ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನೆ ಸಾಲದ ಮೇಲಿನ ಬಡ್ಡಿ ದರ ಇಳಿದಿದೆ?

ಮನೆ ಸಾಲದ ಮೇಲಿನ ಬಡ್ಡಿ ದರ ಇಳಿಸಿದ್ದಾರೆ.
ಆದರೆ ಅದು ಹೊಸ ಸಾಲಕ್ಕೆ ಮಾತ್ರ ಅನ್ವಯ ಅಂತೆ.
ಮನೆ ಸಾಲದ ಮೇಲಿನ ಬಡ್ಡಿ ಎಲ್ಲರಿಗೂ ಒಂದೆ ಇರುತ್ತದೆಯೇ ? ಒಬ್ಬೊಬ್ಬರಿಗೆ ಒಂದೊಂದು ಇರುತ್ತಾ?
ನಿನ್ನೆ ಒಬ್ಬರು ತಮ್ಮ ಸಾಲದ ಮೇಲಿನ ಬಡ್ಡಿ ದರ ಇಳಿದಿದೆ ಅಂತಿದ್ರು.ಉಳಿದವರದ್ದು ಬದಲಾಗಿಲ್ಲವಂತೆ. ಎಲ್ಲರ ಸಾಲ ಒಂದೇ ಬ್ಯಾಮ್ಕಿನಲ್ಲಿದೆ -ಶಾಖೆ ಬೇರೆ ಬೇರೆ. ಇದ್ಯಾಕೆ ಹೀಗೆ?

ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 3

ಉಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ -

ಸರಿಯಾದ ಸಮಯಕ್ಕೆ ಆರೋಗ್ಯಕ್ಕೆ ಒಳ್ಳೆಯದಾದಾ ಉಟ ಮಾಡಿದರೆ ಮನುಷ್ಯನಿಗೆ ರೋಗದ ಬಯವಿರುವುದಿಲ್ಲ ಹಾಗೆ ಯಾವ ಸಮಯಕ್ಕೆ ಯಾರ ಹತ್ತಿರ ಹೇಗೆ ಮಾತಾಡ ಬೇಕು ಅ೦ತತಿಳಿದಿರುವವನಿಗೆ ಜಗಳ ಮಾಡುವ ಅವಶ್ಯಕತೆ ಬರುವುದಿಲ್ಲ.
ಒಪ್ಪತ್ತು೦ಡವನು ಯೋಗಿ
ಎರಡೊತ್ತು೦ಡವನು ಭೋಗಿ
ಮೂರೊತ್ತು೦ಡವನು ರೋಗಿ

ಜೋಗಿ

ಹತ್ತು ಹಿತ್ತಲ ಸುತ್ತಿ,
ದುಂಡು ಮಲ್ಲಿಗೆ ಎತ್ತಿ,
ಕೆರೆಯ ಏರಿಯ ಕೆಳಗ,
ಸೂರ್ಯ ಇಳಿಯುವ ಒಳಗ,
ನಾನು ಬಂದೆನ ಮುತ್ತು ತಂದೇನ.

ಸಪ್ತ ಸಾಗರ ಸುತ್ತಿ,
ಬಿಳುಪು ಮುತ್ತನು ಹೆಕ್ಕಿ,
ಪಡುವ ಸೂರಿನ ಮೇಗ,
ಚಂದ್ರ ಏರುವ ಒಳಗ,
ನಾನು ಬಂದೆನ ಮುತ್ತು ತಂದೇನ.

ಮಲ್ಲೆ ಮುಡಿಯಲಿ ಕಟ್ಟಿ,
ಮುತ್ತು ಕೊರಳಲಿ ಸುತ್ತಿ,
ಸಂಜೆ ಮುಸುಕಿನ ನಡುವೆ,
ನಿಂತ ಕನಸಿನ ಚಲುವ,

ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 2

ಸಾಲ ಮಾಡಿ ಮದುವೆ ಮಾಡಬೇಕು; ಗಳಿಕೆ ಮಾಡಿ ಮನೆ ಕಟ್ಟಬೇಕು:
ವಯಸ್ಸಿಗೆ ಬ೦ದ ಮಗಳಿಗೆ ಸಕಾಲದಲ್ಲಿ ಮಾಡುವೆ ಮಾಡದೆ, ಹಣವಿಲ್ಲವೆ೦ದು ಕೂಡಬಾರದು.
ಸಾಲ ಮಾಡಿಯಾದರೂ ಮದುವೆ ಮಾಡಬೇಕು.
ನಿದಾನವಾಗಿ ಗಳಿಸಿ ಮನೆ ಕಟ್ಟ ಬಹುದು

ನಮ್ಮದಲ್ಲದ ನ್ಯಾಯ

ಕಳೆದ ವಾರವಷ್ಟೆ ಮುಸಲ್ಮಾನರ ಪವಿತ್ರ ಬಕ್ರೀದ್ ಹಬ್ಬ ಮುಗಿದಿದೆ. ಈ ಹಬ್ಬಕ್ಕೂ ಮೊದಲು ವಾರಗಟ್ಟಲೇ ಹಬ್ಬದ ತಯಾರಿ ಕೂಡ ನಡೆದಿತ್ತು. ಪರಿಣಾಮ ಸಾವಿರಾರು ರಾಸುಗಳು, ಕುರಿಗಳು ಒಂಟೆಗಳು ಇವರ ಉದರವನ್ನು ಮಿಂದು ಮಣ್ಣಾಗಿ ಹೋಗಿವೆ. ಇವೆಲ್ಲಾ ಜಂತುಗಳು ರೂಪಾಯಿಗೆ ಎರಡಲ್ಲ ಬಿಡಿ... ಸಾವಿರಾರು ರೂಪಾಯಿಗಳು ಕಿಸೆಯಿಂದ ಕಾಲ್ಕಿತ್ತಿದೆ.

ಪ್ರತಿಷ್ಠೆಯ ಸ್ವಾಭಿಮಾನದ ಹಂಗು..

ಕಳೆದ ವಾರವಷ್ಟೆ ಮುಸಲ್ಮಾನರ ಪವಿತ್ರ ಬಕ್ರೀದ್ ಹಬ್ಬ ಮುಗಿದಿದೆ. ಈ ಹಬ್ಬಕ್ಕೂ ಮೊದಲು ವಾರಗಟ್ಟಲೇ ಹಬ್ಬದ ತಯಾರಿ ಕೂಡ ನಡೆದಿತ್ತು. ಪರಿಣಾಮ ಸಾವಿರಾರು ರಾಸುಗಳು, ಕುರಿಗಳು ಒಂಟೆಗಳು ಇವರ ಉದರವನ್ನು ಮಿಂದು ಮಣ್ಣಾಗಿ ಹೋಗಿವೆ. ಇವೆಲ್ಲಾ ಜಂತುಗಳು ರೂಪಾಯಿಗೆ ಎರಡಲ್ಲ ಬಿಡಿ... ಸಾವಿರಾರು ರೂಪಾಯಿಗಳು ಕಿಸೆಯಿಂದ ಕಾಲ್ಕಿತ್ತಿದೆ.