ಈ ಜಗವೇ ಒಂದು ಕೋಕಿಯ ಮಂದಿರ
(ಪೂರ್ವಾರ್ಧ)
"ಈ ಜಗವೇ ಒಂದು ಕೋಕಿಯ ಮಂದಿರ
ನಾವೆಲ್ಲಾ ಬರೇ ಕೋತಿಗಳಯ್ಯಾ..."
ಅಂತ ತಾರಕ ಸ್ವರದಲ್ಲೇ ಯಾವಾಗ ಹಾಡುತ್ತಾ ಸಾಗಿದನೋ ನಮ್ಮ ಈ ಕಥಾ ನಾಯಕ ಕೋತಿ ಅಂದರೆ ಆವತ್ತು ಈತ ತನ್ನ ಧರ್ಮದ ಪತ್ನಿ ಕೋಕಿಯಲ್ಲಿ ಜಗಳ ಮಾಡಿಕೊಂಡಿರುತ್ತಾನೆ ಅಂತಾನೇ ಅರ್ಥ! ಆದಿನವೆಲ್ಲಾ ಈತನ ಹೊಟ್ಟೆಯಿಂದ ಬರುವುದು ಈ ಹಾಡು ಮಾತ್ರ. ಅಚ್ಚರಿ ಪಡದಿರಿ ನಿಮ್ಮ ತಲೆಯಲ್ಲಿ ಉಧ್ಭವಿಸಿದ ಪ್ರಶ್ನೆಗೆಲ್ಲಾ ನನ್ನ ಸಿಧ್ಧ ಉತ್ತರವಿದ್ದೇ ಇದೆ. ಕೋ.ತಿ. ಅಂದರೆ ಕೋಳೂರಿನ ತಿಪ್ಪಯ್ಯಗೆ ಅವನ ಪತ್ನಿಯ (ಕಿಚ್ಚವ್ವನ) ಅಣ್ಣಂದಿರು ವರದಕ್ಷಿಣೆಯಿಲ್ಲದೇ ಜಬರ್ದಸ್ತಿ ಮದುವೆ ಮಾಡಿಸಿಕೊಟ್ಟುದರಿಂದ ಅವಳು ಧರ್ಮದ ಪತ್ನಿಯೇ ಆದಳಲ್ಲ್ವಾ?. ಇನ್ನು ದಿನ ಪೂರಾ ಏನೂ ತಿನ್ನದೇ ಇದ್ದರೆ ಹೊಟ್ಟೆಯಿಂದಲ್ಲದೇ ಇನ್ನೆಲ್ಲಿಂದ ಹಾಡು ಬರುತ್ತೆ?
ಏನಿದು ಕೋತಿಯ ಕಥೆ ಶುರು ಮಾಡಿಟ್ಟು ಇನ್ನೇನೋ ಒದರ್ತಾ ಇದ್ದೆ ಅಂತ ನಿಮ್ಮ ಮೈಯೆಲ್ಲಾ ಕೆರ್~ಕೊಳ್ಳಬೇಡಿ ಮಹಾರಾಯರೇ! ತಡೆಯಿರಿ ಅಲ್ಲಿಗೇ ಈಕ್ಷಣ ಬರ್ತಾ ಇದ್ದೇನೆ, ಈ ಮದುವೆಯೆಂಬ ಮಹಾ ನಾಟಕ ಮುಗಿದದ್ದೇ ತಡ ನಮ್ಮ ಕೋ. ತಿ.ಯ ಗತಿಯೇ ಕೋತಿ ಪಾಡಾಗಿ ಬಿಟ್ಟಿತ್ತು ನಿಜ.ನಾವೆಲ್ಲಾ ಅವನನ್ನು ಕೋತಿ ಕೋತಿ ಅನ್ನುವುದು ಅವನ ಧರ್ಮದ ಪತ್ನಿಗೆ ಗೊತ್ತಾಗಿ ಅವಳು ಅವನನ್ನು ಹೆಸರು ಬದಲು ಮಾಡಿಕೊಂಡು ಬರುವುದಾದರೆ ಮಾತ್ರ ಊಟ ಉಪಚಾರ ಎಂತ ಹೇಳಿ ಮನೆಯಿಂದಾನೇ ಅಟ್ಟಿಸಿ ಬಿಟ್ಟಳಂತೆ. ಆದರೆ ಹೊಸ ಹೆಸರು ಏನಿಡಬಹುದು ಅನ್ನುವುದೇ ಒಂದು ಸಮಸ್ಯೆ ಆಯಿತು.
ಇವತ್ತಂತೂ ಅದು ನಮ್ಮ ಸಿನೇಮಾಪ್ರಪಂಚದಲ್ಲಿನ ಹಾಗೆ ಕ್ಲೈಮೇಕ್ಸಗೇರಿ ಬಿಟ್ಟಿದೆ ಅಂತ ಕಾಣ್ಸತ್ತೆ!!, ಅಲ್ಲ ಅವನ ಸ್ನೇಹಿತರೆಲ್ಲ ಪ್ರೀತಿಯಿಂದ, ಅದೂ ಅತೀ ಪ್ರೀತಿಯಿಂದ ಹೆಸರನ್ನ ಹೃಸ್ವ ಮಾಡಿ ತನ್ನನ್ನು ಕರೆದರೆ ಇವಳ ಗಂಟೇನು ಹೋಗುತ್ತೆ?. ಮಂಗಳೂರು ಕಡೆಯಂತೂ ಏನೆಲ್ಲಾ ಹೆಸರಿಂದ ಕರೆಯೋಲ್ಲ?. ಕುಕ್ಕು, ಪಬ್ಬ,ದೆಬ್ಬ,ಹುಚ್ಚ, ಪಲ್ಲು,ಎನೆಲ್ಲಾ ಮಾಡಿ ಕರೀತಾರೆ!! ಹಾಗೇ ನನ್ನನ್ನೂ ಕೋತಿ ಅಂತ ಕರೆದರೆ ಇವಳಿಗೇನಾಗತ್ತೆ?. ಹಾಗೆ ಕೇಳಿದರೆ ಕೋತಿಗಳು ಎಲ್ಲೆಲ್ಲಿ ಇಲ್ಲ? ಪುರಾಣದಲ್ಲಂತೂ ಕೋತಿಯಿಲ್ಲದ ಜಾಗವೇ ಇಲ್ಲ. ವಿಜ್~ಜಾನದ ಪ್ರತಿ ಹೊಸ ಪ್ರಯೋಗಕ್ಕೆ ಇವುಗಳೇ ಬೇಕು, ನಮ್ಮ ದೇಶದ ಹೃದಯವಾದ ರಾಜಧಾನಿಯಲ್ಲೇ ಇವರ ಕಥಾನಕಗಳು ಅಚ್ಚರಿಯೆನಿಸುವಷ್ಟಿದೆ. ಯುನಿವರ್ಸಿಟಿಯ ಕ್ಯಾಂಪಸ್ ನಲ್ಲೆಲ್ಲಾ ಹದಿಹರೆಯದವರ ಕಣ್ಣಾಮುಚ್ಚಾಲೆಯಾಟದೊಂದಿಗೆ ಇವರ ಆಟವೂ ಜನಜನಿತ. ಯಾರಪಾಡಿಗೂ ಅವರನ್ನು ಬಿಡದ, ಯಾವ ತರಹದ ಮಾನವ ನಿರ್ಮಿತ ಅಪಾಯಕ್ಕೂ ಜಗ್ಗದ ಇವರು ಸರಕಾರೀ ಆವಾಸವಿರಲಿ, ಆಸ್ಪತ್ರೆಯಿರಲಿ,ಕೋರ್ಟ್ ಕಛೇರಿಯಿರಲಿ ಇವರ ಅತಿಕೃಮಣ ಸರ್ವೇ ಸಾಮಾನ್ಯ.ಅದರಲ್ಲೂ ವಾರದ ಬಾಕಿ ದಿನಗಳಲ್ಲಿ ಮನೆಯಿಂದ ಹೊರಗೆಲ್ಲೂ ಹೋಗಲು ಪುರುಸೊತ್ತಿಲ್ಲದ ಕಂಜೂಸ್ ದಂಪತಿಗಳಿಗೆ ರವಿವಾರದ ಒಂದು ದಿನವಾದರೂ ತಮ್ಮ ಮಕ್ಕಳನ್ನೂ ಹೊರ ಕರೆತಂದು ಸ್ವಾಮಿಕಾರ್ಯ ಸ್ವಕಾರ್ಯ (ಬೇರೆಲ್ಲಿಯಾದರೂ ಹೋಗಬೇಕಾದರೆ ಕಿಸೆ ಭಾರವಾಗಿರ ಬೇಕಾಗುತ್ತದಲ್ಲಾ) ಪೂರೈಸುವುದಕ್ಕೆ ಕೂಡಾ ಅಡ್ಡಬಂದು ಅವರ ಪಾಡೇ ನಾಯಿ ಅಲ್ಲಲ್ಲ ಕೋತಿ ಪಾಡು ಮಾಡುವುದರಲ್ಲಿ ಅಗ್ರಗಣ್ಯರಿವು. ಹೊಸದಾಗಿ ಬಂದ ಕೆಲವರು ತಾವು ದಾರಿ ಮದ್ಯೆ ತಿನ್ನಲು ಹೊತ್ತು ತಂದ ಕೈಚೀಲವೇನಾದರೂ ಅಪ್ಪಿತಪ್ಪಿ ತಮ್ಮ ಗಾಡಿಯಲ್ಲಿ ಬಿಟ್ಟರೋ ಅವರು ತಿರುಗಿ ನೋಡುವಷ್ಟರಲ್ಲಿ ಆ ಚೀಲದ ಅಪರೇಷನ್ನೂ ಮುಗಿದು ಅದರಲ್ಲಿನ ವಸ್ತುಗಳೆಲ್ಲಾ ಪಕ್ಕದ ಮರವೇರಿಬಿಟ್ಟೋ ಅಥವಾ ಅವರ ಸಂತತಿಯವರ ಹೊಟ್ಟೆ ಸೇರಿಯೋ ಬಿಟ್ಟಿರುತ್ತವೆ.ನೀವು ದಿನಪತ್ರಿಕೆ ಓದುವವರಾದರೆ ಇತ್ತೀಚೆಗೆ ದೆಹಲಿಯಲ್ಲಿ ಸೈನಿಕ ಪ್ರಹರಿಯ ಅಭೇಧ್ಯ ಕೋಟೆಯನ್ನೂ ಭೇಧಿಸಿ ಒಳನುಗ್ಗಿದ ಒಂದು ಮಂಗನ ವಿಷಯ ಓದಿಯೇ ಇರುತ್ತೀರಿ.
ಅದು ಬಿಡಿ, ನಮ್ಮಲ್ಲಾದರೆ ಬಾಲದಂತಿರುವ ಮಾಂಸದತುಂಡು ಹೊಂದಿದ ಮಗುವನ್ನು ಹನುಮಂತನ ಅಪರಾವತಾರ ಅನ್ನುವಂತೆ ದೇವಾಲಯ ಮಾಡಿ ಪೂಜಿಸುವಷ್ಟು ಮುಂದುವರಿದರೆ, ಇತ್ತೀಚೆಗೆ ಕೂಡಾ ನಾ ಕೊಡೆ ನೀಬಿಡೆ ಅಂತ ಅರಾಜಕೀಯದವರ ದೊಡ್ಡದೊಡ್ಡ ಮಂಗನಾಟ ನಾವೆಲ್ಲ ನೋಡಿಯೇ ಇದ್ದೇವೆ, ಅಲ್ಲದೇ ಮೈಸೂರ್ ರೋಡಿನಲ್ಲಿರೋ ಮನರಂಜನಾ ತೋಟದ ಜಾಹೀರಾತಿನಲ್ಲಂತೂ ಕೋತಿಯನ್ನೇ ತೋರಿಸಿ ಅಲ್ಲಿಗೆ ಹೋದವರೆಲ್ಲಾ ಮಕ್ಕಳ ಜತೆ ಸೇರಿ ಅದೇ ಅಗಬಹುದು ಅಂತ ಕೂಡಾ ತೋರಿಸಿಬಿಟ್ಟಿದ್ದಾರೆ. ಈ ವಿಷಯದಲ್ಲಿ ಹಾಲಿವುಡ್ ಕೂಡಾ ಹಿಂದೆ ಬಿದ್ದಿಲ್ಲ ಅವರಂತೂ ಮಾನವನ ಪೂರ್ವಜರ ಸಂತತಿಯ ಸೋಗಿನ ಸಿನೇಮಾದಲ್ಲಿ ಒಂದಷ್ಟು ಹಣ ಮಾಡಿಕೊಂಡರಲ್ವಾ?
ಈಗಲೇ ನಾನು ಚಿಕ್ಕವನಾಗಿರುವಾಗಿನ ಘಟನೆಯೊಂದು ನೆನಪಿಗೆ ಬಂತು . ಒಂದು ದಿನ ನನ್ನ ಅಕ್ಕ ಅಳುತ್ತಾ ಮನೆಗೆ ಬಂದಳು. ನನ್ನ ದೊಡ್ಡಪ್ಪನ ಮಗಳವಳು. ಆಗೆಲ್ಲಾ ನಾವು ಒಂದೇ ಮನೆಯಲ್ಲಿ ವಾಸವಾಗಿರುತ್ತಿದ್ದೆವು. ಅವಿಭಕ್ತ ಕುಟುಂಬ. ಈಗ ಹಾಗಿಲ್ಲ ಬಿಡಿ. ನಮ್ಮ ಅಂತಹಾ ದೊಡ್ಡ ಕುಟುಂಭ ಈಗ ಚಿನ್ನವಿಛ್ಚಿನ್ನವಾಗಿ ನಮ್ಮ ಅಜ್ಜನ ಮಕ್ಕಳೆಷ್ಟೋ ಅದರ ಎರಡರಷ್ಟು ಕುಟುಂಭವಾಗಿ ಎಲ್ಲೆಂದರಲ್ಲಿ ಸಿಡಿದು ಬಿಟ್ಟಿವೆ. ನಿಮ್ಮ ಪುರಾಣ ಬಿಡಿ ಕಥೆಯೇನಾಯ್ತು ಅಂತ ಕೇಳಿದಿರಾ..? ಅಲ್ಲಿಗೇ ಬರ್ತಾ ಇದ್ದೇನೆ ಸ್ವಾಮೀ!!. ದೊಡ್ಡವರೆಲ್ಲಾ ಒಟ್ಟಿಗೇ ಕುಳಿತು ವಿಶ್ರಮಿಸೋ ಸಮಯವದು. ಅರ್ಥಾತ್ ಗೋಧೂಳಿಹೊತ್ತು.
ಯಾಕಮ್ಮ ಏನಾಯ್ತು ಕೇಳಿದರು ನನ್ನಪ್ಪ." ಮಂಗ ಕೆನ್ನೆಗೆ ಹೊಡೀತು" ಎಂದಳವಳು ಅಳುತ್ತಾ. ಬಾಕಿ ಉಳಿದವರು ಅವಳನ್ನು ಸಂತೈಸುವ ಮೊದಲೇ ಅವಳ ತಂದೆ( ದೊಡ್ಡಪ್ಪ)ಅವರನ್ನೆಲ್ಲಾ ತಡೆದು" ನೀನೇನಮ್ಮಾ ಮಾಡಿದೆ ಅದಕ್ಕೆ..? ಎಂದು ಕೇಳಿದರು.ಬಿಕ್ಕುತ್ತಿರುವ ಅಳುವಿನ ನಡುವೆ ತಡೆ ತಡೆದು ಅವಳು ಹೇಳುವುದನ್ನು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು.ಮಂಗಗಳ ಸಂಸಾರದ- ತಂದೆ ತಾಯಿಮಂಗಗಳೊಟ್ಟಿಗೆ- ಆಡುತ್ತಿರುವ ಮರಿಮಂಗನ ಬಾಲ ಹಿಡಿದೆಳೆದುದ್ದಕ್ಕೆ ಗಡವ ಮಂಗ ಮರದಿಂದಿಳಿದು ಬಂದು ಇವಳ ಕೆನ್ನೆಗೆ ಒಂದು ತಫರಾಕಿ ಇಟ್ಟಿತ್ತು.ನೆನಪಿದೆಯಲ್ಲಾ, ಮೊನ್ನೆ ಮೊನ್ನೆ ಸರಕಾರ ಮಕ್ಕಳ ವಿಷಯದಲ್ಲಿ ಎಚ್ಚರವಿರಬೇಕು ಅಂತ ನ್ಯಾಯಿಕವಾಗಿ ತೋರಿಸಿಕೊಟ್ಟದ್ದು!!!. ಆದರೆ ಈವಿಷಯದ ಹಕ್ಕು ಸ್ವಾಮ್ಯವನ್ನು ನಾವು ಪಡೆಯಲು ನಲವತ್ತು ವರ್ಷವೇ ಕಾಯಬೇಕಾದರೂ ಇವರು ನಮ್ಮಿಂದ ಆಗಲೇ ಏಷ್ಟೋ ಮುಂದಿದ್ದಾರೆ ಅಂತಲೇ ಆಯ್ತಲ್ಲ..!!!
Comments
ಉ: ಈ ಜಗವೇ ಒಂದು ಕೋಕಿಯ ಮಂದಿರ
In reply to ಉ: ಈ ಜಗವೇ ಒಂದು ಕೋಕಿಯ ಮಂದಿರ by ksraghavendranavada
ಉ: ಈ ಜಗವೇ ಒಂದು ಕೋಕಿಯ ಮಂದಿರ
ಉ: ಈ ಜಗವೇ ಒಂದು ಕೋಕಿಯ ಮಂದಿರ
In reply to ಉ: ಈ ಜಗವೇ ಒಂದು ಕೋಕಿಯ ಮಂದಿರ by vasanth
ಉ: ಈ ಜಗವೇ ಒಂದು ಕೋಕಿಯ ಮಂದಿರ
ಉ: ಈ ಜಗವೇ ಒಂದು ಕೋಕಿಯ ಮಂದಿರ
In reply to ಉ: ಈ ಜಗವೇ ಒಂದು ಕೋಕಿಯ ಮಂದಿರ by manju787
ಉ: ಈ ಜಗವೇ ಒಂದು ಕೋಕಿಯ ಮಂದಿರ
ಉ: ಈ ಜಗವೇ ಒಂದು ಕೋಕಿಯ ಮಂದಿರ
In reply to ಉ: ಈ ಜಗವೇ ಒಂದು ಕೋಕಿಯ ಮಂದಿರ by kavinagaraj
ಉ: ಈ ಜಗವೇ ಒಂದು ಕೋಕಿಯ ಮಂದಿರ