ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇವತ್ತು ಅಳಬಾರದು

ಇವತ್ತು ಅಳಬಾರದು.

ಯಾರು ಹೇಳಿದರು, ಕಣ್ಗಳಿರುವುದೇ ಅಳಲೆಂದು. ಅದು ಸುಳ್ಳು. ಕಣ್ಗಳಿರುವುದು ನೋಡಲು. ಅಷ್ಟೇ.

ನೋಡಿದ ನಂತರ ಏನಾಗುತ್ತದೆ? ಅದು ಮನಸ್ಸಿನಲ್ಲಿ ದಾಖಲಾಗುತ್ತದೆ. ಸುಳ್ಳು, ಅದು ಮೆದುಳಲ್ಲಿ ದಾಖಲಾಗುತ್ತದೆ.

ಮುಂದೆ?

ಮೆದುಳು ಆ ದಾಖಲೆಯನ್ನು ಇನ್ಯಾವುದೋ ನೆನಪುಗಳೊಂದಿಗೆ ತಳುಕು ಹಾಕುತ್ತದೆ. ಅಲ್ಲೊಂದು ಪ್ರತಿಕ್ರಿಯೆ ಹುಟ್ಟುತ್ತದೆ. ಆ ಪ್ರತಿಕ್ರಿಯೆಗೆ ಇನ್ಯಾವುದೋ ಸೇರಿಕೊಂಡು ಭಾವನೆಯನ್ನು ನಿರ್ಮಿಸುತ್ತದೆ.

ಜಾಗತೀಕರಣದ ಪಿಝ್ಹಾ ಮತ್ತು ಸ್ವದೇಶಿ ರಾಗಿ ಮುದ್ದೆ ಊಟ

ಈ ಗ೦ಭೀರವಾದ ವಿಷಯದ ಬಗ್ಗೆ ಮು೦ಚೆ ಬರಿಲಿಕ್ಕೆ ಆಗಲಿಲ್ಲಾ - ಯಾಕ೦ದರೆ ಬರಿಯೋಕ್ಕೆ ಪ್ರೇರಣೆ ಸಿಗಲಿಲ್ಲಾ . ಮುದ್ದೆಯ ಬಗ್ಗೆ ರೂಪ ಅವರು ಬರೆದ ಮೇಲೆ ತಡ್ಕೊಳಕ್ಕೆ ಆಗದೆ ಬರಿಯುತ್ತಿರುವೆ. ಮುದ್ದೆ ತಿನ್ನುವ ಜಾಣರೆಲ್ಲಾ ಮುದ್ದೆ ತಿನ್ನದ ಮದ್ದುಗಳಿಗೆ ಈ ವಿಸ್ಯಾನಾ ಮನವರಿಕೆ ಮಾಡಿಸ ಬೇಕು.

ಹಳ್ಳೀ ಬೆಳಕು

ಜೋಗದ ಸಿರಿ ಬೆಳಕಿನಲ್ಲಿ

ಧರೆಯ ಝರಿಯ ಸೊಬಗಿನಲ್ಲಿ
ಕಾನಿನಂಚ ಹಸಿರಿನಲ್ಲಿ
ಬೇಳೆ ಕಾಳು ಅಡಿಕೆ ನೆಟ್ಟು
ಹುಲ್ಲ ಸೂರ ಮನೆಯ ಮಾಡಿ
ಬದುಕು ತಾನೆ ಸುಖಿಸುತಿರಲು
ಮನೆಯು ಮುಳುಗೋ ಸುದ್ದಿಯೊಂದು
ಊರ ತುಂಬಾ ಹರಡಿತು
"ಜೋಗದ ಬೆಳಕು" ತನ್ನ ಸಣ್ಣ ಕಣ್ಣ ತೆರೆಯಿತು.

ಜೋಗದ ಸಿರಿ ಬೆಳಕಿನಲ್ಲಿ!!!

ಬಿಡದೆ ಬರುವ ಮಳೆಯ ನೆರೆಗೆ
ಗಗನ ಚುಂಬಿ ಒಡ್ಡನೊಡ್ಡಿ

ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ

"ನನ್ನ ಮಗ ಹೋಟೆಲ್‌ಗೆ ಹೋದ ತಕ್ಷಣ ನಂಗೆ ನೂಡಲ್ಸ್ ಬೇಕು ಫ್ರೈಡ್ ರೈಸ್ ಬೇಕು ಇಲ್ಲ ಗೋಬಿ ಮಂಚೂರೀನೆ ಕೇಳೋದು , ಮನೇಲೂ ಅಷ್ಟೇ ಬರೀ ಮಾಗಿ ಮಾಡಿಕೊಡು ಅಂತಾನೆ ಇಲ್ಲ ಅಂದ್ರೆ ಹೋಟೆಲ್‌ನಿಂದ ತರಿಸಿಕೊಡು ಅಂತಾನೆ" ಆಕೆ ಹೆಮ್ಮೆಯಿಂದ ಹೇಳುತ್ತಿದ್ದರು. ನಾನು ಸುಮ್ಮನೆ ಕೇಳುತ್ತಾ ಇದ್ದೆ. ಹೋಗಲಿ ಪಾಪ ಸಂತೋಷ ಆಗಲಿ ಅಂತ.

ಎಳುಕು

ಎಳುಕು (ಕ್ರಿಯಾಪದ)=ಚಿಗುರು. ಇದಱಿಂದ ಸಾಧಿತವಾದ ಎಳೆಯ, ಎಳತು ಇವೆಲ್ಲ ವಿಶೇಷಣಗಳು.
ಈ ಆಯ್ದಕ್ಕಿ ಮಾರಯ್ಯನವರ ವಚನ ನೋಡಿ

ಸಸಿಗೆ ನೀರನೆಱೆದೆಡೆ ಎಳುಕುವುದಲ್ಲದೆ
ನಷ್ಟಮೂಲಕ್ಕೆ ಹೊತ್ತು ನೀರ ಹೊಯಿದಡೆ
ಮತ್ತೆ ಎಳುಕುವುದೆ ಮಾರಯ್ಯ
ನಿನ್ನ ವಿರಕ್ತಿ ನಷ್ಟವಾಗದ ಮುನ್ನವೆ
ಮಾರಯ್ಯಪ್ರಿಯ ಅಮರೇಶ್ವರ ಲಿಂಗವನಱಿಯಿರಯ್ಯಾ||

ಅಮೇರಿಕನ್ನರು ಮತ್ತು ಭಾರತೀಯರು

ಹೊರದೇಶದಲ್ಲಿ ಕೆಲಕಾಲ ಇದ್ದು ಬಂದು ಅಲ್ಲಿನ ಜನರೊಡನೆ ಒಡನಾಟ, ಪರಿಚಯ, ಜೀವನ ಶೈಲಿಯನ್ನುಗಮನಿಸಿದ್ದೇನೆ. ಕೆಲವೊಮ್ಮೆ ಅವರ ಜೀವನದಲ್ಲಿ ಅಳವಡಿಸಿಕೊಂಡಿರುವ ಶಿಸ್ತು, ಸಂಯಮ, ತಾಳ್ಮೆ ಇವುಗಳನ್ನು ನೋಡಿ ಆಶ್ಚರ್ಯವಾಗುತ್ತದೆ. ಕಾಮ, ಕ್ರೋಧ, ಮದ..ಸುಳ್ಳು ಇತ್ಯಾದಿಗಳು ತ್ಯಜಿಸಬೇಕು ಇಂತಹ ಥಿಯರಿಗಳು ಭಾರತದಲ್ಲಿ ದಿನವಹಿ ಕೇಳಲು ಸಿಗುತ್ತವೆ.

ಮುಂಗಾರು ಮಳೆ.. ಮತ್ತೆ ಧಾರವಾಡದಲ್ಲಿ ನವಿಲುಗಳ ನರ್ತನ!

‘ಸಾವಿರ’ದ ಕಣ್ಣುಗಳ ಸರದಾರ. ಆತ ಪಕ್ಷಿಗಳ ರಾಜ. ಎಂತಹ ಕಟುಕನ ಮನಸ್ಸನ್ನೂ ಕರಗಿಸಬಲ್ಲ ಸಮ್ಮೋಹನಶಕ್ತಿ ಈತನಲ್ಲಿ! ಸಾಂಸ್ಕೃತಿಕವಾಗಿ, ಸಾಹಿತ್ತಿಕವಾಗಿ ಮತ್ತು ಐತಿಹಾಸಿಕವಾಗಿ ಆತನಿಗಿರುವ ಮಹತ್ವವೇ ಇಂದು ರಾಷ್ಟ್ರಪಕ್ಷಿಯ ಸಿಂಹಾಸನದಲ್ಲಿ ಕುಳಿತುಕೊಳ್ಳುವಂತೆ ಅನಭಿಷಿಕ್ತವಾಗಿ ದೊರಕಿದೆ.

ಇದು ಪಕ್ಷಿರಾಜ ನವಿಲಿನ ಕುರಿತು ಈ ಪೀಠಿಕೆ ಎಂದು ತಾವು ಊಹಿಸಿರಲಿಕ್ಕೇ ಬೇಕು. ನಮ್ಮ ಭಾರತ ಸರಕಾರದಿಂದ ೧೯೬೩ರಲ್ಲಿ ರಾಷ್ಟ್ರಪಕ್ಷಿ ಎಂದು ಘೋಷಿಸಲ್ಪಟ್ಟ ನವಿಲು; ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಅಡಿಯಲ್ಲಿ ಸಂರಕ್ಷಿತ ಪಕ್ಷಿ. ಭೂಮಿಯ ಮೇಲೆ ವೇಗವಾಗಿ ಓಡಬಲ್ಲ ಹಾಗು ನಿಂತ ಸ್ಥಳದಿಂದಲೇ ಎಗರಿ ಹಾರಬಲ್ಲ ಅತ್ಯಂತ ಭಾರಯುತವಾದ ಪಕ್ಷಿ ನವಿಲು. ರೆಕ್ಕೆ-ಪುಕ್ಕ ಬಲಿತ ಸುಂದರ ಗಂಡು ನವಿಲು ಹಾರಿದರೆ ವಿಮಾನ ನಭಕ್ಕೆ ಜಿಗಿದು, ಚಿಮ್ಮಿ ಹಾರುತ್ತಿರುವಂತೆ ಭಾಸವಾಗುತ್ತದೆ.

ಕೇಶಿರಾಜನ ಕುಳಾಂತಭ್ರಮೆ ಕುಱಿತು ಒಂದು ವಿಶ್ಲೇಷಣೆ

ಕೇಶಿರಾಜನೆಂದ

ಬೆರಲೊರಲೆರಲ್ಕೊರಲ್ ಸರ-
ಲರಲ್ ಪರಲ್ ಮರಲುಮಂತೆ ನರಲುಂ ಮುಂಗೈ-
ಸರಲುಂ ಲಾಂತಮಿವಂ ಗ್ರಾ-
ಮ್ಯರಱಿಯದುಚ್ಚರಿಸುವರ್ ಕುಳಾಂತಭ್ರಮೆಯಿಂ||

ಬೆರಲ್, ಒರಲ್, ಎರಲ್, ಕೊರಲ್, ಸರಲ್, ಅರಲ್, ಪರಲ್, ನರಲ್, ಮುಂಗೈಸರಲ್ ಇವೆಲ್ಲ ಲಾಂತಗಳು. ಇವನ್ನು ಹಳ್ಳಿಗರು ಅಱಿಯದೆ ಳಾಂತವಾಗಿ ಉಚ್ಚರಿಸುವರು. ಇವು ನಿಜವಾಗಿ ಲಾಂತಗಳು.

ಪತ್ರ

ಇದು 2 ವರ್ಷದ್ ಹಿಂದಿನ್ ಕಥೆ.. ನಾನು ಸಿಕ್ಕಿದ್ ಕೆಲ್ಸ ಬಿಟ್ಟು ಬೇರೆ ಕೆಲ್ಸ ಹುಡುಕ್ತೀನಿ ಅಂತ ಬೆಂಗಳೂರಿಗೆ ಬಂದಿದ್ದೆ.. ನನ್ ಅಮ್ಮಂಗೆ ನನ್ ಮೇಲೆ ಫುಲ್ ಕೋಪ.. ಸರಿ ನಾನೇನ್ ಕಮ್ಮಿ ಇಲ್ಲ, ಹೊಸ ಕೆಲ್ಸ ಸಿಗೋ ತಂಕ ಊರಿಗೆ ಬರಲ್ಲ ಅಂತ ಹಟ ಮಾಡ್ಕೊಂಡ್ ಕೂತಿದ್ದೆ.. ಆವಾಗ ನನ್ ತಮ್ಮ ಬರ್ದಿದ್ ಲೆಟರ್ ಇದು.. ಏನು ಚೇಂಜ್ ಮಾಡಿಲ್ಲ, ಹಂಗೆ ಇದೆ ಲೆಟರ್..

ಉಲ್

ಉಲ್=ಬಿಸಿಯಾಗು
ನೋಡಿ ಜೈಮಿನಿಭಾರತದ ಈ ಪದ್ಯ ಉಲ್ವ ಉದಕಮಜ್ಜನಂಗೈಸಿ
ಕೃದಂತ ನಾಮ ಪದ ಒಲೆ=ಉಲ್(ಬಿಸಿ)ಯಿರುವುದಱಿಂದ
ಭೂತಕಾಲದ ರೂಪ ಉಲ್ದ ಹೊಸಗನ್ನಡದಲ್ಲಿ ಉದ್ದ ಆಗಬಹುದೇನೋ
ಉಲ್ವ (ವರ್ತಮಾನ ಮತ್ತು ಭವಿಷ್ಯತ್) ಉಲ್ಲುವ ಹೊಸಗನ್ನಡದಲ್ಲಿ ರೂಪವಾಗಬಹುದೇನೋ
ಉಲ್ದನ್/ಉದ್ದನು, ಉಲ್ದಳ್/ಉದ್ದಳು, ಉದ್ದಿತು/ಉಲ್ದಿತು ಇತ್ಯಾದಿ