ಇತಿಹಾಸದಲ್ಲೇ ಮೊದಲ ಲಿನಕ್ಸ್ ಪ್ರತಿಮೆ ರಷ್ಯಾದಲ್ಲಿ

Submitted by omshivaprakash on Wed, 09/29/2010 - 01:04

Tyumen ಲಿನಕ್ಸ್ ಬಳೆಕೆದಾರರ ಸಮುದಾಯ ಲಿನಕ್ಸ್ ನ ಲಾಂಛನ ಪೆಂಗ್ವಿನ್ (Tux) ಇರುವ ಲಿನಕ್ಸ್ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಈ ಯೋಜನೆಯನ್ನು ಬೆಂಬಲಿಸಿ, ಉಡುಗೆ ನೀಡಿದ್ದು Tyunet ಹೋಸ್ಟಿಂಗ್ ಉದ್ಯಮದ CEO, Sergey V Mikhailov. ಈ ಪ್ರತಿಮೆಯಲ್ಲಿ ಟಕ್ಸ್ ಹದ್ದಿನ ರೆಕ್ಕೆಗಳಿಂದ ಅಲಂಕೃತಗೊಂಡಿದ್ದು, ಲಿನಕ್ಸ್ ನ ಶಕ್ತಿ ಮತ್ತು ಅಪರಿಮಿತ ಸಾಧ್ಯತೆಗಳನ್ನು ಬಿಂಬಿಸುತ್ತದೆ.

ಪೆಂಗ್ವಿನ್ ಹಾರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದು ಯಾರು? ಇಲ್ಲಿದೆ ನೋಡಿ ಉದಾಹರಣೆ! ಪ್ರಕೃತಿ ಅಮ್ಮನಿಂದ ಪಡೆಯದಿದ್ದರೂ, ತನ್ನದೇ ಸ್ವಂತ ರೆಕ್ಕೆಗಳಿಂದ ಈ ಸಣ್ಣ ಹಕ್ಕಿ ಹಾರಿ ತೋರಿಸಿದೆ. ಲಿನಕ್ಸ್ ಅನ್ನು ಇನ್ನೂ ಪ್ರಖ್ಯಾತಗೊಳಿಸಲು ತಾವು ಈ ಯೋಜನೆಗೆ ಕೈ ಹಾಕಿದ್ದಾಗಿ ಸೆರ್ರ್ಜಿ ಹೇಳುತ್ತಾರೆ.

ಸಧ್ಯಕ್ಕೆ ಇದು ವಿಶ್ವದಲ್ಲೇ ಮೊದಲ ಲಿನಕ್ಸ್ ಪ್ರತಿಮೆ.

ಸುದ್ದಿ ಮೂಲ : http://www.tumix.ru/info/news/?news=12058736c ,

Rating
No votes yet

Comments