ಬಹುಸಂಖ್ಯಾತ ಅಬ್ಬರದಲ್ಲೊಂದು ಅಲ್ಪ ದನಿಯ ಕೂಗು!

ಬಹುಸಂಖ್ಯಾತ ಅಬ್ಬರದಲ್ಲೊಂದು ಅಲ್ಪ ದನಿಯ ಕೂಗು!

Comments

ಬರಹ

        ಅಯೋಧ್ಯಾ ಭುಮಿಯ ಹಕ್ಕು-ಒಡೆತನ ಕುರಿತು ಲಕ್ನೋ ಪೀಠದ ತೀರ‍್ಪು ಅಂತಿಮವಲ್ಲ; ಇನ್ನೂ ಸುಪ್ರೀಂ ಕೊರ್ಟ್ ಇದ್ದೇ ಇದೆಯಲ್ಲಾ ಎಂದು ಮುಖಂಡ ಜನ ಸಮಾಧಾನ ಮಾಡಿಕೊಳ್ಳುತ್ತಿರುವುದು ಕೇಳಿ ಬರುತ್ತದೆ. ಎಂಥಾ ತೀರ‍್ಪಿನಿಂದಲೂ ಪಾಠ ಕಲಿಯದ ದೃಢ ನಿರ್ಧಾರವೇ, ಇದು?!


        ಪವಾಡ ಸದೃಶವಾಗಿ ಜನ್ಮಭೂಮಿಯ ಪರವಾಗೇ ತೀರ್ಪು ಬಂದುಬಿಡುವುದಾದರೆ ಅದು ಶ್ರೀರಾಮನ ಮಹಿಮೆ. ಹಾಗಲ್ಲದೆ ಲೆಕ್ಕಾಚಾರದಂತೆ ಮಸೀದಿ ಪರವಾಗಿ ತೀರ್ಪು ಬಂದರೆ, ಸೋತವರು ಮೇಲಿನ ಕೋರ್ಟಿಗೆ ಹೋದರೂ ಇದೇ ಲೆಕ್ಕಾಚಾರ ಪಥ್ಯವಾಗುವುದೇ ಹೆಚ್ಚು ಸಂಭವ.


ಕೋರ್ಟುಗಳು ಮರ್ತ್ಯಯದ ಲೆಕ್ಕಾಚಾರವನ್ನು ಅರ್ಥೈಸಿ ತೀರ‍್ಮಾನ ಹೇಳುತ್ತವೆ; ನಂಬಿಕೆ, ಭಾವ, ಅನುಭಾವಗಳನ್ನಲ್ಲ. ಇತಿಹಾಸದ ಆಯಾ ಕಾಲದಲ್ಲಿ ಘಜನೀ ಮಹಮ್ಮದ್ ಹದಿನೇಳು ಬಾರಿ ದಂಡೆತ್ತಿ ಬಂದು ದೇಶವನ್ನು ಕೊಳ್ಳೆ ಹೊಡೆದಾಗ, ಬಾಬರ್ ಬಂದು ಸಾಮ್ರಾಜ್ಯ ಕಟ್ಟಿ ಭದ್ರವಾಗಿ ಕಳವೂರಿದಾಗ ಅಂದಿನ ನಮ್ಮ ಆಳರಸರು ತಮ್ಮದೇ ಜಂಭ, ಅಹಂಕಾರಗಳಿಗಾಗಿ ಹೋರಾಡುತ್ತಿದ್ದರು. ಜನತೆಯಲ್ಲೂ “ಹಿಂದುತ್ವ”ದ ಒಗ್ಗಟ್ಟು ಇರಲಿಲ್ಲ. ಈಗೇನು? ಹಿಂದೂ ಸಮಾಜವೆನ್ನುವುದು ಬಹುಜಾತಿ, ಬಹುಮತಗಳ ಬಹುತ್ವದ ಭೇದದಿಂದ ಛಿದ್ರವಾಗಿಲ್ಲವೇ? ದೇಶದ ಬಹುಜನತೆಯನ್ನು ಏಕಸೂತ್ರ, ಏಕಧರ್ಮ, ವಿಭಿನ್ನ ದೇವತೆಗಳ ಅನ್ಯೋನ್ಯತೆಯಿಂದ ಸಂಘಟಿಸಿ, ಮೇಲು-ಕೀಳಿಲ್ಲದೆ ಜನತೆಯನ್ನು ಸಮಾನ ಗೌರವದಿಂದ ಕಾಣುವಂತಾದಾಗ ಉತ್ತರೋತ್ತರ ದೇಶದಲ್ಲಿ Homogenous ಬಹುಮತ ಆಡಳಿತ ಜಾರಿಯಾಗುವುದು ಸಾಧ್ಯವಾದೀತು. ವೋಟ್ ಬ್ಯಾಂಕಿನ ರಕ್ಕಸ ರಾಜಕಾರಣಿಗಳು ಈ ಕೆಲಸ ಮಾಡುವುದುಂಟೇ? ಅದಕ್ಕೆ ನಮ್ಮ ತ್ಯಾಗಶೀಲ ಧಾರ್ಮಿಕ ಮುಖಂಡರಾದರೂ ವಿವೇಕದಿಂದ ಮುಂದಾಗಬೇಕು. ಆ ಸಂಭವ ಕಾಣುತ್ತಿಲ್ಲ.


ಆರ್. ಕೆ. ದಿವಾಕರ


ಕರೆ: 9448047559

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet