ಮನಸ್ಸು...

ಮನಸ್ಸು...

ಬರಹ

ಮನಸ್ಸೆಂಬ ಕೊಳದಲ್ಲಿ ಬಿದ್ದಿದೆ,

ಒಂದು ಸಣ್ಣ ಹನಿ...!

ಆ ಹನಿಯೆಂಬುದು ಸಂಶಯ, ಖುಷಿ, ಅಳು, ನಗು ಎಂಬ ಚಿಕ್ಕ ಹನಿ...!

ಹನಿ ಎಷ್ಟೇ ಗಾತ್ರವಿದ್ದರೂ ಸರಿ,

ಬಿದ್ದ ಕೊಳದಲಿ ಮೂಡದೆ ಬಿಡದು ಅಲೆಗಳ ಸುರಳಿ...

ಸುರಳಿ ಅದಷ್ಟು ದೊಡ್ಡದು,

ಕಲಕುವುದು ಕೊಳದ ನೀರು ಹೆಚ್ಚು-ಹೆಚ್ಚು!

ಹಾಗೇ ನಮ್ಮ ಮನದ ಕೊಳದಲಿ ಬಿದ್ದರೆ ದುಃಖದ/ಕಷ್ಟದ ಹನಿ...

ಆಗ ಏಳುವ ನೋವಿನ ಬ್ರುಹತ್ ಅಲೆಗಳೇ ಹೆಚ್ಚು...!

ಪಡುವುದು ಈ ಮನಸ್ಸು ಇಲ್ಲದ ಕೊರಗಿನ ದುಗದಿ...

ಆದರೂ...

ಇರದೇ ಇರುವುದೇ ಎಂದಾದರೂ ಸವಿ ಕ್ಷಣದ ಸಿಹಿ...

ಬಿದ್ದರೆ ಸಾಕು ಕೆಲವೇ-ಕೆಲವು ಹನಿ...

ಅದು ಮಾಡುವುದು ಅಂದು ಮನಸ್ಸು ತಿಳಿ-ತಿಳಿ....