ಅಮೆರಿಕದ ಕನ್ನಡ ಕೂಟಗಳ ಆಗರ "ಅಕ್ಕ," ವಿಶ್ವದ ಅನೇಕ ಕನ್ನಡಕೂಟಗಳ ಆಗರವೂ ಹೌದು !

ಅಮೆರಿಕದ ಕನ್ನಡ ಕೂಟಗಳ ಆಗರ "ಅಕ್ಕ," ವಿಶ್ವದ ಅನೇಕ ಕನ್ನಡಕೂಟಗಳ ಆಗರವೂ ಹೌದು !

ಬರಹ

* ಅಮೆರಿಕ ಕನ್ನಡ ಕೂಟಗಳ ಆಗರ "ಅಕ್ಕ" ಮತ್ತು ಸ್ಥಳೀಯ ವಿದ್ಯಾರಣ್ಯ ಕನ್ನಡ ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಅದ್ದೂರಿಯಾಗಿ ಮತ್ತು ಅಚ್ಚುಕಟ್ಟಾಗಿ ನಡೆಯುತ್ತಿವೆ. ಆಗಸ್ಟ್, ೨೯, ಶುಕ್ರವಾರ ಸಾಯಂಕಾಲ ಆರಂಭವಾದ ಕಾರ್ಯಕ್ರಮಗಳು ೩೧, ರವಿವಾರದ ಸಾಯಂಕಾಲ ಕೊನೆಗೊಳ್ಳಲಿವೆ.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಸ್ತುತಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ನೃತ್ಯಗಳು (ಬಹುತೇಕವಾಗಿ ಆತಿಥೇಯ ವಿದ್ಯಾರಣ್ಯ ಕನ್ನಡ ಕೂಟದವರ ಪ್ರಸ್ತುತಿಗಳು) ಸುಂದರವಾಗಿ ಮೂಡಿಬಂದವು. ಇಲಿನಾಯ್ ಸಂಸ್ಥಾನದ ರಾಜ್ಯಪಾಲ(ಗವರ್ನರ್)ರಾದ ರಾಡ್ ಬ್ಲಾಗೊಯೆವಿಚ್ ಅವರು ತನ್ನ ಭಾಷಣವನ್ನು ನಮಸ್ತೆ ನಮಸ್ಕಾರ... ದಿಂದ ಆರಂಭಿಸಿದಾಗ ಕಿವಿಗಡಚಿಕ್ಕುವ ಚಪ್ಪಾಳೆ.. ಇಲಿನಾಯ್ ಗವರ್ನರ್ ಭಾಷಣದ ನಂತರ ಇಲಿನಾಯ್ ಮತ್ತು ಕರ್ನಾಟಕ ರಾಜ್ಯಗಳ ಸ್ನೇಹದ ಸಂಕೇತವೆಂದು ಯಡಿಯೂರಪ್ಪನವರಿಗೆ ಒಂದು ಪುಟ್ಟ ಉಡುಗೊರೆಯನ್ನು ಕೊಟ್ಟರು ವಿದ್ಯಾರಣ್ಯ ಕನ್ನಡಕೂಟದ ಅಧ್ಯಕ್ಷ ಜಗನ್ನಾಥ ನಾಯಕ್ (ಮೂಲತಃ ಉಡುಪಿ ಸಮೀಪದ ಕುಂಜಾಲಿನವರು, ಆದರೆ ಶಿಕಾಗೊ ಕನ್ನಡಿಗರ ಪೈಕಿ ಮೂಲನಿವಾಸಿ) ಅವರು ತಮ್ಮ ಹಾಸ್ಯಮಿಶ್ರಿತ ಭಾಷಣದಲ್ಲಿ ಪಕ್ಕಾ ಮಂಗಳೂರುಕನ್ನಡದಲ್ಲಿ "ನಾವು ಈ ಸಲ ಸಮ್ಮೇಳನವನ್ನು ಭಯಂಕರವಾಗಿ ಹಮ್ಮಿಕೊಂಡಿದ್ದೇವೆ. ಇದುವರೆಗಿನ ‘ಅಕ್ಕ" ಸಮ್ಮೇಳನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಂದು ಭಾಗವಹಿಸುವುದು ಸಾದ್ಯವಾಗಿರಲಿಲ್ಲ. ಆದರೆ ಈಸಲ ಒಬ್ಬರಲ್ಲ ಇಬ್ಬರು "ಮುಖ್ಯಮಂತ್ರಿ"ಗಳು ವೇದಿಕೆಯ ಮೇಲೆ ರಾರಾಜಿಸುವಂತಾಗಿದೆ ಎಂದಾಗ ಅವರ ಅನಂದಕ್ಕೆ ಎಲ್ಲೆಯಿರಲಿಲ್ಲ.

ಚಿಕಾಗೋನಗರದ, ’ಎಂಬೆಸಿ ಸ್ವೀಟ್ಸ್ ಹೋಟೆಲ್,’ ನ ಪಕ್ಕದಲ್ಲಿರುವ 'ಡೋನಾಲ್ಡ್ ಇ. ಸ್ಟಿಫೆನ್ಸ್ ಕನ್ವೆನ್ಷನ್ ಸೆಂಟರ್,' ನ ಭವ್ಯ ಭಾರಿ-ದೊಡ್ಡ ಸಭಾಂಗಣದಲ್ಲಿ ಆಯೋಜಿಸಿದ್ದ ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಗಮವಾಗಿಸಾಗಿದವು. ಸುಮಾರು ೩,೦೦೦ ಕ್ಕೂ ಹೆಚ್ಚು ’ಕನ್ನಡ ಡೆಲಿಗೇಟ್’ ಗಳು ಭಾಗವಹಿಸಿದ್ದ ಈಕಾರ್ಯಕ್ರಮದಲ್ಲಿ ಆಯೋಜಿಸಿದ, ಊಟ, ತಿಂಡಿ, ಕಾಫಿವ್ಯವಸ್ಥೆಗಳು ಅತ್ಯುತ್ತಮ ಮಟ್ಟದ್ದಾಗಿದ್ದವು.

-ನಮ್ಮ ಆಲ್ಬಮ್ ಚಿತ್ರ.