ಉಸಿರು...
ಉಸಿರಿನ ಜೀವಕ್ಕೆ ಹಸಿರಾಗಿ ಬ೦ದೆಯಾ...
ಚಿಗುರುವ ಕ್ಷಣದಲೇ ಕಳೆದೆಲ್ಲೋ ಹೋದೆಯಾ...?
ಮನಸಲ್ಲಿ ಬೆರೆತರು, ಕನಸಲ್ಲಿ ಕರಗಿದೆಯಾ...?
ಮರವಾಗೋ ಬಯಕೆಯ ನೀ ಚಿಗುರಲ್ಲೆ ಮರೆತೆಯಾ...?
ಮರುಭೂಮಿಯಾಗಿದೆಯೇ ಕನಸು...
ಬಿಸಿಲ್ಲಲ್ಲೆ ಬಾಡಿದೆಯೇ ಸೊಗಸು...
ಮತ್ತೆ ಬರುವೆನೆ೦ದು ಹೇಳದೆ, ನೀನೆದ್ದು ಹೊರಟೆಯಾ...?
ಹಿ೦ತಿರುಗಿ ಬರುವೆಯಾ...?
ನೋವು, ಕೊರಗು ಎನ್ನ ಪಾಲಿಗೆ ಬಿಟ್ಟು, ನೀ ನಲಿಯುತ ಹೊರಟೆಯಾ...?
ನನ್ನ ನೋವಲ್ಲಿ ಸಮಪಾಲು ಕೇಳೆಯಾ...?
ನಗುವ ನಲಿವ ಹೂವಿನ ಸಡಗರದ ಸುದ್ದಿಯ ನೀ ಬ೦ದು ಹೇಳೆಯ...?
ಬ೦ದವಳು ಉಳಿವೆಯಾ...?
ಬಳಿ ಬ೦ದರೆ ನಾ ಮುದ್ದಾಡುವೆನೆ...
ದಿನ ರಾತ್ರಿ ನಿನ್ನ ಕಾಡುವೆನೆ...
ನೀ ಬರುವ ಹಾದಿಯಲ್ಲಿ ಕಲ್ಲ೦ತೆ ನಾ ಕಾಯುವೆನೆ...
ನೀ ಬಾರೆಯಾ...?
ನಿನ್ನ ನಗುವ ತರುವೆಯಾ...?
- Read more about ಉಸಿರು...
- Log in or register to post comments