ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

’ಱ’ ಮತ್ತು ’ೞ’ ಕುಱಿತು ಮತ್ತಷ್ಟು ಬೆಳಕು.

ಇದನ್ನ ವಸಿ ನೋಡಿ. ಆಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ
’ಱ’ ಕಾರಕ್ಕೆ
ಕನ್ನಡಕಂದ ಬಱಿ ’ಱ’ ಮತ್ತು ’ೞ’ ಕುಱಿತೇ ಮಾತಾಡುತ್ತಾನೆ. ಅವನಿಗೇನ್ ಬೇಱೆ ಕೆಲಸವಿಲ್ಲವಾ? (ನೀವು ಅಸಡ್ಡೆ ತೋಱಿ ಈ ’ಬಱಿ’ ಮತ್ತು ’ಬೇಱೆ’ ಶಬ್ದಗಳನ್ನು ನಾಲಿಗೆ ನಡುಗಿಸಿ ಉಲಿಯುತ್ತೀರಾ?
ಅಂತಹ ಕಱ್ಱನೆ ಕಱಿಯನ್ನ ಹೇಗೆ ಮದುವೆಯಾಗಲಿ ಹೇೞೆ?

ಫಲಿಸಿದ ಪ್ರೇಮ

ಪುಷ್ಪಳ ಅಳು ನಿಲ್ಲೋ ಹಾಗೆ ಕಾಣ್ತಿರ್ಲಿಲ್ಲ.ನಾವು ಬಂದಾಗಿನಿಂದ ಒಂದೆ ಸಮನೆ ಅಳ್ತಾನೆ ಇದ್ದಾಳೆ.ಅವರ ಮಾವ,ಮಾವನ ಮಗ,ಅಪ್ಪ,ಚಂದ್ರು ಎಲ್ಲರ ಎಲ್ಲಾ ಪ್ರಶ್ನೆಗಳಿಗೂ ಅಳುವೊಂದೆ ಉತ್ತರವಾಗಿತ್ತು.ಪಾ..ಪ..ಅವಳೇನು ಮಾಡಿಯಾಳು..ಪ್ರಶ್ನೆಗಳು ಹಾಗೆ ಇದ್ದವು.ಅವರ ಅಪ್ಪ,'ಪುಷ್ಪ,ನಿನಗೆ ನಾನ್ ಬೇಕಾ ಅವನು ಬೇಕಾ?' ಅಂದ್ರೆ,ಚಂದ್ರು,'ಪುಷ್ಪ,ನೀನು ಬೇಡ ಅಂದ್ರೆ ನಾನು ಹೊರಟೋಗ್ತೀನಿ'

returnsಗೆ ಕನ್ನಡದಲ್ಲಿ ಏನು ಹೇಳೋಣ?

ಜುಲೈ ಮೂವತ್ತೊಂದು IT Returns ಸಲ್ಲಿಸಲು ಕೊನೆಯ ದಿನ(ಮುಂದೂಡಿಕೆ ಸಾಮಾನ್ಯ).
returnsಗೆ ಕನ್ನಡ ಪದ ಇದೆಯೇ? Prism ಪದಕೋಶ(ಒರೆಗಂಟು) ಹೀಗೆನ್ನುತ್ತದೆ:
೧. many happy returns (ಹುಟ್ಟಿದ ಹಬ್ಬದ ದಿನಗಳಲ್ಲಿ ಹಾರೈಸಲು ಹೇಳುವ) ಈ ಶುಭ ದಿನಗಳು ಮತ್ತೆ ಮತ್ತೆ ಬರಲಿ

೨. stock returns ಬಂಡವಾಳ ಪತ್ರಗಳ ವಿವರಣ, ದಾಸ್ತಾನು ಪಟ್ಟಿ, ದಾಸ್ತಾನು ಲೆಕ್ಕವಿವರಣೆಯ ತಪಸೀಲು

ಸಿಯಾಟಲ್ ನಾಗೆ ಅಡ್ಡಾಡಿ ಬರೋಣು ;ಹಾ, ’ಸ್ಪೇಸ್ ನೀಡಲ್’, ನೋಡೀರೇನು ? ನೀವ್ ಬಿಟ್ರೂ, ಅದ್ ಬಿಡಂಗಿಲ್ರಿ ; ಎಲ್ಲೆಲ್ಲೂ ಕಾಣ್ಸತದ !

ಈ ನಗರದಾಗೆ ಅಡ್ಡಾಡ್-ಬರ್ಲಿಕ್ಕೆ ಭಾಳ ಜಾಗಗಳವ ; ಪರಿಸರಗಳೂ ಅವ. ನೀರ್ನುದ್ದಕ್ಕೂ ಹೋಗಿನೋಡುದ್ ಒಂದು ಆದ್ರ, ವಾಹನ್ದಾಗ್ ಸೈರ್ ಮಾಡೂದ್ ಇನ್ನೊಂದ್ರಿ. ಅಕ್ವೇರಿಯಮ್ ಭೇಟಿ ಮಾಡ್ರಿ; ಮಕ್ಕಳ್ನ ಕರಕೊಂಡ್ ಹೋಗ್ಬನ್ರಿ. ಪಿಯರ್ ೫೨ ಪವರ್ ಹಡಗು ನಿಮಗೆದೊರೆಯುವ ಒಂದು ಸವಲತ್ತು. ಎಲಿಯಟ್ ಬೇ, ದಾಟಿ, ಬೇನ್ ಬ್ರಿಡ್ಜ್ (ವಾಶ್ ಆಂಡ್ ಐಲೆಂಡ್) ನಾಗ್ ನುಗ್ರಿ. ಫೆರ್ರಿ ಪ್ರಯಾಣ್ ದಾಗೆ ನಿಮ್ಗ ಒಲಿಂಪಿಕ್ ಪರ್ವತಗಳ ಶಿಖರ ಕೈಬೀಸಿ ಕರಿತಾವ. ಮುಂದ್ ಪೂರ್ವ ದಿಕ್ಕ್ ನಾಗ ಹಂಗೇ ಬೆಟ್ಟದ ಬದಿಗೆ ಹೋಗ್ರಿ. ’ಪೈಕ್ ಪ್ಲೇಸ್ ಮಾರ್ಕೆಟ್’ ನೋಡ್ತೀರಿ. ಇದು ಅಮೆರಿಕದ ಅತ್ಯ್ಂತ ಹಳೆಯ ಕೃಷಿಕರ ಮಾರುಕಟ್ಟೆ, ಹಾಗೂ ’ಸಿಯಾಟಲ್’ ನ ಒಂದು ಕುರ್ಹಾಗ್ ಈಗ್ಲೂ ಇಟ್ಟಾರ್ರಿ. ! ಇಲ್ಲಿ ಅಗದಿ ತಾಜ ಕಾಯಿ-ಪಲ್ಯಗಳು ಸಿಗ್ತಾವ.

ಇಸ್ಮಾಯಿಲರ ಲೇಖನ - "'ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ!' - ಬೋಧನಾ ಮಾಧ್ಯಮ ವಿವಾದದ ಸುತ್ತ"

ಈ ಶೀರ್ಷಿಕೆ ಹೊತ್ತ [:user/ismail|ಇಸ್ಮಾಯಿಲರ] ಲೇಖನ ಈ ವಾರದ ತರಂಗದಲ್ಲಿ ಮೂಡಿಬಂದಿದೆ. ಸಾಧ್ಯವಾದರೆ ಒಂದು ಕಾಪಿ ತೆಗೊಂಡು ಓದಿ ನೋಡಿ.

ಭಾಷಾ ವಿವಾದದಿಂದ ಹಿಡಿದು ಮಲೇಷಿಯಾದ ಪ್ರಯೋಗದವರೆಗೂ ಸರಾಗವಾಗಿ ಬಹಳ ಚೆಂದವಾಗಿ ಬರೆದಿದ್ದಾರೆ ಇಸ್ಮಾಯಿಲರು. "ಕನ್ನಡದಲ್ಲಿ ಕಲಿ, ಇಂಗ್ಲೀಷೂ ಕಲಿ" ಎಂಬ ಕರೆಯ ಕುರಿತೂ ಬರೆದಿದ್ದಾರೆ.

ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್

ಲಿನಕ್ಸ್ ನಲ್ಲಿ   ತುಂಬಾ  ಕಮಾಂಡ್ಸ್  ಇದೆ, ಹೆಂಗಪ್ಪಾ ಕಲಿಯೋದು ಅಂತ ಯೋಚನೆ ಆಗಿದೆಯಾ?

ಸುದ್ದಿ-ಸ್ವಾರಸ್ಯ?

ಸುಧಾ ವಾರಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಕೊನೆಯ ಪುಟದ ಕಾಲಂ ಹೆಸರು ಇದು. ಕೊಂಚ ತರಲೆ, ಕೊಂಚ ಹಾಸ್ಯ, ಮತ್ತಷ್ಟು ಗೋಡೆಯಿಂದಾಚೆಗಿನ ಸುದ್ದಿ, ಸರಕು. ಆದರೆ ಈ combination ಎಷ್ಟು ಚೆನ್ನಾಗಿ ಒಗ್ಗಿಸಿಕೊಂಡಿದ್ದಾರೆಂದರೆ ಈ ವಿಭಾಗ ನನಗೆ ತಿಳಿದಂತೆ ತುಂಬಾ ಜನಪ್ರಿಯ!

ತಳ್ಳಂಕ

ದೊರೆತ ಹರುಷದ ರಭಸಕ್ಕೆ
ಕಳೆದೀತೆಂಬ ಆತಂಕದ ಆಣೆಕಟ್ಟು
ತನ್ನದಾಗಿಯೂ ತನ್ನದಲ್ಲ
ಎಂಬ ಪ್ರಜ್ಞೆಯ ಚಿಟುಗುಮುಳ್ಳು
ಮಧುರ ಸೃತಿಗೆ
ಯಾತನೆಗೆ ಹನಿಗಣ್ಣಾದವಳ
ಕಣ್ಣಲ್ಲಿ, ಹನಿಯಲ್ಲಿ
ಅವನ ಬಿಂಬ
ನೆಲಕ್ಕುರುಳಿ ಚೂರಾದೀತೆಂಬ
ಭಯದಲಿ ರೆಪ್ಪೆ ಹೊದ್ದು
ಅಡಗಿಸಿದಳಾಕೆ.

ಬರುತ್ತಿದೆ ಬಾನ ನಾಟಕ - ಸೂರ್ಯಗ್ರಹಣ

ಮುಂದಿನ ಶುಕ್ರವಾರ (1.8.2008) ಸಂಜೆ ನಾಲ್ಕರಿಂದ ಐದು ಗಂಟೆಯ ನಡುವೆ ಒಂದು ಸುಂದರ ಬಾನನಾಟಕ ನಿಮಗಾಗಿಯೋ ಎನ್ನುವಂತೆ ನಿಸರ್ಗ ಪ್ರದರ್ಶಿಸಲಿದೆ. ಮೋಡ ಮತ್ತು “ಮುಂಗಾರು ಮಳೆ”ಯ ಕಿರಿಕಿರಿ ಇಲ್ಲದೇ ಹೋದರೆ ನೀವು ಅದನ್ನು ಎಚ್ಚರಿಕೆಯಿಂದ ನೋಡಿ ಆನಂದಿಸಬಹುದು. ಅಂದು ಸಂಜೆ ಸೂರ್ಯನ ಸ್ವಲ್ಪಾಂಶ ಮರೆಯಾಗುವ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಲಿದೆ.
ನಿಮಗೆ ಗೊತ್ತು, ಬೆಳಕು ಪಾರದರ್ಶಕ ಗಾಜಿನ ಮೂಲಕ ಹಾದು ಹೋದರೆ ನೆರಳು ಉಂಟಾಗದು. ಆದರೆ ಅಪಾರದರ್ಶಕ ವಸ್ತುವಿನ ಮೇಲೆ ಪಾತವಾದಾರೆ? ವಸ್ತು ಬೆಳಕನ್ನು ತಡೆಯುತ್ತದೆ - ಇನ್ನೊಂದು ಬದಿಯಲ್ಲಿ ನೆರಳು ಉಂಟಾಗುತ್ತದೆ. ಸೂರ್ಯನ ಬಿಸಿಲಿನಲ್ಲಿ ಗಿಡ ಮರಗಳ ನೆರಳು ಉಂಟಾಗುವುದು ಹೀಗೆಯೇ. ಇವು ಭೂಮಿಯಲ್ಲಿ ಬೆಳಕಿನ ನೆರಳಿನಾಟ. ಇಂಥದೇ ನೆರಳಿನಾಟ ಬಾನಾಂಗಣದಲ್ಲಿ ಸಂಭವಿಸಿದಾಗ ಚಂದ್ರ ಗ್ರಹಣ ಅಥವಾ ಸೂರ್ಯಗ್ರಹಣ ಘಟಿಸುತ್ತದೆ.
ಕತ್ತಲೆ ಕೋಣೆಯಲ್ಲಿ ಮೇಣದ ಬತ್ತಿ ಇದೆ ಎಂದು ಊಹಿಸಿಕೊಳ್ಳಿ. ಅದರೆದುರು ಒಂದು ಅಪಾರದರ್ಶಕ ಚೆಂಡನ್ನು ಹಿಡಿದಿದ್ದೀರಿ. ಚೆಂಡಿನ ನೆರಳು ಬೀಳುತ್ತಿದೆ ಗೋಡೆಯ ಮೇಲೆ. ಮೇಣದ ಬತ್ತಿ ಮತ್ತು ಚೆಂಡನ್ನು ಜೋಡಿಸುವ ರೇಖೆಯ ಭಾಗದಲ್ಲಿ ನೆರಳು ಅತ್ಯಂತ ಗಾಢವಾಗಿದ್ದರೆ, ಉಳಿದ ಭಾಗದಲ್ಲಿ ಅರೆ ನೆರಳು ಮುಸುಕಿರುತ್ತದೆ. ವಿಜ್ಞಾನದ ಭಾಷೆಯಲ್ಲಿ ಗಾಢ ನೆರಳಿನ ಭಾಗವನ್ನು “ಅಂಬ್ರ” ಎಂದೂ, ಅರೆ ನೆರಳಿನ ಭಾಗವನ್ನು “ಪಿನಂಬ” ಎಂದೂ ಕರೆಯುತ್ತೇವೆ. ಅಂಬ್ರದ ಭಾಗದಿಂದ ನಿಮಗೆ ಮೇಣದ ಬತ್ತಿ ಗೋಚರಿಸದು. ಏಕೆಂದರೆ ಮೇಣದ ಬತ್ತಿಯನ್ನು ಚೆಂಡು ಸಂಪೂರ್ಣ ಮರೆಮಾಡಿರುತ್ತದೆ.