ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಕ್ಕಳ ವ್ಯಾಕ್ಸಿನ್ಗಳ (ಲಸಿಕೆಗಳ) ಪಟ್ಟಿ ಮತ್ತು ಮಾಹಿತಿ--ಭಾಗ--೨

ಪೋಲಿಯೋ ವ್ಯಾಕ್ಸಿನ್!!!

ನನ್ನ ಹಿಂದಿನ ಲೇಖನದಲ್ಲಿ ಕಂಡ ಪಟ್ಟಿಯೇ ಇದಕ್ಕೂ ಸೂಕ್ತವಾಗಿದೆ. ಹಾಗೂ ಕೊಂಡಿಗಳೂ ಅದೇ --ತಾಣಗಳು --೧. ಅಮೇರಿಕನ್ ಅಕ್ಯಾಡೆಮೀ ಆಫ್ ಪೀಡಿಯಾಟ್ರಿಕ್ಸ್ ಮತ್ತು ೨. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್.

http://www.aap.org/sections/infectdis/IZSchedule_Childhood.pdf

www.cdc.gov/vaccines/recs/acip

ಪೋಲಿಯೋ ವ್ಯಾಕ್ಸಿನ್ಗಳು ಎರಡು ಬಗೆ
೧. ಓಪಿವಿ ----ಒರಲ್ ಪೋಲಿಯೋ ಡ್ರಾಪ್ಸ್---ಇದನ್ನು ಬಾಯಿಯ ಮೂಲಕ ಕೊಡುವುದು. ಇದನ್ನು ಈಗ ಪೋಲಿಯೋ ರೋಗವನ್ನು ಇರಾಡಿಕೇಟ್ (ಓಡಿಸಲು) ಮಾಡಲು ಹರ್ಡ್ ಇಮ್ಮ್ಯೂನಿಟಿಗಾಗಿ ಉಪಯೋಗಿಸುತ್ತಾರೆ.
೨. ಐಪಿವಿ----ಇನ್-ಯಾಕ್ಟಿವೇಟೆಡ್ ಪೋಲಿಯೋ ವ್ಯಾಕ್ಸಿನ್, ಇದರಲ್ಲಿ ಸತ್ತ ವೈರಾಣುಗಳ ಪದಾರ್ಥ ಇರುತ್ತದೆ. ಅಮೇರಿಕಾದಲ್ಲಿ ಮೊದಲು ಇದನ್ನು ಉಪಯೋಗಿಸಿ, ನಂತರ ಪೋಲಿಯೋ ಡ್ರಾಪ್ಸ್ ಉಪಯೋಗಿಸಿ, ಮತ್ತೆ ಈಗ ಇದನ್ನೇ ಉಪಯೋಗಿಸುತ್ತಿದ್ದೇವೆ. ( ಕಾರಣ ಎರಡನ್ನು ಹೋಲಿಸಿದರೆ, ಐ.ಪಿ.ವಿ. ಯಿಂದ ದುಷ್ಪರಿಣಾಮಗಳು ಕಡಿಮೆ ಎಂದು).

ನಾ ನೋಡಿದ ಮೊದಲ ಹುಡುಗಿ

ಅವತ್ತು ಮನೆಗೆ ನೆಂಟರು ಬಂದಿದ್ರು ನಮ್ಮ ಚಿಕ್ಕಪ್ಪ, ಚಿಕ್ಕಮ್ಮ , ಅಜ್ಜಿ , ಅವರೆನಲ್ಲ ಕರೆಧುಕೊಂಡು ಸಂಬಂದಿಕರ ಮನೆಗೆ ಟ್ರಿಪ್ ಹೊಡೆಸೋದು ನನ್ನ ಜವಾಬ್ಧಾರಿ.

ಸಾರ್ಥಕವಾಗದ ಸಾಹಿತ್ಯ ಸಮ್ಮೇಳನಗಳು

ಇನ್ನೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಚಿತ್ರದುರ್ಗದಲ್ಲಿ ನಡೆದ ಈ ೭೫ನೇ ಸಮ್ಮೇಳನ ಬಹು ಯಶಸ್ವಿಯೆಂದು ಅದರ ಸಂಘಟಕರೂ, ಅವ್ಯವಸ್ಥೆಯ ಆಗರವಾಗಿತ್ತೆಂದು ಮಾಧ್ಯಮದವರೂ ಹೇಳತೊಡಗಿದ್ದಾರೆ. ಸಂಘಟನೆಯ ನೇತೃತ್ವ ವಹಿಸಿದ್ದ ಜಿಲ್ಲಾಧಿಕಾರಿ ಬಿಸ್ವಾಸ್ ಸ್ಥಳೀಯ ಪುಢಾರಿಗಳನ್ನು(ಇವರಲ್ಲಿ ಸ್ಥಳೀಯ ಪತ್ರಕರ್ತರೂ, ಅವರ ಗೆಣೆಕಾರರೂ ಸೇರಿರುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!) ಸಂಘಟನೆಯ ಕಾರ್ಯದಲ್ಲಿ (ಅಂದರೆ ಹಣಕಾಸಿನ ವ್ಯವಹಾರಗಳಲ್ಲಿ) ತೊಡಗಿಸಿಕೊಳ್ಳದೇ ಇದ್ದುದೇ, ಮಾಧ್ಯಮಗಳಲ್ಲಿ ಪ್ರತಿಕೂಲ ವರದಿಗಳಿಗೆ ಕಾರಣವಾಗಿದೆ ಎಂದೂ ಹೇಳಲಾಗುತ್ತಿದೆ. ಗೋಷ್ಠಿಯೊಂದು ಜನವೇ ಇಲ್ಲದೆ ಭಣಗುಟ್ಟಿತೆಂದು ಸೂಚಿಸುತ್ತಾ ಕನ್ನಡದ ಪ್ರಮುಖ ಪತ್ರಿಕೆಯೊಂದು ತನ್ನ ಮುಖ ಪುಟದಲ್ಲೇ ಖಾಲಿ ಕುರ್ಚಿಗಳ ಚಿತ್ರವೊಂದನ್ನು ಪ್ರಕಟಿಸಿತ್ತು. ಆದರೆ ಈ ಗೋಷ್ಠಿಗೆ ಹೋಗಿದ್ದ ನನ್ನ ಸ್ನೇಹಿತರೊಬ್ಬರ ಪ್ರಕಾರ ಈ ಗೋಷ್ಠಿ ಸಾಕಷ್ಟು ತುಂಬಿದ ಸಭಿಕರ ನಡುವೆಯೇ ಯಶಸ್ವಿಯಾಗಿ ನಡೆದಿದ್ದು, ಪತ್ರಿಕೆಯವರು ಹಿಂಭಾಗದಲ್ಲಿ ಖಾಲಿ ಇದ್ದ ಕುರ್ಚಿಗಳ ಚಿತ್ರ ತೆಗೆದು ಪ್ರಕಟಿಸಿದ್ದಾರಷ್ಟೆ! ನಾನೂ ಒಂದು ದಿನದ ಮಟ್ಟಿಗೆ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲೇನೂ ಅವ್ಯವಸ್ಥೆ ನನಗೆ ಕಾಣಲಿಲ್ಲ. ಆ ಹೊತ್ತಿಗೆ ಬಹುಶಃ ಊಟ - ವಸತಿಗಳಿಗೆ ಸಂಬಂಧಿಸಿದಂತೆ ಉದ್ಭವವಾಗಿದ್ದ ಅವ್ಯವಸ್ಥೆಯನ್ನು ಸರಿಪಡಿಸಲಾಗಿತ್ತೆಂದು ಕಾಣುತ್ತದೆ. ಅಂದು ನಡೆದ ಒಂದು ಅತಿ ಸಾಧಾರಣ ಕವಿಗೋಷ್ಠಿಯೊಂದನ್ನೂ, ಆನಂತರ ನಡೆದ ಸಮ್ಮೇಳನಾಧ್ಯಕ್ಷರೊಡನೆಯ ಸಂವಾದವನ್ನು ಬೃಹತ್ ಚಪ್ಪರದಡಿ ಸೇರಿದ್ದ ಬೃಹತ್ ಜನಸಮೂಹ ಶಾಂತ ರೀತಿಯಲ್ಲೇ ಕೇಳಿತು. ವಿಶೇಷವಾಗಿ ಎಲ್. ಬಸವರಾಜು ಅವರ ಸಹಜ ಹಾಗೂ ದಿಟ್ಟ ಮಾತುಗಾರಿಕೆಯನ್ನು ಮೆಚ್ಚಿ ಚಪ್ಪಾಳೆ ತಟ್ಟಿ ಸಂತೋಷಿಸಿತು ಕೂಡಾ.

ಟಿ ವಿ ನೈನ್ ನಿರೂಪಕಿಯರ ಕನ್ನಡ ಉಚ್ಛಾರಣೆ

ನಮಸ್ಕಾರ,

ಟಿ ವಿ ನೈನ್ ವಾಹಿನಿಯನ್ನು ವೀಕ್ಷಿಸುವವರಿಗೆಲ್ಲಾ ಗೊತ್ತಿರಬಹುದಾದ ವಿಷ್ಯ ಇದಾದರೂ ಮತ್ತೊಮ್ಮೆ ತಮ್ಮ ಗಮನಕ್ಕೆ .....

ಭಾಷೆಯ ಉಳಿವಿಗೆ ಭಾಷೀಯ ಪ್ರಯೋಗ ಮಾತ್ರವಲ್ಲ ಭಾಷೆಯ ಸರಿಯಾದ ಪ್ರಯೋಗವು ಕೂಡ ತುಂಬಾ ಮುಖ್ಯ...
ಮುಖ್ಯವಾಗಿ ಕೋಟ್ಯಂತರ ವೀಕ್ಷಕರನ್ನು ಮುಟ್ಟುತ್ತಿರುವ ವಾಹಿನಿಗಳಲ್ಲಿ....

ಮನಸ್ಸು...

ಮನಸ್ಸೆಂಬ ಕೊಳದಲ್ಲಿ ಬಿದ್ದಿದೆ,

ಒಂದು ಸಣ್ಣ ಹನಿ...!

ಆ ಹನಿಯೆಂಬುದು ಸಂಶಯ, ಖುಷಿ, ಅಳು, ನಗು ಎಂಬ ಚಿಕ್ಕ ಹನಿ...!

ಹನಿ ಎಷ್ಟೇ ಗಾತ್ರವಿದ್ದರೂ ಸರಿ,

ಬಿದ್ದ ಕೊಳದಲಿ ಮೂಡದೆ ಬಿಡದು ಅಲೆಗಳ ಸುರಳಿ...

ಸುರಳಿ ಅದಷ್ಟು ದೊಡ್ಡದು,

ಕಲಕುವುದು ಕೊಳದ ನೀರು ಹೆಚ್ಚು-ಹೆಚ್ಚು!

ಹಾಗೇ ನಮ್ಮ ಮನದ ಕೊಳದಲಿ ಬಿದ್ದರೆ ದುಃಖದ/ಕಷ್ಟದ ಹನಿ...

ಸಾವು-ಮುಪ್ಪು ಒ೦ದು ಚಿ೦ತನೆ

ಸಾವು ಕೆಲವರಿಗೆ ಒ೦ದು ಆಕರ್ಷಕ ಸ೦ಗತಿ, ವಿಚಾರ. ಮರಣವೇ ಮಹಾನವಮಿ ಅವರಿಗೆ. ಇನ್ನು ಕೆಲವರಿಗೆ ಒ೦ದು ಭಯಾನಕ ಅಸಹ್ಯವಾದ ಸ೦ಗತಿ. ಬಹಳಷ್ಟು ಜನ ತಿಳಿದಿರುವ೦ತೆ ಮಾನವನಿಗೆ ಒ೦ದೇ ಜನ್ಮ. ಇದಾದನ೦ತರ ಬರೀ ಶೂನ್ಯವೆ೦ದು.

ಶಿವರಾತ್ರಿ---ಶಿವನ ಹಾಡುಗಳು!!!

ಡಾ. ಜಿ ಎಸ್. ಶಿವರುದ್ರಪ್ಪನವರ ಕೆಲವು ಹಾಡುಗಳು ನೆನಪಿಗೆ ಬಂತು. ಹಾಡುಗಳನ್ನು ಗೊತ್ತಿದ್ದವರು ಪೂರ್ತಿ ಮಾಡಿ------

*೧ ಶಿವನು ಭಿಕ್ಷಕೆ ಬಂದ ನೀಡುಬಾರೆ
ತಂಗಿ, ಇವನಂತ ಚೆಲುವನಿಲ್ಲ ನೋಡುಬಾರೆ......

*೨ ಹೌದೇನೇ ಉಮಾ ಹೌದೇನೆ?
ಈ ಜನರೆನ್ನುವುದು ನಿಜವೇನೇ?-ಪ-

ಮಸಣದ ಬೂದಿಯ ಮೈಗೆ ಬಳಿದು ಶಿವ
ಉರೂರು ತಿರಿದುಂಬುವನಂತೆ
ನೀನೂ ಕೂಡಾ ಬಂಗಾರದ ಮೈಯಿಗೆ

ಶಿವರಾತ್ರಿಗೊಂದು ಶಿವಸ್ತುತಿ

ಹೋಗದಿರು ಇಲ್ಲಿಂದ ಕಾಲ್ದೆಗೆಯದೇ ಓ ಶಿವನೆ ನನ್ನಲ್ಲೆ ನೀ ನೆಲೆಸಿರು
ಹಿರಿಬೇಟೆಗಾರನೇ!  ಮನಸೆನ್ನುವೀ  ಕಗ್ಗಾಡಿನಲಿ ನಿನಗುಂಟು ಬಲು ಸುಗ್ಗಿಯು
ಮೋಹ ಮಚ್ಚರ ಸೊಕ್ಕು ಮೊದಲಾದ ಮಿಕಗಳು ಬಲು ತಿರುಗಾಡುತಿರಲು
ಅವುಗಳನು ಕೊಂದು ಬೇಟೆಯಾನಂದವನು ಹೊಂದುವುದೇ ನಿನಗೆ ಸರಿಯು