ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಹುಸಂಖ್ಯಾತ ಅಬ್ಬರದಲ್ಲೊಂದು ಅಲ್ಪ ದನಿಯ ಕೂಗು!

        ಅಯೋಧ್ಯಾ ಭುಮಿಯ ಹಕ್ಕು-ಒಡೆತನ ಕುರಿತು ಲಕ್ನೋ ಪೀಠದ ತೀರ‍್ಪು ಅಂತಿಮವಲ್ಲ; ಇನ್ನೂ ಸುಪ್ರೀಂ ಕೊರ್ಟ್ ಇದ್ದೇ ಇದೆಯಲ್ಲಾ ಎಂದು ಮುಖಂಡ ಜನ ಸಮಾಧಾನ ಮಾಡಿಕೊಳ್ಳುತ್ತಿರುವುದು ಕೇಳಿ ಬರುತ್ತದೆ. ಎಂಥಾ ತೀರ‍್ಪಿನಿಂದಲೂ ಪಾಠ ಕಲಿಯದ ದೃಢ ನಿರ್ಧಾರವೇ, ಇದು?!


        ಪವಾಡ ಸದೃಶವಾಗಿ ಜನ್ಮಭೂಮಿಯ ಪರವಾಗೇ ತೀರ್ಪು ಬಂದುಬಿಡುವುದಾದರೆ ಅದು ಶ್ರೀರಾಮನ ಮಹಿಮೆ. ಹಾಗಲ್ಲದೆ ಲೆಕ್ಕಾಚಾರದಂತೆ ಮಸೀದಿ ಪರವಾಗಿ ತೀರ್ಪು ಬಂದರೆ, ಸೋತವರು ಮೇಲಿನ ಕೋರ್ಟಿಗೆ ಹೋದರೂ ಇದೇ ಲೆಕ್ಕಾಚಾರ ಪಥ್ಯವಾಗುವುದೇ ಹೆಚ್ಚು ಸಂಭವ.

ಸ್ವದೇಶಿ ತಂತ್ರಜ್ಞರ ಸಂಘಕ್ಕೆ ಸ್ವಾಗತ!

 

 

     ದೇಶ ರಾಮರಾಜ್ಯವಾಗಬೇಕಾದರೆ ಹಳ್ಳಿಗಳು ಆರ್ಥಿಕವಾಗಿ ಸಾಮಾಜಿಕವಾಗಿ ಆಡಳಿತಾತ್ಮಕವಾಗಿ ಸಶಕ್ತವಾಗಬೇಕು ಮತ್ತು ಸ್ವಾವಲಂಬಿಯಾಗಬೇಕು. ಮಹಾತ್ಮಾ ಗಾಂಧಿಜಿ ಹಿಂದ್ ಸ್ವರಾಜ್ ನಲ್ಲಿ ಹೇಳಿರುವ ದೇಶ ಕಟ್ಟಬೇಕಿರುವ ರೂಪುರೇಷೆಯನ್ನು ಪ್ರಾಯೋಗಿಕವಾಗಿ ಪ್ರಚುರಬಡಿಸಲು ಸತಂಸ ಮುಂದಾಗಿದೆ.

 

ರೂಪಾ ರಾವ್‍ರಿಗೆ - ಜನ್ಮ ದಿನದ ಶುಭಾಶಯಗಳು!

ಇಂದು ಸಂಪದಗಿತ್ತಿ ರೂಪಾರ (http://sampada.net/user/roopablrao) ಜನ್ಮದಿನ.

ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.

ನೆಮ್ಮದಿ ಮತ್ತು ಆರೋಗ್ಯವಂತ ಸುದೀರ್ಘ ಬಾಳು ಅವರದಾಗಿರಲಿ ಎಂಬ ಹಾರೈಕೆಗಳು.

- ಆತ್ರಾಡಿ ಸುರೇಶ ಹೆಗ್ಡೆ

 

"ಸಿಲ್ಲೀ" ದೀಕ್ಷಿತ್!

ಯಾವ ಗಂಭೀರ ಸಮಸ್ಯೆಯನ್ನೂ ನೀವು ಗಂಭೀರವೆಂದೆನಲಾರಿರಿ,
ಎನೇ ಆದರೂ ಅದು ದಿಲ್ಲಿಯಲಿ ಸಾಮಾನ್ಯ ಎಂದು ತಳ್ಳಿ ಹಾಕುವಿರಿ;

ಕೋಟಿ ರೂಪಾಯಿ ಹೊತ್ತ ಲಾರಿ ನಡುರಸ್ತೆಯಲಿ ಹೋಗಿದ್ದರೂ ಹೂತು,
ಹಾವಿಗೂ, ಮುರಿದ ಮಂಚಕೂ, ಕುಸಿದ ಸೇತುವೆಗೂ, ಒಂದೇ ಮಾತು;

ದೇಶದ ಮಾನವೆಲ್ಲಾ ಬೇಕಾಬಿಟ್ಟಿ ಆಗುತ್ತಿದ್ದರೂ ಹರಾಜು ನಡುಬೀದಿಯಲ್ಲಿ,
ಅತೃಪ್ತ ಅತಿಥಿಗಳನೇ ದೂಷಿಸಿ, ನಿಮ್ಮೆಲ್ಲಾ ತಪ್ಪುಗಳ ಮುಚ್ಚಿಡುತಿದ್ದೀರಿಲ್ಲಿ;

ಯಾರೇನೇ ಅಂದರೂ ಎಲ್ಲದಕೂ ಉತ್ತರಿಸುತ್ತೀರಲ್ಲ ಒಂದೇ ದನಿಯಲೇ,
ಇದನ್ನು ಅಸಡ್ದೆಯ ಪರಾಕಾಷ್ಟೆ ಎನ್ನಲೇ, ತಾಳ್ಮೆಯ ಮೂರ್ತಿ ಎನ್ನಲೇ;

ಶೀಲಾ ದೀಕ್ಷಿತ್, ನಿಮಗೆ ಈಗ ಕಾಣುತ್ತಿದೆಯಲ್ಲಾ ಎಲ್ಲವೂ "ಸಿಲ್ಲಿ"ಯಾಗಿ,

ಜಿಮ್ ಬಾಡಿ

ಎಲ್ಲರೂ ಹಂದಿ ಬೆಳದಂಗೆ ಬೆಳೆದಿದಿರಾ, ಹಿಂಗಾದ್ರೆ ಸುಗರ್, ಬಿಪಿ ಎಲ್ಲಾ ಬತ್ತದೆ. ಆಮ್ಯಾಕೆ ನನ್ ತರಾ ಸುಗರ್ ಲೆಸ್ ಚಾ ಕುಡಿಬೇಕಾಯ್ತದೆ. ಅದಕ್ಕೆ ಎಲ್ಲರೂ ಬಾಡಿ ಇಳಿಸವಾ ಏನ್ರಲಾ. ಹೂಂ ಅಂದ ಸುಬ್ಬ, ಕಿಸ್ನ ನಾನೂ ಬಾಡಿ ಇಳಿಸ್ತೀನಿ ಅಂದಾ. ನೀನು ಬೇಡಲಾ ಆಮ್ಯಾಕೆ ಮಿಸ್ಟರ್ ಇಂಡಿಯಾ ಆಗೋಗ್ತೀಯಾ ಕಲಾ. ಒಂದು ಕೆಲಸ ಮಾಡು. 4ಕೆಜಿ ಇರೋ ಕೊಡಲಿನಾ 8ಕೆಜಿ ಮಾಡಿಕೋ ಸರಿ ಆಯ್ತದೆ ಅಂದ ಗೌಡಪ್ಪ. ಏ ಥೂ. ಸರಿ ಎಲ್ರಿಗೂ ಜಾಗಿಂಗ್ ಸೂಟ್ ಅಂತಾ. ಪಟಾ ಪಟಿ ಚೆಡ್ಡಿ ಬನೀನ್ ತಂದು ಕೊಟ್ಟಿದ್ದ ಗೌಡಪ್ಪ. ಮಗಂದು ಚೆಡ್ಡಿಗೆಲ್ಲಾ ಲಾಡಿ. ಟೇಲರ್ ರಂಗ ಚೆಡ್ಡಿನಾ ಸಾನೇ ದೊಡ್ಡದು ಹೊಲಿದಿದ್ದ. ಲಾಡಿನಾ ಮೂರು ರವಂಡ್ ಸುತ್ತುತಾ ಇದ್ವಿ. ಆದ್ರೂ ಕೆಳಗೆ ಒಂದು 50cms ನೇತಾಡ್ತಾ ಇರೋದು.

ಕಾಲಿಂಗ್ ಕಾರ್ಡ್

ವಾರಾಂತ್ಯದಲ್ಲಿ ಒಂದು ದಿನ ... ಅರಾಮವಾಗಿ ಎದ್ದು ಕಾಫೀ ಮಾಡಿಕೊಳ್ಳುತ್ತ ಮನದ ತುಂಬ ’ಸುಮ’ಳನ್ನು ತುಂಬಿಕೊಂಡು ಹಾಗೇ ಹಾಡಿಕೊಳ್ಳುತ್ತಿದ್ದೆ... "ಚೈತ್ರದ ಪ್ರೇಮಾಂಜಲಿಯಾ ಸುಮಾ ಸುಮ ಸುಮಾ" ... 
ಈ ಸುಮ ಯಾರು ಅಂದಿರಾ ? ಇನ್ನೇನು ಕೆಲವೇ ತಿಂಗಳಲ್ಲಿ ನನ್ನ ಅರ್ಧಾಂಗಿಯಾಗಿ ನನ್ನ ಬಾಳನ್ನು ಬೆಳಗಲು ಬರುವ ಕುಸುಮ. 

ಮಾನವಧರ್ಮ ದೊಡ್ಡದು

 
  ’ಮಾನವಜನ್ಮ ದೊಡ್ಡದು, ಇದ ಹಾನಿಮಾಡಲುಬೇಡಿ ಹುಚ್ಚಪ್ಪಗಳಿರಾ’, ಅಂದರು ಪುರಂದರದಾಸರು. ಮಾನವಜನ್ಮದಂತೆಯೇ ಮಾನವಧರ್ಮವೂ ದೊಡ್ಡದು. ’ಮಾನವಧರ್ಮ ದೊಡ್ಡದು, ಇದರ ಮಾನ ಕಳೆಯಲುಬೇಡಿ ಅಣ್ಣತಮ್ಮಂದಿರಾ’, ಎಂದು ಸಕಲ ಭಾರತವಾಸಿಗಳಲ್ಲೂ ವಿನಂತಿಸಿಕೊಳ್ಳುವ ಸಂದರ್ಭ ಇದೀಗ ಬಂದಿದೆ.

ಇತಿಹಾಸದಲ್ಲೇ ಮೊದಲ ಲಿನಕ್ಸ್ ಪ್ರತಿಮೆ ರಷ್ಯಾದಲ್ಲಿ

Tyumen ಲಿನಕ್ಸ್ ಬಳೆಕೆದಾರರ ಸಮುದಾಯ ಲಿನಕ್ಸ್ ನ ಲಾಂಛನ ಪೆಂಗ್ವಿನ್ (Tux) ಇರುವ ಲಿನಕ್ಸ್ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಈ ಯೋಜನೆಯನ್ನು ಬೆಂಬಲಿಸಿ, ಉಡುಗೆ ನೀಡಿದ್ದು Tyunet ಹೋಸ್ಟಿಂಗ್ ಉದ್ಯಮದ CEO, Sergey V Mikhailov. ಈ ಪ್ರತಿಮೆಯಲ್ಲಿ ಟಕ್ಸ್ ಹದ್ದಿನ ರೆಕ್ಕೆಗಳಿಂದ ಅಲಂಕೃತಗೊಂಡಿದ್ದು, ಲಿನಕ್ಸ್ ನ ಶಕ್ತಿ ಮತ್ತು ಅಪರಿಮಿತ ಸಾಧ್ಯತೆಗಳನ್ನು ಬಿಂಬಿಸುತ್ತದೆ.

ಹಾದಿಬದಿಯ ದೇವ-ದೇವಿಯರೇ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ!

       ಆಯಕಟ್ಟಿನ ನಿವೇಶನಗಳಲ್ಲಿನ ಆರಾಧನೆಯ “ಅಕ್ರಮ ಮಂದಿರ”ಗಳಿಗೆ ಗತಿ ಕಾಣಿಸಬೇಕೆಂದು ಸುಪ್ರೀಂ ಕೊರ್ಟ್‌ ಸರಕಾರಗಳಿಗೆ ತಾಕೀತು ಮಾಡಿದೆ.  ಇವು “ಅಕ್ರಮ ಆರಾಧನಾ” ಮಂದಿರಗಳೂ ಹೌದು! ಕಟ್ಟಡಗಳೇ ಅಕ್ರಮ, ದುರುದ್ದೇಶಪೂರಿತ; ಅಂದಮೇಲೆ ಅಲ್ಲಿ ನಡೆಯುವ ಆರಾಧನೆ ತಾನೇ ಸಕ್ರಮವಾದೀತು ಹೇಗೆ?

ನೆನಪುಗಳ ಅಂಕಣ...!



ಮುಂಜಾನೆಯ ಮಂಜಲ್ಲಿ ಜಗವೆಲ್ಲ ಹಾಡಿದೆ
ಮೌನವೆಂಬ ಗೀತೆ ..ಧನ್ಯನಾದೆ ನಾನು
ವಿಧಿಯೆ ಬರೆಯಲು ಬಾಳ ಪುಟದಲಿ  
ನಿನ್ನ ಸ್ನೇಹವೆಂಬ ಸುಮಧುರ ಕವಿತೆ

ಅನಂತ ಭಾವಗಳು ಮುಕ್ತವಾಗಿ ಹಾರಲು
ಯುಗಳರಾಗದ ನಾಂದಿಗೆ ಆತ್ಮವೆ ಸಾಕ್ಷಿ
ನೀನಲ್ಲವೆ ಗೆಳತಿ ಅಂತರಂಗದಲಿ
ಪ್ರಶ್ನೆಯಾಗಿ ಉಳಿದ ಕಲ್ಪನೆಗಳ ಅಕ್ಷಿ!!

ಪರಿಚಯದ ಖುಷಿಯಲಿ ಕರಗಿದೆ ಸಮಯ
ವಿಮುಕ್ತನಾದ ಖೈದಿಯಂತೆ ನನ್ನ ಹೃದಯ
ಕಾಲದ ಮರೆಯಲಿ ಬೆಳೆಯಲು ಬಾಂಧವ್ಯ
ಅರ್ಥ ಉಳಿದುದೆ ಹೆಮ್ಮೆಯ ವಿಷಯ!!

ನಿನ್ನ ಮೈತ್ರಿಗಿಂತ ಮಿಗಿಲಾದುದೇನಿಲ್ಲ
ಗೆಳತಿ ಸೃಷ್ಟಿಯಲಿ..ನಮೂದಾಗಿದೆ
ಚರಿತ್ರೆಯ ಹಾಳೆಯಲಿ ಈ ಗೆಳೆತನ
ಸ್ನೇಹವೆಂಬ ಧರ್ಮಕೆ ನಾವೇ ಲಾಂಛನ