ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ಭಾಷೆ ಎಷ್ಟು ಹಳೆಯದು?

ಈ ಹಿಂದೆ ನಾನು "ನಿಮಗೆ ಕನ್ನಡ ಬರುತ್ತಾ?" ಎಂಬ ಲೇಖನ ಬರೆದಿದ್ದಾಗ ಹಲವಾರು ಸಂಪದಿಗರು ತಮ್ಮ ತಾಯಿ ಭಾಷೆ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಆಗ ನನ್ನ ಹಾಗೂ "ಅಪ್ಪಟ ಕನ್ನಡಾಭಿಮಾನಿ" ಎಂದು ಸಂಪದ ಬಳಗದಲ್ಲಿ ಗುರುತಿಸಿಕೊಂಡಿರುವ ಮಹೇಶ(ಮಾಯ್ಸ)ರ ನಡುವೆ ತೀವ್ರ ವಾಗ್ವಾದವೇ ಏರ್ಪಟ್ಟಿತ್ತು.

ಮಧ್ಯರಾತ್ರಿಯ ಬುದ್ಧ

ಮನೆಯ ಲೈಟುಗಳು ಒಂದೊಂದಾಗಿ ಆರುತ್ತಿವೆ. ರಾತ್ರಿ ಹನ್ನೊಂದಾದ ಮೇಲೆ ಲೈಟುಗಳಿಗೇನು ಕೆಲಸ?

ಊಟವಾಗಿದೆ. ಟಿವಿ ನ್ಯೂಸ್‌ ನೋಡಿದ್ದಾಯಿತು. ರಸ್ತೆಗಳು ಯಾವಾಗಲೋ ನಿರ್ಜನವಾಗಿವೆ. ರಾತ್ರಿ ಯಾವಾಗ ಬೇಕಾದರೂ ಮಳೆ ಬರಬಹುದು. ರಾತ್ರಿ ಬೀಟ್‌ನ ಪೋಲೀಸರು ಬೈಕ್‌ ಮೇಲೆ ಬೇಸತ್ತವರಂತೆ ಸುತ್ತುತ್ತಿದ್ದಾರೆ. ಇನ್ನೂ ಬಾಗಿಲು ತೆರೆದಿರುವ ಅಂಗಡಿಗಳ ಮುಂದೆ ಸುಮ್ಮನೇ ನಿಂತು, ಕೆಕ್ಕರಿಸಿ ನೋಡಿ ಮುಂದೆ ಹೊರಡುತ್ತಿದ್ದಾರೆ. ಅರ್ಥವಾದವರಂತೆ ಅಂಗಡಿಗಳವರು ಶಟರ್‌ ಅರ್ಧಕ್ಕೆ ಇಳಿಸಿದಂತೆ ನಟಿಸುತ್ತಿದ್ದಾರೆ. ಬೀಡಾ ಅಂಗಡಿ ಮುಂದೆ ಗುಂಪು ಹಾಗೇ ಇದೆ. ಅಲ್ಲಲ್ಲಿ ಕಟ್ಟೆಯ ಮೇಲೆ ಸಿಗರೇಟ್‌ ಸೇದುತ್ತ ಮಾತಾಡುವವರ ಮಾತುಗಳು ಇನ್ನೂ ಮುಗಿದಿಲ್ಲ.

ಆಗಲೇ ಹನ್ನೊಂದಾಯಿತು. ಇನ್ನೊಂದು ಗಂಟೆಗೆ ಹನ್ನೆರಡಾಗುತ್ತದೆ. ಮಧ್ಯರಾತ್ರಿಯವರೆಗೆ ಎದ್ದರೆ ಬೆಳಿಗ್ಗೆ ಬೇಗ ಎಚ್ಚರವಾಗುವುದಿಲ್ಲ. ’ಮಲಗೇ ಪಲ್ಲು’ ಎಂದು ಅವ್ವ ಗುಡ್‌ನೈಟ್‌ ಹೇಳಿದಂತೆ ಎಚ್ಚರಿಸುತ್ತಾಳೆ. ನಾನು ಸುಮ್ಮನಿರುತ್ತೇನೆ. ಆಕೆಯೂ ಸುಮ್ಮನೇ ತನ್ನ ಕೋಣೆಗೆ ಹೋಗಿಬಿಡುತ್ತಾಳೆ. ಅಪ್ಪ ಮಲಗಿ ಆಗಲೇ ಒಂದು ಗಂಟೆಯಾಗಿದೆ. ಎದ್ದವಳು ನಾನೊಬ್ಬಳೇ. ಜೊತೆಗೆ ನನ್ನ ಕಂಪ್ಯೂಟರು.

ವಿಷ್ಣು ಸಹಸ್ರನಾಮ, ಇತ್ಯಾದಿ ಪಠಿಸುವುದು ಯಾಕೆ?

ಕೆಲವರು ವಿಷ್ಣು, ಲಲಿತ ಸಹಸ್ರನಾಮ, ಅಶ್ಟೋತ್ತರಗಳನ್ನು ದಿನವೂ ಹೇಳಿಕೊಳ್ಳುತ್ತಾರೆ. ಇದು ದೇವರ ಸ್ಮರಣೆ ಅಂತಂದುಕೊಂಡರೂ, ನಾನು ಇದನ್ನು ಮಾಡುವಾಗಲೆಲ್ಲ ನನ್ನ ಗಮನ ನಾನು ವಾಕ್ಯಗಳನ್ನು ಸರಿಯಾಗಿ ಜೋಡಿಸುತ್ತಿದ್ದೀನೋ ಇಲ್ಲವೋ, ಉಚ್ಚರಿಸುತ್ತಿದ್ದೀನೋ ಇಲ್ಲವೋ, ಇದರ ಅರ್ಥವೇನು ಎಂಬುದರಲ್ಲಿ ಕಳೆಯುತ್ತೆ.

ಕನ್ನಡ ವಿಶ್ವಕೋಶಕ್ಕೆ ನಿಮ್ಮ ಕಾಣಿಕೆ

ಮಾನ್ಯರೆ,

ಕನ್ನದ ವಿಶ್ವಕೋಶ (http://kn.wikipedia.org/wiki)ಈಗ ೫,೮೪೭ಕ್ಕೂ ಅಧಿಕ ಲೇಖನಗಳನ್ನು ಹೊಂದಿದೆ. ಈ ವಾರ, ಕರ್ನಾಟಕದ ಜೀವನದಿ ಕಾವೇರಿಯ ಮೇಲಿನ ಲೇಖನವನ್ನು ಸಂಸ್ಕರಿಸಲಾಗುತ್ತಿದೆ. ಬನ್ನಿ ನೀವು ಬಾಗವಹಿಸಿ ಕನ್ನದ ವಿಶ್ವಕೋಶ ಬೆಳೆಯಲು ನೀವೂ ಸಹಕರಿಸಿ.

ಧನ್ಯವಾದ
ಇಂತಿ ನಿಮ್ಮ ಕರುನಾಡ ಕನ್ನಡಿಗ
http://www.karunadu.tk

ಕನ್ನಡ ಚಿತ್ರಗಳು ಯಾಕೆ ಸಕ್ಕತ್ತಾಗಿ ಓಡ್ತಾಇದೆ.

ಅದ್ಯಾಕೆ ಈ ನಡುವೆ ಎಲ್ಲರೂ ಕನ್ನಡ ಹಾಡು ಹಾಡ್ಲಿಕ್ಕೆ ಶುರು ಮಾಡವ್ರೋ ತಿಳೀತಿಲ್ಲ. ನಮ್ಮ ಆಫೀಸ್ ಔಟಿ೦ಗ್ ನಲ್ಲೊ ಜಿ೦ಕೆ ಮರಿ ಹಾಡಿಗೆ ಹೆಜ್ಜೆ ಹಾಕ್ತ, ಐತ್ತಲಕಡಿ ಹಾಡಿಗೆ ಸೊ೦ಟ ತಿರಿಗುಸುತ್ತ ಸಕ್ಕತ್ ಮಜ ಮಾಡ್ಬಿಟ್ರು. ಅದೇನು ಮೋಡಿ ಮಾಡಿದೆ ಕನ್ನಡ ಸಿನಿಮಾ ಹಾಡುಗಳು. ಎಲ್ಲಾ ಎಫ್ ಎಮ್ ವಾಹಿನಿಗಳಲ್ಲೊ ಕನ್ನಡ ಹಾಡುಗಳ ಸುರಿಮಳೆ.

ಆಕ್ರೋಶ

ವಿಷಾದದ ರಾಗದೊಳಗಿಂದ
ನಿಶಿದ್ಧ ತಂತಿಯೊಂದು ಮಿಡಿಯುತ್ತಿದೆ.
ರಾಗದನಿಯಾಗಲು ಹವಣಿಸುತ್ತಿದೆ.
ತಂತಿ, ಮೀಟುವ ಬೆರಳಿಗೆ ಎಟಕುವುದಿಲ್ಲ.
ವಾದಕನ ಭಾವಕ್ಕೂ ನಿಲುಕುವುದಿಲ್ಲ.
ಆದರೂ.........
ಅದಕ್ಕೆ ದನಿಯಿದೆ.
ಶಬ್ಧವಾಗುವ ಬಯಕೆಯಿದೆ.

ಸುಪ್ತದೊಳಗಿನ ಬೂದಿ ಮುಚ್ಚಿದೆ
ಅಂದುಕೊಂಡಷ್ಟು ದಗೆ ಹೆಚ್ಚು.
ಗಮಿಸುತ್ತಿದೆ. ಯಾವಾಗ ಸಿಡಿಯುವುದೋ
ಕಾನನವ ಸುಡುವುದೋ

ಇಂತಹ ರಾಜಕೀಯ ವ್ಯವಸ್ಥೆಗೆ ಬದಲಾವಣೆ ಎಂದು................?

ಭಾರತವನ್ನು ನಮ್ಮ ಕೈಗೆ ಇಟ್ಟು ಸುಮಾರು ಅರವತ್ತು ವರ್ಷಗಳೆ ಕಳೆದವು ಆದರೆ ಅಂದು ಗಾಂದಿ ಕಂಡ ಕನಸಿನಂತೆ ರಾಮ ರಾಜ್ಯವಾಗದೆ

ಕೇವಲ ಕೆಲವು ಸಮಾಜ ಘಾತುಕ ವ್ಯಕ್ತಿಗಳು ಕೇವಲ ರಾಜಕೀಯದ ಹೆಸರಿನಲ್ಲಿ ಸಮಾಜಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ.

ಅಂತರ್ಜಾಲದಲ್ಲಿರೋ ನವೆಂಬರ್ ೧೯೫೮ ರ ಚಂದಮಾಮದಲ್ಲಿ

* ಅತಿಶಯ ತಿರುಡನ್ ತಿಮಿಳು ಚಿತ್ರದ ಜಾಹೀರಾತು ,
* ಪಂಡಿತ ಡಿ. ಗೋಪಾಲಾಚಾರ್ಲುರವರ "ಅರುಣ" ಗರ್ಭಾಶಯ ಟಾನಿಕ್ ಜಾಹೀರಾತು ... ಹೆಚ್ಚು ವಿವರಗಳಿಲ್ಲ ಆದರೆ ಅದು ಚಂದಮಾಮದಲ್ಲಿ. ... ಯಾಕೋ ??
* ಪೂರ್ವ ಪಂಜಾಬಿನ ಸುಂದರವಾದ ಕಾಂಗ್ರಾ ಜಿಲ್ಲೆಯಲ್ಲಿ ಉನ್ನತ ಹಿಮಾಲಯದ ತಪ್ಪಲಲ್ಲಿ ಒಂದು ಪ್ರಶಾಂತ ಸ್ಥಳವಿದೆ - ಇದು ಕೂಲು ಕಣಿವೆ . :) ( ಅವರು ಕುಲು ಕಣಿವೆ ಬಗ್ಗೆ ಹೇಳ್ತಿದಾರೆ ! )

ಗಾನಯೋಗಿ ಪಂಚಾಕ್ಷರಿ ಗವಾಯಿ ಸ್ಮೃತಿ ಸಂಗೀತ ಸಭಾ, ಸಂಗೀತ ಕಾರ್ಯಕ್ರಮ

ಧಾರವಾಡದ ಗಾನಯೋಗಿ ಪಂಚಾಕ್ಷರಿ ಗವಾಯಿ ಸ್ಮೃತಿ ಸಂಗೀತ ಸಭಾ ಭಾನುವಾರ ಆಗಸ್ಟ್, ೨೪, ೨೦೦೮ ರಂದು ‘ಮನೆ ಮನೆಯಲ್ಲಿ ಸಂಗೀತ’ ಎಂಬ ವಿಶಿಷ್ಠ ಕಾರ್ಯಕ್ರಮ ಸರಣಿ ಯೋಜನೆ ಅಡಿಯಲ್ಲಿ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕಾರ್ಯಕ್ರಮ ಜರುಗಲಿದೆ.

ಮಹಾತುಂಟ

ಎಲ್ಲರಂತಲ್ಲ ಇವ ಬಲು ಮೊದ್ದು ,

ಮುದ್ದು....

ಯಾರೂ ಇಲ್ಲದಾಗ ಬಂದು ಮುದ್ದಿಸುವ

ಕದ್ದು ,ಕದ್ದು ....

ಮುಗ್ದ ಕಂಗಳ ತೆರೆದು , ಮುಖದಿ

ಮುಗುಳುನಗೆಯ ಸೂಸಿ ..

ಬರುವಾಗ ಈ ಪೋರ ಬಲು ಎಚ್ಚರ

ಮೊಸರು ಕಡೆವಾಗಲಂತೂ ಉಸಿರಾಡದೆ ಬರುವ

ಬದಿಗಿಟ್ಟ ಬೆಣ್ಣೆಯೆಲ್ಲ ಖಾಲಿ ....

ಇವಗೆ ಇದೊಂದು ಖಯಾಲಿ !

ಕಳ್ಳ ಪೋರ, ಹೃದಯ ಚೋರ