ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

ಕೊಲಂಬಿಯ ಪೋಸ್ಟ್ ಆಫೀಸ್ ಬಗ್ಗೆ ಬರೆದ ಲೇಖನಕ್ಕೆ ಪೂರಕವಾಗಿ ಒಂದೆರಡುಮಾತುಗಳನ್ನು ಹೇಳಬಯಸುತ್ತೇನೆ. ನಮ್ಮ ಮುಂಬೈ ನ ಘಾಟ್ಕೋಪರ್ ಅಂಚೆಕಚೇರಿಯ ಚಿತ್ರವನ್ನು ನಾನು ಹಿಂದೆ ಪರಿಚಯಿಸಿದ್ದೆ. ಅದಕ್ಕೂ ಅಮೆರಿಕದ ಕೆಲಸದ ಪದ್ಧತಿಗಳಿಗೂ ಅಂತರ. ಬಡತನ, ಮುಖ್ಯವಲ್ಲ. ಬಡವನನ್ನೂ ಶುಚಿಯಾದ ಬಟ್ಟೆಧರಿಸಲು ಯಾರು ತಡೆಹಿಡಿದಿದ್ದಾರೆ ? ನಾವೆಲ್ಲಾ ಕಾಣುತ್ತಿರುವ ಪರಿಸ್ಥಿತಿ ಸರ್ವವಿತ.

ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..

I cried when I did not have shoes.
I stopped my crying when I saw a man having one leg.
Life is full of mysteries. Sometimes we understand;
and most of the times we do not!

ಎಂಬ ಕಿರು ಸಂದೇಶ ಹೊತ್ತ ಎಸ್.ಎಂ.ಎಸ್ ಬೆಳಿಗ್ಗೆ ನನ್ನ ಮೊಬೈಲ್ ಗೆ ತೂರಿಬಂತು. ಭಾರವಾಗಿದ್ದ ಮನಸ್ಸು ನಿರಾಳವಾಗಿ ಜೀವನ್ಮುಖಿಯಾಗಿತ್ತು. ಅಷ್ಟರಲ್ಲಿಯೇ ನನ್ನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂತು. ಸಹಿಸಲು ಅಸಾಧ್ಯವಾದ ವೇದನೆಯಾಯಿತು. ಇನ್ನು ಹೆತ್ತೊಡಲಿನ ಸಂಕಟ, ಸ್ನೇಹಿತರ, ಸಂಬಂಧಿಕರ ನೋವು ಆ ದೇವರಿಗೇ ಪ್ರೀತಿ. ಬೇಕು ಎಂಬ ಬೆಂಕಿ, ಬೇಡ ಎಂಬ ಗಾಳಿ ಕೂಡಿಕೊಂಡು ದೊಡ್ಡದೊಂದು ಜ್ವಾಲೆ ಭುಗಿಲೆದ್ದು ಎಲ್ಲರ ಸದುದ್ದೇಶಗಳನ್ನು ಭಸ್ಮ ಮಾಡುತ್ತದೆ ಅನ್ನಿಸಿತು.

IT - ಸಿಂಪ್ಟಮ್ಸ

ನೀವು ಈ IT ಇಂಡಸ್ಟ್ರಿ ನಲ್ಲಿ ತುಂಬ ದಿನಗಳಿಂದ ಇದ್ರೆ ... ಈ ಕೆಳಗಿನವು ನಿಮ್ಮ ಸಿಂಪ್ಟಮ್ಸ ಆಗಿರ್ತವೆ.

1. ನಿಮ್ಮ ಮನರಂಜನೆಯ ಮುಖ್ಯ ಮೂಲ , ಮುಖ ಪರಿಚಯವೂ ಮರೆತು ಹೋಗಿರುವಅಂತ?! ವ್ಯಕ್ತಿಗಳ forwards.. (ಮತ್ತು ಇಲ್ಲಿನವರಿಗೆ ಸಂಪದದ ಚರ್ಚೆ/ ಬ್ಲಾಗುಗಳು :) )











2. ನೀವು ನೀರಿಗಿಂತ ಹೆಚ್ಚಾಗಿ ಕಾಫಿ ಅತ್ವ ಟೀ ಕುಡಿಯುತ್ತೀರಿ.











ಬಿಟ್ಟು ಹೋದವಳಿಗಾಗಿ

ನಾನು ಪ್ರೀತಿಸಿದ ಹುಡುಗಿ ನನ್ನ ಪ್ರೀತಿಸಲಿಲ್ಲ
ನನ್ನ ಪ್ರೀತಿಸಿದ ಹುಡುಗಿಯ ನಾ ಪ್ರೀತಿಸಲಿಲ್ಲ
ಜೀವನದುದ್ದಕ್ಕೂ ಒಂಟಿತನವೇ ಕಾಡಿತಲ್ಲ
ಸುಖ ದುಃಖಗಳೆರಡು ನನ್ನಲ್ಲೇ ಹಂಚಿ ಹೋದವಲ್ಲ

ಅವಳಿಗಾಗಿ ನಾ ಮಾಡಿದೆ ಎಲ್ಲ ತ್ಯಾಗ
ಬಯಸುವೆ ಅವಲಿಗಿರಲೆಂದು ಸದಾ ಭೋಗ
ಚಡಪಡಿಸುತ್ತಿರುವ ಮನಕೆ ಬೇಕು ಒಲವಿನ ಸಹಯೋಗ

ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..

ಕೆಲವೊಮ್ಮೆ ಶಾಲಾಮಕ್ಕಳನ್ನು ನೋಡುವಾಗ ಹಾಗನ್ನಿಸುತ್ತದೆ. ಸುಡು ಬಿಸಿಲಿರುತ್ತದೆ. ಆಹೊತ್ತಿನಲ್ಲೂ ನೀಲಿಬಣ್ಣದ ಕೋಟು, ಕಪ್ಪು ಬೂಟಿನೊಳಕ್ಕೆ ತಮ್ಮನ್ನು ತುರುಕಿಕೊಂಡು, ೭-೮ ಕೆ.ಜಿ.

ನೀರವತೆ!

ಇದೇನು ಕಕ್ಕುಲತೆಯೋ ಕಾಣೆ!
ಇರೆಂದೊಡನಿರದೆ...
ಬಿಡದೆ ತಿರು ತಿರುಗಿ ಬಂದು
ಮನಸಿನುಲ್ಲಾಸಗಳ
ಹುಚ್ಚೆದ್ದು ಕುಣಿಸಿ
ರಮಿಸಿ ವಿರಮಿಸಿ
ಶಾಂತವೆನುತಿರುವಾಗ
ಮತ್ತದೇ ನೀರವತೆ!

ಮನದ ದುಗುಡವನೆಲ್ಲ
ಕಿತ್ತೊಗೆದು
ಅಣಿಯಾದಂತೆಲ್ಲ...
ತಿರುತಿರುಗಿ ಕಾಡುವಾ
ನೀರವತೆ!

-ಸವಿತ

’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?

ನಾನು ಹಾಯ್ ಬೆ೦ಗಳೂರಿನ ಅಭಿಮಾನಿ.ಆದರೆ ಇತ್ತೀಚೆಗೆ ಯಾಕೋ ಪತ್ರಿಕೆ ಕೀಳು ಮಟ್ಟಕ್ಕೆ ತಲುಪಿದೆಯೆನಿಸುತ್ತಿದೆಯೆನಿಸುತ್ತದೆ.ಟಾಬ್ಲಾಯ್ಡ್ ಪತ್ರಿಕೆಗಳಲ್ಲಿ ಸ್ವಲ್ಪ ಗುಣಮಟ್ಟದ ಪತ್ರಿಕೆಗಳಲ್ಲಿ ಹಾಯ್ ಬೆ೦ಗಳೂರು ಒ೦ದಾಗಿತ್ತು.ಆದರೆ ಇತ್ತೀಚಿನ ಲೇಖನಗಳನ್ನು ,ಲೇಖನದ ಶೈಲಿಯನ್ನು ಗಮನಿಸಿದಾಗ ಯಾಕೋ ಪತ್ರಿಕೆ ಅಡ್ಡದಾರಿ ಹಿಡಿದಿದೆ ಎನಿಸುತ್ತಿದೆ.ಸ೦ಪದದಲ್ಲಿ ಯ

ಮುಸುಱ್/ಮುಸುಱು

ಮುಸುಱ್, ಮುಸುಱು (ಕ್ರಿಯಾಪದ)=ಮುತ್ತು, ಆವರಿಸು, ಮುಗಿಬೀೞು
ಉದಾಹರಣೆ: ಸಕ್ಕರೆಗೆ ಇಱುವೆಗಳು ಮುಸುಱುತ್ತವೆ.

ಭೂತಕೃದ್ವಾಚಿ: ಮುಸುಱಿ
ವರ್ತಮಾನಕೃದ್ವಾಚಿ: ಮುಸುರ್ವ/ಮುಸುಱುವ

’ಕೊಲಂಬಿಯ ಪೋಸ್ಟ್ ಆಫೀಸ್’

ಅಮೆರಿಕದಲ್ಲಿ ಬಂದು ಎರಡು ತಿಂಗಳಾಗಿವೆ. ನಾನು ಒಮ್ಮೆ ಮಿಸ್ಸೂರಿ ರಾಜ್ಯದ ’ಬೂನ್ ಕೌಂಟಿ,’ ಯಲ್ಲಿರುವ, ಒಂದು ಅಂಚೆ-ಕಚೇರಿಯ ದರ್ಶನಮಾಡಿ, ಸುಮಾರು ಎರಡುಗಂಟೆ ಅಲ್ಲೇ ಕುಳಿತು ವಿದ್ಯಮಾನಗಳನ್ನೆಲ್ಲಾ ವೀಕ್ಷಿಸುತ್ತಿದ್ದೆ.

ಅದರ ಒಂದು ಸಮೀಕ್ಷೆ ಹೀಗಿದೆ  :

ನೋಡಿ. ಕೊಲಂಬಿಯ ಹಳ್ಳಿಯ ಅಂಚೆ ಕಚೇರಿಯ ಕಟ್ಟಡವನ್ನು ೧೯೬೬ ರಲ್ಲಿ ಲಿಂಡನ್. ಬಿ. ಜಾನ್ಸನ್ ರವರು ಉದ್ಘಾಟಿಸಿದರು. ಅಂಚೆಕಚೇರಿಯನ್ನು ನೋಡಿದಾಗ ಆದ ಆನಂದ, ವಿಸ್ಮಯದಿಂದ ನನಗೆ ಒಮ್ಮೆಲೇ ದೀರ್ಘವಾದ ಉಸಿರುಬಿಟ್ಟಂತಾಗಿತ್ತು. ಕಾರಣ ಇಷ್ಟೆ. ನಾನು ನಮ್ಮ ಮುಂಬೈ ನ ಘಾಟ್ಕೋಪರಿನ ಅಂಚೆ ಕಚೇರಿಯನ್ನು ಇದಕ್ಕೆ ಹೋಲಿಸಿದಾಗ, ನಾಚಿಗೆಯಾಯಿತು. ಕೊಲಂಬಿಯ ಒಂದು ಹಳ್ಳಿ. ಎಂತಹ ಅಚ್ಚುಕಟ್ಟು. ಒಂದು ಯಾವುದೋ ನವ-ಬ್ಯಾಂಕಿಗೆ ಹೋದಂತಹ ಅನುಭವ ! ಅಲ್ಲಿನ ಕೌಂಟರಿನಲ್ಲಿ ಕುಳಿತ ನೌಕರರು ಎಷ್ಟು ವಿನಯ, ಹಾಗೂ ಪ್ರೀತಿಗಳಿಂದ ಎಲ್ಲರೊಡನೆ ನಡೆದುಕೊಳ್ಳುವ ರೀತಿ ಅದ್ಭುತವಾಗಿತ್ತು. ಅಲ್ಲಿನ ವ್ಯವಸ್ಥೆಗಳನ್ನು ನಾವು ಮೆಚ್ಚಲೇಬೇಕು.

ಪೋಸ್ಟ್ ಆಫೀಸ್ ಎಂದು ಯಾರೂ ಅದರ ವ್ಯವಸ್ಥೆಯನ್ನು ಅಲ್ಲಗಳೆಯುವುದಿಲ್ಲ. ಎಲ್ಲರೂ ಸುಮಾರು ನಮ್ಮದೇಶದಷ್ಟೇ ಹಳೆಯ ಪೋಸ್ಟ್ ಆಫೀಸ್ ನ್ನು ಆದರಿಸಿ ಗೌರವಿಸುತ್ತಾರೆ. ತಮ್ಮಕೆಲಸದ ಬಗ್ಗೆ ಆತ್ಮವಿಶ್ವಾಸ ಹಾಗೂ ಗೌರವವಿದೆ. ಕೆಲವು ಶಾಖೆಗಳನ್ನು ಉತ್ತಮಗೊಳಿಸಿದ್ದಾರೆ. ಎಲ್ಲೆಲ್ಲಿ ತೊಂದರೆಯಿದೆಯೋ ಅದನ್ನು ಸುಲಲಿತಗೊಳಿಸಲು, ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುವ ಬಗ್ಗೆ ಅಲ್ಲಿ ಕೆಲಸಮಾಡುವ ನೌಕರರು ತಮ್ಮ ಸ್ವಬುದ್ಧಿಯಿಂದ ಕೆಲಸಗಳನ್ನು ನಿರ್ವಹಿಸುತ್ತಾರೆ.

ಬೇರೆ ಖಾಸಗೀ ಸಂಸ್ಥೆಗಳಿಗೆ ಹೋಲಿಸಿದರೆ, ಕಟ್ಟಡ ಅಷ್ಟೇನೂ ಆಧುನಿಕವಾಗಿಲ್ಲ. ಎಷ್ಟು ಅಚ್ಚುಕಟ್ಟು, ಶುಚಿ. ಏನಾದರೂ ಸಹಾಯಮಾಡಲು ಕಾತುರರಾಗಿರುವ ಸಿಬ್ಬಂದಿವರ್ಗ. ನನ್ನ ಕೆಲಸಮುಗಿಯಿತು. ಬೇರೆ ಕೌಂಟರ್ ಗೆ ಹೋಗಿ ಯೆನ್ನುವ ಮಾತೇಇಲ್ಲ. ಕ್ಯೂನಲ್ಲಿನ ಜನರೆಲ್ಲಾ ಹೋದಮೇಲೆ, ತಮ್ಮ ಗೆಳೆಯ/ಗೆಳತಿಗೆ ತಮ್ಮ ಮುಂದಿನಕೆಲಸದ ಬಗ್ಗೆ ಪೂರ್ಣ ಮಾಹಿತಿಕೊಟ್ಟು ಜವಾಬ್ದಾರಿಯನ್ನು ಒಪ್ಪಿಸಿ, ತಾವು ಮನೆಗೆ ಹೋಗುವ ದೃಷ್ಯವನ್ನು ಕಂಡಾಗ, ನಮಗೆ ಅಮೆರಿಕನ್ ಕಾರ್ಯ-ವೈಖರಿಯ ಸೂಕ್ಷ್ಮ ಪರಿಚಯವಾಗುತ್ತದೆ. ಯಾವ ವಲಯದಲ್ಲಾದರೂ ಅಮೆರಿಕನ್ ಕೆಲಸದ ವಾತಾವರಣ ಎಂತಹವರಿಗೂ ಸ್ಪೂರ್ಥಿದಾಯಕ.