ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸುಟ್ಟ ನವಿಲುಗಳ ದುರ್ವಾಸನೆಯಿಂದ ಕಂಪಿಸಿದ ಏಲಕ್ಕಿ ಕಂಪಿನ ನಾಡು.

ಏಲಕ್ಕಿ ಕಂಪಿನ ಹಾಗು ಏಲಕ್ಕಿ ಹಾರಗಳ ಸೊಂಪಿನ ನಾಡು ಹಾವೇರಿ. ಈಗ ಆ ಕಂಪಿನ ಬದಲು ಸುಟ್ಟುಕೊಂಡು ಸತ್ತ ನವಿಲುಗಳ ದುರ್ವಾಸನೆ ಅಲ್ಲಿ ಮನೆಮಾಡಿದೆ. ಈ ದುರ್ಘಟನೆಯಿಂದ ನೇಗಿಲಯೋಗಿ ತೀವ್ರ ಮನನೊಂದಿದ್ದಾನೆ. ಅಪರೋಕ್ಷವಾಗಿ ಈ ಘಟನೆಗೆ ತಾನೇ ಕಾರಣ ಎಂದು ಆತ ಮನಗಂಡಿರಲೂ ಸಾಕು. ೨೩ ಎಕರೆಯಲ್ಲಿ ಬೆಳೆದು, ೩ ಬಣಿವೆಗಳಲ್ಲಿ ಒಟ್ಟಲಾಗಿದ್ದ ಸೋಯಾಬಿನ್ ಬೆಳೆಗೆ ರಾತ್ರಿಯ ವೇಳೆ ೮ ಕ್ಕೂ ಹೆಚ್ಚು ನವಿಲುಗಳು ಲಗ್ಗೆ ಇಟ್ಟಿವೆ. ಆಕಸ್ಮಿಕವಾಗಿ ಈ ಬಣಿವೆಗಳಿಗೆ ಆಗ ಬೆಂಕಿ ತಗುಲಿದೆ. ಕಾಳು ಹೆಕ್ಕುವ ಭರದಲ್ಲಿ ಅಪಾಯ ಲೆಕ್ಕಿಸದೇ ಝಳಕ್ಕೆ ಒಡ್ಡಿಕೊಂಡು ೩ ನವಿಲುಗಳು ಸಾವನ್ನಪ್ಪಿದರೆ, ಉಪಾಯಗಾಣದೇ ಬಣಿವೆಯ ಮಧ್ಯೆ ಸಿಕ್ಕಿಕೊಂಡ ೨ ನವಿಲುಗಳು ಹೃದಯ ವಿದ್ರಾವಕ ರೀತಿಯಲ್ಲಿ ಸುಟ್ಟು ಕರಕಲಾಗಿ ಅಸುನೀಗಿವೆ.

ಈ ಮನಕಲಕುವ ಘಟನೆ ಜರುಗಿದ್ದು ಹಾವೇರಿ ಜಿಲ್ಲೆಯ, ಶಿಗ್ಗಾಂವಿ ತಾಲೂಕಿನ ಬನ್ನೂರು ಗ್ರಾಮದಲ್ಲಿ. ಕಳೆದ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಶನಿವಾರ ಮಾಧ್ಯಮಗಳ ಗಮನಕ್ಕೆ ಬಂದಿದೆ. ಕೆಲ ಪತ್ರಿಕೆಗಳು ಈ ಘಟನೆಯ ಕುರಿತು ವರದಿ ಮಾಡಿವೆ. ಆದರೆ ಆ ವರದಿ ಹಾವೇರಿ ಆವೃತ್ತಿಗೆ ಮಾತ್ರ ಸೀಮಿತಗೊಳಿಸಿ ‘ಹೈಲಿ ಲೋಕಲೈಸ್ಡ್’ ಪ್ರಾಮುಖ್ಯತೆ ನೀಡಿ ಪ್ರಕಟಿಸಿವೆ. ರಾಷ್ಟ್ರಪಕ್ಷಿಗಳು ಬೆಂಕಿ ಆಕಸ್ಮಿಕದಲ್ಲಿ ಅಸುನೀಗಿದ ಸುದ್ದಿ ರಾಜ್ಯದ ಉಳಿದ ಭಾಗದ ಜನರಿಗೆ ‘ಅಪತ್ರಿಕಾ ವಾರ್ತೆ’ ಎಂದು ‘ಇವರೇ’ ಓದುಗರ ಪರವಾಗಿ ನಿರ್ಧರಿಸಿಬಿಟ್ಟಿದ್ದಾರೆ! ಹಾಗಾಗಿ ಈ ಸುದ್ದಿಯ ‘ಫಾಲೋ ಅಪ್’ ನಾವಂತೂ ನಿರೀಕ್ಷಿಸುವಂತಿಲ್ಲ!

ಕತ್ತರಿ-ಬಂಧ

ಮೊನ್ನೆ ದೇವಸ್ಥಾನಕ್ಕೆ ಹೋಗಿ ಹಿಂತಿರುಗುತ್ತಿದ್ದೆ. ಬರುವಾಗ ಒಬ್ಬ ತಾಯಿ ತನ್ನ ಮಗುವನ್ನೆತ್ತಿಕೊಂಡು ಹಿಂತಿರುಗುತ್ತಿದ್ದಳು. ಸುಮಾರು 3-4 ವರುಷದ ದಷ್ಟ ಪುಷ್ಟವಾಗಿಯೇ ಬೆಳೆದಿದ್ದ ಮಗು 'ಚಾಕೀ...ಚಾಕೀ....' ಎಂದು ಜೋರಾಗಿ ಅಳುತ್ತಾ ರಂಪಾಟ ಮಾಡುತ್ತಿತ್ತು.

ಓದಿದ್ದು ಕೇಳಿದ್ದು ನೋಡಿದ್ದು-166 ನಿಟ್ಟೆ ಗ್ನು/ಲಿನಕ್ಸ್ ಹಬ್ಬ

ಗ್ನು/ಲಿನಕ್ಸ್ ಹಬ್ಬದ ಮೂರನೇಯ ಆವೃತ್ತಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಿತು.ಲಿನಕ್ಸ್ ಹಬ್ಬ ನಡೆದ ಸಭಾಂಗಣದ ಹೆಸರೇ ಸಂಭ್ರಮ! ನೂರೆಪ್ಪತ್ತೈದರಷ್ಟು ಜನ(ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳು) ನೋಂದಾಯಿಸಿಕೊಂಡರು.

ದೇವರು-ಜಾತಿ-ಧರ್ಮ - ಭಾಗ ೨

Saturday, February 7, 2009
ದೇವರು-ಜಾತಿ--ಧರ್ಮ-ಆಚಾರ -- ಭಾಗ ೨
ನನ್ನ ೧೫ ವರ್ಷದ ತನಕ ನಾನು ದೇವರನ್ನು ನ೦ಬಿದ್ದೆ,ರಾಮಾಯಣ,ಮಹಾಭಾರತ,ದ್ವೈತ,ಅದ್ವೈತ ಮು೦ತಾದ ಸಿದ್ಧಾ೦ತಗಳನ್ನು ಉತ್ಸುಕತೆ ಮತ್ತು ನಿಷ್ಟೆಯಿ೦ದ ಓದುತ್ತಿದ್ದೆ. ಕ್ರಮೇಣ ನನ್ನ ವಿವೇಚನಾಪೂರಿತ ಮನಸ್ಸು ಇದು ಸರಿಯಲ್ಲ ಎ೦ದು ತೀರ್ಮಾನಿಸಿತು.

ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ


ನಾನು ಕವಿಯಲ್ಲ. ಆಗಾಗ ಪದ್ಯ ಬರೆಯುವ ಪ್ರಯತ್ನ ಮಾಡುತ್ತೇನಾದರೂ ಕೂಡ. ಏಕೆಂದರೆ ಕವಿಯಾಗಲು ಬೇಕಾದ ಕಾವ್ಯದ ವಿಸ್ತೃತ ಓದು, ಶ್ರದ್ಧೆಯ ಕೊರತೆ ನನ್ನಲ್ಲಿ ನನಗೇ ಕಂಡಿದೆ. ಆದರೆ ಅಡಿಗರು ಹೇಳುವಂತೆ ನನ್ನ ಪದ್ಯವನ್ನು ನಾನೇ ವಿಮರ್ಶೆಗೆ ಒಡ್ಡಿಕೊಳ್ಳುವುದು ಅಗತ್ಯ ಎಂದು ಬಗೆಯುತ್ತೇನೆ. ಕೆಲವೊಮ್ಮೆ ಪದ್ಯ ಸೊರಗುವಷ್ಟು ಅದನ್ನು ತಿದ್ದುತ್ತೇನೆ ಕೂಡ.

ಕೆಂಡಸಂಪಿಗೆಯಲ್ಲಿ ಯು.ಆರ್‍.ಅನಂತಮೂರ್ತಿ ಅನುವಾದಿಸಿದ ಈ ಒಂದು ಪದ್ಯ ಓದಿದೆ. ಪದ್ಯ ವಿಲಕ್ಷಣವಾಗಿ ಸೆಳೆಯಿತು. ಆದರೆ ಅನುವಾದ ಯಾಕೋ ಸರಿ ಅನಿಸಲಿಲ್ಲ. ಮೂಲವನ್ನು ಹುಡುಕಿ ಓದಿದೆ.

ಆಗಾಗ ಪದ್ಯ ಸುಲಭದಲ್ಲಿ ದಕ್ಕದೇ ಹೋದಾಗ ಕನ್ನಡಕ್ಕೆ ಅನುವಾದಿಸಿಕೊಂಡು ಓದುವ ಪ್ರಯತ್ನ ಮಾಡುತ್ತೇನೆ. ಟೈಮಿದ್ದರೆ ವಿಸ್ತೃತವಾಗಿ. ಇಲ್ಲದಿದ್ದರೆ ಕೆಲವು ಸಾಲುಗಳನ್ನು ಮನಸ್ಸಲ್ಲೆ ಅನುವಾದಿಸಿಕೊಳ್ಳುತ್ತೇನೆ. ಆಗ ಪದ್ಯದ ಸಾರ ನಿಚ್ಚಳವಾಗುತ್ತಾ, ಜತೆಜತೆಗೆ ಮೂಲ ಕವಿಯ ಕುಸುರಿ ಕೆಲಸ ತೆರೆದುಕೊಳ್ಳುತ್ತಾ ಹೋಗುತ್ತದೆ.

ಯತ್ರ ನಾರ್ಯಸ್ತು ಪೂಜ್ಯಂತೆ....

ಇತ್ತೀಚಿನ ಎಲ್ಲ ಘಟನಾವಳಿಗಳು - ಸ್ಲಮ್ ಡಾಗ್ ನ ಭಾರತ, ಮಂಗಳೂರಿನ ಪಬ್ ಧಾಳಿ ಪ್ರಕರಣ, 'ಪಬ್ ಭರೋ' ಹೇಳಿಕೆ... ಅಬ್ಬಬ್ಬಾ! ಎಲ್ಲಿದ್ದೇವೆ ನಾವು? ಎತ್ತ ಸಾಗುತ್ತಿದ್ದೇವೆ?

ದೇವರು-ಜಾತಿ-ಧರ್ಮ ಭಾಗ ೧

ಪ್ರತೀ ಜನಾ೦ಗದವರೂ ದೇವರ ಬಗ್ಗೆ ಬೇರೆ ಕಲ್ಪನೆ ಇಟ್ಟಿದ್ದಾರೆ.ನಮ್ಮ ಕಲ್ಪನೆಯೆ ಸರಿ ಅವರದು ತಪ್ಪು ಎನ್ನುವುದು ಮೂರ್ಖತನ, ಹಾಗೆಯೆ ಅವರದು ಸರಿ ನಮ್ಮದು ತಪ್ಪು ಅನ್ನುವುದು ಅಷ್ಟೇ ಮೂರ್ಖತನ, ವಾಸ್ತವವೆ೦ದರೆ ಮೊದಲೆ ಹೇಳಿದ೦ತೆ,ದೇವರು ಒ೦ದು ಕಲ್ಪನೆ. ಮನುಷ್ಯನ ಭಯಕ್ಕೆ ಸಾ೦ತ್ವಾನ ನೀಡುವ ಕಲ್ಪನೆ.

ಅಸಮರ್ಥರ ಕೈಯಲ್ಲಿ ಕರ್ನಾಟಕ

ಊರು ಸೂರೆ ಹೋದ ನಂತರ ದಿಡ್ಡಿ ಬಾಗಿಲು ಹಾಕಿದರಂತೆ ಎಂಬ ಮಾತಿಗೆ ಉದಾಹರಣೆ ಬೇಕಾದರೆ ಬೆಂಗಳೂರು ಪೊಲೀಸರನ್ನು ನೋಡಬಹುದು.

ಬೆಂಗಳೂರು ಸ್ಫೋಟ ಸಂಭವಿಸಿ ಆರು ತಿಂಗಳ ಮೇಲಾಯಿತು. ಜುಲೈ ಕೊನೆಯ ವಾರದಲ್ಲಿ, ಅಂದರೆ ೨೫ನೇ ತಾರೀಖು ಸಂಭವಿಸಿದ ಸರಣಿ ಸ್ಫೋಟಗಳಲ್ಲಿ ಒಬ್ಬ ಮಹಿಳೆ ಸತ್ತು ನಾಲ್ವರು ಗಾಯಗೊಂಡರು. ಅವರ ಪೈಕಿ ಇನ್ನೊಬ್ಬರು ನಂತರ ತೀರಿಕೊಂಡರು.

ಆಗ ಮಾಧ್ಯಮದಲ್ಲಿ ಹೇಳಿಕೆ ವೀರರದೇ ಪ್ರತಾಪ. ಇದು ಬಿಜೆಪಿ ಸರ್ಕಾರದ ವಿರುದ್ಧ ಹೂಡಿರುವ ಕುತಂತ್ರ ಎಂಬರ್ಥದ ಹೇಳಿಕೆಗಳು ಆಡಳಿತರೂಢ ಪಕ್ಷದಿಂದ ಬಂದವು. ಸವಾಲು ಎದುರಿಸಲು ಪೊಲೀಸ್‌ ವ್ಯವಸ್ಥೆ ಸಮರ್ಥವಾಗಿದೆ ಎಂದು ಪೇಷಂಟ್‌ನಂತಿರುವ ಗೃಹ ಸಚಿವ ಡಾ. ವಿ.ಎಸ್‌. ಆಚಾರ್ಯ ಹೇಳಿಕೆ ಕೊಟ್ಟರು. ಕೇಂದ್ರದ ತನಿಖಾ ತಂಡಗಳು ಧಾವಿಸಿ ಬಂದವು. 

ಬೀಜಾಮೃತ: ಬಿತ್ತನೆ ಬೀಜಗಳಿಗೆ ಅಮೃತ (ರೈತರೇ ಬದುಕಲು ಕಲಿಯಿರಿ-೧೩)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಎಲ್ಲಕ್ಕೂ ಮೂಲ ಎಂದರೆ ಬಿತ್ತನೆ ಮತ್ತು ಬಿತ್ತನೆ ಬೀಜಗಳಿಗೆ ಮಾಡಬೇಕಾದ ಪ್ರಥಮ ಉಪಚಾರ.