ಸರಿ ಮಾರನೇ ದಿನಾ ಪ್ರಾಕ್ಟೀಸ್ ಸುರುವಾತು. ಬೆಳಗ್ಗೆನೇ ಒಂದು 4ಕಿ.ಮೀ ಓಟ. ಮಧ್ಯಾದಾಗೆ ಕೆರೆತಾವ ಹೋಗಕ್ಕೆ ರೆಸ್ಟ್. ಮಗಾ ಸುಬ್ಬ ಕೆರೆತಾವ ಅಂತಾ ಹೋದೋನು ಅಂಗೇ ಪೊದೆಯಿಂದ ತಪ್ಪಿಸ್ಕಂಡು ಮನೆಗೆ ಹೋಗೋನು. ಕೊನೆಗೆ ನಾಯಿ ತರಾ ಬೆನ್ನತ್ತಿ ಕರೆದುಕೊಂಡು ಬರ್ತಾ ಇದ್ವಿ. ನಂತರ ನಿಂಗನ ಚಾ ಅಂಗಡೀಲಿ ಬೈಟು ಚಾ, ಅಂಗೇ ಒಣ ಬನ್ ಅದಕ್ಕೆ ಚಟ್ನಿ, ಪಿಜ್ಜಾ ಅನ್ನೋನು ಮಗಾ ನಿಂಗಾ. ಪೇಪರ್ ಓದಿ. ಐದು ನಿಮಿಸ ಡಿಸ್ಕಷನ್ ಎಬೌಟ್ ಪೊಲಿಟಿಕ್ಸ್. ಇದು ಆದ್ ಮ್ಯಾಕೆ ಗೌಡಪ್ಪನ ಕೊಟ್ಟಿಗೆ ಹಿಂದುಗಡೆ ಕಟ್ಟಿಸಿರೋ ಜಿಮ್ನಾಗೆ ವ್ಯಾಯಾಮ. ಹೊಟ್ಟೆಯಲ್ಲಾ ಗೊಳಗೊಳ ಅನ್ನೋದು. ಏ ಥೂ. ನೋಡ್ರಲಾ ಡಿಪ್ಸ್ ಅಂದರೆ ಹಿಂಗೆ ಹೊಡಿಬೇಕು ಅಂತಾ ಗೌಡಪ್ಪ ನೆಲಕ್ಕೆ ಕೈ ಊರಿದ ಮ್ಯಾಕೆ ಮೇಲೆ ಏಳಲೇ ಇಲ್ಲ. ಮಗಂದು ನೆಲದ ಮ್ಯಾಕೆ ಗೌಡಪ್ಪ ಮಕ್ಕೊಂಡ್ರೆ ಹೊಟ್ಟೆ ದಪ್ಪ ಇದ್ದ ಕಾರಣ ಕೈ ಕಾಲು ಎರಡೂ ಗಾಳಿಯಲ್ಲಿ ಇರೋದು. ಕೈ ನೆಲಕ್ಕೆ ಮುಟ್ಟಿದರೆ ಕಾಲು ಮೇಳಕ್ಕೆ ಏಳೋದು. ಕಡೆಗೆ ನಾನು ತಂಬಿಟ್ಟು ರಾಮ ಮೇಲಕ್ಕೆ ಎತ್ತಿದ್ವಿ. ಬಿಡ್ರಲಾ ಕೈ ಅಂತಿದ್ದಾಗೆನೇ ಕೈ ಬಿಟ್ವಿ. ದಪ್ ಅಂತಾ ನೆಲಕ್ಕೆ ಬಿದ್ದ ಮಗಂದು ಮೂಗ್ನಾಗೆ ರಕ್ತ. ಯಾಕ್ರೀ ಗೌಡ್ರೆ, ಏ ನಿನ್ನೆ ಕೊಟ್ಟಿಗ್ಯಾಗೆ ಜಾಗ ಇಲ್ಲಾ ಅಂತಾ ಹಸಾ ಕಟ್ಟಿದ್ವಿ. ಮಗಂದು ಸಗಣಿ ಹಾಕೈತೆ ಅದಕ್ಕೆ ಜಾರಿದೆ ಅಂದ. ಕಡೆಗೆ ಚಾ ಚಲ್ಟ ಹಚ್ಚಿದ್ವಿ. ರಕ್ತ ನಿಲ್ತದಂತೆ. ಹಂಗಂತ ನಮ್ಮ ಹೋಮಿಯೋಪತಿ ಡಾಕಟರು ಹೇಳಿದ್ರು,
ಜಿಮ್್ಗೆ ಗುಜರಿಯಿಂದ ಸಾಮಾನು ತಂದಿದ್ದ. ಕಾರಿನ ರಿಮ್, ಬಾರ್ ಎಲ್ಲಾ ಸೆಕೆಂಡ್ಸ್ ತಂದಿದ್ದ. ತಂಬಿಟ್ಟು ರಾಮ ನಾನು ಟೇಬಲ್ ಮೇಲಿಂದ ಡಿಪ್ಸ್ ಹೊಡಿತೀನಿ ಅಂತಾ ಮೂಗು ಒಡ್ಕಂಡಿದ್ದ. ಅಚ್ರಲಾ ಅರಿಸಿನ. ಮಗಾ ಇಸ್ಮಾಯಿಲ್ ಬೀಡಿ ಹಚ್ಕಂಡು ಮಜಾ ತಗೊಳೋನು. ಮಾರ್ರೇ ಡಿಪ್ಸ್ ಸಾಲೇ ಅನ್ನೋನು. ಹೊಗೆಗೆ ಗೌಡಪ್ಪ ಗೂಫ್ ಗೂಫು ಅಂತಾ ಕೆಮ್ಮೋನು. ಸರೀ ನಾವೆಲ್ಲರೂ ಡಿಪ್ಸ್ ಹೊಡೆಯೋಕ್ಕೆ ಸುರು ಮಾಡಿದ್ವಿ. ಒಂದು ಹತ್ತು ಮಿನಿಟ್ ಆಗ್ತಿದ್ದಾಗೆನೇ ಬಾರ್ ಮಾಡ್ರಿ ಅಂದ. ಅಲ್ಲೇ ನೇತಾಕಿದ್ದ ಬಾರಿಗೆ ಸುಬ್ಬ ಜೋತು ಬಿದ್ದು ನೋಡ್ರಲಾ ಅಂತಾ ಎರಡು ಕಾಲು ಮೇಲೆ ಎತ್ತೋನು. ಏಥೂ. ಯಾಕ್ರಲಾ. ಚೆಡ್ಡಿ ಸರಿ ಮಾಡ್ಕಳಲಾ. ಕಿಸ್ನ ಸಾನೇ ಸಾಮು ಹೊಡಿತಾ ಇದ್ದ. ಹತ್ತತ್ತು ನಿಮಿಸಕ್ಕೂ ಕನ್ನಡಿ ಮುಂದೆ ಬಾಡಿ ನೋಡ್ಕಳೋನು. ಬೈಸೆಪ್ಸ್ , ಟ್ರೈ ಸೆಪ್ಸ್ ಬಂದೈತೆ ನೋಡ್ರಲಾ ಅಂದ. ಮಗಂಗೆ ದೇಹದಲ್ಲಿ ಅರ್ಧ ಕೆಜಿ ಮಾಂಸ ಇಲ್ಲ. ಅದೆಂಗೆ ಬಾಡಿ ಬತ್ತದಲ್ಲಾ ಅಂದ್ರೆ. ಮಗಂದು ಮೂಳೆ ಅಂಗೆ ಬೆಂಡಾಗಿತ್ತು. ಸರೀ ಎಲ್ಲಾರೂ ಮೊದಲನೆ ದಿನಾನೇ ಮೂರು ಗಂಟೆ ವ್ಯಾಯಾಮ ಮಾಡಿದ್ವಿ. ಆಮ್ಯಾಕೆ ಕೆರೆಯಲ್ಲಿ ಸ್ನಾನ ಮಾಡಿ ಕೆಲಸಕ್ಕೆ ಹೋದ್ವಿ.
ಮರುದಿನಾ ನಿಂಗ ಸ್ಲೋ ಮೋಸನಾಗೆ ಚಾ ಹುಯ್ತಾ ಇದ್ದ. ಯಾಕಲಾ ಲೇ ಕೈ ಎತ್ತಕ್ಕೆ ಆಯ್ತಾ ಇಲ್ಲ ಕಲಾ ಅಂದ. ಎಲ್ಲಾವೂ ಕೂರ ಬೇಕಾದ್ರೆ ಪೈಲ್ಸ್ ಆದೋರು ತರಾ ಕೂರೋವು. ಕೂತ್ ಮ್ಯಾಕೆ ಅಮ್ಮಾ ಅನ್ನೋವು. ಗೌಡಪ್ಪ ಎರಡು ಹೆಜ್ಜೆಗೂ ಕೂತು ಬರೋದು ಕಾಣ್ತು. ಅನುಭವ ಪಿಚ್ಚರ್ ಕಾಸೀನಾಥ್ ತರಾ, ಯಾಕ್ರೀ ಗೌಡ್ರೆ. ಲೇ ಸಾನೇ ಉಟ್ ಬೈಸ್ ಹೊಡೆದಿದೀನಿ ಕಲಾ. ಕಾಲು ಹಿಡಕಂಡ್ ಬಿಟ್ಟೈತೆ ಅಂದಾ. ಕೆರೆತಾವ ಹೋದಾವು ಒಂದು ಗಂಟೆ ಆದ್ ಮ್ಯಾಕೆ ಬರೋವು. ಯಾಕ್ರಲಾ. ಲೇ ಕೈ ಕಾಲು ಹಿಡ್ಕಂಡ್ ಬಿಟ್ಟೈತೆ ಅನ್ನೋವು. ನೋಡಲಾ ಜ್ವರಾ ಬಂದೈತೆ ಅನ್ನೋವು. ಆಸ್ಪತ್ರೆಗೆ ಹೋದರೆ ಎಲ್ಲಾ ನಮ್ಮ ಟೀಮ್. ಗೌಡಪ್ಪ ಬಂದು ಒಂದು 90 ತೊಗಳ್ರಲಾ ನಮ್ಮ ವಿಜಯ ಮಲ್ಯ ಡಾಕಟರು ಹೇಳವ್ರೆ ಅಂದ. ಡಾಕಟರು ಏ ಥೂ ಅಂದು ಮೈ ಕೈ ನೋವಿಗೆ ಅಂತಾ ಕ್ರೋಸಿನ್ ಇಂಜೆಕ್ಸನ್. ಡಾಕಟರು ಚುಚ್ಚೋನು ಎಡಗೈ ಒಡ್ಡೋನು.ಒಂದೇ ಸಿರಂಜಿನಾಗೆ ಎಲ್ಲರಿಗೂ ಚುಚ್ಚಿದ್ದ . ಮಗಾ ಎಲ್ಲೋ ಹೋದ ಜಲ್ಮದಾಗೆ ತಿರುಪತಿಯಲ್ಲಿ ತೀರ್ಥ ಕೊಟ್ತಿದ್ದ ಅಂತಾ ಕಾಣ್ತದೆ ಅಂದ ಸುಬ್ಬ. ಕಿಸ್ನ ಮಾತ್ರ ಆರಾಮಾಗೆ ಇದ್ದ. ಹೆಂಗಲಾ. ಏ ದಿನಾ ನಾಕು ಗಾಡಿ ಕಟ್ಟಿಗೆ ಒಡಿತೀನಿ, ಅದೂ ಬೀಟೆ(rose wood) ಕನ್ರಲಾ ಅಂದ. ಮಗನೇ ಮಲ್ಲಕೆ ಹೇಳಲಾ ಆಮ್ಯಾಕೆ ಅರಣ್ಯ ಇಲಾಖೆಯೋರು ನಾವು ಹಾಕಿರೋದು ಅಕೇಸಿಯಾ ಇವನಿಗೆ ಎಲ್ಲಿ ಸಿಕ್ತು ಬೀಟೆ ಅಂತಾ ಎ.ಸಿ.ಎಫ್ ಬಂದಾರು ಅಂದ ನಿಂಗ, ಇದೆಲ್ಲಾ ಏನು ಅಲ್ಲಲಾ ಅಂದ. ಮತ್ತೆ ಕೈನಾಗೆ ಯಾಕಲಾ ಬ್ಯಾಂಡೇಜ್. ಅದಾ ಮೂಳೆ ಊದ್್ಕೊಂಡೈತೆ ಅಂತಾ ಕ್ಯಾಲ್ಸಿಯಂ ಮಾತ್ರ ಕೊಟ್ಟಾವ್ರೆ ಅಂದ.
ನೋಡ್ರಲಾ ಅವೆಲ್ಲಾ ಗೊತ್ತಿಲ್ಲ. ನಾಳೆ ಎಂದಿನಂತೆ ಜಿಮ್ ಗೆ ಬರಬೇಕು ಅಂದ. ನಾಳೆಯಿಂದ ನನ್ನ ಹೊಸಾ ಹೆಂಡರೂ ಬಸಮ್ಮನೂ ಬತ್ತಾವ್ಳೆ ಅಂದ ಗೌಡಪ್ಪ. ಬೆಳಗ್ಗೆ 5ಗಂಟೆಗೆ ಹೋದರೆ ಜಿಮ್ ಸಾನೇ ರಸ್. ವ್ಯಾಯಾಮ ಮಾಡಕ್ಕೆ ಜಾಗ ಇಲ್ಲ ಆಟೊಂದು ರಸ್. ಜಿಮ್ ಸಾಮಾನು ಸಾರ್್ಟೇಜ್ ಆಗಿ ಗೌಡಪ್ಪನ ಮನ್ಯಾಗೆ ಇರೋ ಹಾರೇಕೋಲು, ಸಲ್ಕೆ, ರುಬ್ಬೋ ಕಲ್ಲು ಸಾಮಾನು ಸಿಗಲಿಲ್ಲಾ ಅಂತಾ ಮನೆ ಮುಂದಿರೋ ಗೌಡಪ್ಪನ ಅವ್ವನಾ ಮೇಲೆತ್ತಿ ಇಳಿಸೋರು. ಅದು ಲೇ ಬಿಡ್ರಲಾ ಹೊಗೆ ಹಾಕ್ ಬೇಕಾಯ್ತದೆ ಅಂತಿತ್ತು. ಎಲ್ಲಾ ಎತ್ತಿ ವ್ಯಾಯಾಮ ಮಾಡ್ತಾ ಇದ್ವು. ಬೆಳಗ್ಗೆ 5ಗಂಟೆಗೆ ಪಕ್ಕದ ಊರಿಂದ ಸೈಕಲ್ನಾಗೆ ಎಲ್ಲಾ ಬಂದಿದ್ವು. ಸಾನೇ ಜನಾ ನೋಡಿ ಗೌಡಪ್ಪ ಹೊಗೆ ಹಾಕಸ್ಕಂಡಿರಬೇಕು ಅಂತಾ ಹೋದ್ರೆ. ಗೌಡಪ್ಪ ನೋಡ್ರಲಾ ನಮ್ಮ ಐಕ್ಳು ಹೆಂಗೆ ಬದಲಾಗವ್ರೆ ಅಂದ. ನೋಡಿದ್ರೆ, ಗೌಡಪ್ಪನ ಹೆಂಡರು ಬಸಮ್ಮ ವ್ಯಾಯಾಮ ಮಾಡ್ತಾ ಇದ್ಲು. ಗೌಡಪ್ಪ ನೋಡಿದೋನೆ ಏ ಥ. ಮನೆಯೊಳಗೆ ಮಾಡೋಗು ಅಂದ. ರಸ್ ಇದ್ದ ಜಿಮ್ ಏಕ್ ಧಮ್ ಕನ್ನಡ ಪಿಚ್ಚರ್ ಫಸ್ಟ್ ಡೇ ಷೋ ಆದಂಗೆ ಆಗಿತ್ತು. ಫುಲ್ ಖಾಲಿ. ಮತ್ತೆ ನಾವೇ ನಾಕು ಜನ.
ಸರಿ ಎಂದಿನಂತೆ ನಮ್ಮ ವ್ಯಾಯಾಮ ಸುರುವಾತು. ಗೌಡಪ್ಪ ಬಾರಿಗೆ ಮೊದಲು ಎರಡು ಪ್ಲೇಟ್ ಹಾಕಿ ಒಂದು ಹತ್ತು ಸಾರಿ ಕೂತು ಎದ್ದ. ನೋಡ್ರಲಾ ಅನ್ನೋನು. ಮಗಾ ಸಾನೇ ತೊಂದರೆ ಕೊಡ್ತಾವ್ನೆ ಅಂತಾ ಫಿಯಟ್ ಕಾರಿಂದು ರಿಮ್ ಇತ್ತು, ಹಾಕಲಾ ಅಂದೋನೆ ಸುಬ್ಬ ಗೌಡಪ್ಪನ ಬಾರಿಗೆ ಹಾಕಿದ. ಗೌಡಪ್ಪ ಒಂದು ಕಿತಾ ಕೂತೋನು ಮೇಲೆ ಏಳಲೇ ಇಲ್ಲ. ಎತ್ರಲಾ ಅಂದ. ಮಗಂದು ಎರಡು ಕೈ ಡಿಸ್ ಲೊಕೇಟ್ ಆಗಿತ್ತು. ಅಂಗೇ ಭಟ್ಟಿ ಜಾರಿತ್ತು. ಬಂದೆ ತಡೀರಲಾ ಅಂತಾ ಕೆರೆತಾವ ಓಡಕ್ಕೆ ಸುರುಮಾಡ್ದ. ದಾರ್ಯಾಗೆ ಸಿಕ್ಕ ಸುಬ್ಬನ ಅವ್ವ, ಅದೂ ಗೌಡ್ರೆ, ನಮಗೆ ಆಶ್ರಯ ಮನೇನೆ ಕೊಟ್ಟಿಲ್ಲಾ ಅಂತಿದ್ಲು. ನಿನ್ನ ಆಶ್ರಯ ಮನೆಗೆ ಬೆಂಕಿಹಾಕ. ಇನ್ನೊಂದು ನಿಮಸ, ನಾನು ಇಲ್ಲಿ ನಿಂತ್ರೆ ನೀನು ಇರಕ್ಕೆ ಇಲ್ಲಾ ಅಂತಾ ಚೆಡ್ಡಿ ಎತ್ಕಂಡು ಓಡಕ್ಕೆ ಸುರು ಮಾಡಿದ. ಮಗಾ ಹರ್ಡಲ್ಸ್ ನಲ್ಲಿ ಹೋದಂಗೆ ಗಿಡ, ಗಂಟೆ ಎಲ್ಲಾ ಹಾರ್ಕಂಡು ಹೋಗೋನು. ಲೇ ಕಾಮನ್ ವೆಲ್ತ್ ಗೇಮ್ಸ್್ಗೆ ಕಳಿಸಿದ್ರೆ ಮಗಾ ಫಸ್ಟ್ ಬರೋನು ಕಲಾ ಅಂದ ರಾಮ.
ಒಂದು ಅರ್ಧ ಗಂಟೆ ಆದ್ ಮ್ಯಾಕೆ ಬಂದ. ಮತ್ತೆ ಡಂಬಲ್ಸ್ ಎತ್ತಿದ. ಚೊಂಬು ರೆಡಿ ಇತ್ತು. ಎತ್ಕಂಡು ಅಂಗೇ ಓಡೋದೆಯಾ. ಗೌಡ್ರೆ ಚೊಂಬ್ನಾಗೆ ನೀರಿಲ್ಲ. ಕೆರೆಲ್ಲಿ ತಗೊಂತೀನಿ ಬಿಡ್ರಲಾ ಅನ್ನೋನು. ಒಂದು ಹತ್ತು ಕಿತಾ ಹೋಗಿ ಬಂದೋನು. ಜಿಮ್ ಮೂಲ್ಯಾಗೆ ಬಾಗಿಲ ಪಕ್ಕ ಕಿಸ್ಕಂಡಿದ್ದ. ಬಾಡೀಲ್ಲಿ ಇರೋ ವಾಟರ್ ಅಂಗೇ ಕರುಳು ಹೋಗೈತೆ ಅಂದ. ಕಡೆಗೆ 108 ಕರೆಸಿ ಡ್ರಿಪ್ಸ್ ಹಾಕ್ಸಿದ್ವಿ. ಆಸ್ಪತ್ರೆಯಿಂದ ಬಂದ್ ಮ್ಯಾಕೆ ಒಂದು ದಿನಾ ನೋಡೋಣ ಅಂತಾ ಹೋಗಿದ್ದೆ. ಅರ್ಧ ರೇಟಿಗೆ ಗುಜರಿ ಮಹಮ್ಮದ್್ಗೆ ಜಿಮ್ ಸಾಮಾನು ಹಾಕ್ತಾ ಇದ್ದ. ಕೆಜಿಗೆ 32ರೂಪಾಯಿ ಅಂತಿದ್ದ ಮಹಮ್ಮದ್, ನಾನು ಯಾಕ್ರೀ ಗೌಡ್ರೆ ಅಂದೆ. ಲೇ ಜಿಮ್ ಮಾಡಿದ್ದಕ್ಕೆ ಅಪೆಂಡಿಕ್ಸ್ ಆಪರೇಸನ್ ಆಯ್ತು, ಸ್ಪೈನಲ್ ಕಾರ್ಡ್ ಎಲ್ಲಾ ಪ್ರಾಬ್ಲಮ್ ಆಗೈತೆ ಅಂತಾ ಡಾಕಟರು ಹೇಳವ್ರೆ ಅಂತಾ ಡಬ್ಬಿ ತೋರಿಸಿದ. ನೋಡಿದ್ರೆ ಒಂದು 20ತರಾ ಮಾತ್ರೆ ಇತ್ತು. ಮಗಾ ಮುದ್ದೆ ಒಳಗೆ ಅಷ್ಟನ್ನು ಮಡಗಿ ಸಾರು ನೆಂಚ್ಕಂಡು ನುಂಗೋನು. ಡಾಕಟರು ಮೈ ಮ್ಯಾಕೆ ಕಬ್ಬಿಣ ಹಾಕಬೇಡ್ರಿ ಅಂದಾವ್ರೆ ಕಲಾ ಅಂದ. ಈಗ ಅವನ ಜಿಮ್ ನಮ್ಮ ಇಸ್ಪೀಟ್ ಅಡ್ಡೆ ಆಗೈತೆ. ಬೆಳಗ್ಗೆ ರೂಂಗೆ ಹೋದರೆ ಮೂಲ್ಯಾಗೆ ಬೀಡಿ ತುಂಡು. ಅಂಗೇ ಸಾನೇ ಬಾಟಲ್ಲು.
ಜಿಮ್ ಬಾಡಿ
ಎಲ್ಲರೂ ಹಂದಿ ಬೆಳದಂಗೆ ಬೆಳೆದಿದಿರಾ, ಹಿಂಗಾದ್ರೆ ಸುಗರ್, ಬಿಪಿ ಎಲ್ಲಾ ಬತ್ತದೆ. ಆಮ್ಯಾಕೆ ನನ್ ತರಾ ಸುಗರ್ ಲೆಸ್ ಚಾ ಕುಡಿಬೇಕಾಯ್ತದೆ. ಅದಕ್ಕೆ ಎಲ್ಲರೂ ಬಾಡಿ ಇಳಿಸವಾ ಏನ್ರಲಾ. ಹೂಂ ಅಂದ ಸುಬ್ಬ, ಕಿಸ್ನ ನಾನೂ ಬಾಡಿ ಇಳಿಸ್ತೀನಿ ಅಂದಾ. ನೀನು ಬೇಡಲಾ ಆಮ್ಯಾಕೆ ಮಿಸ್ಟರ್ ಇಂಡಿಯಾ ಆಗೋಗ್ತೀಯಾ ಕಲಾ. ಒಂದು ಕೆಲಸ ಮಾಡು. 4ಕೆಜಿ ಇರೋ ಕೊಡಲಿನಾ 8ಕೆಜಿ ಮಾಡಿಕೋ ಸರಿ ಆಯ್ತದೆ ಅಂದ ಗೌಡಪ್ಪ. ಏ ಥೂ. ಸರಿ ಎಲ್ರಿಗೂ ಜಾಗಿಂಗ್ ಸೂಟ್ ಅಂತಾ. ಪಟಾ ಪಟಿ ಚೆಡ್ಡಿ ಬನೀನ್ ತಂದು ಕೊಟ್ಟಿದ್ದ ಗೌಡಪ್ಪ. ಮಗಂದು ಚೆಡ್ಡಿಗೆಲ್ಲಾ ಲಾಡಿ. ಟೇಲರ್ ರಂಗ ಚೆಡ್ಡಿನಾ ಸಾನೇ ದೊಡ್ಡದು ಹೊಲಿದಿದ್ದ. ಲಾಡಿನಾ ಮೂರು ರವಂಡ್ ಸುತ್ತುತಾ ಇದ್ವಿ. ಆದ್ರೂ ಕೆಳಗೆ ಒಂದು 50cms ನೇತಾಡ್ತಾ ಇರೋದು. ಯಾಕಲಾ ರಂಗ ಹಿಂಗೆ ಲಾಡಿ ಇಟ್ಟಿದೆಯಾ ಅಂದ್ರೆ. ಲೇ ಹೆಣ್ಣು ಐಕ್ಳು ಕೊಟ್ಟಿದ ಲಂಗದ ಬಟ್ಟೆ ಉಳಿದಿತ್ತು. ಸುಮ್ನೆ ಯಾಕೆ ವೇಸ್ಟ್ ಮಾಡೋದು ಅಂತಾ ನಿಮಗೆ ಹಾಕಿದೀನಿ ಅಂದ ರಂಗ. ಮಗನೇ ಯಾಕೆ ಅಂಗೇ ದಾವಣಿ ಹೊಲಿಬೇಕಾಗಿತ್ತು ಅಂದಾ ಸುಬ್ಬ. ಮಗಂದು ಚೆಡ್ಡಿ ಒಗೆದ ಮ್ಯಾಕೆ 3/4 ಇದ್ದದ್ದು 1/4 ಆಗಿತ್ತು.
Rating
Comments
ಉ: ಜಿಮ್ ಬಾಡಿ
In reply to ಉ: ಜಿಮ್ ಬಾಡಿ by ksraghavendranavada
ಉ: ಜಿಮ್ ಬಾಡಿ
ಉ: ಜಿಮ್ ಬಾಡಿ
In reply to ಉ: ಜಿಮ್ ಬಾಡಿ by raghusp
ಉ: ಜಿಮ್ ಬಾಡಿ
In reply to ಉ: ಜಿಮ್ ಬಾಡಿ by Jayanth Ramachar
ಉ: ಜಿಮ್ ಬಾಡಿ
In reply to ಉ: ಜಿಮ್ ಬಾಡಿ by raghusp
ಉ: ಜಿಮ್ ಬಾಡಿ
ಉ: ಜಿಮ್ ಬಾಡಿ
In reply to ಉ: ಜಿಮ್ ಬಾಡಿ by manju787
ಉ: ಜಿಮ್ ಬಾಡಿ
ಉ: ಜಿಮ್ ಬಾಡಿ
In reply to ಉ: ಜಿಮ್ ಬಾಡಿ by malathi shimoga
ಉ: ಜಿಮ್ ಬಾಡಿ
ಉ: ಜಿಮ್ ಬಾಡಿ
In reply to ಉ: ಜಿಮ್ ಬಾಡಿ by kamalap09
ಉ: ಜಿಮ್ ಬಾಡಿ
ಉ: ಜಿಮ್ ಬಾಡಿ
In reply to ಉ: ಜಿಮ್ ಬಾಡಿ by gopinatha
ಉ: ಜಿಮ್ ಬಾಡಿ
ಉ: ಜಿಮ್ ಬಾಡಿ
In reply to ಉ: ಜಿಮ್ ಬಾಡಿ by kavinagaraj
ಉ: ಜಿಮ್ ಬಾಡಿ
ಉ: ಜಿಮ್ ಬಾಡಿ
In reply to ಉ: ಜಿಮ್ ಬಾಡಿ by gopaljsr
ಉ: ಜಿಮ್ ಬಾಡಿ