ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಧುನಿಕ ಖಗೋಲವಿಜ್ಞಾನದ ಗೆಲಿಲಿಯೋ - ಫ್ರೆಡ್ ಹಾಯ್ಲ್

ಸದಾ ತೀವ್ರ ಬೌಧ್ಧಿಕ ವಾದ ವಿವಾದಗಳಲ್ಲಿ ನಿರತರಾಗಿರುತ್ತ, ಉತ್ಸಾಹದ ಬುಗ್ಗೆಯಾಗಿದ್ದ ಸುಪ್ರಸಿದ್ಧ ಖಗೋಳ ವಿಜ್ಞಾನಿ ಫ್ರೆಡ್ ಹಾಯ್ಲ್ ಅಗೋಸ್ತ್ 20, 2001 ರ೦ದು ನಿಧನರಾದಾಗ ಬ್ರಿಟಿಷ್ ಬ್ರಾಡ್ ಕಾಸ್ಟಿ೦ಗ್ ಕ೦ಪೆನಿ (BBC) ಬಿತ್ತರಿಸಿತು : " ವಿಶ್ವದ ಉಗಮವನ್ನು ವಿವರಿಸುವ ಸಿದ್ಧಾ೦ತಕ್ಕೆ " ಬಿಗ್ ಬ್ಯಾ೦ಗ್ " (Big Bang) ಎ೦ಬ ಸು೦ದರ ಹೆಸರನ್ನು ಟ೦ಕಿಸಿದ ಶ್ರೇಷ್ಟ ಬ್ರಿಟಿಷ್ ಖಗೋಳ ವಿಜ್ಞಾನಿ ಹಾಯ್ಲ್ ನಿಧನರಾದರು. ಅವರಿಗೆ 86 ವಷ೯ ವಯಸ್ಸಾಗಿತ್ತು. ಯಾವ ಸಿದ್ಧಾ೦ತಕ್ಕೆ ಬಿಗ್ ಬ್ಯಾ೦ಗ್ ಎ೦ಬ ಹೆಸರಿತ್ತು ಅದರ ಅಭೂತಪೂರ್ವ ಜನಪ್ರಿಯತೆಗೆ ಕಾರಣರಾದರೊ, ಅದೇ ಸಿದ್ಧಾ೦ತವನ್ನು ತಮ್ಮ ಜೀವನದುದ್ದಕ್ಕೂ ಅವರು ಟೀಕಿಸಿದರು, ಪ್ರಶ್ನಿಸಿದರು."

ಹಾಯ್ಲ್ ಅವರ ಆಪ್ತ ಸ್ನೇಹಿತ ಮತ್ತು ಹಲವು ಸ೦ಶೋಧನೆಗಳಲ್ಲಿ ಸಹಭಾಗಿಯಾಗಿಯಾಗಿದ್ದ , ಇ೦ಗ್ಲ೦ಡಿನ ವೇಲ್ಸ್ ಕಾಲೇಜಿನಲ್ಲಿ ಗಣಿತ ವಿಭಾಗ ಮುಖ್ಯಸ್ಥರಾಗಿರುವ ಚ೦ದ್ರಾ ವಿಕ್ರಮ ಸಿ೦ಘೆ ಹೇಳುವಂತೆ "ಈ ವಿಶ್ವವನ್ನು ನಾವು ನೋಡುವ ದೃಷ್ಟಿಯನ್ನು ಕಳೆದ ನೂರು ವಷ೯ಗಳಲ್ಲಿ ಯಾವ ವಿಜ್ಞಾನಿಯೂ ಹಾಯ್ಲ್ ಅವರ೦ತೆ ಬದಲಾಯಿಸಿದರೆ೦ದು ನನಗನ್ನಿಸುವುದಿಲ್ಲ. "

ಇಲಿ ಎಷ್ಟು ಹಾವಳಿ ಮಾಡಿತ್ತು

ನಾನು ಹಿಂದೆ ಬರೆದಿದ್ದ ಲೇಖನದಲ್ಲಿ (http://www.sampada.net/article/4074)ನಮ್ಮ ಅಮೇರಿಕಾ ಪ್ರವಾಸದ ಅನುಭವ ಕೊಟ್ಟಿದ್ದೆ. ಅದು ಅಲ್ಲಿ ಆಗಿದ್ದು. ಮತ್ತೆ ಇನ್ನೊಂದು ಸಾರಿ ಅಮೇರಿಕಾಗೆ ಹೋಗಬೇಕಾಗಿ ಬಂತು.ಆಗ ನನ್ನ ಹಳೆಯ ಬೀಡಿನಲ್ಲಿ ನಾವಿಲ್ಲದಿದ್ದಾಗ ಏನಾಯಿತು ಎಂದು ಈಗ ಓದಿ, ಬೊಮ್ಮನಹಳ್ಳಿಯ ಕಿಂದರ ಜೋಗಿ ಇಲಿಗಳ ಹಿಂಡನ್ನೇ ನಾಶ ಮಾಡಿರಬಹುದು.

ಹಂಪಿ ಸಂಗೀತ ಮಂಟಪ ಮುರಿದು ಬಿದ್ದಿದೆ ** ಅಂತೆ **

ಇದು ನಿಜವೇ?
ಕೇಳಿ ತುಂಬ ಬೇಜಾರು ಆಯಿತು ಆದ್ರೆ ನಂಬಕ್ಕೆ ಆಗ್ತ ಇಲ್ಲ...
ಹಂಪಿ ಹತ್ತಿರ ಇರೋವ್ರು /ಇತ್ತೀಚೆಗೆ ನೋಡಿದವರು ಸ್ವಲ್ಪ ಹೇಳ್ತೀರಾ??

--ಸಿರಿ

ಅವಸ್ಥೆ

ನಮ್ಮ ಮುರುಕಲು ಗುಡಿಸಲ ಒಳಗೆ
ಬುಡ್ಡಿ ದೀಪದ ಸುತ್ತ
ಪಿಸು ಮಾತುಗಳು ಹುಟ್ಟುವುದಿಲ್ಲ
ಸ್ನೇಹ ಮಾತ್ರ ಪಸರಿಸುವ ನಮ್ಮವರ
ಗೋಡೆ, ಬೇಲಿಗಳಲ್ಲಿ ಕಳ್ಳಿ ಗಿಡಗಳೂ ಬೆಳೆಯುವುದಿಲ್ಲ

ಹಗಲಿರುಳು ದುಡಿದ ಕೈ ಕಾಲುಗಳ
ಚಾಚಿ ಮಲಗುವೆನೆಂದರೆ
ಅಷ್ಟೂ ಜಾಗವೂ ಇಲ್ಲಿಲ್ಲ ಬಿಡಿ,
ಹೊಟ್ಟೆ ಹಸಿದಾಗ ಕೆಲವೊಮ್ಮೆ
ಪಾತ್ರೆ ತಳದಲ್ಲಿ ಗಂಜಿ ನೀರೂ ಇರುವುದಿಲ್ಲ

ಉತ್ತರ ಕರ್ಣಾಟಕದವರಿಗೆ ಹೞಗನ್ನಡ ’ಱ’ ಮತ್ತು ’ೞ’ ಬಗೆಗಿನ ಅಱಿವು ಕಡಿಮೆ

ನಾನು ತಿಳಿದಂತೆ, ವಿಚಾರಿಸಿದಂತೆ, ಉತ್ತರ ಕರ್ಣಾಟಕದವರಿಗೆ ಹೞಗನ್ನಡದ ವಿಚಾರವಾಗಿ ಗೊತ್ತಿರುವುದು ಕಡಿಮೆ. ’ಱ’ ಮತ್ತು ’ೞ’ ಬಲುದೂರ. ಹೞಗನ್ನಡವೆಂದರೆ ಅದೇನು ತಮಿೞೋ ಎಂದುಕೊಳ್ಳುತ್ತಾರೆ. ಆದರೆ ಹೞಗನ್ನಡದ ಕವಿರಾಜಮಾರ್ಗಕಾರ, ಪಂಪ, ರನ್ನ, ಪೊನ್ನ, ನಾಗಚಂದ್ರ ಎಲ್ಲರೂ ಈ ಉತ್ತರಕರ್ಣಾಟಕದವರೇ ಎಂದರೆ ಒಮ್ಮೆಗೆ ಆಶ್ಚರ್ಯವಾಗುತ್ತದೆ.

ಅರಸು, ಅಱಸು

ಅರಸು, ಅರಸ=ರಾಜ, ಒಂದು ದೇಶ ಅಥವಾ ಪ್ರದೇಶವನ್ನು ಆಳುವವನು.
ಸ್ತ್ರೀಲಿಂಗ ಅರಸಿ
ಅರಸೊತ್ತಿಗೆ=ಅರಸುತನ
ಅರಮನೆ=ಅರಸ ವಾಸಿಸುವ ಮನೆ.

ಅಱಸು=ಹುಡುಕು

ಉದಾಹರಣೆ: ಅರಸನನ್ನಱಸಿ ಹೊಱಟಳರಸಿ.

ರಾಷ್ಟ್ರಪಕ್ಷಿ ನಮ್ಮ ಊರಿನಲ್ಲಿ ‘ರೈತರ ಪರಪುಟ್ಟ’!

‘ನೀವು ನಮ್ಮ ಊರಿಗೆ ಮತ್ತ.. ನಮ್ಮ ಮನಿಗೆ ಬರಾಕ ಬೇಕು..’

ಕಳೆದ ಎರಡು ತಿಂಗಳಿನಿಂದ ದುಂಬಾಲು ಬಿದ್ದಿದ್ದ ನಮ್ಮ ಅಟೆಂಡರ್ ಸದಾನಂದ. ಎಲ್ಲಾರೂ ಕರೆಯೋ ಥರಹ ಇವನೂ ಕರೀತಾನ, ಒಮ್ಮೆ ಸವುಡು ನೋಡಿ ಹೋಗಿ ಬಂದ್ರಾತು’ ಅಂತ ತಿಂಗಳುಗಳ ಗಟ್ಟಲೆ ಮತ್ತೆ ಮುಂದೆ ಹಾಕಿದ್ದಾಯಿತು.

ಕೊನೆಗೆ ತಾಳ್ಮೆ ಮೀರಿ ಹೇಳಿಯೇ ಬಿಟ್ಟ. ‘ಸರ್..ನಮ್ಮ ಊರಾಗ ರೈತರು ಕೋಳಿ ಗೂಡಿನ್ಯಾಗ ನವಿಲಿನ ತತ್ತಿ ಇಟ್ಟು ಮರಿ ಮಾಡಸ್ತಾರಿ. ದೊಡ್ವಾದ ಬಳಿಕ ನಾಯಿ ಕಾಟಕ ಅಂಜಿ ಅಮ್ಮಿನಭಾವಿ ಊರ ಹೊರಗಿನ ಅಯ್ಯಪ್ಪಸ್ವಾಮಿ ಮಠಕ ಬಿಟ್ಟು ಬರ್ತಾರ್ರಿ. ಅಲ್ಲೆ ನಾರಾಯಣಸ್ವಾಮಿ ಅನ್ನೋ ಗುರುಸ್ವಾಮಿ ದೇಖರೇಖಿ ಮಾಡ್ತಾರ್ರಿ. ಈಗರೆ ಬರ್ತೀರೋ ಒಲ್ರೋ?’

ಈ ವಿಷಯ ಕಿವಿಗೆ ಬಿದ್ದಿದ್ದೇ ತಡ, ‘ನಡಿಯೋ ಮಾರಾಯಾ..ಇದ ರವಿವಾರ ಹೋಗೋಣು. ಊಟ ನಿಮ್ಮಮನ್ಯಾಗ ನೋಡಪಾ!’ ಅಂತ ಛೇಡಿಸಿದೆ. ಆತನ ಹೃದಯ ಶ್ರೀಮಂತಿಕೆ ನೆನೆದರೆ ಅದೇ ಒಂದು ನುಡಿಚಿತ್ರವಾದೀತು!

ಆಱ್ (ಆಱು)

ಆಱ್ (ಕ್ರಿಯಾಪದವಾದಾಗ ಎರಡು ಅರ್ಥಗಳು)
೧) ಆಱ್=ಸಮರ್ಥವಾಗು. ಹೊಸಗನ್ನಡದಲ್ಲಿ ಸಾಮಾನ್ಯವಾಗಿ ನಿಷೇಧಾರ್ಥಕವಾಗಿ ಬೞಸಲಾಗುತ್ತಿದೆ. ನಾನು ಬರೆಯಲಾಱೆ(ನು). ಆದರೆ ಹೞಗನ್ನಡದಲ್ಲಿ ಎಲ್ಲಾ ಅರ್ಥಗಳಲ್ಲೂ ಬೞಕೆಯಲ್ಲಿದೆ.
ಭೂತಕಾಲದ ರೂಪ: ಆರ್ತೆನ್, ಆರ್ತನ್/ಳ್, ಆರ್ತುದು. ಇತ್ಯಾದಿ
ಭವಿಷ್ಯತ್: ಆರ್ಪೆನ್, ಆರ್ಪನ್/ಳ್, ಆರ್ಪುದು