ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?

ನಮ್ಮ ಅಕ್ಕ ಪಕ್ಕದಲ್ಲಿರುವ ಅನ್ಯ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು ತಮ್ಮ ಉದ್ಯೋಗ, ವಹಿವಾಟು, ಲೇವಾದೇವಿ ಮಾಡುತ್ತಾರೆ. ಆದರೆ ಅವರು ಮಾತನಾಡುವುದು ಅವರ ಭಾಷೆ. ಹಲವಾರು ತಮಿಳರು ಬಟ್ಟೆಯ ವ್ಯಾಪಾರ, ಹಣದ ಲೇವಾದೇವಿ ಮಾಡುತ್ತಾರೆ. ಮನೆಮನೆಗೆ ಹೋಗಿ ಕಂತಿನಲ್ಲಿ ಬಟ್ಟೆ ಕೊಡುತ್ತಾರೆ. ಪ್ರತಿ ತಿಂಗಳು ಹಣ ವಸೂಲಿಗೆ ಹೋಗುತ್ತಾರೆ. ಆದರೆ ಮಾತನಾಡುವುದು ತಮಿಳು.

ಆಗುಂಬೆಯ ಬಗ್ಗೆ ಮಾಹಿತಿ...

ಎಲ್ಲರಿಗೂ ಶರಣು. ಈ ಶನಿವಾರ ಮತ್ತೆ ಆದಿತ್ಯವಾರ ನಾನು ಆಗುಂಬೆಗೆ ಹೋಗ್ಬೇಕು ಅನ್ಕೊಂಡೀನಿ. ಆದರೆ ಅಲ್ಲಿ ಉಳ್ಕೊಲ್ಲಿಕೆ ಯಾವ ಜಾಗ ಒಳ್ಳೇದು ಅಂತ ಗೊತ್ತಾಗವಲ್ತು. ಸ್ವಲ್ಪ ಜನ 'ಕಸ್ತೂರಿ ಅಕ್ಕ' ಅವರ ಮನೆಯಲ್ಲಿ ಉಳ್ಕೊಳೋದು ವಾಸಿ ಅಂದ್ರೆ ಇನ್ನು ಕೆಲವರು 'Agumbe Rainforest Research Station' ಚೆನ್ನ ಅಂತಾರೆ.

ಹಾಸ್ಯ - ೩

ಆಫೀಸ್ ಸ್ಥಳಾಂತರ
ರಾಂಪ ಕೆಲಸಕ್ಕೆ ಅರ್ಜಿ ಹಾಕಿ ಸಂದರ್ಶನಕ್ಕೆ ಹೋದ
ಸಂದರ್ಶಕ: ನೀನ್ಯಾಕೆ ಹಿಂದಿನ ಕೆಲಸ ಬಿಟ್ಟೆ?
ರಾಂಪ: ನನ್ನ ಕಂಪನಿಯವರು ಆಫೀಸನ್ನು ಸ್ಥಳಾಂತರಿಸಿದರು.. ಆದರೆ ನನಗೆ ಹೊಸ ವಿಳಾಸವನ್ನೇ ತಿಳಿಸಲಿಲ್ಲ...!!!

ಒಳ್ಳೆಯ ಕನ್ನಡಿ
ಬಾಸು: ನನ್ನ ಮುಖ ಚೆನ್ನಾಗಿ ಕಾಣುವ ಒಳ್ಳೆ ಕನ್ನಡಿ ಕೊಂಡುಕೊಂಡು ಬಾ..... ಹೋಗು.

ಸ೦ತೋಶ

If more of us valued food and cheer and song above hoarded gold, it would be a merrier world.
ನಮ್ಮಲ್ಲನೇಕರು ಆಹಾರ ಮತ್ತು ಉಲ್ಲಾಸ, ಸ೦ಗೀತಕ್ಕೆ, ಕೂಡಿಟ್ಟ ಚಿನ್ನಕ್ಕಿ೦ತ ಹೆಚ್ಚು ಬೆಲೆ ಕೊಟ್ಟಿದ್ದೇ ಆದಲ್ಲಿ ಈ ಪ್ರಪ೦ಚ ಹೆಚ್ಚು ಸ೦ತೋಶವಾಗಿರುತ್ತಿತ್ತು.

ಕನ್ನಡ ಕಲಿಕೆ

ಕನ್ನಡ ಅನ್ನೋದೇ ಕಬ್ಬಿಣದ ಕಡಲೆ ಆದ್ರೆ ಎಂಗಣ್ಣ? ಎಂಬ ಈ ಲೇಖನದಲ್ಲಿ ಕನ್ನಡ ಕಲಿಕೆಯನ್ನು ಮತ್ತಷ್ಟು ಸ್ನೇಹಪರವಾಗಿ ಮಾಡಬಹುದಲ್ಲವೇ ಎಂಬ ಚಿಂತನೆಯಿದೆ. 

ನೋಡಿ: 

http://enguru.blogspot.com/2008/11/blog-post.html 

 

ಪ್ರೀತಿಯಿಂದ

ಸಿ ಮರಿಜೋಸೆಫ್ 

ನೀನಾರಿಗಾದೆಯೋ ಎಲೈ ಮಾನವಾ..? ಎನ್ನುತ್ತಿದೆ ಗಜಪಡೆ..!

"ಇಲ್ಲಿ ಅಡಗಿದೆ ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ"

ಯಾವುದಪ್ಪ..ಅದು? ಎಂದು ಕುತೂಹಲದಿಂದ ನಾವು ಆ ಅಕ್ಷರಗಳನ್ನು ಕೆತ್ತಲಾದ ಪೆಟ್ಟಿಗೆಯ ಬಾಗಿಲು ತೆರೆದರೆ..
ಅಲ್ಲೊಂದು ಕನ್ನಡಿ. ಬಾಗಿಲು ತೆರೆದವನ/ಳ ಮುಖ ಅದರಲ್ಲಿ ಪ್ರತಿಬಿಂಬವಾಗಿ ಕಾಣುತ್ತದೆ! ಅರ್ಥಾತ್..ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ ಮನುಷ್ಯ!

ಮೈಸೂರಿನ ಜಗತ್ಪ್ರಸಿದ್ಧ ಶ್ರೀ ಜಯಚಾಮರಾಜೇಂದ್ರ ಮೃಗಾಲಯದ ಸ್ವಾಗತ ದ್ವಾರದಲ್ಲಿಯೇ ಈ ಪೆಟ್ಟಿಗೆಯನ್ನು ಇಡಲಾಗಿದೆ. ಅದು ಸ್ಪಷ್ಠವಾಗಿ ನಮ್ಮ ನಡವಳಿಕೆಗೆ ಕನ್ನಡಿ ಹಿಡಿಯುತ್ತದೆ.

"ನೀವು ನೋಡಲು ಕಾತರದಿಂದ ಬಂದಿರುವ ಅತ್ಯಂತ ಕ್ರೂರ ಪ್ರಾಣಿ ಈ ಮೃಗಾಲಯದ ಪಂಜರದೊಳಗಿಲ್ಲ..ಹೊರಗಿದೆ!" ಎಂಬ ದಿವ್ಯ ಸಂದೇಶವನ್ನು ಆ ಪೆಟ್ಟಿಗೆ ಸಾರುತ್ತದೆ.

ಒಂದು ಸಂಶೋಧನಾ ಪತ್ರಿಕೆಯ ಪ್ರಕಾರ ವರ್ಷವೊಂದರಲ್ಲಿ ಲಕ್ಷಾಂತರ ಗಿಡಗಳನ್ನು ಆಕಸ್ಮಿಕವಾಗಿ ಅಳಿಲುಗಳು ನಡುತ್ತವೆ! ಅಥವಾ ಹುಟ್ಟಿಸುತ್ತವೆ! ತಮ್ಮ ಬಾಯಿಯಲ್ಲಿ ನಿತ್ಯ ನೂರಾರು ಹಣ್ಣು, ಬೀಜಗಳನ್ನು ತಿನ್ನಲು ಹೆಕ್ಕುವ ಅವು, ನಂತರ ಆ ಹಣ್ಣುಗಳನ್ನು ಮತ್ತು ಬೀಜಗಳನ್ನು ಎಲ್ಲಿ ಬಚ್ಚಿಟ್ಟಿದ್ದೇವೆ ಎಂಬುದನ್ನೇ ಮರೆತು ಬಿಡುತ್ತವೆ. ಕಾಲಕ್ರಮೇಣ ಅಳಿಲಿನ ಲಾಲಾರಸದಲ್ಲಿ ಮಿಂದ ಬೀಜ/ ಹಣ್ಣು ಸುಪುಷ್ಠವಾಗಿ ಮೊಳಕೆ ಒಡೆದು ಗಿಡದ ವಂಶಾಭಿವೃದ್ಧಿಗೆ ಸಹಕಾರಿಯಗುತ್ತದೆ. ಹಾಗೆಯೇ ಅವು ಹಣ್ಣನ್ನು ತಿಂದು ಮಲದ ರೂಪದಲ್ಲಿ ಬಿಸುಟುವ ತ್ಯಾಜ್ಯದಲ್ಲಿಯೂ ಕೂಡ ಹೇರಳ ಬೀಜಗಳಿದ್ದು, ಆ ಸಮಗ್ರ ಗೊಬ್ಬರ ಲೇಪಿತ ಬೀಜಗಳು ಹುಲುಸಾಗಿ ಬೆಳೆದು ಕಾಡನ್ನು ಸಮೃದ್ಧಿ ಗೊಳಿಸುತ್ತವೆ.

ಸಂಪಾದಕೀಯ: ನಮ್ಮ ವಿಶ್ವಾಸಾರ್ಹತೆ ನಾಶಕ್ಕೆ ಹುನ್ನಾರ!

ಹಿಂದೆ ಜನರು ಧಾರ್ಮಿಕ ಗ್ರಂಥಗಳಿಗೆ, ಪ್ರವಾದಿಗಳ ಉಪದೇಶಕ್ಕೆ ನೀಡುತ್ತಿದ್ದ ಬೆಲೆಯ
ಬಗ್ಗೆ ತಿಳಿದವರಿಗೆ ಆ ಜಾಗದಲ್ಲಿ ಜನರು ಕ್ರಮೇಣವಾಗಿ ಪತ್ರಿಕೆಗಳನ್ನು ತಂದು
ನಿಲ್ಲಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲಿಕ್ಕೆ ಕಷ್ಟ ಪಡಬೇಕಿಲ್ಲ. ಉದಾಹರಣೆಗೆ
ಎಸ್.ಎಸ್.ಎಸ್.ಸಿ, ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತದೆ ಎಂದುಕೊಳ್ಳಿ. ನೀವು

Traveling Film South Asia 2008

ಮರ, ಪೆಡಸ್ಟ್ರಿಯನ್ ಪಿಚರ್ಸ್ ಮತ್ತು ವಿಕಲ್ಪ ಬೆಂಗಳೂರು

ಅರ್ಪಿಸುವ

traveling film south asia 2008

ಈ ಪಿಲ್ಮ್ ಪೆಸ್ಟಿವಲ್ನಲ್ಲಿ 13 ಚಿತ್ರಗಳನ್ನು ಪ್ರದರ್ಶಿಸಲಾಗುವುದು
ದಿನಾಂಕ: 21,22,23 ನವಂಬರ್ 2008 ರಂದು
ಸ್ಥಳ: ಇನ್ಸುಟೂಟ್ ಆಪ್ ಅಗ್ರಿಕಲ್ಚರಲ್ ಟೆಕ್ನಾಲಿಜಿಸ್ಟ

(IAT) (Institute of Agricultural Technologists) ಕ್ವೀನ್ಸ್ ರೋಡ್ ಬೆಂಗಳೂರು

(ಮಾರ್ಗ)

ಹಾಸ್ಯ - ೨

ಕಾಫಿ ಬಾರ್ ಮತ್ತು ವೈನ್ ಬಾರ್
ಕಾಫಿ ಬಾರ್‌ಗೂ ಮತ್ತು ವೈನ್ ಬಾರ್‌ಗೂ ಏನ್ ವ್ಯತ್ಯಾಸ?
ಎಲ್ಲಾ ಪ್ರೀತಿಗಳು ಕಾಫಿ ಬಾರ್‌ನಲ್ಲಿ ಪ್ರಾರಂಭವಾಗಿ ವೈನ್ ಬಾರ್‌ನಲ್ಲಿ ಮುಕ್ತಾಯವಾಗುತ್ತದೆ!!!

ಟ್ಯಾಕ್ಸಿ ಬಾಡಿಗೆ