ಲೈಫು ಇಷ್ಟೇನೇ..... ಭಾಗ-೨
ಬರಹ
ಲೈಫು ಮೊಗೆದಷ್ಟೂ
ಬಗೆ ಬಗೆ
ಮೊಗೆದಷ್ಟೂ ನಗೆ ನಗೆ
ಹಲವರಿಗೆ,
ಇತರರಿಗೆ ಬರೀ
ಹೊಗೆ ಧಗೆ ಹಗೆ ಹಗೆ
ಲೈಫು ಹಾಗೇ ಹೀಗೇ
ಎ೦ದು ಶರಾ ಬರೆಯಲು
ನಾನೇನು
ಲೈಫು ಸಾರೋಫುಲ್ಲು
(ಕೆಲವರಿಗೆ ಲೈಫು ಫುಲ್ಲು ಸಾರ)
ಎ೦ದ ಅ೦ದಿನ ಬುದ್ಧನೂ ಅಲ್ಲ
ಲೈಫು ಬರೀ ಇಲ್ಲ್ಯೂಷನ್
( ಇಲ್ಲೂ ವಿಷನ್ ಇದೆ ಎನ್ನುವವರು ಕಡಿಮೆಯಿಲ್ಲ)
ಎ೦ದು ಸಾರಿದ ಶ೦ಕರನೂ ಅಲ್ಲ
ಅಥವಾ ಲೈಫು ಇಷ್ಟೇನೇ..
ಎ೦ದು ಹೆಜ್ಜೆ ಹಾಕಿ ಕುಣಿದ
ಇ೦ದಿನ ಯೋಗರಾಜನ೦ತೂ
ಖ೦ಡಿತಾ ಅಲ್ಲ...