ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಳ್ಳೆಯ ಆಸರೆ

ಹೆಚ್ಚಿನ ಬೆಲೆಯ ಮಾಣಿಕಕೂ
ಹೊನ್ನಿನಾಸರೆಯು ಬಲು ಸೊಗಸು
ಹೆಣ್ಣು ಹಂಬುಗಳು ಪಂಡಿತರು
ಒಳ್ಳೆ ಆಸರೆಯಲಿ ಮೆರುಗುವರು

 

ಸಂಸ್ಕೃತ ಮೂಲ: ( ಸುಭಾಷಿತ ರತ್ನ ಭಾಂಡಾಗಾರದಿಂದ)

ಅನರ್ಘ್ಯಮಪಿ ಮಾಣಿಕ್ಯಂ ಹೇಮಾಶ್ರಯಮಪೇಕ್ಷತೇ|
ಅನಾಶ್ರಯಾ ನ ಶೋಭಂತೇ ಪಂಡಿತಾ ವನಿತಾ ಲತಾಃ ||

ಲಿನಕ್ಸಾಯಣ - ೩೨ - ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

ಲಿನಕ್ಸ್ ನ ಟರ್ಮಿನಲ್ ಬಳಸಿದ್ದೀರಲ್ಲವೆ? (Applications -> Accessories -> Terminal) ಹೌದು ವಿಂಡೋಸ್ ನಲ್ಲಿನ ಡಾಸ್ (Dos) ಪ್ರಾಂಪ್ಟ್ ನಂತಹದ್ದು. ಇಲ್ಲಿ ls ಎಂದು ಟೈಪ್ ಮಾಡಿದರೆ, ನಿಮಗೆ ಫೈಲ್ ಮತ್ತು ಡೈರೆಕ್ಟರಿಗಳನ್ನ ಪಟ್ಟಿ ಮಾಡಿ ತೋರಿಸುತ್ತದೆ. ಆದ್ರೆ ಅದನ್ನ ಉಲ್ಟಾ ಅಂದ್ರೆ sl ಅಂತ ಟೈಪ್ ಮಾಡಿದ್ರೆ ಏನಾಗತ್ತೆ? ಕೆಳಗಿನ Error ನಿಮಗೆ ಕಾಣಿಸುತ್ತೆ. 

-bash: sl: command not found

ಲಿನಕ್ಸಾಯಣ - ೩೧ - ಓಪನ್ ಆಫೀಸ್ ನಲ್ಲಿ ಕನ್ನಡ

ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ? ಅಂತ  ಹಿಂದೊಮ್ಮೆ ಪ್ರಶ್ನೆ ಕೇಳಿದ್ದೆ ಅದಾದ ನಂತರ ಅದರಲ್ಲಿ ನಿಮಗೆ ಕಂಡು ಬಂದಿರ ಬಹುದಾದ ಸಮಸ್ಯೆಗಳ ಮಳೆ ಹರಿಯ ಬಹುದೆಂದು ಭಾವಿಸಿದ್ದು ತಪ್ಪಾಯಿತು. ಆದ್ರೆ, ನಾನೇ ಓಪನ್ ಆಫೀಸ್ ಬಳಸೋವಾಗ ಸಾಮಾನ್ಯವಾಗಿ ಕಾಣಸಿಗುವ ಸಮಸ್ಯೆಯನ್ನ ನಿಮ್ಮ ಮುಂದೆ ಇಡೋಣ ಅಂತ ಕುಳಿತಿದ್ದೇನೆ.

ಬಯಕೆಗಳಿರದ ಮನುಜ

[ಇಲ್ಲಿ ಪ್ರಾಸಗಳ ಹಂಗಿಲ್ಲ; ಭಾವನೆಗಳಿಗೆ ಬಂಧನವಿಲ್ಲ. ಮನಸೇ ನೇರವಾಗಿ ನೀರಾಗಿ ಹರಿದಿರುವ ಒಂದು ಅಂಬೆಗಾಲಿನ ಯತ್ನ. ತಪ್ಪಿದ್ದರೆ ಸಹೃದಯರು ದಯಮಾಡಿ ಮನ್ನಿಸುವುದು. ]

ಬಯಕೆಗಳಿರದ ಮನುಜ

ಬಯಕೆಗಳಿರದ ಮನುಜ
ಶೂನ್ಯನಾವೆಯಂತೆ
ಇತರರವನಿಗೆ ಢಿಕ್ಕಿ ಹೊಡೆದರೂ
ಅವನಿತರರಿಗೆ ಎಡತಾಕಿದರೂ
ಮಿಥ್ಯ ನಿರ್ವಾತವೊಂದೇ ಅಲ್ಲಿರುವುದು

ಬಯಕೆಗಳಿರದ ಮನುಜ

ಬದುಕಿಗೇನು ಅರ್ಥ?

ಬದುಕಿಗೇನು ಅರ್ಥ?

ಪರರ ನೋವುಗಳಿಗೆ ಕಲ್ಲಾಗಿ
ತನ್ನ ತನುವಿಗಾಗಿ ಸದಾ ಮರುಗಿ
ಲೌಕಿಕದಲ್ಲಿಯೇ ಪಶುವಿನಂತೆ ಮುಳುಗಿ
ಪರಮಾನಂದದ ಸೌಧವ ಕೆಡಗಿ
ಕ್ರೂರತನದಲೀತ ಜೀವಿಸಿಹನು ಏತಕಾಗಿ?

ಚಿತ್ರಕ್ಕೊಂದು ಕಥೆ?

ಕಥೆಗೆ ಚಿತ್ರ ಬರೆಯೋದನ್ನ ಕೇಳಿರ್ತೀರ. ನೋಡಿರ್ತೀರ. ಹಾಗೇ ತುಷಾರ ಮಯೂರಗಳಲ್ಲಿ ಚಿತ್ರ ಕೊಟ್ಟು ಅದಕ್ಕೆ ಸರಿಯಾದ ಕವನ ಬರೆಯೋ ಸ್ಪರ್ಧೆಯೂ ನಡೀತಿರತ್ತೆ.

ಆದ್ರೆ ಇಲ್ಲೊಂದು ಸಣ್ಣ ತಿರುವು. ನಾನು ಒಂದು ಸಣ್ಣ ಕತೇಗಂತ ಬರೆದ ಚಿತ್ರ ಇಲ್ಲಿದೆ. ಆ ಚಿತ್ರವನ್ನ ಇಟ್ಕೊಂಡು ಅದಕ್ಕೆ ತಕ್ಕ ಕಥೆ ಬರೆಯೋದಕ್ಕೆ ಯಾರಾದರೂ  ತಯಾರಿದೀರಾ?

ಮರಣ

ಮೂರ್ತದಿಂದ ಅಮೂರ್ತದೆಡೆಗೆ ಪಯಣ
ನೋವುಗಳಿಗೆ ಚಿರನಿದ್ರೆಕೊಡುವ ಕರಣ
ತನುವೊಳಗಿನ ಮಂದಾರ ಸೇರಲು ಆತನ ಚರಣ
ವರವಾಗಿ ಪರಿಣಮಿಸಿಹುದು ಈ ಮರಣ.