ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ ಒಂದು ದಿನ, ಪೇಪರ್,ಕಾಫಿ,ವ್ಯಾಯಾಮ(!) ಮುಗಿಸಿದ ಮೇಲೂ ಕೆಲಸಕ್ಕೆ ಹೊರಡಲು ಸಮಯವಿತ್ತು.

ಟಿ.ವಿ. ಹಾಕಿದೆ- ಎಲ್ಲಾ ಚಾನಲ್‌ಗಳಲ್ಲೂ ಕಾಲು ಮಡಚಿ ಪಟ್ಟಾಗಿ ಜ್ಯೋತಿಷಿಗಳು (ಜತೆಗೊಂದು ಹೆಣ್ಣು) ಕುಳಿತಿದ್ದರು.
ಬೆಳಗ್ಗೆ ಜ್ಯೋತಿಷ್ಯಕ್ಕೆ, ರಾತ್ರಿ ಕ್ರೈಮ್‌ಗೆ ಮೀಸಲು.

ಒಲವ ರಂಗವಲ್ಲಿ...

ಒಲವೆಂಬ ರಂಗವಲ್ಲಿ ಹಾಕಿದೆ ಇಲ್ಲಿ;

ಆಸೆಯ ಕಾಮನಬಿಲ್ಲನು ಚೆಲ್ಲಿ ;

ಹೂ ನಗೆಯ ಕವಿತೆ

ಬರೆದ ನಲ್ಲೆ ;

ಮುದ್ದು ಮಲ್ಲೆ.

ಸೌಂದರ್ಯ ಜಗದ ನಾರಿ ;

ಸವಿ ಮಾತಿನ ಪರಿಮಳ ಬೀರಿ;

ಸಗ್ಗದ ಸಿರಿ ಎಡೆಗೆ ಬರೆದೆ ದಾರಿ;

ಕುಡಿ ನೋಟದಿ ಮಾಡಿ

ಮೋಹ ಮಾಯೆ..!

ನಾರಿ ನೀ ಚೆಲುವಿನ, ನಲಿವಿನ

ನೆನಪಿನ, ನವಿಲು ಗರಿ.

- ಸುರೇಶ್ ಬಾಬು ( ಗೋಸುಬಾ )

ಏಕೆ ಹೀಗೆ ನಮ್ಮ ನಡುವೆ ?

ಜೀವನದಲ್ಲಿ ಕೆಲವೊಂದು ಘಟನೆಗಳು [ನಾವು ಭಾಗವಹಿಸದಿದ್ದರೂ ಸಾಕ್ಷಿಯಾದ ಘಟನೆಗಳು ] ನಮ್ಮ ಮನಸ್ಸಿನಲ್ಲಿ ಉಳಿಯದೆ ಮರೆಯಾಗಿಬಿಡುತ್ತವೆ. ಇನ್ನೋದಿಷ್ಟು ಘಟನೆಗಳು ನಮ್ಮನ್ನು ಕಾಡಿದರೂ ನಮ್ಮಿಂದ ಪ್ರಯತ್ನಪೂರ್ವಕವಾಗಿ ಹೊರಹಾಕಲ್ಪಡುತ್ತವೆ. ಇನ್ನೊಂದಿಷ್ಟು ನಮ್ಮನ್ನೇ ಕಾಡಿ, ಮನಸ್ಸನ್ನು ಚಿಂತನೆಗೆ ಹಚ್ಚಿಸಿ, ಕೆಲವೊಮ್ಮೆ ಪ್ರಚೋದಿಸಿ ಶಾಶ್ವತವಾಗಿ ಉಳಿದು ಬಿಡುತ್ತವೆ. ಈ ಲೇಖನವನ್ನ ಬರೆಯಲು ಪ್ರಚೋದಿಸಿದ್ದು ಅಂತ ಒಂದು ಘಟನೆ. ಈ ಘಟನೆಗೆ ಮೊದಲು ನಾನು ಸಹ ತುಂಬ ಜನ ಯೋಚಿಸುವಂತೆ ಇದ್ದೆ. ಆದರೆ ಈ ಘಟನೆ ಘಟಿಸಿದ ಮೇಲೆ ನನ್ನ ಯೋಚನಾ ಲಹರಿಯ ದಿಕ್ಕನ್ನ ಬದಲಿಸಿಕೊಂಡೆ. ಹಾಗಾದರೆ ನಡೆದ ಘಟನೆ ಏನು ಅನ್ನೋ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಬಂದಿರೋದು ಸಹಜ. ಈಗ ಘಟನೆಯ ಬಗ್ಗೆ ಬರೋಣ. ಕೆಲವು ದಿನಗಳ ಕೆಳಗೆ ನಾನು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ.

ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?

ಪ್ರೈಮರಿ ಶಾಲೆಯಿಂದ ಕಾಲೇಜಿನವರೆಗೆ ಕರ್ನಾಟಕದಲ್ಲಿ ಸಾವಿರಾರು ಹುಡುಗರು ( ಹುಡುಗಿಯರೂ ಕೂಡ) - ಸಾವಿರಾರು ಯಾಕೆ - ಲಕ್ಷಾಂತರ ಇರಬಹುದು ಕ್ರಿಕೆಟ್ ಆಡ್ತಾರೆ.

ಇದರಿಂದ ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ ಆಗಿದೆ ಅಂತ ನಂಗೊತ್ತಿಲ್ಲ.

ನಾನು ಕ್ರಿಕೆಟ್ ಆಡಲ್ಲ. ಹಿಂದೆ ಆಡಿರೋದೂ ಕಡಿಮೆ. ನೋಡೋ ಆಸಕ್ತೀನೂ ನನಗೆ ಇಲ್ಲ.

ಸಂಪದ :ಸಮುದಾಯಕ್ಕೆ ವರ

ನನಗೂ ಅಂತರ್ಜಾಲಕ್ಕೂ ಬಹಳ ನಂಟು. ಇತರರಿಂದ ಮೊದಲೇ ಅಂತರ್ಜಾಲದ ಬಗ್ಗೆ ಆಕರ್ಷಿತನಾದೆ. ಅದರೂ ಬಹಳ ಸಮಯ ಸಂಪದದ ಬಗ್ಗೆ ನನಗೆ ತಿಳಿದಿರಲಿಲ್ಲ.ಬಹುಶ: ಸಂಪದದ ಬಗೆಗಿನ ಸುಧಾ ಬರಹ(ಪವನಜ ಬರೆದದ್ದೇ?)ಓದಿದ ನಂತರವೇ ನಾನು ಇಲ್ಲಿ ನೋಂದಾಯಿಸಿಕೊಂಡೆ.

ಧಾರವಾಡದಲ್ಲಿ ಬಾಂಬ್

ಧಾರವಾಡದವರೇ ಸ್ವಲ್ಪ ಲಕ್ಷ ಕೊಟ್ಟು ನೋಡಿ.

http://www.rediff.com/news/2008/sep/26terror.htm

ಓದಿದ ತಕ್ಷಣ ಶಾಕ್ ಆಯಿತು. ಏನು ಬರೆಯಬೇಕೆಂದು ಗೊತ್ತಗಲ್ಲಿಲ್ಲ. ಪ್ಲೀಸ್ ಟೆಕ್ ಕೇರ್

ಕವಿತೆ

ಕವಿತೆ
ಕೈಯಲ್ಲಿ ಲೇಖನವಿರಲು ಮನದಲ್ಲಿ ಭಾವನೆ ಇರಲು.
ಆ ಭಾವನೆಗಲು ಮನಸ್ಸಿನಲ್ಲಿ ಅರಳಿ ಲೇಖನೆಗಳ ಮೊಲಕ
ಹಾಳೆಯ ಮೇಲೆ ಗೀಚಲು
ಅದುವೇ ಕವಿತೆ. ಅದುವೇ ಕವನ.||ಅ||

ಹೊರ ಹೊಮ್ಮುವ ಹಲವು ಭಾವನೆಗಳು .
ನೋಡಿದ ಸುಂದರ ತಾಣಗಳು.
ಕೇಳಿದ ಹಲವು ಮಾತುಗಳು.
ನುಡಿದ ಹಲವು ವಿಚಾರಗಳು ಅದುವೇ ಕವಿತೆ ಅದುವೇ ಕವನ||ಅ||

ಕವಿತೆ ಎಂಬುದು ಸುಂದರ ವಿಚಾರ.

ನಾಯಿ ಮನುಷ್ಯನನ್ನು ಕಚ್ಚಿದರೂ ಈಗ ಸುದ್ದಿ! ಕಾರಣ ಕಾಣದಂತೆ ನಾವು ‘ಕಚ್ಚಿದ್ದನ್ನು’ ಅವು ಹಾಗೆ ಸುದ್ದಿ ಮಾಡುತ್ತಿವೆ!

ಪತ್ರಿಕೋದ್ಯಮದ ಮೇಷ್ಟ್ರು ನಾನು. ಅರ್ಥಾತ್, ‘ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿ ಅಲ್ಲ; ಮನುಷ್ಯ ನಾಯಿಯನ್ನು ಕಚ್ಚಿದರೆ ಸುದ್ದಿ!’ ಎಂಬ ಸುದ್ದಿಯ ಪರಿಭಾಷೆಯನ್ನು ಹಿಡಿದು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುತ್ತಿರುವವ. ಹಾಗಂತ ನೀವೂ ಅಂದುಕೊಳ್ಳಿ. ಕರೆಯಿರಿ. ಆದರೆ ಕೆಲ ಪ್ರಗತಿಪರ ಸಂಪಾದಕರು ಈ ಪ್ರಯತ್ನವನ್ನು ಹೀಗಳೆಯುತ್ತಾರೆ.