ಭಾರತದಲ್ಲಿ ಜಾತ್ಯತೀತನಾಗಿರೋದು ಹೇಗೆ?

ಭಾರತದಲ್ಲಿ ಜಾತ್ಯತೀತನಾಗಿರೋದು ಹೇಗೆ?

ಇಲ್ಲಿ ಅಮೇರಿಕದಲ್ಲಿ ನಾನು ಯಾವ ಜಾತಿಯೆಂದು ಕೇಳುವವರು ವಿರಳ. ನಾನು ಯಾವುದೇ ಹಬ್ಬ ಆಚರಿಸದೆ, ಯಾವುದೇ ಸಂಪ್ರದಾಯಕ್ಕೆ ಒಳಗಾಗದೆ ನನ್ನ ಇಡೀ ಜೀವಮಾನ ಇಲ್ಲಿ ಕಳೆಯಬಲ್ಲೆ. ಹೀಗಾಗಿ ನನಗೆ ಯಾವುದೇ ಜಾತಿಯಿಲ್ಲ ಎಂದು ಹೇಳಿಕೊಳ್ಳುವುದು ಇಲ್ಲಿ ಸುಲಭ.

ಆದರೆ ಭಾರತದಲ್ಲಿ ಜಾತಿಯನ್ನು ಮೀರಿ ಬದುಕುವುದು ಸುಲಭವೆ?

ನಾನು "ಬುದ್ಧಿಜೀವಿ"ಯಾಗದೆ ಒಬ್ಬ ಸಾಮಾನ್ಯ ಭಾರತೀಯ ಪ್ರಜೆಯಾದರೆ, ಈ ಜಾತಿಯನ್ನು ಹೇಗೆ ಬಿಡುವುದು? ಬೀದಿ, ಬೀದಿಯಲ್ಲಿ ಹಬ್ಬದ ವಾತಾವರಣ, ನೆರೆಹೊರೆಯಲ್ಲಿ ಸಂಭ್ರಮ ಇದ್ದಾಗ ನಾನು ಇದೆಲ್ಲ ಆಚರಿಸೊಲ್ಲ, ನನಗೆ ಜಾತಿ ಬೇಡ ಎಂದು ಕೂರಲು ಹೇಗಾಗುತ್ತೆ? ಯಾವುದೇ ಹಬ್ಬ ಮಾಡದೆ, ಯಾವ ದೇವರಿಗೂ ಕೈ ಮುಗಿಯದೆ, ವಿಚಿತ್ರ ಪ್ರಾಣಿಯ ಹಾಗೆ ಬದುಕಬೇಕು. ಇಲ್ಲ, ಎಲ್ಲ ಹಬ್ಬಗಳನ್ನೂ, ಅಂದ್ರೆ, ಸಂಕ್ರಾಂತಿಯಿಂದ ಹಿಡಿದು, ರಮ್ಜಾನ್ ಮತ್ತು ಕ್ರಿಸ್ಮಸ್ ವರೆಗೂ ಎಲ್ಲವನ್ನೂ ಆಚರಿಸುತ್ತ ಇರಬೇಕು. ಎರಡನೆಯದು ಮಾಡಿದರೆ, ಕೆಲಸಕ್ಕೆ ಹೋಗಲು ಸಮಯವೇ ಇರುವುದಿಲ್ಲವೆಂದು ನನ್ನ ಊಹೆ :-) ಸರಿ, ಒಂದಷ್ಟು ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳೋದು. ಇವರ ಹಬ್ಬಗಳಿಗೆಲ್ಲ ಇವರ ಜೊತೆಗೂಡಿ, ಹಿಂದುವಾಗಿ ಸಿಹಿ ತಿಂದು, ಮುಸ್ಲಿಂ ಕೇರಿಯಲ್ಲಿ ಮಟನ್ ತಿಂದು, ಕ್ರಿಸ್ಮಸ್ ದಿವಸ ಕೇಕ್ ತಿನ್ನುವುದನ್ನೇ ವೃತ್ತಿಯಾಗಿ ಮಾಡಿಕೊಳ್ಳುವುದು! ಮತ್ತೆ, ಇದು, ಸಿಖ್ಖ್, ಮತ್ತು ನನಗೆ ಗೊತ್ತಿರದ ಬೇರೆ ಜಾತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ನನ್ನ ಎಣಿಕೆ. ಅವುಗಳೂ ಸೇರಿದರೆ ೩೬೫ ದಿವಸವೂ ಊಟಕ್ಕೆ ಕೊರತೆಯಿಲ್ಲ :-) ಹೀಗೆ ಮಾಡುತ್ತಿರುವ ಜಾತ್ಯತೀತರು ನಿಮಗ್ಯಾರಿಗಾದರೂ ಗೊತ್ತ? ;-)

ಮೇಲಿನದು ಬರೆದು ಪೋಶ್ಟಿಸಿದ ಮೇಲೆ ಹೊಳೆಯಿತು. ಭಾರತದಲ್ಲಿ ತಮಗೆ ಜಾತಿ ಇಲ್ಲವೆಂದು ಘೋಷಿಸುವವರು ಬುದ್ಧಿಜೀವಿಗಳು ಮತ್ತು ಎಲ್ಲರ ಜಾತಿಯೂ ತಮ್ಮದೆನ್ನುವಂತೆ ಬದುಕುವವರು ಭಿಕ್ಷುಕರು. ಇದರಲ್ಲಿ ನೀವ್ಯಾರು? :-)

Rating
No votes yet

Comments