ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾ ಕಂಡ ನೀ


ಒಂದೆಡೆ ನಿಂತಿರುವ ನೀರು ನಾನು
ಬೇರೆಡೆಗೆ ಹರಿಯುತ ಸಾಗಿದೆ ನೀನು
ಕೆರೆ ಸರೋವರ ಇಲ್ಲ ನಾ ಕಡಲೋ..
ತೊರೆ ಝರಿ ಇಲ್ಲ ನೀ ನದಿಯೋ ..
ಹರಿಯುವ ನೀರಾದರು ನೀನು
ಬಂದು ಸೇರುವೆ ಈ ಕಡಲು


ತಂಪಾದ ಶಶಿಯು ನಾನು
ಸುಡುವ ರವಿಯು ನೀನು
ನಾ ತಿರುಗಲು ಬಂದಿತು ಧ್ವಾದಶ ಮಾಸ
ನೀನಿರಲು ಬರುವುದು ನವ ವಸಂತ
ನನಗೆ ನೀನೆ ಬೆಳಕಾದರೂ
ಗ್ರಹಣಕೆ ನನ್ನಿಂದಲೇ ನೀ ಬರಿಯ ಕತ್ತಲು


ಹೊರಬಿಟ್ಟ ಬರಿಯ ಉಸಿರು ನಾನು
ಸರಿಗಮ ಮಿಡಿಯುವ ಕೊಳಲು ನೀನು
ಅಂತರಂಗದ ಮೌನ ಸ್ವರವೂ ನಾ
ಹೊರಬಂದ ಇಂಪಾದ ದನಿಯು ನೀ 
ನನ್ನೀ ಉಸಿರ ಸ್ಪರ್ಶ ವಾಹದಿರಲು
ನೀನು ಬರಿಯ ಒಂದು ತುಂಡು ಬಿದಿರು

 

ಹೆಂಗಸರು ಹೆಚ್ಚು ಬುದ್ದಿವಂತರೋ ಅಥವಾ ಗಂಡಸರು...?



ತ್ಯಾಂಪಿಗೊಮ್ಮೆ ಇರುಕಲಿನಲ್ಲಿ ಸಿಕ್ಕ  ಕಪ್ಪೆಯೊಂದು ಗೋಚರಿಸಿತು.
"ನನ್ನನ್ನು ಬಿಡಿಸು, ನಿನಗೆ ಮೂರು ವರಕೊಡ್ತೇನೆ" ಎಂದಿತು.
ವರ ಎಂದು ಕೇಳುತ್ತಲೇ ತ್ಯಾಂಪಿ ಅದನ್ನು ಬಿಡಿಸಿದಳು.
ಕಪ್ಪೆ ಹೇಳಿತು, "ನೋಡಮ್ಮ ಒಂದು ಮಾತು, ಅದರಲ್ಲೊಂದು ಕಂಡೀಶನ್ ಇದೆ ಎಂದು ಹೇಳಲು ಮರೆತಿದ್ದೆ. ಅದೆಂದರೆ, ನೀವು ಏನು ಕೇಳಿದರೂ ಅದರ ಹತ್ತು ಪಟ್ಟು ನಿಮ್ಮ ಗಂಡನಿಗೆ ಸಿಗುತ್ತದೆ"
"ಆದೀತು, ನೀನು ವರ ಕೊಡು ಮೊದಲು"ಎಂದಳು ತ್ಯಾಂಪಿ.
ಅವಳ ಮೊದಲ ಆಸೆ ಪ್ರಪಂಚದ ಅತ್ಯಂತ ಸುಂದರ ಹೆಂಗಸಾಗಬೇಕು ಎಂಬುದಾಗಿತ್ತು.
ಕಪ್ಪೆ ಎಚ್ಚರಿಸಿತು " ಈ ನಿನ್ನ ಆಸೆ ನಿನ್ನ ಗಂಡನನ್ನೂ ಕೂಡಾ ಸುಂದರನನ್ನಾಗಿ ಮಾಡುತ್ತದೆ, ಅದೂ ನಿನ್ನ ಹತ್ತು ಪಟ್ಟು ಹೆಚ್ಚು, ಎಲ್ಲಾಹೆಂಗಸರ ನೋಟವೂ ಅವನತ್ತಲೇ ಇರುತ್ತೆ "

ನಳ ಪಾಕ್ ....

ನಮ್ಮ ಕಂಪನೀಯಲ್ಲಿ ಒಬ್ಬ ಹೊಸ ಹುಡುಗ ಸೇರ್ಪಡೆ ಆಗಿದ್ದ. ವಿಚಿತ್ರ ಪ್ರಾಣಿ ಕ್ಷಮಿಸಿ ಮನುಷ್ಯ. ಮತ್ತೆ ಕೇಳಿಸಿಕೊಂಡರೆ ಕಷ್ಟ. ಒಂದು ದಿನ ನನ್ನ ಗೆಳೆಯ, ಅವನಿಗೆ ನಿನ್ನ ಶರ್ಟ್ ಚೆನ್ನಾಗಿದೆ ಎಂದು ಹೇಳಿದ. ಅಷ್ಟಕ್ಕೇ ನೀನು ನಿನ್ನ ವ್ಯವಹಾರ ನೋಡಿಕೊ ಎಂದು ಹೇಳಿದ್ದ. ಕೆಲ ದಿನಗಳ ನಂತರ ಅವನ ಮದುವೆ ಆಯಿತು. ಮೊನ್ನೆ ಒಂದು ದಿನ ನಾನು ಹಾಗೆ ಸಹಜವಾಗಿ ಮನೆಯವರನ್ನೂ ಕರೆದುಕೊಂಡು ಬಂದಿದ್ದೀರ? ಎಂಬ ಉದ್ಧಟ ಪ್ರಶ್ನೆ ಕೇಳಿಬಿಟ್ಟೆ. ಏನಕ್ಕೆ, ಏತಕ್ಕೆ ಕೇಳುತ್ತಾ ಇದ್ದೀರ ಎಂದು ನನಗೆ ಕೇಳಿದ. ನನಗೆ ಘಾಬರಿ. ಏನು? ನಾನು ಕೇಳಬಾರದ ಪ್ರಶ್ನೆ ಕೇಳಿಬಿಟ್ಟೇನಾ?. ನಾನು ಮುಂದೆ ಮಾತಾಡಲೇ ಇಲ್ಲ. ದಾರಿಯಲ್ಲಿ ಹೋಗುವ ಮಾರಿ ಕರೆದುಕೊಂಡು ಬಂದು ಮನೆಯಲ್ಲಿ ಕೂರಿಸಿದ ಹಾಗೆ ಆಗಿತ್ತು. ನನಗೆ ನನ್ನ ಹೆಂಡತಿನೇ ಸಂಭಾಳಿಸಲೂ ಆಗುವದಿಲ್ಲ ಇನ್ನೂ....ಕಷ್ಟ ಕಷ್ಟ. ಇನ್ನೂ ಮುಂದೆ ಅವನನ್ನು ಮಾತನಾಡಿಸಬಾರದು ಎಂದು ತೀರ್ಮಾನಕ್ಕೆ ಬಂದು ಬಿಟ್ಟೆ.


 

ಆ ದಿನಗಳು...

ಸ್ವಲ್ಪ ಉದ್ದವಾದ ಲೇಖನ....ಬೇಸರ ಪಟ್ಟುಕೊಳ್ಳದೆ ಓದುವಿರೆಂದು ಭಾವಿಸುವೆನು.....


 ಆವಾಗ.... ಬೇಸಿಗೆ ರಜೆಯ  ನಂತರ ಜೂನ್ ನಲ್ಲಿ ಶಾಲೆಗಳು ತೆರೆದವು.


              ನಾವು ನಮ್ಮ ನಮ್ಮ ಡೆಸ್ಕಿನಲ್ಲಿ ಕುಳಿತೆವು..


 ಆವಾಗ....ಪುಸ್ತಕದ ಅಂಗಡಿಯ ಮುಂದೆ ಸರತಿ ಸಾಲಿನಲ್ಲಿ


             ನಿಂತು,  ಕೊಳ್ಳುತ್ತಿದ್ದೆವು ಪುಸ್ತಕಗಳನ್ನು...


 ಅವಾಗ....ನಮಗೆ ಎರಡೆರಡು ಭಾನುವಾರಗಳು ಬೇಕಿತ್ತು, ಸೋಮವಾರಗಳು ಬೇಕಿರಲಿಲ್ಲ.,,


             ಆದರು ಸಾಲಿನಲ್ಲಿ ನಿಲ್ಲುತ್ತಿದ್ದೆವು ಬೆಳಗಿನ ಪ್ರಾರ್ಥನೆಗಾಗಿ...

ಅಯೋಧ್ಯೆಯ ತೀರ್ಪು- ಬಹಿರಂಗ ಸ್ವಗತ

ಆ ದಿನ - ನನ್ನ ನೆನಪುಗಳು

ಡಿಸೆಂಬರ್ ೬, ೧೯೯೨ ರಂದು ಟೀವಿಗೆ ಅಂಟಿಕೊಂಡು ಕೂತವರಲ್ಲಿ ನಾನು ಒಬ್ಬ. ಮಸೀದಿಯನ್ನು ಕೆಡವಿದರು ಎಂಬ ಸುದ್ದಿ ,ನಂತರ ಆ ಕಟ್ಟಡವನ್ನು ಕೆಡವಿದ ಚಿತ್ರಗಳು ಟೀವಿ ಪರದೆಯ ಮೇಲೆ ಮೂಡತೊಡಗಿದಾಗ  ... ನಿಜವನ್ನೇ ಹೇಳುತ್ತೇನೆ... ತಡೆಯಲಾರದಷ್ಟು ಸಂತಸವಾಗಿತ್ತು.  ಅಕ್ಕಪಕ್ಕದ ಮನೆಗಳಿಗೆ ಹೋಗಿ "ಗೊತ್ತಾಯ್ತಾ ವಿಷಯ?" ಅಂತ ಒಬ್ಬರನೊಬ್ಬರು ಜನ ಕೇಳು್ತ್ತಿದ್ದರು. ನನಗೆ ಗೊತ್ತಿರುವಂತ ಎಲ್ಲಾ ಜನರಲ್ಲಿ  ಏನೋ ಸಂಭ್ರಮ, ಯಾವುದೋ ಪೀಡೆ ತೊಲಗಿದ ಹಬ್ಬದ ಲಹರಿ.

ಮರಳಿ ಬಂದವಳು!

ನಾನು ನೋಡುತ್ತಿರುವುದು ನಿಜವಾಗಿಯೂ ಅವಳನ್ನಾ! ಕಣ್ಣುಗಳನ್ನು ಮತ್ತೆ ಮತ್ತೆ ಉಜ್ಜಿ ನೋಡಿದೆ. ನಿಜಕ್ಕೂ ಅವಳೇ, ಸಂದೇಹವೇ ಇಲ್ಲ. ಸ್ವಲ್ಪ ದಪ್ಪವಾಗಿದ್ದಾಳೆ. ಮುಖದ ಕಾಂತಿ ಈಗಲೂ ಹಾಗೆಯೇ ಇದೆ.

'ಏನೋ ಹಾಗೆ ನೋಡ್ತಾ ಇದ್ದೀಯಾ?' ಎಂದಳು.

'ನೀನು... ಇಲ್ಲಿ...?' ಮಾತುಗಳ ಪ್ರಶ್ನೆಗಳಿಗಿಂತ ಮುಖದ ಪ್ರಶ್ನೆಗಳೇ ಎದ್ದು ತೋರುತ್ತಿದ್ದವು.

'ಯಾಕೆ ಬರಬಾರದಾ?' ಎಂದಳು . ನನಗೆ ಏನು ಉತ್ತರಿಸಬೇಕೆಂದೇ ಗೊತ್ತಾಗಲಿಲ್ಲ.

'ಏನಾಯ್ತೋ ನಿಂಗೆ, ಓಕೆ, ಕಣ್ತುಂಬಾ ನೋಡೋ ಆಸೆ ನಾ! ನೋಡು ನೋಡು! ಮುಗಿದ ನಂತರ ಹೇಳು ' ಎಂದು ಪುನಃ ನಕ್ಕಳು. ಎಷ್ಟೆಂದರೂ ನಗಲೆಂದೇ ಹುಟ್ಟಿದವಳಲ್ಲವೇ? ಆದರೆ ಇವಳೇಕೆ ಇಲ್ಲಿಗೆ ಬಂದಳು? ಮುಗಿದೇ ಹೋದಂತಿದ್ದ ಕಥೆಯನ್ನು ಪುನಃ ಬರೆಯಲು.

ಮನದ ಮಾತು - ಮೌನ

ಮೌನದಲಿ ಹುದುಗಿಹುದು ಮನದೊಳಗಿನ ತಳಮಳ 

ಮೇಲೆ ತೇಲುವ ದೋಣಿಗೆ ತಿಳಿಯುವುದೇ ನೀರೊಳಗಿನ ಆಳ 
ಹೇಳ ಹೊರಟ ಮಾತು ಗಾಳಿಯೊಳಗೆ ನುಸುಳಿತೆ 
ನಿನ್ನ ಕಣ್ಣಿನ ನೋಟ ನಿನ್ನ ಪರವಾಗಿ ನುಡಿಯಿತೆ?
ಅರಿಯದಲೇ ಸೇರಿತು ಹೃದಯದಲಿ ಹಂಬಲ 
ಪ್ರತಿ ಕ್ಷಣದ ವಿರಹ, ಅದೆಂತಹುದೋ ಕಳವಳ
ನಿರೀಕ್ಷಣೆಯಲಿ ಕಳೆಯಿತು ನೂರಾರು ಹೊತ್ತು
ಪ್ರೀತಿಯಾ ಭಾವನೆಯೇ? ಇದೆಂತಹ ಹುಚ್ಚು
ನಾನರಿಯೆ ನಿನ್ನೊಳಗೂ ನಡೆದಿದೆಯೇ ಈ ಚರ್ಚೆ 
ಕಾಡುತಿಹುದೋ ಕನಸು, ಅಂತರಾಳದಲಿ ವಿಮರ್ಶೆ
ಪ್ರೀತಿ ಅರಳಿದೆ ಎಂತಾದರೆ ನೀಡು ನೀ ತುಸು ಸೂಚನೆ
ಒಂದು ಹೆಜ್ಜೆ ನೀನಿಡೆ ನಡೆದು ಬರುವೆ ನಾ ನಿನ್ನೆಡೆ 

 

ಮಾತುಪಲ್ಲಟ - ೮

♫♫♫ಮಾತುಪಲ್ಲಟ - ೮♫♫♫

♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠

ಚಿತ್ರ              : ಓರ್ಕುಗ ವಲ್ಲಪ್ಪೋೞುಂ
ಸಂಗೀತ          : ಎಂ. ಜಯಚಂದ್ರನ್♪
ಮೂಲ ಸಾಹಿತ್ಯ   : ಚಂಗಂಪುೞ ಕೃಷ್ಣಪಿಳ್ಳೆ♪
ಹಾಡುಗಾರರು    : ಸುದೀಪ್‍ಕುಮಾರ್♪
ವಿಡಿಯೋ       : http://www.youtube.com/watch?v=fgtj3LO_D5c

♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
♪ಮೂಲ ಸಾಹಿತ್ಯ♪ :

ಆ ರಾವಿಲ್ ನಿನ್ನೋಡು ಞಾನ್ ಓದಿಯ ರಹಸ್ಯಂಗಳ್ ಆರೋಡುಂ ಅರುಳರುದ್ ಓಮಲೇ ನೀ |

ಮಾತುಪಲ್ಲಟ - ೯

♫♫♫ಮಾತುಪಲ್ಲಟ - ೯♫♫♫

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಚಿತ್ರ              : ಪಾಸಿಟಿವ್
ಸಂಗೀತ         : ಅಲೆಕ್ಸ್ ಪೌಲ್♪
ಮೂಲ ಸಾಹಿತ್ಯ : ವಯಲಾರ್ ಶರತ್♪
ಹಾಡುಗಾರರು  : ಪಿ. ಜಯಚಂದ್ರನ್♪

 

ವಿಡಿಯೋ       : http://www.youtube.com/watch?v=ypY04dRGaGc