ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪಕ್ಷಿ ಸಂಕುಲ ಪರಿಸರ ಆರೋಗ್ಯಕ್ಕೆ ಕೈಗನ್ನಡಿ

ಧಾರವಾಡದಲ್ಲಿ ಇತ್ತೀಚೆಗೆ ನಾಲ್ಕಾರು ಕಡೆಗಳಲ್ಲಿ ‘ಹೈ-ಮಾಸ್ಟ್’ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅತ್ಯಂತ ಎತ್ತರದಲ್ಲಿ ತಲೆ ಎತ್ತಿ ನಾಲ್ಕೂ ದಿಕ್ಕುಗಳಲ್ಲಿ ಪ್ರಖರ ಬೆಳಕು ಬೀರುವ ಈ ಹೈ-ಮಾಸ್ಟ್ ಗಳು ಪಕ್ಷಿಗಳ ದೈನಂದಿನ ಬದುಕಿಗೆ- ವಿಷೇಶವಾಗಿ ರಾತ್ರಿಯ ವೇಳೆ ಪ್ರಾಣ ಘಾತಕವಾಗಿ ಪರಿಣಮಿಸಿವೆ.
ನಗರದ ಶಹರ ಪೊಲೀಸ್ ಠಾಣೆ, ವಿವೇಕಾನಂದ ವೃತ್ತ, ಆಲೂರು ವೆಂಕಟರಾವ್ ವೃತ್ತ, ಪ್ರೊ.ಆರ್ಮೆಂಡೊ ಮ್ಯಾನೇಜಿಸ್ ವೃತ್ತ, ಕರ್ನಾಟಕ ಕಾಲೇಜು ರಸ್ತೆ, ರೈಲ್ವೆ ನಿಲ್ದಾಣದ ಅಕ್ಕ-ಪಕ್ಕದಲ್ಲಿ ಸಾವಿರಾರು ಪಕ್ಷಿಗಳಿಗೆ ಆವಾಸ ಸ್ಥಾನಗಳಾಗಿ ನೂರಾರು ಮರಗಳಿವೆ. ನಿತ್ಯ ಅವುಗಳಲ್ಲಿ ಸಾವಿರಾರು ಗೂಡು ಕಟ್ಟಿಕೊಂಡು ಮರಿಗಳೊಂದಿಗೆ ವಾಸವಾಗಿವೆ.
ಗುಬ್ಬಿ, ಬುಲ್-ಬುಲ್, ಗಿಳಿ, ಬೆಳ್ಳಕ್ಕಿ, ಗೂಬೆಗಳು, ಬಾವಲಿಗಳು ಸೇರಿದಂತೆ ಮೈನಾ, ಪಾರಿವಾಳಗಳು ಹಾಗು ಕಾಗೆಗಳು ತರಹೇವಾರಿ ಗೂಡುಗಳನ್ನು ಕಟ್ಟಿಕೊಂಡು ವಾಸವಾಗಿವೆ. ಆದರೆ ಪ್ರತಿ ರಾತ್ರಿ ಹತ್ತಾರು ಪಕ್ಷಿಗಳು ಸತ್ತು ಗಿಡದ ಬುಡದಲ್ಲಿ ಬೀಳುತ್ತವೆ. ಇಡಿ ರಾತ್ರಿ ಹೈ-ಮಾಸ್ಟ್ ವಿದ್ಯುದೀಪಗಳು ಸೂಸುವ ಪ್ರಖರ ಬೆಳಕು ಈ ಪಕ್ಷಿಗಳಿಗೆ ಎರವಾಗಿದೆ. ಇಂತಹ ಯೋಜನೆಗಳನ್ನು ತಯಾರಿಸುವ ನಮ್ಮವರಿಗೆ ಸುತ್ತ-ಮುತ್ತಲಿನ ಪರಿಸರದ ಕುರಿತು ತುಸು ತಿಳಿವಳಿಕೆ ಇರಬೇಡವೆ?

ಸುಲಭವೆ??

ಎಲ್ಲವೂ ಸಹ ನಾವು ತಿಳಿದುಕೊಂಡಂತೆ ಸುಲಭವಲ್ಲ ಅಥವಾ ಸುಲಭವಾಗಿರುವುದಿಲ್ಲ.  --

ಜಿಮ್ ಹಾರ್ನಿಂಗ್‍

ಭಿಕ್ಷೆ.-ಮಾನವೀಯತೆ...

ಭಿಕ್ಷೆಯ ಕುರಿತ ಲೇಖನವಲ್ಲ ಇದು,ಬೆಂಗಳೂರು ನಗರದಲ್ಲಿ ಭಿಕ್ಷೆ ಎಂಬುದು ಬ್ಯುಸಿನೆಸ್ ಆಗಿರುವುದರ ಕುರಿತು. ನಾನಿರುವುದು ಜೆ.ಪಿ.ನಗರದಲ್ಲಿ. ಜಯನಗರದ ರಾಘವೇಂದ್ರ ಮಠದ ಹತ್ತಿರಿರುವ ಸಿಗ್ನಲ್ ಬಳಿ ಮತ್ತು ಸೌತ್ ಎಂಡ್ ಸರ್ಕಲ್‍ನ ಸಿಗ್ನಲ್ ಬಳಿ ನನ್ನಂತೆ ನಿಮ್ಮಲ್ಲಿ ಕೆಲವರಾದರೂ ಗಮನಿಸಿರಲೇಬೇಕು.

ರಗಳೆ

ಯಾರಾದರೂ ರಗಳೆ ಮಾಡುತ್ತಿದ್ದರೆ ಹಾಗೇಕೆನ್ನುತ್ತಾರೆ. ಉದಾಹರಣೆಗೆ ಅವರ ಮಗು ತುಂಬಾ ರಗಳೆ ಮಾಡುತ್ತಿದ್ದಾನೆ? ಅವನದು ದೊಡ್ದ ರಗಳೆ. ಇತ್ಯಾದಿ. ಹರಿಹರನ ರಗಳೆಗೂ ಅಥವಾ ಛಂದಸ್ಸಿನ ರಗಳೆಗೂ ಸಂಬಂಧವೇನಾದರೂ ಇದೆಯೇ?

ಸಬ್ಬಕ್ಕಿ / ಶಾಬಕ್ಕಿ / ಸೀಮೆಅಕ್ಕಿ ಹೇಗೆ ಸಿಗುತ್ತದೆ?

ಹಪ್ಪಳ, ಸಂಡಿಗೆ, ಪಾಯಸ, ವಡೆ, ಉಪ್ಪಿಟ್ಟು ಇನ್ನಿತರ ತಿನಿಸುಗಳನ್ನು ಮಾಡಲು ಬಳಸುವ ಸಬ್ಬಕ್ಕಿ ಅಥವಾ ಶಾಬಕ್ಕಿ ಅಥವಾ ಸೀಮೆಅಕ್ಕಿ ಯು ಹೇಗೆ ಬರುತ್ತದೆ?

ಭತ್ತ ಬೆಳೆದಂತೆ ಅದನ್ನು ಬೆಳೆಯುತ್ತಾರೋ ಅಥವಾ ಬೇರೆ ಯಾವುದಾದರಿಂದಾದರೂ ಏನಾದರೂ ಸಂಸ್ಕರಣೆ(process) ಮಾಡಿ ಅದನ್ನು ಪಡೆಯಲಾಗುತ್ತದೋ?

ಬೆಳೆಯುವುದಾದರೆ ಎಲ್ಲಿ ಬೆಳೆಯುತ್ತಾರೆ?

ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

ಇದೊಂದು ಕಥಾ ಸ್ಪರ್ಧೆ.

ಕೇವಲ ನಾಲ್ಕೇ(ಅದಕ್ಕೂ ಕಡಿಮೆ ಇದ್ದರೆ ಪರವಾಗಿಲ್ಲ) ಸಾಲಿನಲ್ಲಿ ಕತೆ ಹೇಳಬೇಕು (ಬರೆಯಬೇಕು)

ಉದಾಹರಣೆಗೆ ೧

ಟೈಟಲ್ : ಕಾಯುವಿಕೆ

೧) ಬಾಡಿ ಹೋದ ತನ್ನ ಬಾಳು ಮತ್ತೆ ಚಿಗುರಾಗಬೇಕೆಂದು ಪ್ರೀತಿಯ ನೀರ ಉಣಿಸುವವನಿಗಾಗಿ ಕಾಯುತ್ತಿದ್ದ್ದಂತೆ ಅವನು ಬಂದು ಅವಳ ಬಾಳ ಬಳ್ಳಿಯನ್ನೆ ಚಿವುಟಿ ಹೋದ.

ಉದಾಹರಣೆ ಎರೆಡು

ಟೈಟಲ್: ಕೊನೆ ಆಸೆ

ಅಹಲ್ಯೆಯ ಸ್ವಗತ..

ಕತ್ತಲ ಬದುಕಿನ
ಸುತ್ತಲೂ ಹಾರುವ
ಬೆಳಕಿನ ಹಕ್ಕಿಗಳು
ಮಾನ ಕಳೆಯುತ್ತವೆ
ಕತ್ತಲಿನಲ್ಲಿ ಎಣ್ಣೆಯನ್ನು
ಸೆಳೆಯುತ್ತಾ ನಗುವ
ದೀಪದ ಕುಡಿಗಳು
ನನ್ನದೆ ಬಟ್ಟೆಯ ಚೂರುಗಳಿಂದ
ನನ್ನೆದೆಯನ್ನು ಸುಡುತ್ತವೆ
ಆಗೆಲ್ಲಾ ವ್ಯರ್ಥವಾಗುತ್ತಿದ್ದ
ಕಣ್ಣೀರಿನ  ಹನಿಗಳೆ  ಈಗ
ಬೆಂಕಿಯಾರಿಸಿ ಕತ್ತಲಾಗಿಸುತ್ತವೆ