"ನವಿಲಾದವರು" ಚಲನಚಿತ್ರ ಪ್ರದರ್ಶನ ಮತ್ತು ಸಂವಾದ
ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು ಸೃಷ್ಟಿಸಿದ 1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಏರ್ಪಡಿಸಿದೆ.
ಮೂವತ್ತೈದು ಸಾವಿರದ ದೃಶ್ಯಾಭಿವ್ಯಕ್ತಿಯನ್ನು ಹಾಸ್ಯಾಸ್ಪದ ಚಟುವಟಿಕೆ ಎಂದೆನ್ನಬೇಕೆ? ಅಥವ ಕೆಟ್ಟ ವಿಜೃಂಭಣೆಯ, ಅನೈತಿಕ ಸಂಭಾವನೆ/ವೆಚ್ಚದ ವಿರುದ್ಧ ಎತ್ತಿರುವ ಅರ್ಥಪೂರ್ಣ ಪ್ರಶ್ನೆ ಎಂದೆನ್ನಬೇಕೆ? ಈ ಪ್ರಶ್ನೆಗಳನ್ನು ಹೆಚ್ಚು ಮಹತ್ವಪೂರ್ಣ ಚರ್ಚೆಗೆ ಒಡ್ಡುವ ಆಶಯವನ್ನು ಸಂವಾದ ಡಾಟ್ ಕಾಂ ಹೊಂದಿದೆ.
Rating