ರೋಬೊ ರಜಿನಿ...

ರೋಬೊ ರಜಿನಿ...

ಬರಹ

 "ಎಂಧಿರನ್" ಇಂಟ್ರಸ್ಟಿಂಗ್ ಆಗಿದೆ. ಮೊದಲಾರ್ಧ ಹಿಡಿದು ಕುಳ್ಳಿರಿಸುತ್ತದೆ. ದ್ವಿತಿಯಾರ್ಧ ಹೊಸ ಜಗತ್ತಿನ ಅವಿಷ್ಕಾರಗಳ ಅನಾವರಣ ಮಾಡುತ್ತದೆ. ಅಂತ್ಯ ಹಾಲಿವುಡ್ ಪ್ರಮುಖ ಚಿತ್ರಗಳ ದರುಶನ ಮಾಡಿಸುತ್ತದೆ. ಅಷ್ಟರ ಮಟ್ಟಿಗೆ "ಎಂಧಿರನ್" ಹಾಲಿವುಡ್ ರೇಂಜ್ ಗೇನೆ ಸಿದ್ಧವಾಗಿದೆ. ಸುರುವಿದ 150 ಕೋಟಿ ರುಪಾಯಿಯ ಶ್ರಮ ಎದ್ದು ಕಾಣುತ್ತದೆ. ರೆಹಮಾನ್ ಹಾಡುಗಳು ಅಷ್ಟೊಂದು ಚೆನ್ನಾಗಿ ಕೇಳುವುದಿಲ್ಲ. ಆದ್ರೆ, ನಿರ್ದೇಶಕ ಶಂಕರ್ ಚಿತ್ರ ಪ್ರೀತಿ ಹಾಡಿನ ಚಿತ್ರೀಕರಣದಲ್ಲೂ ಕಂಡು ಬರುತ್ತದೆ...


ರಜಿನಿ ಇಲ್ಲಿ ನಟಿಸಿಯೇಯಿಲ್ಲ. ಬದಲಿಗೆ ರಜಿನಿನೇ ರೋಬೊನೆ ಪರಕಾಯ ಪ್ರವೇಶ ಮಾಡಿದ್ದಾರೆ. ಆದ್ರೆ, ಇಲ್ಲಿ ಎಂದಿನ ರಜಿನಿಯ ದರುಶನ ಆಗೋದಿಲ್ಲ. ಕಾರಣ ಇದು ರೋಬೊಟ್ ಮ್ಯೂವಿ ಕಣ್ರೀ. ಸೈನ್ಸ್ ಸ್ಪರ್ಶವಿರೋ ಪಕ್ಕಾ ತಮಿಳ್ ಸಿನೆಮಾ. ಆದ್ರೂ, ಇಂಗ್ಲೀಷ ಚಿತ್ರ ನೋಡಿದಂತಹ ಅನುಭವ. ಏಕೆಂದ್ರೆ ಇಲ್ಲಿಯ ಪ್ರತಿ ಕೆಲಸವನ್ನ ಹಾಲಿವುಡ್ ಮಟ್ಟಕ್ಕೇನೆ ಮಾಡಲಾಗಿದೆ.


ಸ್ಟೈಲ್ ಕಿಂಗ್ ರಜಿನಿ ಸ್ಟೈಲ್ ಇಲ್ಲಿ ಕಡಿಮೆಯಿವೆ. ಇಲ್ಲವೇ ಇಲ್ಲ ಅದ್ರೂ ಸರಿನೇ. ಹಾಗಂತ ರಜಿನಿ ತಮ್ಮ ಮ್ಯಾನರಿಸಂ ಬಿಟ್ಟುಕೊಡೋದಿಲ್ಲ. ಅಲಲ್ಲಿ ಝಲಕ್ ಕೊಡ್ತಾನೇ ಹೋಗ್ತಾರೆ. ಚಿಟ್ಟಿ ಅನ್ನೊ ರೋಬೊ ಪಾತ್ರವೇ ಆಗಿರಬಹುದು. ಸಂಶೋಧಕನ ರೋಲೆ ಇರಬಹುದು. ರಜಿನಿ ಎರಡರಲ್ಲೂ ಭಿನ್ನವಾಗಿ ಕಾಣಿಸಿಕೊಳ್ತಾರೆ...ಎರಡನ್ನೂ ಕಂಪೇರ್ ಮಾಡಿದ್ರೆ, ರೋಬೊನೇ ಇಲ್ಲಿ ಗ್ರೇಟ್...


ಐಶ್ವರ್ಯ ರೈ ಬಚ್ಚನ್ ಪ್ರೇಯಸಿಯಾಗಿ ಎಂದಿನಂತೆ ಚೆಂದಗೆ ನಟಿಸಿದ್ದಾರೆ. ರೋಬೊ ರಜಿನಿ ಇರಲಿ. ಡಾಕ್ಟರ್ ರಜಿನಿ ಬಳಿ ಇರಲಿ. ಇಬ್ಬರಿಗೂ ಇಕ್ಕೋಲ್ ಶೇರ್ ಅನ್ನೋ ಹಾಗೆ ಕುಣಿದು ಕುಪ್ಪಳಿಸುತ್ತಾರೆ. ಆದ್ರೂ, ಜಾಸ್ತಿ ಡ್ಯಾನ್ಸ್ ಅಂಡ್ ರೋಮ್ಯಾಂಟಿಕ್ ಸಾಂಗ್ ಇರೊದು ರೋಬೊ ರಜಿನಿ ಜೊತೆಗೇನೆ. ಸೈಂಟಿಸ್ಟ್ ರಜಿನಿ ಜೊತೆಗಿನ ಒಂದು ಹಾಡಿನ ಲೋಕೇಷನ್ ಅದ್ಭುತವಾಗಿವೆ..


ಕಥೆ ರೋಬೊ ಮೇಲೆನೆ ನಿಂತಿದೆ. ರೋಬೊನೆ ಇಲ್ಲಿ ಕಥಾನಾಯಕ. ಹಾಗಾಗಿ ರೋಬೊ ರಜಿನಿಗೆ ಇಲ್ಲಿ ಹೆಚ್ಚು ಕೆಲಸ. ಟ್ರೈನ್ ಫೈಟಿಂಗ್ ನಲ್ಲಿ ರೋಬೊ ಸಾಹಸ ಮೆಚ್ಚುವಂತದ್ದು. ಡ್ಯಾನ್ಸ್ ಕೂಡ ಸೂಪಬ್. ಇನ್ನು ಪ್ರೀತಿಸೋದೊ, ಇದಂತು ನಿಜಕ್ಕೂ ಪಾಗಲ್ ಪ್ರೀತಿ. ನಾಶವಾಗಿ ತಿಪ್ಪಿಯಲ್ಲಿ ಬಿದ್ದರೂ ಕರಗದ ಪ್ರೇಮ ಪರ್ವ ರೋಬೊ ರಜಿನಿಯದ್ದು..


ಇಷ್ಟೆಲ್ಲ ಆದ್ಮೇಲ್ಲೂ ಇನ್ನೊಂದು ವಿಷಯ ಹೇಳೊದೊ ಮರೆತೆ. ಚಿತ್ರದ ಪ್ರಮುಖ ಎಳೆ ಸ್ಟ್ರಾಂಗ್ ಆಗಿದೆ. ಮನುಷ್ಯರಷ್ಟೇ ಅಲ್ಲ. ಅಡ್ವಾನ್ಸ್ಡ್ ರೋಬೊಗಳಿಗೂ "ಫೀಲಿಂಗ್ಸ್" ಮೂಡಿಸಬಹುದೆಂಬ ಕಲ್ಪನೆ ಇಲ್ಲಿಯ ಕಥೆ ಮೂಲ ಎಳೆ. ಆದ್ರೂ, ಕ್ಲೈಮ್ಯಾಕ್ಸ್ ಯಾಕೋ ಅತೀಯಾಯಿತು ಅನಿಸಿತು. ನೀವೂ ಒಮ್ಮೆ ಸಿನೆಮಾ ನೋಡಿ. ಒಂಚೂರು ಹೊಸ ಅನುಭವ ನಿಮಗೂ ಆಗಬಹುದು...


-ರೇವನ್ ಪಿ.ಜೇವೂರ್