ಮಕ್ಕಳ ವ್ಯಾಕ್ಸಿನ್ಗಳ (ಲಸಿಕೆಗಳ) ಪಟ್ಟಿ ಮತ್ತು ಮಾಹಿತಿ--ಭಾಗ--೨

ಮಕ್ಕಳ ವ್ಯಾಕ್ಸಿನ್ಗಳ (ಲಸಿಕೆಗಳ) ಪಟ್ಟಿ ಮತ್ತು ಮಾಹಿತಿ--ಭಾಗ--೨

ಪೋಲಿಯೋ ವ್ಯಾಕ್ಸಿನ್!!!

ನನ್ನ ಹಿಂದಿನ ಲೇಖನದಲ್ಲಿ ಕಂಡ ಪಟ್ಟಿಯೇ ಇದಕ್ಕೂ ಸೂಕ್ತವಾಗಿದೆ. ಹಾಗೂ ಕೊಂಡಿಗಳೂ ಅದೇ --ತಾಣಗಳು --೧. ಅಮೇರಿಕನ್ ಅಕ್ಯಾಡೆಮೀ ಆಫ್ ಪೀಡಿಯಾಟ್ರಿಕ್ಸ್ ಮತ್ತು ೨. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್.

http://www.aap.org/sections/infectdis/IZSchedule_Childhood.pdf

www.cdc.gov/vaccines/recs/acip

ಪೋಲಿಯೋ ವ್ಯಾಕ್ಸಿನ್ಗಳು ಎರಡು ಬಗೆ
೧. ಓಪಿವಿ ----ಒರಲ್ ಪೋಲಿಯೋ ಡ್ರಾಪ್ಸ್---ಇದನ್ನು ಬಾಯಿಯ ಮೂಲಕ ಕೊಡುವುದು. ಇದನ್ನು ಈಗ ಪೋಲಿಯೋ ರೋಗವನ್ನು ಇರಾಡಿಕೇಟ್ (ಓಡಿಸಲು) ಮಾಡಲು ಹರ್ಡ್ ಇಮ್ಮ್ಯೂನಿಟಿಗಾಗಿ ಉಪಯೋಗಿಸುತ್ತಾರೆ.
೨. ಐಪಿವಿ----ಇನ್-ಯಾಕ್ಟಿವೇಟೆಡ್ ಪೋಲಿಯೋ ವ್ಯಾಕ್ಸಿನ್, ಇದರಲ್ಲಿ ಸತ್ತ ವೈರಾಣುಗಳ ಪದಾರ್ಥ ಇರುತ್ತದೆ. ಅಮೇರಿಕಾದಲ್ಲಿ ಮೊದಲು ಇದನ್ನು ಉಪಯೋಗಿಸಿ, ನಂತರ ಪೋಲಿಯೋ ಡ್ರಾಪ್ಸ್ ಉಪಯೋಗಿಸಿ, ಮತ್ತೆ ಈಗ ಇದನ್ನೇ ಉಪಯೋಗಿಸುತ್ತಿದ್ದೇವೆ. ( ಕಾರಣ ಎರಡನ್ನು ಹೋಲಿಸಿದರೆ, ಐ.ಪಿ.ವಿ. ಯಿಂದ ದುಷ್ಪರಿಣಾಮಗಳು ಕಡಿಮೆ ಎಂದು).

ಪೋಲಿಯೋ , ಒಂದು ವೈರಾಣುವಿನಿಂದ ಬರುವ ಇನ್ಫೆಕ್ಶಿಯಸ್ ರೋಗ--ಎಂಟೆರೋವೈರಸ್ ಆಗಿದ್ದು ಮೂರು ಸೀರೋ ಟೈಪ್ಸ್--೧,೨, ಮತ್ತು ೩ ಒಳಗೊಂಡಿದೆ.

ಲಕ್ಷಣಗಳು: ಸಣ್ಣ ಜ್ವರ, ಗಂಟಲು ಬೇನೆ, ಮೆನಿನ್ಜೈಟಿಸ್, (ಕೆಲವೊಮ್ಮೆ) ಪ್ಯರಸ್ತೀಶಿಯಾಸ್ (ಅಂದರೆ, ಸ್ವಾದೀನ ಮತ್ತು ಸೆಂಸೇಶನ್ ಇಲ್ಲದಿರುವಿಕೆ), ಮತ್ತು ಪ್ಯರಾಲಿಸಿಸ್( ಸಂಪೂರ್ಣ ಶಕ್ತಿಹೀನ ಕೈ, ಕಾಲು, ಸೊಂಟ ಮತ್ತು ಯಾವುದೇ ಮಸಲ್ ಗಳಿಗೆ ಇದು ತಟ್ಟಬಹುದು. ಉಸಿರಾಡಲು ಬೇಕಾಗಿರುವ ಎದೆಯಗೂಡಿನ ಮಸಲ್ಗಳು ಅಫೆಕ್ಟ್ ಆದರೆ, ಉಸಿರಾಟ ನಿಂತು ಪ್ರಾಣ ಹೋಗುವುದು. ಇದಕ್ಕೆ ರೆಸ್ಪಿರೇಟರಿ ಫೈಲ್ಯೂರ್ ಎಂದು ಕರೆಯಲಾಗುತ್ತೆ. ಪೋಲಿಯೋ ದಿಂದ ಹೀಗೆ ಬಹಳ ದೇಶಗಳಲ್ಲಿ ಬಹಳ ಜನರಿಗೆ ಪ್ರಾಣ ಹೋಗಿದೆ. ಇದು ಲೆಕ್ಕಕ್ಕೆ ಸಿಗುವುದಿಲ್ಲ ಏಕೆಂದರೆ, ಈ ಕೇಸುಗಳು ಜೀವಂತವಾಗಿರುವುದಿಲ್ಲ ಎಣಿಸುವುದಕ್ಕೆ. ಅದಕ್ಕೇ ಪೋಲಿಯೋ ಅಂದರೆ, ಕೈಕಾಲು ಸ್ವಾದೀನವಾಗುವುದಷ್ಟೇ ಎಂದೆನಿಸುವುದು ಸಾಮಾನ್ಯ.

ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಬಗೆ: ನೀರು, ಆಹಾರ, ಮತ್ತು ಕಾನ್ಟ್ಯಾಕ್ಟ್ (ಕಾಲೆರಾ ಹೇಗೆ ಹರಡುವುದೋ ಹಾಗೆ)

ಪೋಲಿಯೋ ಖಾಯಿಲೆ ಬರುವುದು ಮನುಷ್ಯರಿಗೆ ಮಾತ್ರ( ಅಂದರೆ ಬೇರೆ ಪ್ರಾಣಿಗಳಲ್ಲಿ ಇದು ರೋಗವಾಗಿ ಪರಿಣಮಿಸುವುದಿಲ್ಲ) . ಇದು ನ್ಯೂರೋಮಸ್ಕ್ಯುಲಾರ್ ಜಂಕ್ಶನ್ ಗೆ ಗಾಯ ಮಾಡುವುದರಿಂದ ಮನುಷ್ಯನ ಹೈಲಿ ಇವಾಲ್ವ್ಡ್ ಬ್ರೈನ್ ಇದಕ್ಕೆ ಕಾರಣವಿರಬೇಕಾ?

ಪೋಲಿಯೋ ಒಟ್ಟು ೪- ಡೋಸುಗಳು

ಸುಮಾರು ೨-ತಿಂಗಳ ವಯಸ್ಸಲ್ಲಿ--ಮೊದಲನೆಯ ಡೋಸ್ ಕೊಡಲಾಗುವುದು
ಸುಮಾರು ೪-ತಿಂಗಳ ವಯಸ್ಸಲ್ಲಿ--ಎರಡನೆಯ ಡೋಸ್ ಕೊಡಲಾಗುವುದು
ಸುಮಾರು ೬ -ತಿಂಗಳಿಂದ ೧೮- ತಿಂಗಳ ವಯಸ್ಸಿನಲ್ಲಿ ಮೂರನೆಯ ಡೋಸ್ ಕೊಡಲಾಗುವುದು
೪ ರಿಂದ ೬ ವರ್ಷದ ವಯಸ್ಸಿನಲ್ಲಿ , ಸ್ಕೂಲ್ಗೆ ಹೋಗುವ ಮೊದಲು ನಾಲ್ಕನೆಯ ಡೋಸ್ ಕೊಡಲಾಗುವುದು.

ನಾನು ಮೇಲೆ ಹೇಳಿದಂತೆ, ಅಮೇರಿಕಾದಲ್ಲಿ "ಐ.ಪಿ.ವಿ." ಪೋಲಿಯೋ ವ್ಯಾಕ್ಸಿನ್ ನ ಉಪಯೋಗಿಸುತ್ತಿದ್ದೇವೆ.
ಓ.ಪಿ.ವಿ. ಪೋಲಿಯೋ ವ್ಯಾಕ್ಸಿನ್ ಯಿಂದ ಬರುವ ಒಂದು ದುಷ್ಪರಿಣಾಮ ಎಂದರೆ "ವಿ.ಏ.ಪಿ.ಪಿ." ಅಂದರೆ ವ್ಯಾಕ್ಸಿನ್ ಅಸೋಸಿಏಟೆಡ್ ಪ್ಯರಲಿಟಿಕ್ ಪೋಲಿಯೋ, ಇದರ ಸಂಭವ --ಒಂದು ಕೇಸು ೨.೪ ಮಿಲಿಯನ್ ಡೋಸ್ಗಳಲ್ಲಿ. ಇದು ಪೋಲಿಯೋ ರೋಗದಿಂದ ಉಂಟಾಗಬಹುದಾದ ಪರಲಿಟಿಕ್ ಪೋಲಿಯೋ ಗೆ ಹೋಲಿಸಿದರೆ, ತುಂಬಾ ತುಂಬಾ ಸಣ್ಣ (ಮೈಕ್ರೊ) ಪ್ರಮಾಣದಾಗಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಮೇಲಿರುವ ಕೊಂಡಿ ಮತ್ತು ತಾಣಗಳಲ್ಲಿ ಪಡೆಯಬಹುದು. (ಅಂಕಿ-ಅಂಶಗಳಿಗೆ, ಇತ್ಯಾದಿ )
ಐ.ಪಿ.ವಿ. ಪೋಲಿಯೋ ಲಸಿಕೆಯಿಂದ ಯಾವುದೇ ದೊಡ್ಡ ದುಷ್ಪರಿಣಾಮಗಳು ಇಲ್ಲ, ಕೆಲವು ಸಲ ಚುಚ್ಚಿದ ಕಡೆ ಸ್ವಲ್ಪ ನೋವು ಮತ್ತು ಕೆಂಪಗೆ , ಸೋರ್ ಆಗುವುದು ಬಿಟ್ಟರೆ.( ಐ.ಪಿ. ವಿ. ಯನ್ನು ಸಬ್ಕ್ಯುಟೇನಿಯಸ್ ಟಿಶ್ಯುಗೆ ಇಂಜೆಕ್ಶನ್ ಮೂಲಕ ಕೊಡಲಾಗುವುದು)

ವ್ಯಾಕ್ಸಿನ್ ಹಾಕಿಸಬೇಕೇ? ಬಾರದೇ?

ನಾನು ನಿಮ್ಮ ಜಾಗದಲ್ಲಿದ್ದರೆ, ನನ್ನ (ನಾನು ನಂಬಿದ) ಮಗುವಿನ ವೈದ್ಯರಲ್ಲಿ ಎಲ್ಲ ಮಾಹಿತಿಯನ್ನು ಪಡೆದು ಅವರ ಅನಿಸಿಕೆಯನ್ನು ಕೇಳುತ್ತೇನೆ. ಅವರು ಹಾಕಿಸುವುದು ಒಳಿತು ಎಂದರೆ, ಖಂಡಿತಾ ಹಾಕಿಸುತ್ತೇನೆ ( ಯಾವ ವೈದ್ಯರೂ ಮಗುವಿನ ಆರೋಗ್ಯದ ವಿರುದ್ಧ ಸಲಹೆಯನ್ನು ಕೊಡುವುದಿಲ್ಲ ಅಂತ ಖಚಿತವಾಗಿ ಹೇಳುತ್ತೇನೆ. ಫಸ್ಟ್ ಡೂ ನೋ ಹಾರ್ಮ್ ಅಂತ ಹಿಪೋಕ್ರಟಿಕ್ ಓತ್ ತೆಗೆದುಕೊಂಡ ಮೇಲೆ, ಸಹಾಯಮಾಡಲಾಗದಿದ್ದಾಗ, ಬೇರೇ ವೈದ್ಯರ ಹತ್ತಿರ ನಾವೇ ಕಳಿಸುತ್ತೇವೆ. ಆದರೆ ಆರೋಗ್ಯಕ್ಕೆ ಹಾನಿಯಾಗುವ ಸಲಹೆಯನ್ನು ಖಂಡಿತಾ ಕೊಡುವುದಿಲ್ಲ--ಇದು ನನ್ನ ಅಭಿಪ್ರಾಯ). ಒಂದು ವೇಳೇ ನಿಮ್ಮ ಮಗುವಿನ ವೈದ್ಯರು "ಲಸಿಕೆಯ ವಿರುದ್ಧ ಅಭಿಪ್ರಾಯ ಪಟ್ಟರೆ", ನಿಮಗೆ ಲಸಿಕೆಯಲ್ಲಿ ನಂಬಿಕೆ ಇದ್ದರೆ, ಸೆಕೆಂಡ್ ಒಪೀನಿಯನ್ ( ಇನ್ನೊಬ್ಬ ವೈದ್ಯರಲ್ಲಿ ಸಲಹೆ) ತೆಗೆದುಕೊಂಡು ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು.

( ಕಳೆದ ಲೇಖನದಲ್ಲಿ ಇದು ಬರೆಯುವುದು ಮರೆತಿದ್ದೆ.---ಡಿಕ್ಲರೇಶನ್---"ನನಗೆ ಯಾವುದೇ ಲಸಿಕೆ ಮಾಡುವ ಸಂಸ್ಥೆಗಳ ಜೊತೆ ಆರ್ಥಿಕ ಸಂಬಂಧ (ಅರ್ಥಾತ್ ಹಣಪಡೆಯುವುದು, ಗ್ರಾಂಟ್ ಪಡೆಯುವುದು, ಇತ್ಯಾದಿ) ಯಾವುದೇ ರೀತಿಯಲ್ಲಿ ಇಲ್ಲ".)

Rating
No votes yet