಬರು ಹಾಲಿವುಡ್ ಗೆ ತೆರಳಿದರು. 


 


ರಾಜ್ ಅವರನ್ನು ಕಂಡಾಕ್ಷಣ ಟಾಮ್ "ಅಣ್ಣಾವ್ರೆ" ಎಂದು ಉದ್ಗಾರ ತೆಗೆದು ಅವರಿಗೆ ಊಟೋಪಚಾರ ನೀಡಿ ಬೀಳ್ಕೊಟ್ಟರು. ಇದನ್ನು

ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದ ನನ್ನ ದೃಷ್ಟಿಯಲ್ಲಿ

ರಾಮಜನ್ಮ ಭೂಮಿ - ಬಾಬ್ರಿ ಮಸೀದಿ ಜಾಗದ ಬಗ್ಗೆ ತೀರ್ಪು ಬರಲಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುವ ತನಕ ಹೀಗೊಂದು ವಿವಾದವಿದೆ ಎಂದೇ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೂ ಇದರ ಬಗ್ಗೆ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ನಾನು ಹುಟ್ಟುವ ವೇಳೆಗೆ ಗಲಾಟೆ, ಹತ್ಯಾಕಾಂಡಗಳೆಲ್ಲಾ ಮುಗಿದೇ ಹೋಗಿತ್ತು. ಬುದ್ಧಿ  ಬೆಳೆಯುವ ವೇಳೆಗಾಗಲೇ ತೀರ್ಪು ಬರುವ ಸಮಯವಾಗಿತ್ತು. ನಾನು ಈ ವಿಷಯದಲ್ಲಿ ಧಾರ್ಮಿಕವಾಗಿಯಾಗಲೀ ಅಥವಾ ಭಾವನಾತ್ಮಕವಾಗಿಯಾಗಲೀ ತೊಡಗಿಸಿಕೊಳ್ಳಲೇ ಇಲ್ಲ. ಹೀಗಾಗಿ ಈ ತೀರ್ಪಿನಿಂದ ನನಗೆ ಸಂತೋಷವೂ ಆಗಿಲ್ಲ, ಬೇಸರವೂ ಆಗಿಲ್ಲ.

ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) - ೧

ಆತ್ಮೀಯರೇ


ಈ ನಾಟಕದ ಪ್ರೇರಣೆ ಮರಾಠಿಯ ’ಮೆ ನಾಥೂರಾಮ್ ಬೋಲ್ತೋಯ್’ ಎ೦ಬ ನಾಟಕ. ಆ ನಾಟಕದ ಕೆಲವು ಸಾಲುಗಳನ್ನು ಇಲ್ಲಿ ಉಪಯೋಗಿಸಿಕೊ೦ಡಿದ್ದೇನೆ. ಮಿಕ್ಕ೦ತೆ ಇಡೀ ನಾಟಕ ನನ್ನ ಕಲ್ಪನೆಯ೦ತೆ ಸಾಗುತ್ತಾ ಹೋಗಿದೆ. ಇದರ ಮೊದಲ ಕ೦ತು ನಿಮ್ಮ ಮು೦ದೆ ಇಡುತ್ತಿದ್ದೇನೆ. ಓದಿ ಪ್ರತಿಕ್ರಿಯಿಸಿ. ನಾಟಕದಲ್ಲಿ ಪದಗಳು ಭಾವಗಳು ಪದೇ ಪದೇ ಬ೦ದ೦ತಾಗಿದೆ ಎ೦ದು ನನ್ನ ಅನಿಸಿಕೆ ಅದನ್ನು ಸರಿ ಪಡಿಸಲು ಪ್ರಯತ್ನ ಪಟ್ಟೆ ಸಾಧ್ಯವಾಗಲಿಲ್ಲ. ಅದಕ್ಕೆ ಕ್ಷಮೆ ಇರಲಿ


***************************


(ರ೦ಗದ ತು೦ಬಾ ಕತ್ತಲು ಆವರಿಸಿಕೊ೦ಡಿದೆ. ಸಣ್ಣದೊ೦ದು ದೀಪ ನಾಥೂರಾಮನ ಮೇಲೆ ಬಿದ್ದಿದೆ. ಅವನು ಪ್ರೇಕ್ಷರಿಗೆ ಹಿಮ್ಮುಖವಾಗಿ ನಿ೦ತಿದ್ದಾನೆ. ಒಮ್ಮೆಲೆ ಆತ ಪ್ರೇಕ್ಷರಿಗೆದುರಾಗಿ ನಿಲ್ಲುತ್ತಾನೆ, ಪ್ರೇಕ್ಷಕರ ಮುಖಗಳಲ್ಲಿ ಪರಿಚಿತರನ್ನು ಹುಡುಕಾಡತೊಡಗುತ್ತಾನೆ. ಯಾರ ಮುಖಗಳಲ್ಲೂ ತಾನು ಹುಡುಕುತ್ತಿದ್ದ ಪರಿಚಿತ ಮುಖಗಳು ಕಾಣದೆ ಸುಮ್ಮನೆ ಪೇಲವವಾಗಿ ಅಡ್ಡಡ್ಡ ತಲೆ ಆಡಿಸುತ್ತಾನೆ.)

"ಕಣ್ಣು ತೆರೆದು ಕಾಣುವ ಕನಸೇ ಜೀವನ"---- ಈ ಬಾರಿಯಾದರೂ ಕೆಲ ಗಮನಕ್ಕಾಗಿ

ಜಯಂತ್ ಕಾಯ್ಕಿಣಿ ಅವರ ಈ ಸಾಲು ಸೋನು ನಿಗಂ ಕಂಠ ಸಿರಿಯಲ್ಲಿ ಕೇಳಿದಾಗ ಕರುಳು ಮಿಡಿಯದೆ ಇರದು. ಕನಸು ಮತ್ತು ಜೀವನವನ್ನು ಏಕಕಾಲಕ್ಕೆ ಬೆಸೆಯುವ ಈ ಸಾಲು ಹೊಸದೇನಲ್ಲ ಆದರೆ, ಈ ಸಾಲು ಮೂಡಿಸುವ ವಿಚಾರ ಸರಣಿ  ವಿಸ್ತ್ರತವಾದದ್ದು. ಹದಿನಾರನೇ ಶತಮಾನದಲ್ಲಿ ಪ್ರಸಿದ್ಧ ಆಂಗ್ಲ ಕವಿ ಷೇಕ್ಸ್ಪಿಯರ್ ಹೇಳುವಂತೆ : Life is but an empty dream / Full of sound and fury signifying nothing. ಬಹುಷಃ  ಸಾಂಧರ್ಭಿಕವಾಗಿ ಕವಿ ಬದುಕೆಂದರೆ ಗೊಂದಲದ ಗೂಡು ಅರ್ಥವಿಲ್ಲದ ಕನಸು ಎಂದು ಹೇಳಿರಬಹುದು. ಕೆಲವರಿಗೆ ಹಾಗನಿಸಲೂ ಬಹುದು . ಆದರೆ ಕಾಯ್ಕಿಣಿಯವರ ಈ ಸಾಲು ಒಂದು ಮಹತ್ತರ ಸತ್ಯದ ಬಗ್ಗೆ ಹೇಳುವಂತೆ ನನಗನಿಸುತ್ತದೆ. ಅದು ಏನೆಂದು ನೋಡೋಣ.