ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕರ್ಣ ನಿನ್ನ ಹುಟ್ಟು, ಬದುಕು, ಸಾವು ಬರದಿರಲಿ ಮತ್ತೆ ಯಾರಿಗೂ

ಜಗಕೆಲ್ಲಾ ಬೆಳಕನೀಯುವ ದೇವಾದಿದೇವ
ನಿನ್ನ ತಂದೆ ಸೂರ್ಯದೇವ
ಜಗ ಮೆಚ್ಚುವ ವೀರರೈವರು
ನಿನ್ನ ಸಹೋದರರು ಪಾಂಡವರು
ಲೋಕ ಮಾತೆಯಾಗಿ ಪೂಜಿತೆ
ನಿನ್ನ ತಾಯಿ ಕುಂತಿ ಮಾತೆ
ಹರಿಯಂಶದಿ ಜನಿಸಿದ ತ್ರಿಲೋಕ ಗುರು
ನಿನ್ನ ಗುರು ಪರಶುರಾಮ
ಆದರೂ ಲೋಕದಲ್ಲಿ ಅತೀ ಗೋಳು
ನಿನ್ನ ಬಾಳದು ಕರ್ಣ

ಬಾಲೆಯೊಬ್ಬಳ ಕುತೂಹಲದ ಆಟಕೆ
ಪುತ್ರನೊಬ್ಬನ ಜನನ ಬೇಕಿತ್ತೆ?

ಚೇತನ್ (ಚಿಕ್ಕು ೧೨೩) ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!!!

ಚೇತನ್ (ಚಿಕ್ಕು ೧೨೩) ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!!!

ಅಲ್ಲದೆ ಅವರೊಂದಿಗೆ ಇಂದು ತಮ್ಮ ಜನ್ಮ ದಿನ ಆಚರಿಸುತ್ತಿರುವ ಎಲ್ಲಾ ಸಂಪದಿಗ ಮತ್ತು ಸಂಪದಿಗಿತ್ತಿಯರಿಗೂ ಜನ್ಮ ದಿನದ ಹಾರ್ದಿಕ ಶುಭಾಶಯಗಳು.

ಈ ದಿನ ಮರಳಿ ಮರಳಿ ಬರುತ್ತಿರಲಿ ನಿಮ್ಮ ಬಾಳಲಿ
ಆರೋಗ್ಯ ಮತ್ತು ನೆಮ್ಮದಿ ಸದಾ ಇರಲಿ ನಿಮ್ಮ ಬಾಳಲಿ.

ಭಾರತವೂ ಭಯೋತ್ಪಾದಕ ರಾಷ್ಟ್ರ: ಕ್ರಿಕೆಟ್ ಜಗತ್ತು

 

(ನಗಾರಿ ಕಿರಿಕಿರಿ ಕ್ರಿಕೆಟ್ಟು ಬ್ಯೂರೋ)

ಅಫಘಾನಿಸ್ತಾನದ ಬಾಡಿಗೆ ಹಂತಕರು, ತಮ್ಮದೇ ಸೈನ್ಯದ ಬೇನಾಮಿ ಸೈನಿಕರು, ಬಲೂಚಿಸ್ತಾನದ ಬುಡಕಟ್ಟು ಪಂಗಡದ ಯೋಧರನ್ನು ಭಾರತದೊಳಕ್ಕೆ ನುಗ್ಗಿಸಿ ಭಾರತೀಯ ಸೇನೆಯ ತಾಣಗಳ ಮೇಲೆ, ಕಾಶ್ಮೀರದಲ್ಲಿನ ಮುಸ್ಲಿಮೇತರ ಜನರ ಮೇಲೆ ದಾಳಿ ನಡೆಸಿ ಅದನ್ನು ಜಿಹಾದ್, ಸ್ವಾತಂತ್ರ್ಯ ಹೋರಾಟ, ಧರ್ಮ ಯುದ್ಧ ಎಂದು ಕರೆದುಕೊಂಡು ಹೆಮ್ಮೆಯಿಂದ ಸೋಲುತ್ತಿದ್ದ ಪಾಕಿಸ್ತಾನ ತನ್ನ ಹೋರಾಟವನ್ನು ಹೊಸತೊಂದು ಎತ್ತರಕ್ಕೆ ಕೊಂಡೊಯ್ದದ್ದು ಇತ್ತೀಚೆಗೆ. ಆಟದ ಮೈದಾನದಲ್ಲಿ ನಡೆಯುವ ಕಾಳಗವನ್ನು ಬೌಂಡರಿ ಲೈನ್ ದಾಟುತ್ತಿದ್ದಂತೆಯೇ ಮರೆತು ಬಿಡಬೇಕು ಎಂದು ವಿವೇಕಿ ಕ್ರಿಕೆಟಿಗರು ಹೇಳಿದ್ದಾರಾದರೂ ಈ ಬೌಂಡರಿಯಿಲ್ಲದ, ಮಿತಿಯಿಲ್ಲದ, ಮತಿಯಿಲ್ಲದ ಭಯೋತ್ಪಾದಕರಿಗೆ ಶ್ರೀಲಂಕಾದ ಕ್ರಿಕೆಟಿಗರೂ ಗುರಿಯಾದದ್ದು ದುರದೃಷ್ಟಕರ. ಅಷ್ಟು ಮಂದಿ ಆಟಗಾರರು ಎದುರು ಸಿಕ್ಕರೂ ಒಂದೂ ಗುರಿಯನ್ನು ಸರಿಯಾಗಿ ಮುಟ್ಟದಂತೆ ಶೂಟ್ ಮಾಡಿದ ಭಯೋತ್ಪಾದಕರಿಗೆ ತರಬೇತಿ ಸಿಕ್ಕಿದ್ದು ಪಾಕಿಸ್ತಾನದಲ್ಲೇ ಎಂದು ಸಾಬೀತು ಮಾಡಲು ಬೇರೆ ಸಾಕ್ಷಿಗಳೇ ಬೇಕಿಲ್ಲ.

ಲಂಕನ್ ಕ್ರಿಕೆಟ್ ತಂಡದೊಂದಿಗೇ ತಾವೂ ಹೊರಡುತ್ತಿದ್ದ ಪಾಕಿಸ್ತಾನದ ತಂಡ ಆ ದಿನ ಮಾತ್ರ ಹಿಂದಕ್ಕೆ ಉಳಿಯಲು ಯಾವ ಕೋಚು ಚಿಟ್ ಕಳುಹಿಸಿರಬೇಕು ಎಂದು ಜಗತ್ತೇ ತಲೆ ಕೆಡಿಸಿಕೊಂಡು ಕೂತಿರುವಾಗ ನಾವು ಸತ್ಯಶೋಧನೆಗಾಗಿ, ಕಾಣದ ಕೈಗಳ ಕೈವಾಡದ ತನಿಖೆಗಾಗಿ ನಮ್ಮ ಅತ್ಯಾಪ್ತ ಚೇಲ ಕುಚೇಲನನ್ನು ಪಾಕಿಸ್ತಾನಕ್ಕೆ ಅಟ್ಟುತ್ತಿದ್ದೇವೆ.

ಪಾಕಿಸ್ತಾನವೆಂಬ ‘ಪಾತಕಿ ಸ್ಥಾನ’ದಲ್ಲಿ ಬಾಳುವೆ ಮಾಡುವುದಕ್ಕಿರಲಿ, ಆಟವಾಡುವುದಕ್ಕೂ ಜಗತ್ತು ಹೆದರುವಂತಾಗಿದೆ. ಜಗತ್ತಿನ ಕ್ರಿಕೆಟ್ ವೀರರೆಲ್ಲಾ ಪಾಕಿಸ್ತಾನಕ್ಕೆ ಕಾಲಿಡಲು ಭಯಭೀತರಾಗಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಭಾರತ ಯಾವ ಕಾಲದಿಂದಲೂ ಜರೆಯುತ್ತಿದ್ದರೂ ಅದನ್ನು ಪ್ರತಿನಿತ್ಯ ಕೇಳುವ ದೂರದ ದೇವಸ್ಥಾನದ ಗಂಟೆಯ ನಾದದ ಹಾಗೆ ಭಾವಿಸಿ ಮೈಮರೆಯುತ್ತಿದ್ದ ಜಗತ್ತು ಈಗ ಎಚ್ಚೆತ್ತುಕೊಂಡಿದ್ದೆ. ಗಂಟೆಯ ಸದ್ದಿಗೆ ತಲೆದೂಗಿಸುತ್ತಿದೆ.

ಮಕ್ಕಳನ್ನು ‘ಮಸಣ’ಕ್ಕಟ್ಟಲು ಹವಣಿಸಿದ ‘ಕಲ್ಯಾಣ’ ಮಂಟಪದವರು!

ಮಗುವಿನ ಹವಳದಂತಹ ತುಟಿಗಳು. ಅಮೃತ ಸಮಾನ ತಾಯಿಯ ಸ್ತನಪಾನ ಮಾಡಲು ಹವಣಿಸುತ್ತಿರುವ ಕಂದಮ್ಮ. ಈ ಅದ್ಭುತ ಕ್ಷಣಗಳ ಮಧ್ಯೆ ಜಪಾನಿನಲ್ಲಿ ತಯಾರಾದ ಗಾಜಿನ ಬಾಟಲಿ. ದಕ್ಷಿಣ ಆಫ್ರಿಕಾದ ಕಾಡುಗಳ ರಬ್ಬರ್ ನಿಂದ ತಯಾರಿಸಲಾದ ನಿಪ್ಪಲ್. ಅದರಲ್ಲಿ ಡೆನ್ಮಾರ್ಕ್ ದೇಶದಿಂದ ಆಮದು ಮಾಡಕೊಳ್ಳಲಾದ ಹಾಲಿನ ಪುಡಿಯ ಪೇಯ. ಈ ಪೇಯವನ್ನು ಕುಡಿಸಲು ಆಯಾ ಅಥವಾ ಇನ್ನರೋ ತಿಂಗಳ ಪಗಾರ ಆಧಾರದಲ್ಲಿ ನೇಮಕ. ಇದು ಅಭಿವೃದ್ಧಿ. ಮುಂದುವರೆದಿದ್ದೇನೆ ಎಂಬ ಭ್ರಮೆಯಲ್ಲಿ ಮಾನವ ಬದುಕುವ ರೀತಿ. ಧನಕ್ಕಾಗಿ ಧರ್ಮವನ್ನು ಮರೆತ ಪ್ರಾಣಿಯ ಸ್ಥೂಲ ಪರಿಚಯವಿದು.

ಹೀಗೆಯೇ ಈ ವಿಷ ವರ್ತುಳದ ಪ್ರಭಾವ ಹಾಗು ಪರಿಣಾಮಗಳ ಕುರಿತು ನೂರಾರು ಜನ ಅವರ ಮಾತನ್ನು ತದೇಕ ಚಿತ್ತದಿಂದ ಆಲಿಸುತ್ತಿತ್ತು. ಇದ್ದಕ್ಕಿದ್ದಂತೆ ಗಂಟಲು ಕಟ್ಟಿತು. ಎರಡೂ ಕೈಗಳಿಂದ ಹಣೆ ಹಾಗು ಕೆನ್ನೆಯ ಬೆವರನ್ನು ಅವರು ಒರೆಸಿಕೊಂಡರು. ಕಣ್ಣೀರ ಹನಿಗಳು ತೊಟ್ಟಿಕ್ಕಿದವು. ಪಕ್ಕದಲ್ಲಿದ್ದವರ ಕ್ಷಮೆ ಕೇಳಿ ಒಂದು ಲೋಟ ನೀರು ಕುಡಿದರು. ತೀವ್ರ ಭಾವನಾತ್ಮಕವಾಗಿದ್ದಕ್ಕೆ ನೆರೆದವರ ಕ್ಷಮೆ ಕೇಳಿದರು. ಎಲ್ಲರ ಕಣ್ಣುಗಳು ಸಹ ಹನಿಗೂಡಿದ್ದವು. ಕ್ಷಣಕಾಲ ಅಲ್ಲಿ ನೀರವ ನಿಷ್ಯಬ್ದ.

ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ಸರ್ವೋದಯ ಮಹಾಸಂಘದ ಗ್ರಾಮ ಚೇತನ ಸಭಾಂಗಣ. ಕೃಷಿ ಮಾಧ್ಯಮ ಕೇಂದ್ರದ ವಾರ್ಷಿಕ ಘಟಿಕೋತ್ಸವದಲ್ಲಿ ವಿಷಯ ಪ್ರವೇಶ ಭಾಷಣ ಮಾಡಿದ್ದ ಅಭ್ಯುದಯ ಪತ್ರಕರ್ತ, ಪರಿಸರ ವಿಜ್ಞಾನಿ ಬಕ್ಕೇಮನೆ ನಾಗೇಶ ಹೆಗಡೆ ಹೀಗೆ ಕೇಳುಗರನ್ನು ಒಂದು ಕ್ಷಣ ಚಿಂತಾಕ್ರಾಂತರನ್ನಾಗಿಸಿದ್ದರು.

ರಾಧೆ ಹೇಳಿದ್ದು

ರಾಧೆ ಹೇಳಿದ್ದು...

ಕ್ರಿಷ್ಣ ನೀ ಹೀಗೆ ಅಂತ ನಾ ತಿಳಿದಿರಲಿಲ್ಲ
ನಿನ್ನ ತಲೆಮೇಲೆ ಕಿರೀಟ ಇದೆ ಎಂದ ಮಾತ್ರಕ್ಕೆ
ರಾಧೆ ನಿನ್ನ ನೋಡುವ ರೀತಿ
ಬದಲಾಯಿಸಬೇಕೆಂದಿದೆಯೆ...?
ನಿನ್ನ ದೂತ ಉದ್ಧವ ಹೇಳುತ್ತಾನೆ
ಅವನ ಮರೆ ವ್ಯಾಮೋಹ ತ್ಯಜಿಸು ಎಂದು...!

ನಿಜ ಆ ಗಳಿಗೆಯಲ್ಲಿ ಕಾಲು ನಿನ್ನೆಡೆಗೆ

ನನ್ನ ಕಚ್ತೀಯಲ್ಲಾ

ನೆನ್ನೆ ಸಾಯಂಕಾಲ ಮನೇಲಿದ್ದು ಬೋರ್ ಆಗಿತ್ತು (ಒಮ್ಮೊಮ್ಮೆ ಆಗತ್ತಲ್ಲಾ) ನಡೀರಿ ಹೊರಗಡೆ ಎಲ್ಲಾದರೂ ಸುತ್ತಾಡಿ ಬರೋಣವೆಂದು ನಮ್ಮೆಜಮಾನರ ಜೊತೆ ಹೊರಟೆ. ಎಲ್ಲಿ ಹೋಗುವುದು ನಮ್ಮೂರಲ್ಲೋ ವಿಪರೀತ ಟ್ರಾಫಿಕ್ (ಈಗ ಎಲ್ಲಾ ಸಿಟಿ ಹಣೇಬರಹ ಇದೆ) ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದಾಗ ಮಧ್ಯದಲ್ಲಿ ದೊಡ್ಡ ನಾಯಿಯೊಂದು ನಿಂತಿತ್ತು.