ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪಾಪ!

ಹೂವಿನ ಭಾರಕ್ಕೆ ಕುಸಿದಿರುವ ಸ್ವಾಮಿಗಳು! ವರ್ತೂರು ಕಾಲೇಜಿನ ಶಿಷ್ಯರು ಗುರುವಂದನೆ ಮಾಡಿದ ರೀತಿಯಿದಂತೆ. ಬೇರೆ ಯಾವದೇ ರೀತಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿರಲಿಲ್ಲವೆ? 

ಚಿತ್ರ ಕೃಪೆ - ಡೆಕ್ಕನ್ ಹೆರಾಲ್ಡ್ ಪತ್ರಿಕೆ

ಮಳೆ ಬಂತು ಮಳೆ!

ಸಂಪದ ಸೇರಿದ ಕೆಲವು ದಿನಗಳ ನಂತರ ನನ್ನ ಮೊದಲನೆ ಬ್ಲಾಗು ಬರಿತಾ ಇದೀನಿ. ಚಿಕ್ಕ ವಯಸ್ಸಿನಿಂದಲೆ ಪುಸ್ತಕದ ಹುಚ್ಚು ಹತ್ತಿಸಿಕೊಂಡ ನನಗೆ, ಆಗಾಗ ಬರೀಬೇಕು ಅಂತಾನು ಅನಿಸ್ತ ಇರುತ್ತೆ. ಸ್ವಲ್ಪ ಅದು ಇದು ಏನೊನೊ ಗೀಚಿದಿನಿ ಕೂಡ. ಆದ್ರೆ ಗೀಚಿದ ತಕ್ಷಣಾನೆ ಆ ಪೇಪರ್ ಅಲ್ಲೆ ಬಿಟ್ ಬಿಡ್ತೀನಿ. ನಾನು ಯಾವತ್ತೂ ಬರಿಯೋದನ್ನ ಗಂಭೀರವಾಗಿ ತಗೊಳಿಲ್ಲ.

ನೀರ ನಿಶ್ಚಿಂತೆ ಕಾರ್ಯಕ್ರಮ - ತುಮಕೂರು

ನಿನ್ನೆ ನಾವೆಲ್ಲ ತುಮಕೂರಿಗೆ ಹೋಗಿದ್ವು. ಕಾರ್ಯಕ್ರಮ "ನೀರ ನಿಶ್ಚಿಂತೆ". ತುಮಕೂರಿಗೆ ಕಾಲಿಟ್ಟ ಕೂಡಲೆ ದುರ್ಗದ ನೆನಪಾಗಿಸುವ ವಾತಾವರಣ. ನಾನು, ಅನಿಲ, ಶಿವು, ವಸಂತ, ಮುರಳಿ ಎಲ್ರೂ ಅನಿಲನ ಕಾರಲ್ಲಿ ಹೊರಟಿದ್ದು. ಹೋಗುವಷ್ಟರಲ್ಲಿ ಆಗಲೇ ಸ್ವಲ್ಪ ಲೇಟಾಗಿತ್ತು. ಮಲ್ಲಿಕಾರ್ಜುನ ಹೊಸಪಾಳ್ಯ, ಭೂಷಣ್, ಆಗಲೇ ತುಮಕೂರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತು ಮಾತನಾಡುತ್ತಿದ್ದರು.

ಕಾರ್ಯಕ್ರಮದ ಕುರಿತು ಬರೆಯಲು ಹೋದರೆ ಬರೆಯುವುದು ಬಹಳಷ್ಟಿದೆ. ಇವತ್ತು ಉಳಿದ ಕೆಲಸಗಳು ಹಾಗೇ ಉಳಿದುಬಿಟ್ಟಾವು. ಹೀಗಾಗಿ ಕೆಲವು ಫೋಟೋಗಳನ್ನು ಹಾಕಿ ನಾನು ಇಂಗ್ಲೀಷಿನಲ್ಲಿ ಬರೆದ ಬ್ಲಾಗ್ ಪುಟದ ಲಿಂಕ್ ಹಾಕಿಬಿಡುವೆ.
ಒಟ್ಟಾರೆ ತುಮಕೂರಿನ ಆಸಕ್ತರೊಂದಿಗೆ ಮಾತನಾಡುತ್ತ ಕಳೆದ ಸಮಯ ಖುಷಿ ಕೊಟ್ಟಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ವಂದನೆಗಳು, ಕಾರ್ಯಕ್ರಮ ಆಯೋಜಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಪದಿಗರಾದ ಸಮೃದ್ಧಿ ಸಂಸ್ಥೆಯ ಭೂಷಣ್, ಧಾನ್ಯ ಸಂಸ್ಥೆಯ ಮಲ್ಲಿಕಾರ್ಜುನ್ ಹೊಸಪಾಳ್ಯ - ಇವರಿಗೆ ವಂದನೆಗಳು ಸಲ್ಲಬೇಕು. ಕಾರ್ಯಕ್ರಮ ನಡೆಸಿಕೊಡುವಲ್ಲಿ ಪಾಲ್ಗೊಂಡ ಸಂಪದಿಗರಾದ ಮುರಳಿ, ಶಿವು, ವಸಂತ, ಅನಿಲ - ಇವರಿಗೆ many thanks. ತಂತ್ರಜ್ಞಾನದ in-depth knowledge ಇರುವವರಿಗೆ ತೀರ ಸಾಧಾರಣ ವಿಷಯಗಳ ಬಗ್ಗೆ ಮಾತನಾಡುವುದು ಕಷ್ಟ. ಆದರೆ ಇದು ಬಹಳ ಸುಲಭವಾಗಿ ಸಾಧ್ಯ ಎನ್ನುವಂತೆ ಮಾಡಿದವರು ಇವರುಗಳು. ಕಾರ್ಯಕ್ರಮಕ್ಕೆ ಹಣಕಾಸಿನ ಸಹಾಯ ಒದಗಿಸಿದ ಅರ್ಘ್ಯಂ ಸಂಸ್ಥೆಗೆ ಕೂಡ ವಂದನೆ.

ಕನ್ನಡ ತಂತ್ರಾಂಶ......

ಕನ್ನಡ ತಂತ್ರಾಂಶದ ಬಗ್ಗೆ ಅನೇಕ ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಕನ್ನಡವನ್ನು ಗಣಕ ಯಂತ್ರದಲ್ಲಿ ಬಳಸಲು ಅನೇಕ ತಂತ್ರಾಂಶಗಳು ಲಭ್ಯವಾಗಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾದ ಒಂದು ಪುಸ್ತಕ " ಕವಲುದಾರಿಯಲ್ಲಿ ಕನ್ನಡ ತಂತ್ರಾಂಶ"(ವಿ ಎಂ ಕುಮಾರಸ್ವಾಮಿ, ಪದ್ಮ ಟಿ) ಅನೇಕ ವಿಷಯಗಳನ್ನು ಸಂಪಾದಿಸಿ ಜನರ ಮುಂದಿಟ್ಟಿದೆ.

ಸಮುದ್ರದ ನೀರನ್ನು ಕುಡಿಯುವ/ಸಿಹಿ ನೀರಾಗಿ ಪರಿವರ್ತಿಸಿರುವ ಸಾಧ್ಯತೆಗಳು ಮತ್ತು ಸಂಶೋಧನೆಗಳು

ಸಮುದ್ರದ ನೀರನ್ನು ಕುಡಿಯುವ/ಸಿಹಿ ನೀರಾಗಿ ಪರಿವರ್ತಿಸಿರುವ ಸಾಧ್ಯತೆಗಳು ಮತ್ತು ಸಂಶೋಧನೆಗಳು !!!!
ಎಸ್.ಕೆ.ನಟರಾಜ್, ಕಡಾಕೊಳ್ಳ
ಸಂಪದದಲ್ಲಿ ಗೆಳೆಯರೊಬ್ಬರು ಪ್ರಸ್ತಾಪಿಸಿದ "ಸಮುದ್ರ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಆಗದ ಕಾರಣಗಳು" ಎಂಬ ವಿಷಯದ ಪ್ರಸ್ತಾಪ ನನ್ನನ್ನು ೫ ವರ್ಷಗಳ ಹಿಂದೆ ನಾನು ಕೈಗೊಂಡಿದ್ದ ಸಂಶೋಧನೆಗೆ ಕರೆದುಕೊಂಡು ಹೋಯಿತು. ನಾನು ನನ್ನ ಪಿಹೆಚ್.ಡಿ. ಪದವಿಗಾಗಿ ಸಂಶೋಧನೆ ಕೈಗೊಂಡದ್ದು ಒಂದರ್ಥದಲ್ಲಿ ಇದೆ ವಿಷಯಕ್ಕೆ ಸಂಭಂದಿಸಿದ್ದು. ಆ ದಿನಗಳಲ್ಲಿ ನಾನು ಕಲೆಹಾಕಿದ ಮಾಹಿತಿ, ಕೈಗೊಂಡ ಪ್ರಯೋಗಗಳು, ಉಪ್ಪುನೀರಿನಿಂದ ಶುದ್ಧ ಕುಡಿಯುವ ನೀರಿನ ಪಡೆಯುವ ಸುಲಭ ಮಾರ್ಗಗಳನ್ನು, ಸಾಧನಗಳನ್ನು ಅಭಿವೃಧಿಪಡಿಸಲೆತ್ನಿಸಿದ ನೇರ, ಇದೆ ವಿಷಯದೊಂದಿಗಿನ ನನ್ನ ಅನುಭವಗಳನ್ನು ಮಾಹಿತಿಯಾಗಿ ಇಲ್ಲಿಡುತ್ತೇನೆ.
ನೀರಿನ ಶುದ್ಧತೆಯನ್ನು ಅದರಲ್ಲಿ ಕರಗಿರುವ ಲವಣಗಳು, ನೀರಿನಲ್ಲಿ ಬೆರೆತ ಅತಿ ಸೂಕ್ಷ್ಮ ಜೀವಿಗಳು (ಬ್ಯಾಕ್ಟೀರಿಯ ಇತ್ಯಾದಿ), ಧೂಳಿನ ಕಣಗಳು ಹಾಗು ಇತರ ಸಾವಯವ ಹಾಗು ನಿರವಯವ ಮೂಲದ ರಾಸಾಯನಿಕಗಳ ವಿವಿಧ ಪ್ರಮಾಣದ ಮೇಲೆ ಈ ಕೆಳಗಿನಂತೆ ವಿಂಗಡಿಸಬಹುದು;
1. ಶುದ್ಧ ನೀರಿನಲ್ಲಿ (ಕುಡಿಯಬಹುದಾದ) ಒಟ್ಟು ಕರಗಿರುವ ಘನವಸ್ತುಗಳ (TDS= Total Dissolved Solids ಟಿ.ಡಿ.ಎಸ್.) ಪ್ರಮಾಣ ೧೦೦೦ ppm or mg/L (parts per million) ಪಿಪಿಎಂ (ಪಾರ್ಟ್ಸ್ ಪರ ಮಿಲ್ಲಿಯನ್ ಅಥವಾ mg/L ಅಂದರೆ ಒಂದು ಲೀಟರ್ ನೀರಿನಲ್ಲಿ ೧೦೦೦ milligram) ಗಿಂತಲೂ ಕಡಿಮೆ ಕರಗಿರುವ ಘನವಸ್ತುಗಳ ಇರುತ್ತದೆ. (1 ppm = 1 mg/L).
2. ಸ್ವಲ್ಪ ಪ್ರಮಾಣದಲ್ಲಿ ಕಲುಷಿತ/ಉಪ್ಪು ನೀರು ಎಂದು ಕರೆಯುವ ನೀರಿನಲ್ಲಿ ಈ ಪ್ರಮಾಣ ೧೦೦೦-೩೦೦೦ ppm ಇರುತ್ತದೆ (ಇದು ನಮಗೆ ಉಪಯೋಗಿಸಿ ರೂಢಿಯಾಗಿರುವ ನೀರಿನ ಮೂಲ).
3. ಇನ್ನು ಉಪಯೋಗಿಸಲು ಅಯೋಗ್ಯ ಎನ್ನಬಹುದಾದ ಮೂರನೇ ದರ್ಜೆಯ ಕ್ಷಾರ/ಉಪ್ಪು ನೀರಿನಲ್ಲಿ ಕರಗಿರುವ ಘನವಸ್ತುಗಳ ಪ್ರಮಾಣ ೩೦೦೦-೧೦೦೦೦ ಪಿಪಿಎಂ ವರೆಗೂ ಇರುತ್ತದೆ. ಇದನ್ನು ನಾವು ಕುಡಿಯಲು ಉಪಯೋಗಿಸುವ ಯೋಚನೆಯನ್ನೂ ಸಹ ಮಾಡಲಾಗದ ಪ್ರಮಾಣದಲ್ಲಿ ಉಪ್ಪುಪ್ಪು.
4. ಇನ್ನು ಇಲ್ಲಿ ಮುಖ್ಯವಾಗಿ ಪ್ರಸ್ತಾಪಿಸಬೇಕಿರುವ ಸಮುದ್ರದ ನೀರಿನಲ್ಲಿ ೧೦೦೦-೩೫೦೦೦ ಪಿಪಿಎಂ ವರೆಗೆ ಒಟ್ಟು ಕರಗಿರುವ ಘನವಸ್ತುಗಳು ಮನೆಮಾಡಿಕೊಂಡಿವೆ. ಇದು ಒಟ್ಟು ನೀರಿನ ತೂಕದ ಶೇಕಡಾ ೩ ರಿಂದ ೩.೫ ರಷ್ಟು ಕರಗಿರುವ ಘನವಸ್ತುಗಳ ಪ್ರಮಾಣ.
ಇನ್ನು ಇಲ್ಲಿಯ ಮುಖ್ಯ ವಿಷಯ; ಸಮುದ್ರದಲ್ಲಿನ ಈ ಅಗಾಧ ಪ್ರಮಾಣದ ಕರಗಿರುವ ವಸ್ತುಗಳು ಲವಣಯುಕ್ತವಾಗಿಸಿರುವಾಗ ಸಮುದ್ರದ ನೀರನ್ನು ಸಿಹಿ,ಕುಡಿಯಲು ಯೋಗ್ಯವಾಗಿಸಲು ಸಾಧ್ಯವೇ?
ಖಂಡಿತ ಸಾದ್ಯ... !

ನೀರಿನ ಬಗ್ಗೆ ಕನ್ನಡದಲ್ಲಿ ಹಾಡುಗಳು

ನಮ್ಮ ಮಡಿವಾಳ ಕೆರೆಯ ಹತ್ತಿರ ಒಂದು ಚಿಕ್ಕ ಕಾರ್ಯಕ್ರಮವನ್ನು ಈ ಭಾನುವಾರ ಆಯೋಜಿಸಿದ್ದೇವೆ.
ಕಾರ್ಯಕ್ರಮದ ಉದ್ದೇಶ ನೀರಿನ ಬಗ್ಗೆ ಅರಿವು ಮೂಡಿಸುವುದಾಗಿದೆ. ಅಕ್ಕ ಪಕ್ಕದ ಜನರನ್ನು ಕೂಡಿಸಿ ಕೆರೆಯ ಬಗ್ಗೆ ಸಂವಾದವನ್ನು
ಮಾಡಲಿದ್ದೇವೆ. ಜೊತೆಗೆ ಕನ್ನಡ ಹಾಡುಗಳನ್ನು ಹಾಡಿಸುವ ಯೋಜನೆಯನ್ನು ಮಾಡಿದ್ದೇವೆ.

ಪ್ರೀತಿ ನಮಗೆ ಬೇಕೇ ?

ನನ್ನ ಮೊದಲ ಪ್ರೀತಿ ವಿಫಲವಾಗಿ ನಾನು ಸೋತು ಬರೆದ ಕವನವಿದೊಂದು ... ನನ್ನ ನಾನು ಸಮಾಧಾನ ಪಡಿಸಿಕೊಂಡ ಕವಿತೇನೋ ಇದು ..ಗೊತ್ತಿಲ್ಲ ....:-)

ಪ್ರೀತಿ ನಮಗೆ ಬೇಕೇ ?

ಎತ್ತ ನೋಡಿದರತ್ತ , ಹಾರುತಿಹುದು ಚಿತ್ತ
ಮನರತ ಸಾರತಿಯ ಕೈಯಲ್ಲಿ ಇಲ್ಲದಿರಲು ಬೆತ್ತ
ಇದು ಎಲ್ಲ ಹುಡುಗಿಯರ ನೋಡುವುದು ಸುತ್ತ -ಮುತ್ತ !!!
ನನ್ನ ಈ ಮನಸ್ಸಿನ ಅಲೆದಾಟಕೆ ,ಮದ್ದು ಯಾರಿಗಾದರು ಗೊತ್ತಾ?

ಸುಸ್ಥಿರ ಕೃಷಿಯೆಡೆಗೆ ಸಮಗ್ರ ಹೆಜ್ಜೆ

ಐಡಿಎಫ್ ಸಂಸ್ಥೆಯು ಒಂದು ಸಾರ್ವಜನಿಕ ಧತ್ತಿ ಸಂಸ್ಥೆಯಾಗಿದ್ದು. ಕಳೆದ ಏಳು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಲವಾರು ಅಭಿವೃದ್ಧಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ಸಂಸ್ಥೆಯು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹಲವು ಹಳ್ಳಿಗಳಲ್ಲಿ ಒಂದು ಹೊಸ ಪ್ರಯೋಗಕ್ಕೆ ಅಡಿ ಇಕ್ಕಿದೆ.

ಮರಳಿ ಮನಕೆ

ಮರಳಿ ಮನಕೆ

ಅಂದು ನಾನು ನಾನಗಿದ್ದೆ
ಮೌನ ಗೂದಾಗಿದ್ದೆ , ಮನದ ಮುಗಿಲಾಗಿದ್ದೆ
ಇಂದೆನಾದೆನು ...?
ನನ್ನ ನಾನು ಮರೆತೆನು ,
ಹಣದ ಬಲೆಗೆ ಬಿದ್ದು ಹಾಳಾದೆನು
ನನ್ನ-ನನ್ನವರ ಮರೆತು ಮುಗಿಯದ ಮಾತಾದೆನು

ಈ ನನ್ನವರಿಲ್ಲದ ಜಗದಲಿ
ನನ್ನವರ ಹುಡುಕಿ ಸುಸ್ಥಾದೇನು
ಸಿಗದ ಪ್ರೀತಿ -ವಲವಿಗಾಗಿ ಬೆಂದೆನು