ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗಾಂಧಿ ಜಯಂತಿ ದಿನ ಪಾಲಿಸಬೇಕಾದ ನಿಯಮಗಳು

ಮದ್ಯ ನಿಷೇಧ

ಗುರವೇ ಎಣ್ಣೆ ಇಲ್ಲಾ ಅಂದ್ರೆ ರಜ ಇದೆ ಅನ್ನೋದು ಗೊತ್ತಾಗುವುದೇ ಇಲ್ವೇ.

ಹಾಗಾಗಿ ಮದ್ಯವನ್ನು ರಸ್ತೆಯ ಮಧ್ಯದಲ್ಲಿ ಕುಡಿಯದೆ ಮನೆಗೆ ತಂದು ಕುಡಿಯಿರಿ. ಅಬಕಾರಿ ಇಲಾಖೆಯವರು ಸಿಕ್ಕರೆ ಒಂದು ನೂರು ರೂಪಾಯಿ ಕೊಡಿ. ಅವರೇ ಎಕ್ಸಟ್ರಾ ಚಾರ್ಜ್್ಗೆ ಮತ್ತೊಂದಿಷ್ಟು ಬಾಟಲ್ ಸರಬರಾಜು ಮಾಡುತ್ತಾರೆ.

 

ಮಾಂಸ ನಿಷೇಧ

ಎಣ್ಣೆ ಹೊಡೆದ ಮೇಲೆ ತುಂಡು ಇಲ್ಲಾ ಅಂದ್ರೆ ಹೇಗೆ.

ಅದಕ್ಕೆ ಅಂತಾ ನಿನ್ನೆಯೇ ತಂದಿಟ್ಟುಕೊಂಡ ಮಾಂಸವನ್ನು ಮನೆಯಲ್ಲಿ ಬೇಯಿಸಿ ತಿನ್ನಬಹುದು. ಆದರೆ ಅದರ ವಾಸನೆ ಹೊರಗೆ ಹರಡದಂತೆ ನೋಡಿಕೊಳ್ಳಿ.

 

ಧೂಮಾಪಾನ ನಿಷೇಧ

ಗಾಂಧಿ ಜಯಂತಿ

ಅಕ್ಟೋಬರ್ ೨ ಎಂದರೆ ಎಲ್ಲರಿಗು ತಿಳಿದಿರುವ ಹಾಗೆ ಗಾಂಧಿ ಜಯಂತಿ...ಇವನೇನಪ್ಪ ಹೊಸದಾಗಿ


ಹೇಳುತ್ತಿದ್ದಾನೆ ಎನ್ನುತ್ತೀರಾ...ಆದರೆ ಅದಲ್ಲ ವಿಷಯ..


 


ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ ಒಬ್ಬರೇನಾ ಪ್ರಮುಖ ಪಾತ್ರ ವಹಿಸಿದ್ದು??..


 


ಸ್ವಾತಂತ್ರ್ಯ ಹೋರಾಟಕ್ಕೆ ನಿಜವಾದ ಅರ್ಥದಲ್ಲಿ ಮೆರಗು ತಂದುಕೊಟ್ಟ ಚಂದ್ರಶೇಖರ್ ಆಜಾದ್,


ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು, ವೀರ್ ಸಾವರ್ಕರ್,


ಲಾಲಾ ಲಜಪತ್ ರಾಯ್, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಪಾಕ್ ಉಲ್ಲಾ ಖಾನ್...ಇನ್ನೂ ಅನೇಕ ಮಂದಿ.


ಸ್ವಾತಂತ್ರ್ಯಕ್ಕಾಗಿ ವೀರ ಮರಣವನ್ನು ಹೊಂದಿದರು...


 

"ನವಿಲಾದವರು" ಚಲನಚಿತ್ರ ಪ್ರದರ್ಶನ ಮತ್ತು ಸಂವಾದ

ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು  ಸೃಷ್ಟಿಸಿದ  1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಏರ್ಪಡಿಸಿದೆ.

ಮೂವತ್ತೈದು ಸಾವಿರದ ದೃಶ್ಯಾಭಿವ್ಯಕ್ತಿಯನ್ನು ಹಾಸ್ಯಾಸ್ಪದ ಚಟುವಟಿಕೆ ಎಂದೆನ್ನಬೇಕೆ? ಅಥವ ಕೆಟ್ಟ ವಿಜೃಂಭಣೆಯ, ಅನೈತಿಕ ಸಂಭಾವನೆ/ವೆಚ್ಚದ ವಿರುದ್ಧ ಎತ್ತಿರುವ ಅರ್ಥಪೂರ್ಣ ಪ್ರಶ್ನೆ ಎಂದೆನ್ನಬೇಕೆ? ಈ ಪ್ರಶ್ನೆಗಳನ್ನು ಹೆಚ್ಚು ಮಹತ್ವಪೂರ್ಣ ಚರ್ಚೆಗೆ ಒಡ್ಡುವ ಆಶಯವನ್ನು ಸಂವಾದ ಡಾಟ್ ಕಾಂ ಹೊಂದಿದೆ.

ಗೌಡರ ಮನೆಯಿಂದ ಕೆರೆಗೆ ಎಷ್ಟು ದೂರ?

ನಡುರಾತ್ರಿ.........


ನೆಟ್‌ನಲ್ಲಿ "ಶ್ರೀಗಂಧ"ದ ಮರ ಕದಿಯಲು ಗೂಗ್‌ಲ್ ಬೆಳಕಲ್ಲಿ ಹೊರಟಿದ್ದೆ.


"ಪಿಯಾ ತೂ....ಅಬ್ ತೊ ಆಜಾ...." ದಡಬಡ ಎದ್ದು ಬಿದ್ದು ಮೊಬೈಲ್ ಹುಡುಕಿ, ಆಫ್ ಮಾಡುವಾಗ ಮನೆಯಾಕೆಗೆ ಎಚ್ಚರವಾಯಿತು.


"ಯಾರದ್ರೀ ಅದು?" "ಅಲಾರ್ಮ್ ಕಣೇ.. ನೀನು ಮಲಗು, ಟೀ ಮಾಡಿ ಕರೀತೇನೆ" ಎಂದೆ. ಪಕ್ಕಕ್ಕೆ ತಿರುಗಿ ಹಾಯಾಗಿ ಮಲಗಿದಳು. ಅಬ್ಬಾ..


ಕೋಣೆಯಿಂದ ಹೊರಬಂದು ಮೊಬೈಲ್ ನೋಡಿದೆ-ಗೋಪಿನಾಥರು ಫೋನ್ ಮಾಡಿದ್ದು. ರಿಂಗ್ ಮಾಡಿದೆ. " ನಾಳೆ ಬೆಳಗ್ಗೆ ೬ ಗಂಟೆಗೆ ಸುರೇಶ್ ಮನೆಗೆ ಬನ್ನಿ. ಅಲ್ಲಿಂದ ಕೋಮಲ್ ಹಳ್ಳಿಗೆ ಹೋಗಲಿಕ್ಕಿದೆ. ವಿಷಯ ಅಲ್ಲೇ ಹೇಳ್ತೇನೆ." ಎಂದು ಫೋನ್ ಇಟ್ಟರು.


ಬೆಳಗ್ಗೆದ್ದು ಮನೆಗೆಲಸ ಎಲ್ಲಾ ಮುಗಿಸಿ ಹೊರಡುವಾಗ ೭ ಗಂಟೆನೇ ಆಯಿತು. ಸುರೇಶ್ ಮನೆ ತಲುಪುವಾಗ ಗೋಪಿನಾಥರು ಕೋಪಿನಾಥರಾಗಿದ್ದರು.ಸ್ಟಾರ್ಟ್ ಮಾಡಿ ರೆಡಿಯಾಗಿದ್ದ ಕಾರೊಳಗೆ ತಳ್ಳಿದರು. ಕಾರೊಳಗೆ ನೋಡಿದರೆ ನಾವು ೩ ಜನ ಅಷ್ಟೇ.. " ಸೀಟು ಖಾಲಿಯಿತ್ತು. ನನ್ನ ಹೆಂಡತಿಯನ್ನೂ ಕರಕೊಂಡು ಬರುತ್ತಿದ್ದೆ." ಅಂದೆ.

ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! --ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೪

(೨೨೬) ನಮ್ಮ ಸಾಫಲ್ಯವು ಅನ್ಯರಿಗೂ ಒದಗುವಂತಹುದಾದರೆ, ಸಾರ್ಥಕ ಭಾವವೆಂಬುದು ನಮಗೆ ಮಾತ್ರ ಸೇರಿದ್ದು!


(೨೨೭) ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ!


(೨೨೮) ದೆವ್ವಗಳ ಪೀಡೆ ಆಕಸ್ಮಿಕ. ಆದರೆ ಜೀವಂತ ವ್ಯಕ್ತಿಗಳ ಸಾವು ನಿತ್ಯನಿರಂತರ!


(೨೨೯) ಕಾರ್ಯ-ಕಾರಣ ಸಂಬಂಧದ ಗಡಿ ದಾಟಿ ದೆವ್ವವು ಎಂದೂ ತಪ್ಪು ವಿಳಾಸವನ್ನು ತಲುಪದು!


(೨೩೦) ಅವುಗಳನ್ನು ರೂಪಿಸಿರುವ ಪ್ರಕಟಣೆಗಳು ಮತ್ತು ಅವುಗಳನ್ನು ನೆನಪಿಟ್ಟುಕೊಂಡಿರುವ ವ್ಯಕ್ತಿಗಳು ಜೀವಂತವಿರುವವರೆಗೂ ಗಾದೆಗಳು ಅಜರಾಮರ!

ನೆನಪಿರಲಿ

ನಾನು  ಬಡವಿ,
 ನನ್ನ ಕನಸುಗಳ ಹೊರತಾಗಿ
 ನನ್ನೆಡೆಗೆಬೇರೊಂದಿಲ್ಲ,
ನನ್ನ ಕನಸುಗಳಸ್ಟೇ  ಹಾಸಿರುವೆ ,
ನಿನ್ನ ಚರಣಗಳ ಕೆಳಗೆ

ನಡೆ, ಮೆಲ್ಲಗೆ ನಡೆ,
ಏಕೆಂದರೆ ನನ್ನ ಕನಸುಗಳನ್ನು
ತುಳಿಯುತ್ತಾ ನಡೆದಿರುವೆ ನೀನು  ನೆನಪಿರಲಿ..!