ಹೊಸ ವರ್ಷ
ನೆನ್ನೆ ಸಂಜೆ ಹೊರಗೆಲ್ಲೋ ಹೋಗಿದ್ದಾಗ ಯಾರೋ ಇಬ್ಬರ ಸಂಭಾಷಣೆ ಕಿವಿಗೆ ಬಿತ್ತು. ಒಬ್ಬ ಹೇಳುತ್ತಿದ್ದ "ಇನ್ನೊಂದು ದಿನದಲ್ಲಿ ಈ ವರ್ಷ ಮುಗಿದು ಹೋಗುತ್ತೆ, ಸದ್ಯ. ಆಮೇಲೆ ಎಲ್ಲ ಸರಿ ಹೋಗುತ್ತೆ". ಅದಕ್ಕೆ ಇನ್ನೊಬ್ಬ ದನಿಗೂಡಿಸಿದ "ಖಂಡಿತ ನಿಜ". ಮುಂದಿನ ಮಾತು ನನಗೆ ಬೇಕಿರಲಿಲ್ಲ. ನನಗೆ ಇದು ತೀರಾ ಅತಿ ಅಶಾವಾದಿತನ ಅನ್ನಿಸಿತು. ಒಂದು ದಿನದಲ್ಲಿ ಎಲ್ಲ ಸಮಸ್ಯೆಗಳೂ ಸರಿ ಹೋಗುತ್ತದೆಯೇ? ಯಾರೋ ಮಾಡಿದ ತಪ್ಪುಗಳಿಗೆ 2008 ಕ್ಕೆ ಕೆಟ್ಟ ಹೆಸರು ಬಂತು. 'ಕರಾಳ ವರ್ಷ' ಎಂಬ ಹಣೆ ಪಟ್ಟಿ. ಹೊಸ ವರ್ಷ ಬರುತ್ತಿದೆ ನಿಜ. ಹಾಗೆಂದ ಮಾತ್ರಕ್ಕೆ ... ನಾನೇನೂ ನಿರಾಶಾವಾದಿಯಲ್ಲ ... ಹೋಗಲಿ ಬಿಡಿ ... ಹೊಸ ವರ್ಷದ ಹೊಸ ದಿನ ನಾನೇಕೆ ಕೊಂಕು ನುಡಿಯಬೇಕು... ಎಲ್ಲರ ಜೀವನದಲ್ಲಿ ಬರಲಿರುವ ಹೊಸ ವರ್ಷ ಸುಖ ಶಾಂತಿ ನೆಮ್ಮದಿ ತರಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ.
ಹಲವಾರು ವಿಷಯಗಳಿಗೆ ಈ ಹೊಸತು ಹಳತು ಎಂಬ ಭೇದವಿಲ್ಲ... ಅದರಲ್ಲಿ ಕೆಲವು ಹೀಗಿದೆ ...
ಮುದ್ದಾದ ಮೊಲದ ಮರಿ ಮೂಲೆಯಲ್ಲಿ ಮುದುರಿ ಮಲಗಿತ್ತು
ಆನಂದದಿಂದ ಆಡುತ್ತಿದ್ದ ಆಡಿನಮರಿಗೆ ಆಯಾಸವಾಗಿತ್ತು
ಕರಿಮರದ ಕೊನೆಯ ಕೊಂಬೆಯಲ್ಲಿ ಕುಳಿತ ಕಾಗೆ ಕಾವೆಂದಿತ್ತು
ಹಸಿದ ಹುಲಿ ಹೊಂಚು ಹಾಕುತ್ತ ಹೊಳೆಯ ಹಾದಿ ಹಿಡಿದು ಹೊರಟಿತ್ತು
ನರನ ನಲ್ಮೆಯ ನೀಯತ್ತಿನ ನಂಬಿಕಸ್ತ ನಾಯಿ ನವಿರಾಗಿ ನಲುಗಿತ್ತು
ಕೊಕ್ಕಿನಲಿ ಕೆಮ್ಮಣ್ಣನು ಕುಕ್ಕುತ್ತ ಕೆಂಪು ಕೋಲಿ ಕತ್ತೆತ್ತಿ ಕೂಗಿತ್ತು
ಮುರುಕಲು ಮರದ ಮಂಚದ ಮೇಲೆ ಮಾದೇವಪ್ಪ ಮಲಗಿದ್ದ
ಬಿಮ್ಮನೆ ಬೀಗುತ್ತ ಭೀಮಣ್ಣ ಭಟ್ಟ ಬುಲೆಟ್ ಬಳಿ ಬಂದಿದ್ದ
ಬಳುಕುತ್ತ ಬಾಗುತ್ತ ಬದಿಯಿಂದ ಭಾಗೀರಥಿ ಬಂದಿದ್ದಳು
ಬಳುಕೋ ಬಳ್ಳಿಯ ಬಿನ್ನಾಣಕ್ಕೆ ಭೀಮಣ್ಣ ಬಾಯಿ ಬಿಟ್ಟಿದ್ದ
... ..... ..... ಹೀಗೇ ಸಾಗುತ್ತಿರಲಿ
Comments
ಉ: ಹೊಸ ವರ್ಷ