ಇವತ್ತು ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ಸಂಭವಿಸಿದ ಭೂಕಂಪ, ನಮ್ಮೆಲ್ಲರನ್ನು ನಡುಗಿಸಿತು !

ಇವತ್ತು ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ಸಂಭವಿಸಿದ ಭೂಕಂಪ, ನಮ್ಮೆಲ್ಲರನ್ನು ನಡುಗಿಸಿತು !

ಬರಹ

ಇವತ್ತು, ಮಂಗಳವಾರ, ಜುಲೈ, ೨೯, ರ ಬಿಳಿಗ್ಯೆ ೧೧-೪೨ ಕ್ಕೆ ಭೂಕಂಪ ಸಂಭವಿಸಿತು. ಈ ತರಹದ ಕಂಪನವನ್ನು ನಾವೂ ಸೇರಿದಂತೆ, ಲಾಸ್ ಎಂಜಲೀಸ್ ಡೌನ್ ಟೌನ್ ತೀರದಿಂದ, ಸ್ಯಾನ್ ಡಿಯಾಗೊ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಲಾಸ್ ವೇಗಾಸ್ ಶಹರಿನ ಜನ ಅನುಭವಿಸಿದರು. ೨೩೦ ಮೈಲಿಯ ವರೆಗೆ ಅದರ ಪ್ರಭಾವ ಆಯಿತು. ಜನ ಕೂಡಲೇ ತಮ್ಮ ಆಫೀಸ್ ನ ಕೊಠಡಿಗಳಿಂದ ಹೊರಗೆ ಬಂದು ರಸ್ತೆಯಲ್ಲಿ ನಿಂತುಕೊಂಡರು. ನಾನಿರುವ ಕಾಸ್ಟ ಮೆಸ ನಗರದಲ್ಲೂ, ೧೧-೪೨ ಕ್ಕೆ ಆದ ಭೂಕಂಪನ ಸುಮಾರು ಕೆಲವಿನಿಷಗಳವರೆಗೆ ಇದ್ದು ನಮಗೆ ಆತಂಕ, ಗಾಬರಿ, ಹಾಗೂ ಜೀವಭಯವನ್ನು ತಂದಿತ್ತು. ೩ ನೆಯ ಅಂತಸ್ತಿನಲ್ಲಿ ವಾಸವಾಗಿದ್ದ ನಮಗೆ, ಮನೆಯನ್ನೆಲ್ಲಾ ಯಾರೋ ಜೋರಾಗಿ ಹಿಡಿದು ಅಲ್ಲಾಡಿಸಿದಂತೆ ಆಯಿತು. ಮನೆಯ ಕೆಲವು ಶೆಲ್ಫ್ ನಲ್ಲಿದ್ದ ಗಾಜಿನ ಲೋಟಗಳು ಪಟ-ಪಟನೆ ಕೆಳಗೆಬಿದ್ದವು. ನಾವು ( ನಾನು ಮತ್ತು ನನ್ನ ಹೆಂಡತಿ ) ನಮ್ಮ ಮನೆಯ ದೊಡ್ಡ ಡೈನಿಂಗ್ ಟೇಬಲ್ ಕೆಳಗೆ ಗುರುಗಳ ಧ್ಯಾನಮಾಡುತ್ತಾ ಕುಳಿತಿದ್ದೆವು. ನಮ್ಮ ಮಗನ ಆಫೀಸ್ ನಲ್ಲೂ ಜನ ಈ ಕಂಪನವನ್ನು ಅನುಭವಿಸಿ ಕಂಗಾಲಾಗಿದ್ದರಂತೆ ! ಆದರೆ ದೇವರದಯದಿಂದ ಎಲ್ಲೂ ಸಾವು-ನೋವಿನ ಸುದ್ದಿ ದಾಖಲಾಗಿಲ್ಲ. ಇಲ್ಲಿ ಆಗಾಗ ಈ ಕಂಪನ ಸರ್ವೇಸಮಾನ್ಯವೆಂದು ನಮ್ಮ ಪಕ್ಕದಮನೆಯ ಗೆಳೆಯರು ತಿಳಿಸಿದರು. ೫.೪- ಮಟ್ಟದ ಭೂಕಂಪ ಅಷ್ಟು ಹೆಚ್ಚಿನ ಆಘಾತದ್ದಲ್ಲ ಎಂದು ಇಲ್ಲಿನ ಕೆಲವು ಜನರ ಅಭಿಪ್ರಾಯ. ಇದಾದ ಸುಮರು ಸಮಯದವರೆಗೆ ೩೦ ಶಾಕ್ ಗಳನ್ನು ಎಲ್ಲರೂ ಅನುಭವಿಸಿದ್ದಾರೆ. ಅದರಲ್ಲಿ ಹೆಚ್ಚಿನದು ೩.೮. ಲಾಸ್ ಎಂಜಲೀಸ್ ಡೌನ್ ಟೌನ್ ಬಳಿ ಯ ೨೯ ಮೈಲಿ ದ. ಪೂ ದಲ್ಲಿರುವ ಚೈನೊ ಹಿಲ್ಸ್ ನಲ್ಲಿ ಇದು ಉದ್ಭವಿಸಿತೆಂದು ತಜ್ಞರ ಅಭಿಪ್ರಾಯ. ಇದರ ಹತ್ತಿರದಲ್ಲಿರುವ ಸ್ಯಾನ್ ಬರ್ನಾರ್ಡಿನೊ ಕೌಂಟಿಯ ( ಸಿಟಿಯ) ಕಟ್ಟಡಗಳು ಇಂತಹ ಕಂಪನವನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ೮೦,೦೦೦ ಜನಸಂಖ್ಯೆಯ ಈ ಊರಿನಕಟ್ಟಡಗಳನ್ನು ೧೯೯೦ ರಲ್ಲಿ ನಿರ್ಮಿಸಲಾಯಿತು. ಅವೆಲ್ಲ ಭೂಕಂಪನವನ್ನು ತಡೆದುಕೊಳ್ಳುವ ತಂತ್ರಜ್ಞಾನವನ್ನು ಹೊಂದಿವೆ. -ದ ಸಿಯಾಟಲ್ ಟೈಮ್ಸ್ ಕೃಪೆ