ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದಿಗರಿಗೆ ವಿದಾಯ...

ಆತ್ಮೀಯ ಸಂಪದಿಗರಿಗೆ,

ಕಾರಣಾಂತರಗಳಿಂದ ಸಂಪದದಲ್ಲಿರುವ ನನ್ನ ಬ್ಲಾಗ್‌ಗೆ ವಿದಾಯ ಹೇಳುತ್ತಿದ್ದೇನೆ. ಇದಕ್ಕೆ ಖಿನ್ನತೆ ಖಂಡಿತ ಕಾರಣವಲ್ಲ.

ಇಷ್ಟು ದಿನಗಳ ಕಾಲ ನನ್ನ ಬರಹಗಳನ್ನು ಪ್ರಕಟಿಸಲು ಅವಕಾಶ ಹಾಗೂ ಪ್ರೋತ್ಸಾಹ ನೀಡಿದ ಹರಿಪ್ರಸಾದ ನಾಡಿಗ್‌, ಮೆಚ್ಚುಗೆ ವ್ಯಕ್ತಪಡಿಸಿದ ಸಂಪದಿಗರು, ಪ್ರತಿಕ್ರಿಯೆ ಬರೆದು ಪ್ರೋತ್ಸಾಹಿಸಿದ ಎಲ್ಲರಿಗೂ ಋಣಿ.

ಕಚೇರಿ ಎಂಬ ನರಕ-೨

"ಬಹಳ ಕಷ್ಟ"

ಹಾಗ೦ತ ನಾವೆಲ್ಲಾ ಎಷ್ಟು ಸಾರಿ ಅ೦ದುಕೊ೦ಡಿಲ್ಲ? ಸೀಟು ಹಿಡಿಯುವುದರಿ೦ದ ಹಿಡಿದು ಪ್ರಶಸ್ತಿ ಪಟ್ಟಿಯಲ್ಲಿ ಸೀಟು ಗಿಟ್ಟಿಸುವವರೆಗೆ, ಬರೆದ ಲೇಖನ ಪ್ರಕಟವಾಗುವದರಿ೦ದ ಹಿಡಿದು ಪತ್ರಿಕೆಯೊ೦ದನ್ನು ಯಶಸ್ವಿಯಾಗಿ ನಡೆಸುವ ತನಕ ಪ್ರತಿಯೊ೦ದು ಕೆಲಸವೂ ಕಷ್ಟಕರವೇ. ಬರೀ ಕಷ್ಟವಲ್ಲ. "ಬಹಳ ಕಷ್ಟ".

ಸಾಧ್ಯವಾದರೆ ಒಮ್ಮ್ಮೆ ನೋಡಿ.

’ಮುಂಬೈ ಮೇರಿ ಜಾನ್’ ಒಂದು ಸದಭಿರುಚಿಯ ಚಿತ್ರ. ಮುಂಬೈ ನನ್ನ ಪ್ರೀತಿಯ ಊರು ಅನ್ನುವ ಕಾರಣಕ್ಕಷ್ಟೆ ಹೇಳುತ್ತಿಲ್ಲ ನಾನು, ೨೦೦೬ರಲ್ಲಿ ಲೋಕಲ್ ಟ್ರೇನ್‍ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಂತರ ಮುಂಬೈ ಜೀವಗಳ ತಲ್ಲಣಗಳನ್ನು ವೈಭವಿಕರಿಸದೆ ತುಂಬಾ ನೈಜವಾಗಿ ಚಿತ್ರಿಸಿರುವುದು ಇಷ್ಟವಾಯಿತು. ಜೊತೆಗೆ ಎಲ್ಲಾ ಕಲಾವಿದರ ಅಭಿನಯ ಅಭಿನಂದನೀಯ.

ಅಮೆರಿಕದ ಕನ್ನಡ ಕೂಟಗಳ ಆಗರ "ಅಕ್ಕ," ವಿಶ್ವದ ಅನೇಕ ಕನ್ನಡಕೂಟಗಳ ಆಗರವೂ ಹೌದು !

* ಅಮೆರಿಕ ಕನ್ನಡ ಕೂಟಗಳ ಆಗರ "ಅಕ್ಕ" ಮತ್ತು ಸ್ಥಳೀಯ ವಿದ್ಯಾರಣ್ಯ ಕನ್ನಡ ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಅದ್ದೂರಿಯಾಗಿ ಮತ್ತು ಅಚ್ಚುಕಟ್ಟಾಗಿ ನಡೆಯುತ್ತಿವೆ. ಆಗಸ್ಟ್, ೨೯, ಶುಕ್ರವಾರ ಸಾಯಂಕಾಲ ಆರಂಭವಾದ ಕಾರ್ಯಕ್ರಮಗಳು ೩೧, ರವಿವಾರದ ಸಾಯಂಕಾಲ ಕೊನೆಗೊಳ್ಳಲಿವೆ.

ೞ ಮತ್ತು ಳ ನಡುವಿನ ಅರ್ಥವ್ಯತ್ಯಾಸ ಈ ಪದ್ಯ ಅರ್ಥ ಮಾಡಿಕೊಂಡಾಗ

ಬಾಳೆಯ ಹೆಜ್ಜೆಯ ನೀರೊಳು ಗುಱುತಿಸುವುದು
ಬಾೞೆಹಣ್ಣು ತಿಂದಂತಲ್ಲ
ಬಾೞುವಾಗ ನೀತಿಗೆಡದಂತೆ ನಡೆವುದು
ಬಾಳಲುಗ ಮೇಲೆ ನಡೆದಂತೆ||

ಈ ಮೇಲಿನ ಪದ್ಯ ೞ ಮತ್ತು ಳ ಕಾರದ ಪದಗಳ ಅರ್ಥವ್ಯತ್ಯಾಸ ಕುಱಿತು ಹೇೞುವ ಸರಳ ಪದ್ಯ.

ಪೊಲೀಸರಂದ್ರೇ ಭಯಾ ಯಾಕೆ ?

ಹೀಗೆ ಎಂದಿನಂತೆ ಶನಿವಾರ ಸಂಜೆ ಸ್ಟುಡಿಯೋದಲ್ಲಿ ಲೈವ್ ಕಾರ್ಯಕ್ರಮ ನಡೆಸುತ್ತಿದ್ದೆ. ಅದು ಒರಿಸ್ಸಾದಲ್ಲಿನ ಕ್ರೈಸ್ತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಕ್ರೈಸ್ತ ಶಾಲೆಗಳು ರಾಜ್ಯದಲ್ಲಿ ಬಂದ್ ಮಾಡಿದ್ದ ಬಗ್ಗೆ ಪರ ವಿರೋದ ಚರ್ಚೆ ನಡೆಯುತ್ತಿತ್ತು. ಹಠಾತ್ತಾಗಿ ಒಂದು ಘಟನೆ ನಡೆಯಿತು.

ಮಾನವತೆಯ ಬೆಳೆಗಾರ ಫುಕುವೋಕಾ

ಮಾನವತೆಯ ಬೆಳೆಗಾರ ಫುಕುವೋಕಾ

ನಮ್ಮ ಬಹು ಪ್ರಾಚೀನ 'ಪ್ರಗತಿಪರ' ರೈತರಾದ ಶಿವಮೊಗ್ಗದ ಪ್ರಫುಲ್ಲಚಂದ್ರ ಕೊನೆಗೂ ತಮ್ಮ ಗದ್ದೆಯ ಕೂಳೆಯನ್ನು ಕಡಿದು ಹಾಕಿದ ದಿನವೇ, ಕೃಷಿಋಷಿ ಮಸನೊಬು ಫುಕುವೊಕಾ ನಿಧರಾದ ಸುದ್ದಿ ಬಂದಿದೆ! ಪ್ರಫುಲ್ಲಚಂದ್ರ 28 ವರ್ಷಗಳ ಕಾಲ ಕಬ್ಬಿನ ಕೂಳೆ ಕಡಿಯದೆ, ಅದರ ಮೇಲೇ ಕಬ್ಬು ಬೆಳೆಯುತ್ತಾ, ಹೆಚ್ಚಿನ ಇಳುವರಿಯ ಸಾಧನೆಯನ್ನೂ ಮಾಡಿ ನಮ್ಮೆಲ್ಲರ ಗಮನ ಸೆಳೆದಿದ್ದವರು. ನಮಗೆ ಅವರೇ 90ರ ದಶಕದಲ್ಲಿ ಫುಕುವೊಕಾರ ಕೃಷಿ 'ದರ್ಶನ'ವಾಗುವ ಮುನ್ನ ಪ್ರಾಕೃತಿಕ ಬೇಸಾಯದ ಮರ್ಮವನ್ನು ತಮ್ಮ 'ಪ್ರಯೋಗಶೀಲತೆ'ಯ ಮೂಲಕ ಪರಿಚಯ ಮಾಡಿಕೊಟ್ಟಿದ್ದವರು.

ಆದರೆ ಫುಕೊವೊಕಾ ತಮ್ಮ 'ಒಂದು ಹುಲ್ಲಿನ ಕ್ರಾಂತಿ'ಯ ಮೂಲಕ (ಕನ್ನಡ ಅನುವಾದ: ಸಂತೋಷ ಕೌಲಗಿ ಪ್ರ: ಜನಪದ ಸೇವಾಟ್ರಸ್ಟ್, ಮೇಲುಕೋಟೆ) ನಮಗೆ ಪರಿಚಯವಾದ ಮೇಲೆ, 'ಪ್ರಗತಿಪರತೆ' ಮತ್ತು 'ಪ್ರಯೋಗಶೀಲತೆ' ಎಂಬ ಶಬ್ದಗಳ ಅರ್ಥಗಳೇ ಸಂಪೂರ್ಣ ಪಲ್ಲಟಗೊಂಡಿವೆ. ಹಾಗೆ ನೋಡಿದರೆ, ಫುಕುವೊಕಾರನ್ನು ಕೃಷಿಋಷಿ ಅಥವಾ ಅವರ ವಿಚಾರಗಳನ್ನು ಕೃಷಿದರ್ಶನ ಎಂದು ಕರೆಯುವುದು ಫುಕುವೊಕಾರಿಗೆ ಅನ್ಯಾಯ ಮಾಡಿದಂತೆ. ಏಕೆಂದರೆ, ನಾನೇನೂ ರೈತನಲ್ಲ. ಆದರೆ ಅವರ 'ಒಂದು ಹುಲ್ಲಿನ ಕ್ರಾಂತಿ' ಓದಿದ ನಂತರ ಬದುಕನ್ನು ಕುರಿತ ನನ್ನ ನೋಟವೇ ನಿರ್ಣಾಯಕ ರೀತಿಯಲ್ಲಿ ಬದಲಾಯಿತು. ನನ್ನ ಗ್ರಂಥ ಭಂಡಾರದಲ್ಲಿ ನೂರಾರು ಪುಸ್ತಕಗಳಿವೆ. ಅದರಲ್ಲಿನ ಅತಿ ಶ್ರೇಷ್ಠ ಪುಸ್ತಕ ಯಾವುದು ಎಂದು ಯಾರಾದರೂ ಕೇಳಿದರೆ, ನನ್ನ ಸರಳ ಉತ್ತರ: 'ಒಂದು ಹುಲ್ಲಿನ ಕ್ರಾಂತಿ'. ಭತ್ತದ ಬೆಳೆಯ ಪ್ರಾಕೃತಿಕ ಕೃಷಿಯ ತತ್ವಗಳನ್ನು ಪರಿಚಯಿಸುತ್ತಾ ಹೊರಡುವ ಈ ಪುಟ್ಟ ಪುಸ್ತಕ ಸಹಜ ಕಾವ್ಯದಂತೆ ನಮ್ಮನ್ನು ಸೆಳೆಯುತ್ತಾ, ಬುದ್ಧದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಇದನ್ನು ನಾನು ಒಂದಲ್ಲ ಒಂದು ನೆಪದಲ್ಲಿ ವರ್ಷಕ್ಕೆರಡು ಬಾರಿ ಕಡ್ಡಾಯವಾಗಿ ಓದುತ್ತೇನೆ. ದಿನನಿತ್ಯದ ವ್ಯವಹಾರಗಳಲ್ಲಿ ಮನಸ್ಸಿನ ಮೇಲೆ ಬೀಳುವ ಧೂಳು ಮತ್ತು ಕಟ್ಟಿಕೊಳ್ಳುವ ಕಿಟ್ಟವನ್ನು ಸ್ವಚ್ಛಗೊಳಿಸಿಕೊಳ್ಳಲು!

ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ _ ರೈತ ಭಾರತ: ಅವಸಾನದ ಅಂಚಿನಲ್ಲಿ

ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ _ ರೈತ ಭಾರತ: ಅವಸಾನದ ಅಂಚಿನಲ್ಲಿ