ಮಳೆ ಬಂತು ಮಳೆ!

ಮಳೆ ಬಂತು ಮಳೆ!

ಸಂಪದ ಸೇರಿದ ಕೆಲವು ದಿನಗಳ ನಂತರ ನನ್ನ ಮೊದಲನೆ ಬ್ಲಾಗು ಬರಿತಾ ಇದೀನಿ. ಚಿಕ್ಕ ವಯಸ್ಸಿನಿಂದಲೆ ಪುಸ್ತಕದ ಹುಚ್ಚು ಹತ್ತಿಸಿಕೊಂಡ ನನಗೆ, ಆಗಾಗ ಬರೀಬೇಕು ಅಂತಾನು ಅನಿಸ್ತ ಇರುತ್ತೆ. ಸ್ವಲ್ಪ ಅದು ಇದು ಏನೊನೊ ಗೀಚಿದಿನಿ ಕೂಡ. ಆದ್ರೆ ಗೀಚಿದ ತಕ್ಷಣಾನೆ ಆ ಪೇಪರ್ ಅಲ್ಲೆ ಬಿಟ್ ಬಿಡ್ತೀನಿ. ನಾನು ಯಾವತ್ತೂ ಬರಿಯೋದನ್ನ ಗಂಭೀರವಾಗಿ ತಗೊಳಿಲ್ಲ. ಆದ್ರೆ ಸ್ವಲ್ಪ ದಿನಗಳ ಕೆಳಗೆ ಅದು ಇದು ಹುಡುಕ್ತ ಸಂಪದದ ಕೊಂಡಿ ಸಿಕ್ತು. ಆವತ್ತು ಇಲ್ಲಿನ ಎಷ್ಟೋ ಬ್ಲಾಗುಗಳ್ನ ಓದಿದೆ. ಆಗ ನಾನು ಯಾಕೆ ಬರೀಬಾರದು ಅನ್ನಿಸಿ ಸಂಪದಿಗನಾಗಿದೀನಿ. ಬ್ಲಾಗು ಅಂದ್ರೆ ಸ್ವಂತ ಮನೆ ಇದ್ದ ಹಾಗೆ, ನಮಗೆ ಇಷ್ಟವಾದ ರೀತೀಲಿ ಇರಬಹುದು ಅಂದ್ರೆ ನಮಗಿಷ್ಟ ಬಂದ ವಿಚಾರದಲ್ಲಿ ಯಾವುದೇ ಶಿಷ್ಟಾಚಾರವಿಲ್ಲದೆ ಬರಿಬಹುದು ಅಂದ್ಕೊಡಿದೀನಿ ಅದಕ್ಕೆ ನಂಗೆ ಬ್ಲಾಗ್ ಅಂದ್ರೆ ತುಂಬಾ ಇಷ್ಟ.

ಅಂದಾಗೆ "ಊಟಕಿಂತ ಉಪ್ಪಿನಕಾಯಿ ಹೆಚ್ಚಾಗಬಾರದು ಅಲ್ವ" ಇನ್ನು ನನ್ನ ಈ ವರ್ಷದ ಮೊದಲ ಮಳೆ ಅನುಭವ ಇದೆ ಓದಿಕೊಳ್ಳಿ.

ನನ್ನೂರು ಗೌರಿಬಿದನೂರು, ಯಲಹಂಕದಿಂದ ದೊಡ್ಡಬಳ್ಳಾಪುರ ಕಡೆಗೆ ತಿರುಗಿದರೆ 65 ಕಿಮೀ ದೂರದಲ್ಲಿ ನಮ್ಮೂರು ಸಿಗುತ್ತೆ. ಈ ನಡುವೆ ರಸ್ತೆ ತುಂಬಾನೆ ಸುಧಾರಿಸಿರೊದರಿಂದ ನಾನು ಬೈಕ್ನಲ್ಲೆ ಊರಿಗೆ ಹೋಗ್ತಿನಿ. ಸಾಮಾನ್ಯವಾಗಿ ಶನಿವಾರ ಬೆಳಿಗ್ಗೆ ಹೋಗಿ ಭಾನುವಾರ ಸಂಜೆ ವಾಪಸ್ ಬರ್ತೀನಿ. ಈ ಸಾರಿ ವಾಪಸ್ ಬರೋವಾಗ ನಾನೊಬ್ನೆ ಇದ್ದೆ ಆದ್ದರಿಂದ ನಿಧಾನವಾಗಿ ಸಿದ್ದವಾಗಿ 5:30 ಗೆ ಮನೆ ಬಿಟ್ಟೆ. ಹೊರಡಬೇಕದ್ರಾನೆ ನಮ್ಮಮ್ಮ ಅಪಶಕುನ ನುಡಿದ್ರು. “ಮಳೆ ಬರೋ ಆಗಿದೆ ಬೇಗ ಹೋಗಪ್ಪ” ಅಂತ. ಆದ್ರೆ ಒಬ್ನೆ ರೈಡ್ ಮಾಡ್ತಾ ಇದ್ರೆ ಮನಸ್ಸು ಎಲ್ಲೊಲ್ಲೊ ಅಲಿತಾ ಇರುತ್ತೆ, ಅದಕ್ಕೆ ನಿಧಾನವಾಗಿ ಗಾಡಿ ಓಡುಸ್ಕೊಂಡು 6:40 ಕ್ಕೆ ದೊಡ್ಡಬಳ್ಳಾಪುರ ತಲುಪ್ದೆ. ಅಲ್ಲಿಂದ ಬಿಟ್ಟ ಸ್ವಲ್ಪ ಹೊತ್ನಲ್ಲಿ ಮಳೆ ಶುರು ಆಯ್ತು. ಆಗ ಅಮ್ಮ ನೆನಪಾದಳು. ಆದ್ರೂ ಅದು ಬರಿ ತುಂತುರು, ನಾನು ಹಾಗೇ ಮುಂದುವರಿದೆ, ಆದ್ರೆ ಯಲಹಂಕ ಹತ್ರ ಬರ್ತ ಇದ್ದಾಗೆ ಜೋರಾಗಿ ಹೊಡಿಯಕ್ಕೆ ಶುರು ಆಯ್ತು. ಅಲ್ಲೆ ಹತ್ರ ಕಾಣಿಸಿದ ಒಂದು ಗ್ಯಾರೇಜಲ್ಲಿ ಗಾಡಿ ನಿಲ್ಲಿಸಿ ಅಶ್ರಯ ಪಡೆದೆ. ಮಳೆಯಿಂದ ನೆನೆದ ಮಣ್ಣಿಂದ ಒಳ್ಳೆ ವಾಸನೆ ಬರ್ತಾ ಇತ್ತು. ಹಾಗೆ ಒಂದೈದು ನಿಮಿಷ ನಿಂತಿದ್ದೆ. ಮಳೆ ನಿಂತ ಹಾಗನಿಸಿ ಮತ್ತೆ ಗಾಡಿ ಏರಿದೆ. ಆದ್ರೆ ದುರದ್ರುಷ್ಟವಶಾತ್ ಮಳೆ ಜೋರಾಗಿಬಿಡ್ತು. ನಿಜವಾಗಲೂ ಮಳೆಯಲ್ಲಿ ನೆನೆಯೋದು ಸುಖಾನುಭವ, ಆದ್ರೆ ಮಳೇಲಿ ಗಾಡಿ ಓಡ್ಸೋದು ಯಮಯಾತನೆ. ಹನಿಗಳು ಸೂಜಿ ಅಥವ ದಬ್ಬಳದ ತರ ಚುಚ್ಚುತ್ವೆ. ಅದರಲ್ಲೂ ನನ್ ತರ ಸೋಡಬುಡ್ಡಿ ಅದ್ರೆ ಇನ್ನೂ ಕಷ್ಟ. ನೀವೂ ಕನ್ನಡಕ ಉಪಯೋಗಿಸೋರಾದ್ರೆ, ಅದ್ರಲ್ಲೂ ಗಾಡಿ ಓಡ್ಸುತ್ತ ಇದ್ರೆ ಆಗ ನನ್ನ ಕಷ್ಟ ನಿಮಗೆ ಅರ್ಥ ಆಗುತ್ತೆ. ಪ್ರತಿ ಸಾರಿ ಮಳೆ ಬಂದಾಗಲೂ "ಯಾಕಪ್ಪ ವೈಪರ್(ಕಾರಿಗೆ ಇರೊ ಹಾಗೆ) ಇರೊ ಹೆಲ್ಮೆಟ್ಟೊ ಅಥವ ಕನ್ನಡಕನೊ ಇನ್ನು ಯಾರೂ ಕಂಡುಹಿಡ್ದಿಲ್ಲ" ಅಂತ ಅಂದುಕೋತೀನಿ. ಏನೋ ಕಷ್ಟ ಪಟ್ಟು ಯಲಹಂಕಾಗೆ ಬಂದೆ ಮಳೆ ನಿಲ್ಲೊ ಹಾಗೆ ಕಾಣ್ಲಿಲ್ಲ. ತಾತ್ಕಾಲಿಕ ವಸತಿಗಾಗಿ ಹುಡುಕ್ತ ಇದ್ದೆ ಅದ್ರೆ ಅಷ್ಟರಲ್ಲಿ ಮುಂದಿನ ಸಿಗ್ನಲ್ಲು ಗ್ರೀನ್ ಆಗಿತ್ತು. ಬೆಂಗಳೂರು ಟ್ರಾಫಿಕ್ಕಲ್ಲಿ ಓಡಾಡಿದವ್ರಿಗೆ ಗೊತ್ತು ಗ್ರೀನ್ ಸಿಗ್ನಲ್ ಮಹತ್ವ ಏನು ಅಂತ. ಎಲ್ಲೋದ್ರು ಬರೀ ಕೆಂಪು ಸಿಗ್ನಲ್ಲಲ್ಲಿ ಸಿಕ್ಕಾಕ್ಕೊಂಡು ಸಾಯೊ ನಂಗೆ ಗ್ರೀನ್ ಕಂಡ ತಕ್ಷಣ ಖುಶಿ ಆಗಿ ನೆಂದ್ರೂ ಪರ್ವಾಗಿಲ್ಲ ಅಂತ ಮುಂದೆ ಹೋದೆ, ಆದ್ರೆ ಅಷ್ಟರಲ್ಲಿ ಮತ್ತೂ ಒದ್ದೆಯಾಗಿಬಿಟ್ಟಿದ್ದೆ. ನನ್ಗೆ ಮತ್ತೆ ಎಲ್ಲಾದ್ರೂ ನಿಂತೊಕೊಳ್ಳೊದರಲ್ಲಿ ಅರ್ಥ ಇಲ್ಲ ಅನುಸ್ತು. ಅಷ್ಟರಲ್ಲಿ ಒಂದು ಲಾರಿ ನನ್ನ ಮೈಮೇಲೆಲ್ಲ ನೀರು ಹಾರಿಸಿಕೊಂಡು ಮುಂದೆ ಹೋಯ್ತು. ನಾನು ಅಸಹಾಯಕನಾಗಿ ನೋಡ್ತಾ ಮುಂದುವರಿದೆ. ಎಲ್ಲೊ ಕೇಳಿದ ನೆನಪು if you cant escape, enjoy the rape as well ಅಂತ. ನಾನು ಅದೇ ಪರಿಸ್ಥಿತಿಯಲ್ಲಿದ್ದೆ so i started enjoying my rape. ಹಾಗೆ ನಿಧಾನವಾಗಿ ನೆನೆಯುತ್ತ ಮೇಕ್ರಿ ಸರ್ಕಲ್ಗೆ ಬಂದೆ. "ಆಸಾಮಿ ಕೆಳಗೆ ಬಿದ್ದರೆ ಆಳಿಗೊಂದು ಕಲ್ಲು" ಅನ್ನೊ ಹಾಗೆ ಅಲ್ಲಿ ಪೂರ್ತಿ ಟ್ರಾಫಿಕ್ ಜಾಮ್ ಆಗಿತ್ತು. ಹೆಚ್ಚು ಕಡಿಮೆ ಅರ್ಧ ಗಂಟೆ ಒಂಟಿ ಕಾಲಿನ ಬೈಕ್ ಸವಾರಿ ಮಾಡ್ತ ಕೊನೆಗೆ ಕಾವೇರಿ ಥಿಯೇಟರ್ ಹತ್ರ ಬಂದೆ. ಬೆಂಗಳೂರಲ್ಲಿ ಎಲ್ಲಾದ್ರೂ ಜಾಮ್ ಅದ್ರೆ ನನ್ ತಲೇಲಿ ಒಂದು ಚಿಕ್ಕ ಕೊರೆತ ಶುರು ಆಗುತ್ತೆ. ಏನಂದ್ರೆ ಈ ಜಾಮ್ಗೆ ಏನು ಕಾರಣ ಅಂತ. ಅದಕೊಸ್ಕರ ನಾನು ಯಾವಗ್ಲೂ ಆ “ಕಾರಣ”ನ ಅತಿ ಹತ್ತಿರದಿಂದ ನೋಡೊಕ್ಕೆ ಪ್ರಯತ್ನಪಡ್ತೀನಿ, ಅದು ಅಪಘಾತ ಆಗಿರ್ಲಿ ಅಥವ ರಸ್ತೆ ಅಗೆದಿರಿಲಿ. ಇಲ್ದೆ ಓದ್ರೆ ನನ್ ತಲೆಲಿರೊ ಆ ಹುಳು ಸಾಯಲ್ಲ. ನಿನ್ನೆ "ಜಾಮ್"ನ ಕೃಪೆ BWSSB ಅವರ ಒಳಚರಂಡಿ ಕಾಮಗಾರಿ. ಅಂತೂ ಇಂತೂ ಎಲ್ಲ ಕಷ್ಟಗಳನ್ನು ಮೀರಿ ಮನೆಗೆ ಹೋಗೊ ಅಷ್ಟರಲ್ಲಿ 8:30 ಗಂಟೆ ಆಗಿತ್ತು. ಈವತ್ತು ಬೆಳಗ್ಗೆಯಿಂದ ನನ್ನ ಮೂಗು ಗಂಗಾ-ಯಮುನ ಸಂಗಮ ಆಗಿದೆ. ಮೂಗು ಒರುಸ್ಕೊಂತ ಈ ಬ್ಲಾಗು ಬರಿದಿದೀನಿ ಆದ್ರೆ ಏನು ಮುಜುಗರ ಪಟ್ಕೊಬೇಡಿ ನನ್ನ ಲೇಖನ ಸ್ವಚ್ಚವಾಗೇ ಇದೆ. ಮುಂದಿನ ಲೇಖನದೊಂದಿಗೆ ಭೇಟಿ ಆಗೋಣ. ಧನ್ಯವಾದಗಳು.

Rating
No votes yet

Comments