ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಯೋತ್ಪಾದಕರಿಗೆ ವಿಶ್ವವಿದ್ಯಾಲಯದ ಕಾನೂನು ನೆರವು ಅಗತ್ಯವೇ?

ಜಾಮಿಯ ಮಿಲ್ಲಿಯ ಇಸ್ಲಾಮಿಯದ ವಿದ್ಯಾರ್ಥಿಗಳನ್ನು ಭಯೋತ್ಪಾದನೆ ಪ್ರಕರಣದಲ್ಲಿ ಬಂಧಿಸಲಾಗಿದೆ.ತಮ್ಮ ವಿದ್ಯಾರ್ಥಿಗಳಿಗೆ ಮಾನವೀಯ ನೆಲೆಯಿಂದ ಕಾನೂನು ನೆರವು ಒದಗಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ವಿದ್ಯಾರ್ಥಿಗೆ ಆತನ ವಿದ್ಯಾಸಂಸ್ಥೆ ಇಷ್ಟಾದರೂ ಮಾಡಬೇಕಾಗುತ್ತದೆ ಎನ್ನುವುದು ವಿವಿಯ ಉಪಕುಲಪತಿ ಹೇಳಿಕೆ.

ನಿನಗಾಗಿ ನನ್ನ ಮಾತು

ಎ0ದೂ ನೋಡಿದ ನೆನಪು ಇ0ದು ನನಗೆ ನೆನಪಾಗಿದೆ..
ನನ್ನೊಳಗಿದ್ದ ಪ್ರೇಮ ಪುಶ್ಪವ ಅರಳಿಸಿದ ಕಿರಣ ನೀಯಾರೇ...

ಕನಸಿನಲ್ಲಿ ಬ0ದು ನೀ ನನ್ನ ಕೆಣಕಿದೆ..
ನಾನಿ0ದು ನಿನಗಾಗಿ ಪರಿತಪಿಸುತಿರುವೆ ನೀ ಎಲ್ಲಿರುವೆ...

ನಿನ್ನ ನೋಡುವ ಹ0ಬಲ ನನ್ನಲ್ಲಿ ತು0ಬಿದೆ..
ನಾ ಬರುವೆ ನೀನಿರುವಲ್ಲಿಗೆ ನೀ ನನಗೆ ಮುಖತೋರೆ ಓ ಚೆಲುವೇ..

ಕಣ್ಣ ತೆರೆದರಲ್ಲಿ ನೀನೆ ಪ್ರತಿ ಬಿ0ಬಿಸಿದೆ..

ಹೇಗೆ ಹೇಳಲಿ

ಎದೆಯಲೋ0ದು ಮಾತಿದೆ ಅದ ನಾ ಹೇಗೆ ಹೇಳಲಿ....
ನೀ ತಿಳಿದಿಕೂ ನನ್ನ ಕಣ್ಣ ಸನ್ನೆಯ ಕಿರು ನೋಟದಲಿ...

ನೂರು ಮಾತಿದೆ ನಾಲಿಗೆಯ ತುದಿಯಲಿ ಅದ ನಾ ಹೇಗೆ ಹೇಳಲಿ....
ನೀ ತಿಳಿದಿಕೂ ನನ್ನ ತುಟಿಯ ಅ0ಚಿನ ಪಿಸು ಸನ್ನೆಯಲಿ....

ಕೋಟಿ ಮಾತಿದೆ ಕಣ್ಣಲಿ ನಾ ಹೇಗೆ ಹೇಳಲಿ ನಿನ್ನೆದುರಲಿ....
ದೈರ್ಯ ಇಲ್ಲ ಒಲವೆ ನನ್ನೆದೆಯಲಿ....

ಏರಿ, ಏಱಿ

ಏರಿ= ಕೆಱೆ ಇತ್ಯಾದಿಗಳ ನೀರು ಕೆೞಗಿನ ಪ್ರದೇಶಕ್ಕೆ ವೃಥಾ ಹರಿದು ಹೋಗಬಾರದೆಂದು ಕಟ್ಟಿದ ಎತ್ತರದ ಕಟ್ಟೆ. ಉದಾಹರಣೆ:-ಕೆರೆಯೇರಿಯೇಱಿ ನಾವು ಕುಳಿತೆವು. ಏರಿ ಹೊಲನುಂಬೊಡೆ ಇನ್ನಾರಿಗೆ ದೂಱುವೆನಯ್ಯಾ?

ಏಱಿ= ಏಱಲು ಸುಲಭವಾಗಿಸುವ ಸಾಧನ. ಅದು ಏಣಿ, ಮೆಟ್ಟಿಲು, elevator, lift ಇನ್ನಾವುದೇ ಏಱಲು ಸಹಾಯ ಮಾಡುವ ಸಾಧನವಾಗಿರಬಹುದು.

ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ ಒಂದು ದಿನ, ಪೇಪರ್,ಕಾಫಿ,ವ್ಯಾಯಾಮ(!) ಮುಗಿಸಿದ ಮೇಲೂ ಕೆಲಸಕ್ಕೆ ಹೊರಡಲು ಸಮಯವಿತ್ತು.

ಟಿ.ವಿ. ಹಾಕಿದೆ- ಎಲ್ಲಾ ಚಾನಲ್‌ಗಳಲ್ಲೂ ಕಾಲು ಮಡಚಿ ಪಟ್ಟಾಗಿ ಜ್ಯೋತಿಷಿಗಳು (ಜತೆಗೊಂದು ಹೆಣ್ಣು) ಕುಳಿತಿದ್ದರು.
ಬೆಳಗ್ಗೆ ಜ್ಯೋತಿಷ್ಯಕ್ಕೆ, ರಾತ್ರಿ ಕ್ರೈಮ್‌ಗೆ ಮೀಸಲು.

ಒಲವ ರಂಗವಲ್ಲಿ...

ಒಲವೆಂಬ ರಂಗವಲ್ಲಿ ಹಾಕಿದೆ ಇಲ್ಲಿ;

ಆಸೆಯ ಕಾಮನಬಿಲ್ಲನು ಚೆಲ್ಲಿ ;

ಹೂ ನಗೆಯ ಕವಿತೆ

ಬರೆದ ನಲ್ಲೆ ;

ಮುದ್ದು ಮಲ್ಲೆ.

ಸೌಂದರ್ಯ ಜಗದ ನಾರಿ ;

ಸವಿ ಮಾತಿನ ಪರಿಮಳ ಬೀರಿ;

ಸಗ್ಗದ ಸಿರಿ ಎಡೆಗೆ ಬರೆದೆ ದಾರಿ;

ಕುಡಿ ನೋಟದಿ ಮಾಡಿ

ಮೋಹ ಮಾಯೆ..!

ನಾರಿ ನೀ ಚೆಲುವಿನ, ನಲಿವಿನ

ನೆನಪಿನ, ನವಿಲು ಗರಿ.

- ಸುರೇಶ್ ಬಾಬು ( ಗೋಸುಬಾ )

ಏಕೆ ಹೀಗೆ ನಮ್ಮ ನಡುವೆ ?

ಜೀವನದಲ್ಲಿ ಕೆಲವೊಂದು ಘಟನೆಗಳು [ನಾವು ಭಾಗವಹಿಸದಿದ್ದರೂ ಸಾಕ್ಷಿಯಾದ ಘಟನೆಗಳು ] ನಮ್ಮ ಮನಸ್ಸಿನಲ್ಲಿ ಉಳಿಯದೆ ಮರೆಯಾಗಿಬಿಡುತ್ತವೆ. ಇನ್ನೋದಿಷ್ಟು ಘಟನೆಗಳು ನಮ್ಮನ್ನು ಕಾಡಿದರೂ ನಮ್ಮಿಂದ ಪ್ರಯತ್ನಪೂರ್ವಕವಾಗಿ ಹೊರಹಾಕಲ್ಪಡುತ್ತವೆ. ಇನ್ನೊಂದಿಷ್ಟು ನಮ್ಮನ್ನೇ ಕಾಡಿ, ಮನಸ್ಸನ್ನು ಚಿಂತನೆಗೆ ಹಚ್ಚಿಸಿ, ಕೆಲವೊಮ್ಮೆ ಪ್ರಚೋದಿಸಿ ಶಾಶ್ವತವಾಗಿ ಉಳಿದು ಬಿಡುತ್ತವೆ. ಈ ಲೇಖನವನ್ನ ಬರೆಯಲು ಪ್ರಚೋದಿಸಿದ್ದು ಅಂತ ಒಂದು ಘಟನೆ. ಈ ಘಟನೆಗೆ ಮೊದಲು ನಾನು ಸಹ ತುಂಬ ಜನ ಯೋಚಿಸುವಂತೆ ಇದ್ದೆ. ಆದರೆ ಈ ಘಟನೆ ಘಟಿಸಿದ ಮೇಲೆ ನನ್ನ ಯೋಚನಾ ಲಹರಿಯ ದಿಕ್ಕನ್ನ ಬದಲಿಸಿಕೊಂಡೆ. ಹಾಗಾದರೆ ನಡೆದ ಘಟನೆ ಏನು ಅನ್ನೋ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಬಂದಿರೋದು ಸಹಜ. ಈಗ ಘಟನೆಯ ಬಗ್ಗೆ ಬರೋಣ. ಕೆಲವು ದಿನಗಳ ಕೆಳಗೆ ನಾನು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ.

ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?

ಪ್ರೈಮರಿ ಶಾಲೆಯಿಂದ ಕಾಲೇಜಿನವರೆಗೆ ಕರ್ನಾಟಕದಲ್ಲಿ ಸಾವಿರಾರು ಹುಡುಗರು ( ಹುಡುಗಿಯರೂ ಕೂಡ) - ಸಾವಿರಾರು ಯಾಕೆ - ಲಕ್ಷಾಂತರ ಇರಬಹುದು ಕ್ರಿಕೆಟ್ ಆಡ್ತಾರೆ.

ಇದರಿಂದ ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ ಆಗಿದೆ ಅಂತ ನಂಗೊತ್ತಿಲ್ಲ.

ನಾನು ಕ್ರಿಕೆಟ್ ಆಡಲ್ಲ. ಹಿಂದೆ ಆಡಿರೋದೂ ಕಡಿಮೆ. ನೋಡೋ ಆಸಕ್ತೀನೂ ನನಗೆ ಇಲ್ಲ.