ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾರತದಲ್ಲಿ ಜಾತ್ಯತೀತನಾಗಿರೋದು ಹೇಗೆ?

ಇಲ್ಲಿ ಅಮೇರಿಕದಲ್ಲಿ ನಾನು ಯಾವ ಜಾತಿಯೆಂದು ಕೇಳುವವರು ವಿರಳ. ನಾನು ಯಾವುದೇ ಹಬ್ಬ ಆಚರಿಸದೆ, ಯಾವುದೇ ಸಂಪ್ರದಾಯಕ್ಕೆ ಒಳಗಾಗದೆ ನನ್ನ ಇಡೀ ಜೀವಮಾನ ಇಲ್ಲಿ ಕಳೆಯಬಲ್ಲೆ. ಹೀಗಾಗಿ ನನಗೆ ಯಾವುದೇ ಜಾತಿಯಿಲ್ಲ ಎಂದು ಹೇಳಿಕೊಳ್ಳುವುದು ಇಲ್ಲಿ ಸುಲಭ.

ಆದರೆ ಭಾರತದಲ್ಲಿ ಜಾತಿಯನ್ನು ಮೀರಿ ಬದುಕುವುದು ಸುಲಭವೆ?

ಹೊಸ ವರ್ಷದ ಹಾರೈಕೆಗಳು

ಸಂಪದದ ಎಲ್ಲಾ ಮಿತ್ರರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು...

ಈ ವರ್ಷದಲ್ಲಿ ನಿಮ್ಮ ಎಲ್ಲಾ ಕನಸುಗಳು, ಆಸೆ ಆಕಾಂಕ್ಷೆಗಳು ಈಡೇರಲಿ ಎಂದು ಹಾರೈಸುವೆ...

ಕನ್ನಡಿಗರ ಅಜ್ಞಾನ

ಪೊನ್ನಂಪೇಟೆಯ ಮೂಲಕ ಹಾಸನ-ಎರ್ನಾಕುಲಂ ಬಸ್ ಹೋಗುತ್ತದೆ. ಆ ಬಸ್ಸಿನ ಮಾರ್ಗಫಲಕದಲ್ಲಿ ಕೋೞಿಕೋಡು ಎಂಬುದನ್ನು ಮಲೆಯಾಳಿಗಳು ಇಂಗ್ಲಿಷಿನಲ್ಲಿ kozhikode (കോഴിക്കോട്) ಕನ್ನಡಿಗರು ಅದು ’ೞ’ ಎಂದು ತಿಳಿಯದೆ ಹಾಗೂ ಕನ್ನಡದಲ್ಲಿ ಈ ಅಕ್ಷರವಿರುವುದನ್ನು ಗಮನಿಸದೆ ಕೊಜ಼ಿಕೋಡ್ ಎಂದು ಬರೆಯುತ್ತಿದ್ದಾರೆ. ಇದಕ್ಕೆ ಕಾರಣ ಕನ್ನಡಿಗರ ಅಜ್ಞಾನವೇ ಆಗಿದೆ.

ಘಜನಿ-ರಜನಿಗಳ ದಾಳಿ ಹಿಮ್ಮೆಟ್ಟಲಿ!

"ಚಲನ ಚಿತ್ರ" ವೆಂಬ ಮನರಂಜನೆ, ಸರ್ವ ಜನರನ್ನೂ ಪ್ರಭಾವಕ್ಕೊಳಪಡಿಸಿರುವ ಬಹು ದೊಡ್ಡ ಮಾಧ್ಯಮ! ಹಲವು ಭಾಷೆಗಳ ಒಕ್ಕೂಟದ ಭಾರತದಲ್ಲಿ ಆಯಾ ಭಾಷೆಯ ಚಲನಚಿತ್ರಗಳು ಮನರಂಜನೆಯ ಜತೆಗೆ ಆಯಾ ರಾಜ್ಯದ ನಡೆ-ನುಡಿ-ಆಚಾರ-ವಿಚಾರ-ಸಂಪ್ರದಾಯಗಳನ್ನು ಪ್ರತಿಪಾದಿಸಿ ಜನರಲ್ಲಿ ತಮ್ಮ ಪ್ರದೇಶ-ಜನಾಂಗ-ಮತ್ತು ಭಾಷೆಯ ಬಗ್ಗೆ ಸ್ವಾಭಿಮಾನವನ್ನು ಹುಟ್ಟು ಹಾಕಿರುವ ಪ್ರಬಲ ಮಾಧ್ಯಮ.

ಅಕ್ಷರದಲ್ಲಿ ಆಟ

ಈ ಪ್ರಸಂಗ ಎಲ್ಲಿಯದು ಎಂದು ಮರೆತಿರುವೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎಂತಹ ಚಮತ್ಕಾರಗಳಿರುತ್ತವೆ! ಎಂಬುದನ್ನು ಇಲ್ಲಿ ನೋಡಿ. ಈ ವಾಕ್ಯ ಓದಿ...
"ದನವ ಕಡಿದು ಕಡಿದು ಗುಡಿಗೆ ತುಂಬಿದರು"
- ಇಂದಿನ ದಿನಗಳಲ್ಲಿ ಇಷ್ಟನ್ನೇ ಓದಿದರೆ ಎಂತಹ ಆಭಾಸ ವಾಗುತ್ತೆ, ಅಲ್ವಾ?

ಸುಸ್ವಾಗತ

ಸುಸ್ವಾಗತ.

ಪ್ರತೀ ಬೆಳಗೂ ಹೊಸವರ್ಷವಾಗಲಿ
ಪ್ರತೀ ರಾತ್ರಿಯೂ ಹೊಸ ಕನಸ ತರಲಿ
ಪ್ರತೀ ಅಳುವೂ ಹೊಸ ನಗುವ ಮೂಡಿಸಲಿ
ಪ್ರತೀ ಹೂವು ಹೊಸ ಗಂಧ ಸೂಸಲಿ.

ನಾಳೆಗಳೆಲ್ಲ ನಮ್ಮದೆನ್ನುವ
ನಿನ್ನೆಗಳೆಲ್ಲ ಪಾಠವಾಗಲಿ
ಹರಿದ ರಕ್ತದಲೆ ಮತ್ತೆ ಬರದಿರಲಿ
ಶಾಂತಿ ನೆಮ್ಮದಿ ಇಲ್ಲಿ ನೆಲೆಸಲಿ.

ಭಾರ ಮನದಲಿ ಮತ್ತೆ ಬಂದಿದೆ

ಹೊಸ ವರ್ಷ

ನೆನ್ನೆ ಸಂಜೆ ಹೊರಗೆಲ್ಲೋ ಹೋಗಿದ್ದಾಗ ಯಾರೋ ಇಬ್ಬರ ಸಂಭಾಷಣೆ ಕಿವಿಗೆ ಬಿತ್ತು. ಒಬ್ಬ ಹೇಳುತ್ತಿದ್ದ "ಇನ್ನೊಂದು ದಿನದಲ್ಲಿ ಈ ವರ್ಷ ಮುಗಿದು ಹೋಗುತ್ತೆ, ಸದ್ಯ. ಆಮೇಲೆ ಎಲ್ಲ ಸರಿ ಹೋಗುತ್ತೆ". ಅದಕ್ಕೆ ಇನ್ನೊಬ್ಬ ದನಿಗೂಡಿಸಿದ "ಖಂಡಿತ ನಿಜ". ಮುಂದಿನ ಮಾತು ನನಗೆ ಬೇಕಿರಲಿಲ್ಲ. ನನಗೆ ಇದು ತೀರಾ ಅತಿ ಅಶಾವಾದಿತನ ಅನ್ನಿಸಿತು.