ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಳೆಯ ಪ್ರಸಂಗವೊಂದರ, ನೆನಪು.. !

ಈಗಾಗಲೇ ೨೫-೩೦ ವರ್ಷಗಳು ಸಂದಿವೆ. ಮಕ್ಕಳಿಬ್ಬರೂ ದೊಡ್ಡವರಾಗಿ ಬೆಳೆದು ರೆಕ್ಕೆ ಪುಕ್ಕಗಳು ಬಂದು ಎಲ್ಲೆಲ್ಲೊ ಹಾರಿಹೋಗಿದ್ದಾರೆ. ಒಟ್ಟು ೪೦ ವರ್ಷಗಳಕಾಲ ಮುಂಬೈವಾಸ. ಈಗ ೨೩ ವರ್ಷಗಳಿಂದ ನಮ್ಮ ಸ್ವಂತ ಮನೆಯಲ್ಲಿ ಘಾಟ್ಕೋಪರ್ ನಲ್ಲಿದ್ದೇವೆ. ಆದರೂ, ನಾವು ಬೊಂಬಾಯಿನ ’ಶಿವಾಜಿ ಪಾರ್ಕ್’ ನಲ್ಲಿ ಕಳೆದ ೧೦ ವರ್ಷಗಳು ನಿಜಕ್ಕೂ ಅವಿಸ್ಮರಣನೀಯ !

ಆತ್ಮಾವಲೋಕನದ ಮಧ್ಯೆ..

ನಾನೊಬ್ಬ...ಕವಿ
ಕಣ್ಮುಚ್ಚಿದರೆ ಕಲ್ಪನಾ ವಿಲಾಸ ; ಕಣ್ತೆರೆದು ಬರಿಯಲೇ ಪ್ರಯಾಸ

ನೋಡ್ಲಿಲ್ಲವೇನೇ?
ತಳ ಹತ್ತಿದೆ ಹುಳಿ ಉಕ್ಕಿದೆ ಹಾಲು ಮರಳಿ

ನಾನೊಂದು...ಎನಿಗ್ಮಾ
ಸಿಹಿಯಾದ ಗುಟ್ಟು ; ಬಿಡಿಸಲಾರದ ಒಗಟು

ಎಲ್ಲಿರುವೆಯಮ್ಮ?
ಮೈಯೆಲ್ಲ ಅಂಟು ಸಿಗದೊಂದು ಶರಟು

ನಾನೋರ್ವ...ಗಾಯಕಿ
ಶ್ರುತಿ ಲಯ ಉಂಟು ; ಧ್ವನಿ ಸ್ವಲ್ಪ ಉರುಟು

ಕೇಳಿಲ್ಲಿ ಬಾರೇ..

ಅವ್ವ

ಎರಿ ಮಣ್ಣಿನ ಕರಿ ಬಣ್ಣದ್ಹಾಂಗ
ಇರೋ ನನ್ನವ್ವ
ಅಂಥಾ ಗಂಡನ್ನ ಕಟಗೊಂಡು
ಪಡಬಾರದ್ದ ಪಟ್ಟು
ಏಗಬಾರದ್ದ ಏಗಿ
ಊರಾಗ ನಾಲ್ಕು ಮಂದಿ
ಹೌದು ಹೌದು ಅನ್ನೋಹಾಂಗ
ಬಾಳೆ ಮಾಡಿದಾಕೆ.

ಅಂಥಾ ಎಡಾ ಹೊಲದಾಗ
ದುಮು ದುಮು ಬಿಸಲಾಗ
ಬಂಗಾರ ಬೆಳಿತೇನಿ ಅಂತ ಹೋದಾಕಿ.
ಬಂಗಾರ ಇಲ್ದ ಬೆಳ್ಳಿ ಇಲ್ದ
ಬರೆ ಎರಡು ಸೀರ್ಯಾಗ
ಜೀವನಾ ಕಂಡಾಕಿ.

ಹೊಲ್ದಾನ ಹ್ವಾರೆನೂ ಮಾಡಿ
ಮನ್ಯಾಂದೂ ನೋಡಿ

ವಾಕ್ಯವೊಂದರ ಕಥೆಗಳು

ರಸ್ತೆ ಬದಿಯ ಮನೆಯ ಬಾಗಿಲಲ್ಲಿ ನಿಂತು ಕಾಯುತ್ತಿದ್ದ ಅವಳ ಮಗು ಒಳಗಡೆ ಅಳದೆ, ದಿನದಂತೆ ಇಂದೂ ಬರುವ ಹೊಸ ಅಪ್ಪನ ನಿರೀಕ್ಷೆಯಲ್ಲೇ ನಿದ್ದೆ ಮಾಡಿತ್ತು...

ಅಪ್ಪನ ಆರೋಗ್ಯ ಸರಿ ಇಲ್ಲ ಎಂದು ಅಮೆರಿಕಾದಿಂದ ಡಾಲರ್ ಸಮೇತ ಬಂದ ಮಗನಿಗೆ ಭಾರತದ ಹವೆ ಸರಿಹೋಗದ ಕಾರಣ ಆಸ್ಪತ್ರೆಗೆ ಸೇರಿಸಬೇಕಾಯಿತು...

ಪಕ್ಷಾಂತರ

ನಲ್ಲೆ
ನಿನ್ನಲ್ಲಿ ನಾ
ಸತ್ಯವೊಂದನು ಹೇಳಲೇ?

ರೂಪದಲ್ಲಿ ನಾ
ಮನ್ಮಥನಲ್ಲ,
ರಮೇಶನಂತೆ

ಹಣಕಾಸಿನಲ್ಲಿ ನಾ
ಕುಬೇರನಲ್ಲ,
ರಮೇಶನಂತೆ

ಅಧಿಕಾರಿಯ ಕುರ್ಚಿಯಲಿ ನಾ
ಕುಳಿತಿಲ್ಲ,
ರಮೇಶನಂತೆ

ಮದುವೆಗಂತೂ
ಲೈನ್ ಕ್ಲಿಯರ್ ಇಲ್ಲ,
ರಮೇಶನಂತೆ

ವಯಸ್ಸಿನಲಿ
ಚಿರ ಯುವಕನಲ್ಲ,
ರಮೇಶನಂತೆ

ಹೇಳು ನಲ್ಲೆ
ನೀ ಬಗೆಹರಿಸುವೆಯಾ
ಈ ನನ್ನ ಚಿಂತೆ?

ನಲ್ಲ,

ನಿಟ್ಟೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ

ದಿನಾಂಕ ತಾ. 30/12/2008 ಮತ್ತು 31.12.2008

ಸ್ಥಳ:ನಿಟ್ಟೆ ವಿದ್ಯಾಸಂಸ್ಥೆಯ ಜಸ್ಟೀಸ್ ಕೆ ಎಸ್ ಹೆಗ್ಡೆ ವೇದಿಕೆ,

ಕವಿ ಮುದ್ದಣ ಸಭಾಂಗಣ

ನಿಟ್ಟೆ- 574 110

ಅಧ್ಯಕ್ಷರು: ಡಾ. ನಾ ಮೊಗಸಾಲೆ

--------------------------------

ತಾ.30.12.2008

8.30 ಮೆರವಣಿಗೆ

ನನ್ನ ಮಿತ್ರನನ್ನು ಸ್ವೀಕರಿಸುವಿರಾ?

ಒಮ್ಮೆ ಒಬ್ಬ ಸೈನಿಕ ಕೊನೆಗೆ ಯುದ್ಧ ಮುಗಿದ ಮೇಲೆ ತನ್ನ ಹುಟ್ಟೂರಿಗೆ ಮರಳಲು ಸಿದ್ಧತೆ ನಡೆಸುತ್ತಿದ್ದ.