ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಸವಾದ ಕಾಪು ಸಮುದ್ರ ತೀರ

ಪ್ರತಿ ಬಾರಿ ಊರಿಗೆ ಹೋದಾಗ ಕಾಪು ಸಮುದ್ರ ತೀರಕ್ಕೆ ಹೋಗದೆ ಇದ್ದರೆ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಈ ಬಾರಿ ಚಾಂದ್ರಮಾನ ಯುಗಾದಿಯಂದು ಊರಿಗೆ ಹೋದಾಗ ಕೂಡ ಸಮುದ್ರ ತೀರಕ್ಕೆ ಭೇಟಿ ನೀಡಿದ್ದೆ. ಚಿತ್ರದಲ್ಲಿರುವುದು ದಿನೇ ದಿನೇ ಪ್ರಸಿದ್ಧಿ ಪಡೆಯುತ್ತಿರುವ ಕಾಪು ಸಮುದ್ರ ತೀರದ ಒಂದು ದೃಶ್ಯ. ದೀಪ ಸ್ತಂಭ ಪ್ರವೇಶಕ್ಕೆ, ವಾಹನ ನಿಲುಗಡೆಗೆ ೧೦ ರುಪಾಯಿ ಕೀಳುವ ಪ್ರವಾಸೋದ್ಯಮ ಇಲಾಖೆಗೆ ಒಂದು ಕಸದ ದಭ್ಭಿ ಇಡಲಾಗದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು/ಸ್ಥಳೀಯರು ಸ್ವಲ್ಪ ಮನಸ್ಸು ಮಾಡಿ ಕಂಡ ಕಂಡಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬಾರದೆ. ರಾತ್ರಿ ಹೊತ್ತಿಗೆ ಸುರಾಪಾನ ಮಾಡುವವರು ಬಾಟಲಿಯನ್ನು ಸಮುದ್ರಕ್ಕೆ ಎಸೆಯುವುದಕ್ಕೆ ಅಲ್ಲಿ ಸಿಗುವ ಅವುಗಳ ಅವಶೇಷಗಳೇ ಸಾಕ್ಷಿ. ಮಧ್ಯಪಾನ ಮಾಡುವವರು ಮಾಡಿ, ಸಂತೋಷ ಪಡಿ ಆದರೆ ದಯವಿಟ್ಟು ಸಮುದ್ರದ ಸೊಬಗನ್ನು ಹಾಳು ಮಾಡಬೇಡಿ. ಸಮುದ್ರ ತೀರಕ್ಕೆ ಭೇಟಿ ಕೊಡುವ ಪ್ರತಿಯೊಬ್ಬರೂ ದಯವಿಟ್ಟು ಶುಚಿತ್ವವನ್ನು ಕಾಪಾಡಿ. ಕೆಲವೊಮ್ಮೆ ಯಾಕದರೂ ನನ್ನ ಊರು ಪ್ರಸಿದ್ಧಿ ಪಡೆಯಿತೋ ಅನ್ನುವಷ್ಟು ಬೇಸರವಾಗುತ್ತದೆ. ಮುರ್ಡೇಶ್ವರ ಸಮುದ್ರ ತೀರವಂತೂ ಸಂಪೂರ್ಣ ಕಲುಷಿತವಾಗಿದೆ. ಇನ್ನು ಮಲ್ಪೆ, ತಣ್ಣೀರುಬಾವಿ, ಮರವಂತೆ ಸಮುದ್ರ ತೀರಗಳ ಬವಣೆ ಏನಿದೆಯೋ?

ರೋಟಿ ಮೇಕರ್ರೋ ಅಥವ ರೋಟಿ ಬ್ರೇಕರ್ರೋ?

ನೆನ್ನೆ ಸಮಯಾನೆ ಸರಿ ಇಲ್ಲಾನ್ಸತ್ತೆ
ಬೆಳಗ್ಗೆ ಇಂದಾನೆ ಮನೇಲಿ ಕಿರಿಕಿರಿ. ಅದೆಲ್ಲಾ ಬರೆಯಲ್ಲ ಬಿಡಿ ನಂಗೂ ಬೋರು ನಿಮಗೂ ಬೋರು
ಅಕ್ಕ ಯಾರನ್ನೋ(ಜ್ಯೋತಿಷಿ) ನೋಡಬೇಕು ಅಂತದ್ಳು ಸರಿ ನಾವೆಲ್ಲಾ ನಮ ಸೈನ್ಯದ ಜೊತೆ ಹೊರಟೆವು(ಪತಿಯನು ಹೊರತು ಪಡಿಸಿ) ನಾನೂ ಏನಾದರೂ ಕೇಳೋಣ
ಅನ್ಕೊಂಡು ಜಾತಕದ ಪ್ರಿಂಟ್ ಔಟ್ ತಗೊಂಡು ಹೊರಟಿದ್ದಾಯ್ತು.

ಸಂಪದದಲ್ಲಿ ಯಾಕೆ ಹೀಗೆ....?

ಸಂಪದ.ನೆಟ್ ಕನ್ನಡಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಕಾರಣ ಏನಪ್ಪ ಅಂದ್ರೆ , ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮುತ್ತುಗಳು, ನಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ಒಂದು ಸಮರ್ಥ ವೇದಿಕೆಯಾಗಿದೆ ನಮ್ಮ ಈ ಸಂಪದ .

ನಾನಾದೇನು ಹಿಮಾಲಯ !

ಕವಿತೆ ಒಂದು Instinct. ನಾಲ್ಕು ಹೊತ್ತಗೆಗಳನ್ನು ಓದಿ, ದಾಖಲೆಗಳನ್ನು ಸಂಗ್ರಹಿಸಿ ಲೇಖನ ಬರೆದುಬಿಡಬಹುದು. ಕವಿತೆ ಪ್ರಸವಿಸಲು ಭಾವನೆಗಳು ಬೇಕು. ಮಾತುಗಳು ಎದೆಯಾಳದಿಂದ ಬರಬೇಕು. ಎಲ್ಲರಿಗೂ ಬರುತ್ತವೆ ಆದರೆ ಅದಕ್ಕೆ ಅಕ್ಷರ ರೂಪ ಕೊಡಲು ಗೊತ್ತಿರಬೇಕು!

ಅಪ್ಪನೇ ಕನ್ನಡ ಮಾತಾಡಲ್ಲ ಇನ್ನು ಮಗ....

ಇವತ್ತು ಬೆಳಗ್ಗೆ, ನಾನು ನನ್ನ ಗೆಳೆಯನಿಗೆ ಶಟಲ್ ಆಡಲಿಕ್ಕೆ ಪಾರ್ಕ್ ಹೊರಗಡೆ ಕಾಯ್ತಿದ್ದೆ. ಒಬ್ಬ ವ್ಯಕ್ತಿ, ಸುಮಾರು 35 ವರ್ಷ ಇರಬಹುದು ಅವ್ರು ಜಾಗಿಂಗ್ ಮಾಡ್ತಿದ್ರು ಅವರ ಮಗ ಬೈಸಿಕಲ್ ಹೊಡಿತಿದ್ದ. ಆ ವ್ಯಕ್ತಿ ಮಗನಿಗೆ, ಡೋಂಟ್ ಗೋ ಲೆಫ್ಟ್, ಟೇಕ್ ರೈಟ್ ಅಂತ ಅಂದ್ರು. ಮಗನೂ ಸಹ ಐ ವಿಲ್ ಗೋ ಲೆಫ್ಟ್ ಓನ್ಲಿ ಅಂದ, ಅದಕ್ಕೆ ಮತ್ತೆ ಅವ್ರಪ್ಪ ನೋ ಅಂದ್ರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ತೇಜಕ್ಕನ ಸಾಧನೆ ಏನು? ಉತ್ತರ ಫಲಿತಾಂಶದ ಮುನ್ನುಡಿ!

ಲೋಕಸಭೆಗೆ ದ್ವಿತೀಯ ಬಾರಿಗೆ ಆಯ್ಕೆ ಬಯಸಿ ತೇಜಸ್ವಿನಿ ಶನಿವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಪಕ್ಷದ ದಿಗ್ಗಜರ ಗೈರುಹಾಜರಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ದುಗುಡ ಮೂಡಿಸಿದೆ.ಡಿ.ಕೆ.ಶಿವಕುಮಾರ್‍, ಹೆಚ್.ಎಂ.ರೇವಣ್ಣ, ಸಿ.ಎಂ.ಲಿಂಗಪ್ಪ ಮುಂತಾದ ಅನೇಕ ಘಟಾನುಘಟಿ ನಾಯಕರುಗಳ ಗೈರುಹಾಜರಿ ಕಾರ್ಯಕರ್ತರಲ್ಲಿ ಇದ್ದ ವಿಶ್ವಾಸ ಕಮರಿಸಿದಂತಿತ್ತು.

ಯಕ್ಷಪ್ರಶ್ನೆ - ಸುಧಾರಿತ ರೂಪ

ಸಂಪದಿಗರೆ!

ಯಕ್ಷಪ್ರಶ್ನೆ, ಥಟ್ ಅಂತ ಹೇಳಿಯ ಅಂತರ್ಜಾಲ ರೂಪವನ್ನು ಆರಂಭಿಸಿರುವೆ. ಮೊದಲ ಸಂಚಿಕೆಯನ್ನು ಓದಲಾಗುತ್ತಿಲ್ಲ ಎಂದು ಹಲವರು ಹೇಳಿದ್ದರು. ಈಗ ಸುಧಾರಿತ ರೂಪದ ಎರಡನೆಯ ಸಂಚಿಕೆ ಪ್ರಕಟವಾಗಿದೆ. ದಯವಿಟ್ಟು ಒಮ್ಮೆ ನೋಡಿ. ನಿಮ್ಮ ಅನಿಸಿಕೆ ಹಾಗೂ ಸಲಹೆಗಳಿಗೆ ಸ್ವಾಗತ.

-ನಾಸೋ

 http://www.yakshaprashne.org/

 

ಬರಹ8.0

ಬರಹ8.0
ಶೇಷಾದ್ರಿ
ವಾಸು ಅವರು ಅಭಿವೃದ್ಧಿ ಪಡಿಸಿದ ಬರಹ ತಂತ್ರಾಂಶವು ಕನ್ನಡಿಗರೆಲ್ಲಾ
ಪರಿಚಿತ.ಕಂಪ್ಯೂಟರ್ ಬಳಸುವವರಿಗೆ ಕನ್ನಡದಲ್ಲಿ ಟೈಪಿಸುವಾಗಲೆಲ್ಲಾ ಬರಹ ತಂತ್ರಾಂಶವೇ
ಮೊದಲಿಗೆ ನೆನಪಿಗೆ ಬರುವುದು. ಈಗ ಈ ತಂತ್ರಾಂಶದ ಎಂಟನೇ ಆವೃತ್ತಿ ಬಿಡುಗಡೆಯಾಯಿತು.

ದೇವರ ಅಸ್ತಿತ್ವ

ಬುದ್ಧನು ದೇವರ ಬಗ್ಗೆ ಏನು ಹೇಳಿದ?
ಅವನು ದೇವರ ವಿಷಯವನ್ನೇ ಎತ್ತಲಿಲ್ಲ. ಬದುಕಿನ ಆಳ ಸತ್ಯಗಳನ್ನೇ ಕೆದಕುತ್ತಾ ಹೋದ. ಅನ್ವೇಷಿಸಿದ, ಬೋಧಿಸಿದ. ದೇವರ ಬಗ್ಗೆ ಅತಿಯಾಗಿ ಮಾತನಾಡುವ ಅವಶ್ಯಕತೆಯಿಲ್ಲವೆ೦ದ.

ಒಮ್ಮೆ ಬುದ್ಧನನ್ನು ಯಾರೋ ಕೇಳಿದರು,
'ದೇವರಿದ್ದಾನೆಯೇ?' ಎ೦ದು.
'ದೇವರಿದ್ದಾನೆ೦ದು ನಾನು ಹೇಳಿದೆನೇ?' ಎ೦ದು ಬುದ್ಧ ಮರುಪ್ರಶ್ನಿಸಿದ.