ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

’ಗಂಡುಹಕ್ಕಿ’, ಸ್ತ್ರೀಯರು, ಪ್ರಸ್ತುತ ಸಮಾಜ ಮತ್ತು ನಾನು.

ಕರ್ನಾಟಕ ಲೇಖಕಿಯರ ಸಂಘದಿಂದ ಪ್ರಕಟವಾದ "ಲೇಖಕಿಯರ ಸಣ್ಣ ಕತೆಗಳು-ಭಾಗ ೨" ರಲ್ಲಿ ಅಚ್ಚಾದ ಟಿ. ಸಿ. ಪೂರ್ಣಿಮಾರವರ "ಗಂಡುಹಕ್ಕಿಗೆ ರೆಕ್ಕೆ ಇಲ್ಲವೆ?" ಕತೆಯನ್ನು ಇತ್ತೀಚಿಗೆ ಓದಿದೆ. ಕತೆ ಅದ್ಭುತವಾಗಿದೆ.

ಒಂದು ಸತ್ಯ

ನೀನು ಬಡತನದಲ್ಲಿ ಹುಟ್ಟಿದ್ಧರೆ ತಪ್ಪ್ಪು ನಿನ್ನದಲ್ಲ ,ಬಡತನದಲ್ಲಿ ಸತ್ತರೆ ಅದು ನಿನ್ನ ತಪ್ಪು!...........

ಬದುಕು

"ಒಗಟಿನೊಳಗೊಂದು ಒಗಟು, ಮುಟ್ಟ ಹೋದಷ್ಟೂ ಜಿಗುಟು
ಬಿಚ್ಚ ಹೋದಷ್ಟೂ ಗಂಟು, ಬಿಡಿಸಬಲ್ಲನು ಅವನು
ಇದಕುತ್ತರವೇನು? "

"ಬದುಕು"........................... ನಿಜ, ಬದುಕು.

ಆತ್ಮ ಕಥೆ - ಭಾಗ ೨

ಇದು ಶಾಮಲರ ಪ್ರತಿಕ್ರಿಯೆಯನ್ನು ಕುರಿತ ಬರಹ. ಅವರ ಅನಿಸಿಕೆ ಹೀಗಿತ್ತು :
"ಹುಟ್ಟು ಆಕಸ್ಮಿಕ ಮತ್ತು ಹುಟ್ಟು ಆಕಸ್ಮಿಕ ಎನ್ನಲು ಒಂದು ಸರಳ ಆಧಾರ - ಸಾವಿರಾರು ವೀರ್ಯಕಣಗಳು ಅಂಡಾಶಯದತ್ತ ನುಗ್ಗಿದಾಗ ಯಾವುದೋ ಒಂದು ಫಲಿತವಾಗುವುದು. ಪ್ರಪಂಚದಲ್ಲಿ ಹೆಚ್ಚು ಮಂದಿ unplanned pregnancy ಫಲಿತಾಂಶ ತಾನೆ (ಕೊನೇ ಪಕ್ಷ ನಮ್ಮ ಪೀಳಿಗೆಗೆ ಸೇರಿದವರಲ್ಲಿ)? "

ಓ ಪ್ರಿಯೆ........

ಹಗಳಲ್ಲಿ ಇರುಳಲ್ಲಿ ಕುಳಿತಲ್ಲಿ ನಿಂತಲ್ಲಿ
ಗೆಳೆಯರಲ್ಲಿ ದಾರಿಯಲ್ಲಿ
ಅಂಗಡಿಯಲ್ಲಿ ಮನೆಯಲ್ಲಿ
ನಿನ್ನದೇ ನೆನೆಪು ಬರುತ್ತಿದೆ ಪ್ರಿಯೆ

ನಿನ್ನ ನಗು ನಿನ್ನ ಮೊಗವು
ತುಟಿ ಬಿರಿಯದ ನಿನ್ನ ನಗು
ಉರಿ ಬಿಸಿಳಲ್ಲಿಯೂ ತಂಪು ನೀಡುವುದು ಪ್ರಿಯೆ

ನಿನ್ನ ಬೆಸೆಯಲು ಬಯಸುತ್ತಿದೆ ಹೃದಯ
ಬೆವರ ಹನಿ ಹರಿಸಲು ಬರುವೆಯ ಓಪ್ರಿಯೆ
ಅಸೆ ಅರ್ಧದಲ್ಲಿ ಕೊಟ್ಟೆ

ಮೂಗಿನ ಮೂಳೆ ಸೊಟ್ಟು

ಸಂಪದ ಬಳಗಕ್ಕೆ ನನ್ನ ನಮಸ್ಕಾರ ಹಲವಾರು ಜನರಿಗೆ ಮೂಗಿನ ಮೂಳೆ ಸೊಟ್ಟಗೆ ಇರತ್ತೆ ಅಂತೆ ಹೌದಾ? ನನಗೆ ಇತ್ತೀಚಿಗೆ ತಾನೆ ಗೊತ್ತಾಯಿತು. ಅಂದ ಹಾಗೆ ಇದನ್ನ ಸಣ್ಣ ಅಪರೇಷನ್ ಮಾಡಿ ಸರಿಪಡಿಸಬಹುದಂತೆ ಇದರ ಬಗ್ಗೆ ನಿಮಗೆ ಗೊತ್ತಿದೆಯಾ?

ಸ್ನೇಕ್ ಐತಾಳರೊಂದಿಗೆ ಒಂದು ಘಂಟೆ


ಹರಿ ಬಂದಿದ್ದಾಗ ಏನಾದರೂ ಒಳ್ಳೆಯ ಕಾರ್ಯಕ್ರಮ ಇಟ್ಟುಕೊಳ್ಳಬೇಕೆಂದುಕೊಂಡಿದ್ದೆ. ಪುತ್ತೂರಿಗೆ ಹೋಗುವುದು ನಿಶ್ಚಿತವಾಗಿತ್ತು. ಇತ್ತೀಚೆಗೆ NGC ಯಲ್ಲಿ ಹಾವುಗಳ ಬಗ್ಗೆ ಕಾರ್ಯಕ್ರಮ ತೋರಿಸಿದ್ದರು. ಆಗಲೇ ಹಾವುಗಳನ್ನು ಕೈಯಲ್ಲಿ ಹಿಡಿಯುವುದನ್ನೊಮ್ಮೆ ಟ್ರೈ ಮಾಡಬೇಕಿತ್ತಲ್ಲಾ ಎಂದುಕೊಂಡಿದ್ದೆ.ಐತಾಳರು ಪುತ್ತೂರಿನ ಆಸುಪಾಸಿನಲ್ಲಿರುವುದು ಗೊತ್ತಿದ್ದರಿಂದ ಅವರ ಹತ್ತಿರ appointment ತೆಗೆದುಕೊಂಡೆವು. ಅವರ ಮನೆ ಪುತ್ತೂರು ಪೇಟೆಗೆ ಬಹಳ ಹತ್ತಿರದಲ್ಲಿದೆ. (ಆಸಕ್ತರಿಗಾಗಿ: ಅರುಣಾ ಟಾಕೀಸಿನ ರೋಡಿನಲ್ಲಿ ಮುಂದೆ ಹೋಗಿ ರಾಘವೇಂದ್ರ ಸ್ವಾಮಿ ಮಠಕ್ಕೆ ಎಡಕ್ಕೆ ತಿರುಗಿ. 'ಡಾ| ಐತಾಳ' ರ ಮನೆಯೆಂದರೆ ಯಾರಾದರೂ ಹೇಳುತ್ತಾರೆ).
ಅವರ ಮನೆ 'ಬನ' ತಲುಪಿ ಒಂದೈದು ನಿಮಿಷ ಅವರಿಗಾಗಿ ಕಾಯಬೇಕಾಯಿತು. ಮನೆಯ ಪಕ್ಕದ ಕಾಂಪೌಂಡು ಒಂದು 'ನಾಗಬನ' - ಕಲ್ಲಿನ ನಾಗನದ್ದು. ಇವರ ಮನೆ 'ಬನ' - ನಿಜ ನಾಗಗಳದ್ದು. ಅವರ ಕ್ರೋಟನ್ ಗಿಡಗಳ ಮೇಲೆಲ್ಲ ಹಾವಿನ ಪೊರೆಯನ್ನು ಅಲಂಕಾರಕ್ಕಾಗಿ ಹಾಕಿದ್ದಾರೆ!. ಪಕ್ಕದ ತೆಂಗಿನ ಮರದ ಬುಡದಲ್ಲಿ ವಿಧವಿಧದ ಪೊರೆಗಳ ರಾಶಿಯೇ ಇತ್ತು.
ನಮಸ್ಕಾರ ಎನ್ನುತ್ತಾ ಬಂದಾಗ 'ಸ್ನೇಕ್ ಐತಾಳರ' ದರ್ಶನವಾಯಿತು. ಹೆಚ್ಚುಕಮ್ಮಿ ಹಾವುಗಳಂತೆಯೇ ತೆಳ್ಳಗೆ ಬೊಜ್ಜಿನ ಗಂಧಗಾಳಿಯೂ ಇಲ್ಲದ ದೇಹ.