ಲಿನಕ್ಸಾಯಣ - ೩೧ - ಓಪನ್ ಆಫೀಸ್ ನಲ್ಲಿ ಕನ್ನಡ

ಲಿನಕ್ಸಾಯಣ - ೩೧ - ಓಪನ್ ಆಫೀಸ್ ನಲ್ಲಿ ಕನ್ನಡ

ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ? ಅಂತ  ಹಿಂದೊಮ್ಮೆ ಪ್ರಶ್ನೆ ಕೇಳಿದ್ದೆ ಅದಾದ ನಂತರ ಅದರಲ್ಲಿ ನಿಮಗೆ ಕಂಡು ಬಂದಿರ ಬಹುದಾದ ಸಮಸ್ಯೆಗಳ ಮಳೆ ಹರಿಯ ಬಹುದೆಂದು ಭಾವಿಸಿದ್ದು ತಪ್ಪಾಯಿತು. ಆದ್ರೆ, ನಾನೇ ಓಪನ್ ಆಫೀಸ್ ಬಳಸೋವಾಗ ಸಾಮಾನ್ಯವಾಗಿ ಕಾಣಸಿಗುವ ಸಮಸ್ಯೆಯನ್ನ ನಿಮ್ಮ ಮುಂದೆ ಇಡೋಣ ಅಂತ ಕುಳಿತಿದ್ದೇನೆ.

 ಓಪನ್ ಆಫೀಸ್ ನಲ್ಲಿ ಅರ್ಕಾ ಒತ್ತು ಇರುವ ಅಕ್ಷರಗಳನ ಟೈಪಿಸುವಾಗ ಅಕ್ಷರಗಳು ಗೋಜಲು ಗೋಜಲಾಗಿ, ಮಾಯವಾಗೋದನ್ನ ಕಾಣ ಬಹುದು. ಉದಾಹರಣೆಗೆ, "ಆಶ್ಚರ್ಯ" ಅನ್ನೋದನ್ನ ಟೈಪ್ ಮಾಡ್ಲಿಕ್ಕೆ ಆಗ್ತಿರಲಿಲ್ಲ. 

ಇದನ್ನ  ಸರಿ ಪಡಿಸೋದು ತುಂಬಾ ಸುಲಭ. ಡಾಕ್ಯುಮೆಂಟ್ ಮೇಲೆ ರೈಟ್ ಕ್ಲಿಕ್ ಮಾಡಿ, ಲೈನ್ ಸ್ಪೇಸ್ ಅನ್ನು ಸೆಲೆಕ್ಟ್ ಮಾಡಿ ನಂತರ ಅಲ್ಲಿ "1.5 lines" ಆಯ್ಕೆ ಮಾಡಿಕೊಳ್ಳಿ. ಕೆಳಗೆ ಕೊಟ್ಟಿರುವ ಚಿತ್ರ ನಿಮಗೆ ಅದನ್ನ ಹೇಗೆ ಮಾಡಬಹುದು ಎನ್ನೋದನ್ನ ತಿಳಿಸುತ್ತದೆ. ಇದಾದ ನಂತರ ಮತ್ತೆ "ಆಶ್ಚರ್ಯ" ಅಂತ ಟೈಪ್ ಮಾಡಿ ನೋಡಿ. ನಿಮ್ಮ ಸಮಸ್ಯೆ ಬಗೆ ಹರಿದಿರುತ್ತದೆ. 

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ ಮಾಡಿ)

ನಿಮಗೆ ಈ ರೀತಿಯ ಸಮಸ್ಯೆಗಳು ಎದುರಾದಲ್ಲಿ ಸಂಪದದ tech-volunteers@sampada.net ಗೆ ಒಂದು ಮೈಲಾಯಿಸಿ. ನಮಗೆ ತಿಳಿದಿರುವ ಉತ್ತರಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಇಲ್ಲವಾದಲ್ಲಿ ಬಿಡಿಸಲಾಗದ ಸಮಸ್ಯೆಗಳನ್ನ ಟೆಕಿಗಳ ಮುಂದಿಟ್ಟಂತಾಗುತ್ತದೆ. ಸಮಸ್ಯೆಗಳನ್ನ ಬಿಡಿಸಲಿಕ್ಕೆ ಕೈ ಮಿಲಾಯಿಸಿ ಕನ್ನಡವನ್ನ ಉತ್ತಮ ರೀತಿಯಲ್ಲಿ ಸ್ವತಂತ್ರ ತಂತ್ರಾಂಶದೊಡನೆ ಬಳಸಿ.

Rating
No votes yet