ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

ಬರಹ

ಕೊಲಂಬಿಯ ಪೋಸ್ಟ್ ಆಫೀಸ್ ಬಗ್ಗೆ ಬರೆದ ಲೇಖನಕ್ಕೆ ಪೂರಕವಾಗಿ ಒಂದೆರಡುಮಾತುಗಳನ್ನು ಹೇಳಬಯಸುತ್ತೇನೆ. ನಮ್ಮ ಮುಂಬೈ ನ ಘಾಟ್ಕೋಪರ್ ಅಂಚೆಕಚೇರಿಯ ಚಿತ್ರವನ್ನು ನಾನು ಹಿಂದೆ ಪರಿಚಯಿಸಿದ್ದೆ. ಅದಕ್ಕೂ ಅಮೆರಿಕದ ಕೆಲಸದ ಪದ್ಧತಿಗಳಿಗೂ ಅಂತರ. ಬಡತನ, ಮುಖ್ಯವಲ್ಲ. ಬಡವನನ್ನೂ ಶುಚಿಯಾದ ಬಟ್ಟೆಧರಿಸಲು ಯಾರು ತಡೆಹಿಡಿದಿದ್ದಾರೆ ? ನಾವೆಲ್ಲಾ ಕಾಣುತ್ತಿರುವ ಪರಿಸ್ಥಿತಿ ಸರ್ವವಿತ.

ಆದರೆ ನಾನು ಇಲ್ಲಿ ಎಲ್ಲರ ಗಮನಕ್ಕೆ ತರಲು ಪ್ರಯತ್ನಿಸಿದ್ದು ನಮ್ಮ ವಿಫಲತೆಯನ್ನು ಮಾತ್ರ. ಮಾನಸಿಕ ಸ್ಥಿತಿಯನ್ನು ಅಷ್ಟೆ. ಸ್ವಲ್ಪ ಮನಸ್ಸು ಮಾಡಿದರೆ ಕೆಲವೊಂದು ಉತ್ತಮ ಸಿದ್ಧತೆಯನ್ನು ನಾವೂ ಮಾಡಬಹುದಲ್ಲಾ ಎನ್ನುವ ವಿಷಯವನ್ನು ಪ್ರಸ್ತಾಪಿಸಿದೆನೇ ಹೊರತು ನಮ್ಮ ಅವಹೇಳನ ಅಥವಾ ಅಮೆರಿಕದ ಜನರ ಮುಖ ಸ್ತುತಿಯಲ್ಲ.

ಉದಾ : ನಮ್ಮ ಅಣ್ಣನವರು ಸುಮಾರು ೧೦ ವರ್ಷ, ಪೋಸ್ಟ್ ಮಾಸ್ಟರ್ ಆಗಿ, ಚಿತ್ರದುರ್ಗ, ಶಿವಮೊಗ್ಗಾ ಜಿಲ್ಲೆಗಳಲ್ಲಿ ಕೆಲಸಮಾಡಿ ಕೆಲವೊಂದು ಸುಧಾರಣೆಗಳನ್ನು ಮಾಡಿದ್ದನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ಅವರ ಸಹೋದ್ಯೋಗಿಯೊಬ್ಬರು, ಹಿರಿಯರು, ತಮ್ಮ ಮನೆಯ ಯಾವುದೋ ತುರ್ತು ಕಾರ್ಯಕ್ಕಾಗಿ ರಜೆಯನ್ನು ಪಡೆಯಬೇಕಾಯಿತು. ಆದಿನ ೫ ಗಂಟೆಗೆ ತಮ್ಮ ಕ್ಯಾಶ್ ಪೆಟ್ಟಿಗೆಯ ಲೆಕ್ಕ ಮಾಡಿ ತಾಳೆ ಆದಮೇಲೆ ಬೇರೆಯವರಿಗೆ ಚಾರ್‍ಜ್ ಕೊಟ್ಟು ಹೋಗಬೇಕಾಗಿತ್ತು. ಒಂದುಕಾಸು ಹೆಚ್ಚು-ಕಡಿಮೆಯಾದರೂ ಜಾಗಬಿಡುವಂತಿಲ್ಲ. ಇದು ನಿಯಮ. ನಮ್ಮ ಅಣ್ಣ ಅವರಿಗೆ ಸಹಾಯಮಾಡಲು ಒಪ್ಪಿ ಪೆಟ್ಟಿಗೆಯ ಹಣ ಎಣಿಸದೆ ಚಾರ್‍ಜ್ ತೆಗೆದುಕೊಂಡು ಆ ಹಿರಿಯ ವ್ಯಕ್ತಿಯನ್ನು ಕಳಿಸಿಕೊಟ್ಟರಂತೆ. ಸಮಯದ ನಂತರವೂ ಸಾರ್ವಜನಿಕರಿಗೆ ಸಹಾಯಮಾಡಿದ್ದು, ಮೇಲಿನ ಅಧಿಕಾರಿಗಳಿಗೆ ಸುಗಮಕೆಲಸದ ಸಲುವಾಗಿ ಕೆಲವೊಂದು ತಿದ್ದುಪಡಿಗಳನ್ನು ಮಾಡಲು ತಿಳಿಯಹೇಳಿ ಅದರಲ್ಲಿ ಅವರ ಮನ ಒಲಿಸಿಕೊಂಡಿದ್ದು, ದೈನಿಂದಿಕ ಕಾರ್ಯಗಳಲ್ಲಿ ಕೆಲವು ಸುಲಭೋಪಾಯಗಳನ್ನು ಕಂಡುಹಿಡಿದು ಅವನ್ನೆಲ್ಲಾ ಅನುಷ್ಠಾನಕ್ಕೆ ತಂದದ್ದು. ಇತ್ಯಾದಿಗಳು.

ಕಟ್ಟಡ ಚಿಕ್ಕದು, ಹಳೆಯದಾಗಿರಬಹುದು. ವಿದ್ಯುತ್ ಇಲ್ಲ. ಇದು ಹೊಸದಲ್ಲ. ಆದರೆ ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ; ಇದಕ್ಕೇನು ಮಾಡುವುದು ಹೇಳಿ ?

ಇಲ್ಲೇ ನಾವೆಲ್ಲಾ ಭಾರತೀಯರು ಹಿಂದೆಬಿದ್ದಿರುವುದು. ಕಡಿಮೆಬೆಲೆಯಲ್ಲಿ ಕಟ್ಟಡ ಕಾಂಟ್ರಾಕ್ಟ್ ಗಳಿಸಿ ಕಳಪೆಯ ಪದಾರ್ಥಗಳನ್ನು ಬಳಸುತ್ತಾರಲ್ಲ ಅದನ್ನು ನಾನು ಖಂಡಿಸುವುದು !