ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಗೆಹನಿಗವನಗಳು

ಐಶ್ ವಿಷ್ಯ ಐಸಾ!
----------------

ಎರಡು ವರ್ಷಗಳ ಕೆಳಗೆ
ಐಶ್ ಎಂಬ
ಐಶ್ಕಾಂತದ ಸೆಳೆತಕ್ಕೆ ಸಿಕ್ಕು
ಅಭಿಷೇಕು
ಶೇಕು!

ಅಭಿಷೇಕಿನ
ಶಾಕಿಗೆ
ಕರಗಿ
ಐಸ್
ಪಾನಿ ಪಾನಿ!

ಏನ್ಮಾಡೋದು ಸ್ವಾಮೀ,
ಜವಾನಿ
ದಿವಾನಿ!

ಪರಿಣಾಮ
ಸುಖಾಂತ.
ಅಭಿ-
-ಶೇಕ್ ಸಾಹೇಬ ಆದ
ಐಶ್-ಕಾಂತ.

ಅಮಿತಾಭನಿಗೆ ಅಮಿತಾನಂದ;
ಜಯಾ ಮುಖದಲ್ಲಿ ಜಯ.
ಕೃಷ್ಣರಾಜ ರೈ ಖುಷಿಯೇ ಸೈ;
ವೃಂದಮ್ಮನೋರು?
ಕುಡಿದರು ಹಾಲುಖೀರು.

ಅಂಗಳಕಿಂದು ಬಾರೋ ಕೃಷ್ಣಯ್ಯ...

ಅಂಗಳಕಿಂದು ಬಾರೋ ಕೃಷ್ಣಯ್ಯ
ಅಂಗಳಕಿಂದು ಬಾರೋ || ಪಲ್ಲವಿ ||

ತಿಂಗಳ ಮೊಗದ ಚೆನ್ನಿಗರಾಯನೇ
ಮಂಗಳವನ್ನು ತಾರೋ... || ಅನು ಪಲ್ಲವಿ ||

ಕಾಲಿಗೆ ಗೆಜ್ಜೆಯ ಕಟ್ಟಿ
ಹಾಲಿನ ಹೆಜ್ಜೆಯನಿಟ್ಟು
ಕುಣಿ ಕುಣಿದಾಡುತಾ ಬಾರೋ || ೧ ||

ಹಳದಿ ರೇಷಿಮೆ ಹೊದ್ದು
ಬಿಳಿಯ ಮುದ್ದೆಯ ಮೆದ್ದು
ಮುದ್ದಿನ ಮೊಗವನು ತೋರೋ || ೨ ||

ಚೆಂದದ ಹೂಗಳ ಧರಿಸಿ
ಚಂದನ ದೇಹಕೆ ಬಳಸಿ
ಗೋಗಳ ಒಲಿಸಲು ಬಾರೋ || ೩ ||

ಚಿಣ್ಣರ ಒಡನೆ ಮೆರೆದು
ಬಣ್ಣದ ಗೋಪಿಯರೆಳೆದು
ತುಂಟಾಟವಾಡಲು ಬಾರೋ || ೪ ||

ಕತ್ತಿಯಲುಗಿನ ಮೇಲೆ ನಡಿಗೆ

ಗುಟ್ಟಿನಲಿ ನೀಡುವುದ ಬಂದವರ ಹದುಳದಲಿ ಕಾಣುವುದ
ಒಳಿತ ಮಾಡಿ ಮೌನದಲಿರುವುದ ಪರರ ನೆರವ ನುಡಿವುದ
ಐಸಿರಿಗರಳದ ಕಂಡವರ ತೆಗಳದೆಂತೆಂಬೀ ಕಡುಕಟ್ಟಳೆಗಳ
ಕತ್ತಿಯಲುಗಿನ ಮೇಲೆನಡೆವುದ ನೇಮಿಸಿದರಾರು ಸುಜನರಿಗೆ?

ಸಂಸ್ಕೃತ ಮೂಲ- ಭರ್ತೃಹರಿಯ ನೀತಿಶತಕದಿಂದ

ದಿಬ್ಬಣ - ಜೀ ಕನ್ನಡದ ಧಾರಾವಾಹಿ

"ನಿನ್ನ ಮನೆಯಲ್ಲೇ ಹಾಸಿ ಹೊದೆಯೋ ಅಷ್ಟು ಸಮಸ್ಯೆಗಳಿವೆ. ಮಗ ಅಮೇರಿಕಾಕ್ಕೆ ಹಾರಿದ್ದಾನೆ, ಸೊಸೆ ಹೇಳಿದ ಮಾತು ಕೇಳೋಲ್ಲ, ಆದರು ಈ ಮನೆ ವಿಷಯ ರುಚಿ, ಇಷ್ಟು ವಯಸ್ಸಾದ್ರು ಚಪಲ"

ಯಕ್ಕೇರಿಯ ರೈತರನ್ನು ಬಿಕ್ಕಿಸಿದ ಬೆಕ್ಕಿಲಿ (ಪುನುಗು).

ಈ ಸುದ್ದಿಯನ್ನು ನಾನು BREAKING NEWS ಎನ್ನಲೇ..ಅಥವಾ NEWS THAT BREAKS ಎನ್ನಲೇ?

ಹೀಗಂದು ಬಿಡುತ್ತೇನೆ.."BREAKING NEWS Vs THE NEWS THAT BREAKS!"

ಕಾರಣ ಪುನಗುವಿನ ಬಗ್ಗೆ ನಾನು ನೀಡಿದ ದಿಢೀರ್ ವಾರ್ತೆಯ ಇನ್ನೊಂದು ಮಗ್ಗುಲಿನ ಪರಿಚಯ ಇದು. ಬೆಳಗಾವಿ ಜಿಲ್ಲೆ, ಸೌಂದತ್ತಿ ತಾಲ್ಲೂಕು ಯಕ್ಕೇರಿ ಗ್ರಾಮದ ಬಾಳೆ ತೋಟದ ಪ್ರಗತಿಪರ ಕೃಷಿಕರು, ನನಗೆ ಹಿರಿಯರೂ ಆದ ಈರಪ್ಪನವರು ವೀರಸಂಗಪ್ಪ ಕೋರಿಶೆಟ್ಟಿ ಅವರಿಗೆ ‘ಪುನಗು’ ಬೆಕ್ಕಿಲಿಯ ಬಗ್ಗೆ ನಾನು ಬರೆದ ಲೇಖನ ಕಡಿಮೆ ಸಿಟ್ಟು ತರಿಸಿಲ್ಲ. ಈ ಬೆಕ್ಕಿಲಿಯ ಉಪಟಳ ತಡೆಯಲು ಸಾಕಷ್ಟು ಉಪಾಯಗಳನ್ನು ಮಾಡಿ, ಸೋತ ಅವರು ‘ಮೇಷ್ಟ್ರೇ..ರೈತನ ಒಡಲಾಳದ ನೋವನ್ನು ಸಹ ನೀವು ಸಂಪದಿಗರಿಗೆ ಹೇಳಬೇಕು’ ಅಂದ್ರು. ಹಾಗಾಗಿ ಸಂಭಾವಿತ ಪುನಗುವಿನ ಆಘಾತಕಾರಿ ನಡುವಳಿಕೆಯನ್ನು ಇಲ್ಲಿ ದಾಖಲಿಸುವುದು ಉಚಿತ ಎಂದು ನನಗನ್ನಿಸಿತು.

ಯಜಮಾನ್ ಈರಪ್ಪನವರ ಮಗ ಪ್ರೊ.ಮಹಾಂತೇಶ ಕೋರಿಶೆಟ್ಟಿ ನನ್ನ ಸಹೋದ್ಯೋಗಿ. ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಆದರೆ ಬೇರೆ ಬೇರೆ ವಿಷಯಗಳ ಮಾಸ್ತರು. ಹಾಗಾಗಿ ಈರಪ್ಪನವರು ನನಗೂ ತೀರ್ಥರೂಪರ ಸಮಾನ. ಪುನುಗು ಬೆಕ್ಕಿಲಿಯ ಕುರಿತು ಅವರ ಧೋರಣೆ ಸಹಜವಾಗಿದ್ದನ್ನು ನಾನು ಗುರುತಿಸಿದೆ.

ಆಡು ಆಟ ಆಡು

ಆಡು ಆಟ ಆಡು

ಸಂಜೆ ಆಫೀಸಿನಿಂದ ಮನೆಗೆ ಬಂದಾಗ ಈ ಹಾಡು ಟಿವಿಯಲ್ಲಿ ಬರುವ ಯಾವುದೋ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿತ್ತು. ಆ ಚಿತ್ರದ ಹಾಡು ನನ್ನ ಬಳಿ ಇಲ್ಲದಿದ್ದರಿಂದ ಗೂಗಲ್ ಸರ್ಚ್ ಮಾಡುವ ಯೋಚನೆ ಮನಸ್ಸಿಗೆ ಬಂತು.
ನನಗೆ ಯೂಟ್ಯೂಬ್.ಕಾಂ ಮೂಲಕ ಈ ಹಾಡಿನ ವೀಡಿಯೋ ಲಿಂಕ್ ದೊರೆಯಿತು.

’ಆಡು ಆಟ ಆಡು...’ ಅಂತ "ಕುಳ್ಳ ಏಜೆಂಟ್ ೦೦೦" ಚಲನಚಿತ್ರದ ಹಾಡು.
ಹೆಸರಾಂತ ಹಿಂದಿ ಚಲನಚಿತ್ರ ಗಾಯಕ ಕಿಶೋರ್ ಕುಮಾರ್ ಕನ್ನಡದಲ್ಲಿ ಹಾಡಿದ ಏಕೈಕ ಗೀತೆ.

ಈ ಹಾಡನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ಆಯಿತು.

ಈ ಹಾಡನ್ನು ನೀವೆಲ್ಲರೂ ಕೇಳಿರ್ತೀರಾ ಅಂತ ಅಂದ್ಕೊಂಡಿದ್ದೀನಿ.

ಹಾಡಿನ ವೀಡಿಯೋ ಇಲ್ಲಿದೆ.

ಏಪ್ರಿಲ್ ೧

ನಮಗೆಲ್ಲ ತಿಳಿದಿರುವಂತೆ ಇಂದು ಮೂರ್ಖರ ದಿನ... ಒಬ್ಬರನ್ನೊಬ್ಬರು ಬೇಸ್ತು ಬೀಳಿಸುತ್ತ ಸಮಯ ಕಳೆಯುವ ಮಕ್ಕಳಿಗೆ ದೊಡ್ಡವರನ್ನೂ ಮೂರ್ಖರಾಗಿಸುವ ಆಸೆ.... ಇಂಥದ್ದೆ ಒಂದು ದಿನ ಏಪ್ರಿಲ್ ೧,೧೯೯೮

ದೊಡ್ಡಬಸಪ್ಪ ದೇವಾಲಯ - ಡಂಬಳ

ಗದಗ ಜಿಲ್ಲೆ ಐತಿಹಾಸಿಕವಾಗಿ ಬಹಳ ಪ್ರಾಮುಖ್ಯದ್ದು. ಜಿಲ್ಲೆಯ ತುಂಬಾ ಇರುವ ಪ್ರಾಚೀನ ದೇವಾಲಯಗಳು ಜಿಲ್ಲೆಯ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುತ್ತವೆ. ಕಲ್ಯಾಣಿ ಚಾಲುಕ್ಯರು, ಯಾದವರು ಮತ್ತು ಕಳಚೂರ ವಂಶದ ರಾಜರ ಆಳ್ವಿಕೆಯ ಕಾಲದಲ್ಲಿ ವೈಭವವಾಗಿ ಮೆರೆದ ಸ್ಥಳ ಡಂಬಳ, ಈಗೊಂದು ಸಣ್ಣ ಹಳ್ಳಿ. ಇಲ್ಲಿ ಪುರಾತತ್ವ ಇಲಾಖೆ ೨ ದೇವಾಲಯಗಳನ್ನು ಚೆನ್ನಾಗಿ ಕಾಪಾಡಿಕೊಂಡಿದೆ.

ದೊಡ್ಡಬಸಪ್ಪ ದೇವಾಲಯ ತನ್ನದೇ ಆದ ವಿಶಿಷ್ಟ ವಾಸ್ತುಶೈಲಿಯನ್ನು ಹೊಂದಿದೆ. ವೃತ್ತ ಮಾದರಿಯ ದ್ರಾವಿಡ ವಿಮಾನ ಶೈಲಿಯ ಈ ಏಕಕೂಟ ದೇವಸ್ಥಾನ ಮುಖಮಂಟಪ, ನವರಂಗ ಮತ್ತು ಗರ್ಭಗುಡಿಗಳನ್ನು ಹೊಂದಿದೆ. ಶಿವಲಿಂಗ ಸುಮಾರು ೫ ಅಡಿ ಎತ್ತರವಿದೆ. ಮುಖಮಂಟಪದಲ್ಲಿ ನಂದಿಯ ದೊಡ್ಡ ಮೂರ್ತಿಯಿದೆ. ಇಲ್ಲಿನ ನಂದಿ ದೊಡ್ಡ ಆಕಾರದ್ದಾಗಿರುವುದರಿಂದ ಈ ದೇವಾಲಯಕ್ಕೆ ’ದೊಡ್ಡಬಸಪ್ಪ ದೇವಾಲಯ’ ಎಂದು ಹೆಸರು. ಮುಖಮಂಟಪದಿಂದ ನವರಂಗಕ್ಕೆ ಪ್ರವೇಶಿಸುವ ದ್ವಾರದ ಸಮೀಪವೆ ಇನ್ನೊಂದು ನಂದಿಯ ಮೂರ್ತಿಯನ್ನಿಡಲಾಗಿದೆ. ಇದು ಸಣ್ಣದಾಗಿದ್ದು ಎಲ್ಲಿಯೋ ದೊರಕಿದ್ದನ್ನು ಇಲ್ಲಿ ತಂದಿರಿಸಲಾಗಿದ್ದಿರಬಹುದು.